Jothe Jotheyali: ಸಂಚಲನ ಮೂಡಿಸಿದ ವಿಶ್ವಾಸ್ ದೇಸಾಯಿ! ಹರೀಶ್ ರಾಜ್ ಪಾತ್ರದ ಗುಟ್ಟೇನು?

ಮನೆಗೆ ಬಂದಿರುವ ವಿಶ್ವಾಸ್ ಆದಿ, ಎ.ಜೆ, ವೇದಾಂತ್‍ಗೆ ಕಾಲ್ ಮಾಡಿದ್ದಾರೆ. ಮೂವರು ಹಳೆಯ ಗೆಳೆಯ ಕರೆ ಮಾಡಿದ್ದಾನೆ ಎಂದು ಖುಷಿಯಾಗಿದ್ದಾರೆ. ಆದಿ, ವೇದಾಂತ್, ಎ.ಜೆ ಬಳಿ ವಿಶ್ವಾಸ್ ಕ್ಷಮೆ ಕೇಳುತ್ತಿದ್ದಾನೆ. ನೀವು ನನ್ನನ್ನು ನಂಬಿ ನನ್ನ ಪ್ರಾಜೆಕ್ಟ್ ಗೆ  ದುಡ್ಡು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಾನೆ. ಅಲ್ಲದೇ ಸರಿಯಾದ ಟೈಂಗೆ ದುಡ್ಡು ವಾಪಸ್ ಕೊಡಲು ಆಗಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ.

ವಿಶ್ವಾಸ್ ದೇಸಾಯಿ ಪಾತ್ರಕ್ಕೆ ಹರೀಶ್ ರಾಜ್

ವಿಶ್ವಾಸ್ ದೇಸಾಯಿ ಪಾತ್ರಕ್ಕೆ ಹರೀಶ್ ರಾಜ್

 • Share this:
  ಜೀ ಕನ್ನಡದಲ್ಲಿ (Zee Kannada)  ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್ ಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್  (Anirudh) ಧಾರಾವಾಹಿಯಿಂದ ಔಟ್ (Out) ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ನಟ ಹರೀಶ್ ರಾಜ್ (Harish Raj)  ಆರ್ಯವರ್ಧನ್ ಪಾತ್ರಕ್ಕೆ ಬರುತ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೆ ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್‍ಗೆ ಎಂಟ್ರಿ ಆಗಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ, ಸಹೋದರ (Brother) ಪಾತ್ರ ವಿಶ್ವಾಸ್ ದೇಸಾಯಿ ಪಾತ್ರಕ್ಕೆ. ವಿಶ್ವಾಸ್, ಆದಿ, ಎ.ಜೆ, ವೇದಾಂತ್‍ಗೆ ಕಾಲ್ ಮಾಡುತ್ತಿದ್ದಾನೆ.

  ವಿಶ್ವಾಸ್ ದೇಸಾಯಿ ಪಾತ್ರಕ್ಕೆ ಹರೀಶ್ ರಾಜ್
  ಆರ್ಯವರ್ಧನ್ ನಿಜವಾದ ಅಮ್ಮ ಅಂದ್ರೆ ಪ್ರಿಯದರ್ಶಿನಿ. ಪ್ರಿಯದರ್ಶಿನಿ ಇನ್ನೊಬ್ಬ ಮಗ ವಿಶ್ವಾಸ್ ದೇಸಾಯಿ. ಆತ ಇಷ್ಟು ದಿನ ದುಡಿಯಲು ಹೊರ ದೇಶಕ್ಕೆ ಹೋಗಿರುತ್ತಾನೆ. ಆದ್ರೆ ಅಲ್ಲಿ 700 ಕೋಟಿ ಲಾಸ್ ಮಾಡಿಕೊಂಡು ಮನೆಗೆ ವಾಪಸ್ ಆಗಿದ್ದಾನೆ. ಅವನ ತಾಯಿ ನಾನು ಆರ್ಯವರ್ಧನ್ ಬಳಿ ಸಹಾಯ ಕೇಳ್ತೀನಿ ಅಂತ ಹೇಳ್ತಾ ಇದ್ದಾರೆ.

  ಆದಿ, ಎ.ಜೆ, ವೇದಾಂತ್‍ಗೆ ಕಾಲ್ ಮಾಡುತ್ತಿರುವ ವಿಶ್ವಾಸ್
  ಮನೆಗೆ ಬಂದಿರುವ ವಿಶ್ವಾಸ್ ಆದಿ, ಎ.ಜೆ, ವೇದಾಂತ್‍ಗೆ ಕಾಲ್ ಮಾಡಿದ್ದಾರೆ. ಮೂವರು ಹಳೆಯ ಗೆಳೆಯ ಕರೆ ಮಾಡಿದ್ದಾನೆ ಎಂದು ಖುಷಿಯಾಗಿದ್ದಾರೆ. ಆದಿ, ವೇದಾಂತ್, ಎ.ಜೆ ಬಳಿ ವಿಶ್ವಾಸ್ ಕ್ಷಮೆ ಕೇಳುತ್ತಿದ್ದಾನೆ. ನೀವು ನನ್ನನ್ನು ನಂಬಿ ನನ್ನ ಪ್ರಾಜೆಕ್ಟ್ ಗೆ  ದುಡ್ಡು ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಾನೆ. ಅಲ್ಲದೇ ಸರಿಯಾದ ಟೈಂಗೆ ದುಡ್ಡು ವಾಪಸ್ ಕೊಡಲು ಆಗಲಿಲ್ಲ ಎಂದು ಬೇಸರ ಮಾಡಿಕೊಳ್ಳುತ್ತಾನೆ. ಅದಕ್ಕೆ ಅವರು ಮೂವರು ನಾವ್ ಕೇಳಿಲ್ಲ ತಾನೇ, ಯಾಕಿಷ್ಟು ಬೇಸರ ಮಾಡಿಕೊಂಡಿದ್ದೀಯಾ ಎನ್ನುತ್ತಾರೆ.

  ಇದನ್ನೂ ಓದಿ: Ramachari: ಪೊಲೀಸ್ ಮಗಳನ್ನೇ ಕಿಡ್ನ್ಯಾಪ್ ಮಾಡಿಸಿದ ರಾಮಾಚಾರಿ, ಅವರ ದಾರಿಯಲ್ಲೇ ಹೋಗಿ ನ್ಯಾಯಕ್ಕಾಗಿ ಹೋರಾಟ!

  ಪ್ರಿಯದರ್ಶಿನಿ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಂಟಕ
  ಪ್ರಿಯದರ್ಶಿನಿ ಮನೆಗೆ ಜೋಗತವ್ವ ಬಂದಿದ್ದು ಆಕೆಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಿನ್ನ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಇದೆ ಎಂದು ಹೇಳುತ್ತಾಳೆ. ಆದ್ರೆ ಯಾವ ಮಗನಿಗೆ ಎಂಬುದನ್ನು ಹೇಳುವುದಿಲ್ಲ. ಅದನ್ನು ಕೇಳಿಸಿಕೊಂಡ ಪ್ರಿಯದರ್ಶಿನಿ ಗಾಬರಿ ಆಗಿದ್ದಾಳೆ. ಯಾಕಂದ್ರೆ ಜೋಗತವ್ವ ಹೇಳಿದ ಮಾತುಗಳೆಲ್ಲಾ ನಿಜ ಆಗುತ್ತೆ ಅದಕ್ಕೆ.

  Zee Kannada serial, Jote Joteyali serial, Kannada serial, Anirudh out from serial, Harish Raj enter serial, ಜೊತೆ ಜೊತೆಯಲಿ ಧಾರಾವಾಹಿ, ದೊಡ್ಡ ದೊಡ್ಡ ಆಫರ್ ಕಳೆದುಕೊಂಡ ಅನಿರುದ್ಧ್, ಆದಿ, ಎ.ಜೆ, ವೇದಾಂತ್‍ಗೆ ಕಾಲ್ ಮಾಡುತ್ತಿರುವ ವಿಶ್ವಾಸ್ ದೇಸಾಯಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಜೊತೆ ಜೊತೆಯಲಿ


  ಒಬ್ಬ ಮಗನಿಂದ ಮತ್ತೊಬ್ಬ ಮಗನಿಗೆ ಸಹಾಯ
  ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿಶ್ವಾಸ್ ದೇಸಾಯಿ ಈಗ ಸಂಕಷ್ಟದಲ್ಲಿದ್ದು, ತಾಯಿ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಅದಕ್ಕೆ ಪ್ರಿಯದರ್ಶಿನಿ, ಆರ್ಯವರ್ಧನ್‍ಗೆ ಹೇಳಿ ತನ್ನ ಮಗನ ಸಂಕಷ್ಟ ದೂರ ಮಾಡುವ ಪ್ರಯತ್ನದಲ್ಲಿ ಇದ್ದಾಳೆ.

  ಆರ್ಯವರ್ಧನ್ ಯಾರಾಗ್ತಾರೆ ಅನ್ನೋ ಕುತೂಹಲ
  ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಸೀರಿಯಲ್‍ನಿಂದ ಔಟ್ ಆದಾಗಿನಿಂದ ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಆರೂರ್ ಜಗದೀಶ್ ಅವರು ನಿರ್ದೇಶಕ ಅನೂಪ್ ಭಂಡಾರಿಯನ್ನು ಈ ಪಾತ್ರಕ್ಕೆ ತರಲು ಪ್ರಯತ್ನ ಮಾಡಿದ್ರು. ಆದ್ರೆ ಅನೂಪ್ ಭಂಡಾರಿ ಅವರು ಒಪ್ಪಿಲ್ಲ.

  ಇದನ್ನೂ ಓದಿ: Gattimela serial: ಕಳ್ಳ ಡಾಕ್ಟರ್ ತೇಜಸ್ ಬಗ್ಗೆ ಸತ್ಯ ಪತ್ತೆ ಹಚ್ಚಿದ ವಿಕ್ರಾಂತ್, ಅದಿತಿ ನಿಶ್ಚಿತಾರ್ಥ ನಿಲ್ಲಿಸುತ್ತಾನಾ?

  ನಂತರ್ ಹರೀಶ್ ರಾಜ್ ಬರ್ತಾರೆ ಅಂದ್ರು. ಅವರೇನೋ ಬಂದಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಬದಲಿಗೆ ಅವರ ಸಹೋದರರಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಯಾರು ಆರ್ಯವರ್ಧನ್ ಆಗ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ.
  Published by:Savitha Savitha
  First published: