Jothe Jotheyali: ಜೊತೆ ಜೊತೆಯಲಿ ಮೆಗಾ ಟ್ವಿಸ್ಟ್! ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಬದಲಿಗೆ!

ಜನರ ಮನಸ್ಸಿನಲ್ಲಿ ಅನಿರುದ್ಧ್ ಜಾಗದಲ್ಲಿ ಹರೀಶ್ ರಾಜ್ ಬಂದಿರುವುದು ಈಗ ಅಚ್ಚಾಗುತ್ತಿದೆ!

ಆರ್ಯವರ್ಧನ್, ಹರೀಶ್ ರಾಜ್

ಆರ್ಯವರ್ಧನ್, ಹರೀಶ್ ರಾಜ್

  • Share this:
    ಜೀ ಕನ್ನಡದಲ್ಲಿ  (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್‍ಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ (Anirudh) ಧಾರಾವಾಹಿಯಿಂದ ಔಟ್  ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿತ್ತು. ಇನ್ನು ಆರ್ಯವರ್ಧನ್ ಸಹೋದರ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಪಾತ್ರಕ್ಕೆ, ಮುಖ ಬದಲಿಸುವ ಮೂಲಕ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಆರೂರ್ ಜಗದೀಶ್ .

    ಒಂದೇ ವಾರಕ್ಕೆ ವಿಶ್ವಾಸ್ ದೇಸಾಯಿ ಪಾತ್ರ ಮುಕ್ತಾಯ
    ವಿಶ್ವಾಸ್ ದೇಸಾಯಿ, ಪ್ರಿಯದರ್ಶಿನಿ ಮಗ, ಆರ್ಯವರ್ಧನ್ ಸಹೋದರ. ವಿಶ್ವಾಸ್ ದೇಸಾಯಿ ವಿದೇಶದಿಂದ ಭಾರತಕ್ಕೆ ವಾಪಸ್ ಬಂದಿದ್ದಾನೆ. ವಿದೇಶಕ್ಕೆ ದುಡಿಯಲು ಹೋಗಿ ಕೋಟಿ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಮಾಡಿದ ಸಾಲ ತೀರಿಸಲು ಆಗದೇ ಸಾಯುವ ನಿರ್ಧಾರ ಮಾಡಿ, ನೀರಿಗೆ ಹಾರಿ ಆತ್ಮಹತ್ಯೆ ಯತ್ನ ಮಾಡಿದ್ದಾನೆ. ಅಲ್ಲಿ ಇದ್ದ ಜನ ಅವನನ್ನು ಕಾಪಾಡಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಆದ್ರೂ ವಿಶ್ವಾಸ್ ದೇಸಾಯಿ ಬದುಕಲಿಲ್ಲ. ಮಗನ್ನನ್ನು ಕಳೆದುಕೊಂಡು ಪ್ರಿಯದರ್ಶಿನಿ ಕಣ್ಣೀರು ಹಾಕಿದ್ದಾರೆ. ಬಂದು ಒಂದೇ ವಾರಕ್ಕೆ ವಿಶ್ವಾಸ್ ದೇಸಾಯಿ ಪಾತ್ರ ಮುಕ್ತಾಯ ಆಗಿದೆ.

    ಪ್ಲಾಸ್ಟಿಕ್ ಸರ್ಜರಿ ಆಗಬೇಕಂತೆ ಆರ್ಯನಿಗೆ
    ಹೆತ್ತಮ್ಮ ಪ್ರಿಯದರ್ಶಿನಿ ನೋಡಲು ಹೊರಟ ಆರ್ಯವರ್ಧನ್‍ಗೆ ಅಪಘಾತವಾಗಿದೆ. ಅಪಘಾತದಲ್ಲಿ ಆರ್ಯವರ್ಧನ್ ಮುಖಕ್ಕೆ ಏಟಾಗಿ ಗುರುತು ಸಿಗದಂತೆ ಆಗಿದೆಯಂತೆ. ಅದಕ್ಕೆ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಂತೆ. ಅಂದ್ರೆ ಅನಿರುದ್ಧ್ ಅವರ ಪಾತ್ರವನ್ನು ಮುಗಿಸುತ್ತಾರಾ? ಅದಕ್ಕೆ ಈ ಸರ್ಜರಿ ಸಂಚಿಕೆಯಾ? ಹಾಗಾದ್ರೆ ಆರ್ಯವರ್ಧನ್ ಅವರ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಅವರ ಎಪಿಸೋಡ್‍ಗಳು ಮುಗಿದವಾ? ಹಾಗಾದ್ರೆ ಆ ಪಾತ್ರಕ್ಕೆ ಯಾರು ಬರ್ತಾರೆ? ಇನ್ನೂ ಆರ್ಯನ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಇತ್ತು.

    ಒಬ್ಬ ಮಗ ಸಾವು, ಇನ್ನೊಬ್ಬನಿಗೆ ಸರ್ಜರಿ!
    ಪ್ರಿಯದರ್ಶಿಗೆ ಒಂದೇ ಬಾರಿಗೆ ಎರೆಡೆರೆಡು ಸಂಕಟ. ಇಬ್ಬರು ಮಕ್ಕಳಲ್ಲಿ ವಿಶ್ವಾಸ್ ದೇಸಾಯಿಯನ್ನು ಕಳೆದುಕೊಂಡಿದ್ದಾಳೆ. ಈಗ ಆರ್ಯವರ್ಧನ್‍ಗೆ ಪ್ಲಾಸ್ಟಿಕ್ ಸರ್ಜರಿ ಆಗಬೇಕು. ಎರಡನ್ನೂ ಅರಗಿಸಿಕೊಳ್ಳಲಾಗದೇ ಪ್ರಿಯದರ್ಶಿನಿ ಒದ್ದಾಡುತ್ತಿದ್ದಾಳೆ.

    ಇದನ್ನೂ ಓದಿ: Kannadathi: ಅಮ್ಮಮ್ಮನ ಪರೀಕ್ಷೆ ಮಾಡಿಸಲು ಹೋಗಿ ಸಾನಿಯಾ ಸಿಕ್ಕಿ ಹಾಕಿಕೊಳ್ತಾಳಾ? ಅತ್ತೆ V/s ಸೊಸೆ

    ವಿಶ್ವಾಸ್ ದೇಸಾಯಿ ಮುಖ ಆರ್ಯನಿಗೆ?
    ಇನ್ನು ವಿಶ್ವಾಸ್ ದೇಸಾಯಿ ಸಾವನ್ನಪ್ಪಿರುವ ಹಿನ್ನೆಲೆ, ಆರ್ಯವರ್ಧನ್‍ಗೆ ಅವನ ಮುಖವನ್ನೇ ಹಾಕಬಹುದು. ಅಂದ್ರೆ ಮುಖ ಮಾತ್ರ ವಿಶ್ವಾಸ್ ದೇಸಾಯಿದ್ದು, ಪಾತ್ರ ಆರ್ಯವರ್ಧನ್‍ದು. ಅದಕ್ಕೆ ಇಬ್ಬರಿಗೂ ಒಂದೇ ಬಾರಿ ಅಪಾಯ ಅಂತ ಅಂತ ಅಭಿಮಾನಿಗಳು ಕೇಳ್ತಾ ಇದ್ದಾರೆ.

    Zee Kannada serial, Kannada serial, Jote Joteyali Kannada serial, hero Anirudh Role change, Harish raj enter to serial, ಜೊತೆ ಜೊತೆಯಲಿ ಧಾರಾವಾಹಿ, ಹರೀಶ್ ರಾಜ್ ಬಂದಿರೋದೇ ಆರ್ಯವರ್ಧನ್ ಪಾತ್ರಕ್ಕೆ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಜೊತೆ ಜೊತೆಯಲಿ


    ಅನಿರುದ್ಧ್ ಜಾಗದಲ್ಲಿ ಹರೀಶ್ ರಾಜ್?
    ಆರೂರ್ ಜಗದೀಶ್ ಅವರು ಆರ್ಯವರ್ಧನ್ ಪಾತ್ರವನ್ನು ಜೀವಂತವಾಗಿಡಲು ಒಳ್ಳೆ ಐಡಿಯಾ ಮಾಡಿದ್ದಾರೆ. ವಿಶ್ವಾಸ್ ದೇಸಾಯಿ ಎಂಬ ಪಾತ್ರವನ್ನು ತಂದು, ಆ ಪಾತ್ರ ಸಾಯುವಂತೆ ಮಾಡಿ, ಆ ಪಾತ್ರದ ಮುಖವನ್ನೇ ಈಗ, ಆರ್ಯನ ಪಾತ್ರಕ್ಕೆ ಇಡುತ್ತಿದ್ದಾರೆ. ಜನರ ಮನಸ್ಸಿನಲ್ಲಿ ಅನಿರುದ್ಧ್ ಜಾಗದಲ್ಲಿ ಹರೀಶ್ ರಾಜ್ ಬಂದಿರುವುದನ್ನು ತೋರಿಸೋ ಕಾರ್ಯ.

    ಇದನ್ನೂ ಓದಿ: Kendasampige: ಸುಮನಾ ಮರ್ಯಾದೆ ತೆಗೆಯಲು ಮುಂದಾದ ಕಾಳಿ, ಯಾರು ಇಲ್ಲದ ವೇಳೆ ಮನೆಗೆ ಬಂದ!

    ಕೊನೆಗೂ ಆರ್ಯವರ್ಧನ್ ಪಾತ್ರಕ್ಕೆ ಯಾರೂ ಬರ್ತಾರೆ ಅನ್ನೋ ಕುತೂಹಲ ಕಮ್ಮಿ ಆಗಿದೆ. ಹರೀಶ್ ರಾಜ್ ಅದನ್ನು ನಿರ್ವಹಿಸುತ್ತಾರೆ ಅನ್ನೋದು ಗೊತ್ತಾಗಿದೆ. ಆದ್ರೆ ಅಧಿಕೃತವಾಗಿ ಧಾರಾವಾಹಿ ಸಂಚಿಕೆ ಬರಬೇಕು ಅಷ್ಟೆ. ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಧಾರಾವಾಹಿ ನೋಡಿ.
    Published by:Savitha Savitha
    First published: