• Home
 • »
 • News
 • »
 • entertainment
 • »
 • Jothe Jotheyali: ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ಚೈತ್ರಾ ರಾವ್ ಎಂಟ್ರಿ!

Jothe Jotheyali: ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ಚೈತ್ರಾ ರಾವ್ ಎಂಟ್ರಿ!

ಜೊತೆ ಜೊತೆಯಲಿ ಧಾರಾವಾಹಿಗೆ ಚೈತ್ರಾ ರಾವ್ ಎಂಟ್ರಿ!

ಜೊತೆ ಜೊತೆಯಲಿ ಧಾರಾವಾಹಿಗೆ ಚೈತ್ರಾ ರಾವ್ ಎಂಟ್ರಿ!

ವಿಶ್ವಾಸ್ ನ ಪತ್ನಿ ಪಾತ್ರಕ್ಕೆ ಅಂದ್ರೆ ಆರಾಧಾನ ಪಾತ್ರಕ್ಕೆ, ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ ಎಂಟ್ರಿ ಬಂದಿದ್ದಾರೆ. ಅನು ಇದನ್ನು ವಿಶ್ವಾಸ್ ಗೆ ಸಪ್ರೈಸ್ ಎಂದಿದ್ದು.

 • News18 Kannada
 • Last Updated :
 • Karnataka, India
 • Share this:

  ಜೊತೆ ಜೊತೆಯಲಿ (Jothe Jotheyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serial) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ (Chaitra Rao) ಎಂಟ್ರಿ ಆಗಿದ್ದಾರೆ.


  ಅನು ಹುಟ್ಟುಹಬ್ಬಕ್ಕೆ ಸಪ್ರೈಸ್
  ಅನು ಸಿರಿಮನೆ ಹುಟ್ಟುಹಬ್ಬ ಇದೆ. ಅದೇ ಕಾರಣಕ್ಕೆ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ಸಂಜುನೇ ಮುಂದೇ ನಿಂತು ಹುಟ್ಟು ಹಬ್ಬವನ್ನು ಆಚರಿಸಲು ಮುಂದಾಗಿದ್ದಾನೆ. ಅನುಗೆ ಸಪ್ರೈಸ್ ಮಾಡಬೇಕು ಎಂದು ಕಾತುರದಿಂದ ಕಾಯ್ತಾ ಇದ್ದಾನೆ. ಆದ್ರೆ ಸಂಜುಗೆ ಶಾಕ್ ಕಾದಿದೆ.


  ನಿಮ್ಮನ್ನು ಕಾಪಾಡುತ್ತೇನೆ ಎಂದಿದ್ದ ಅನು
  ಆರ್ಯನ ಮುಖ ಬದಲಾಗಿದೆ. ಸಂಜು ಆಗಿದ್ದಾನೆ. ಆತನಿಗೆ ಹಳೆಯ ನೆನಪುಗಳು ಇಲ್ಲ. ಆದ ಕಾರಣ ಸಂಜು ನೀವೇ ನನ್ನ ಕಾಪಾಡಬೇಕು ಎಂದಿರುತ್ತಾನೆ. ಅದಕ್ಕೆ ಅನು ಒಪ್ಪಿಕೊಂಡಿದ್ದಳು. ಸಂಜು ಅಂದ್ರೆ ವಿಶ್ವಾಸ್ ಹಾಗೂ ಆಕೆಯ ಪತ್ನಿ ಆರಾಧಾನ ಮಧ್ಯೆ ಏನೋ ಜಗಳ ಆಗಿದೆ ಅನ್ನೋ ಅನುಮಾನ ಅನುಗೆ ಶುರುವಾಗಿದೆ.


  ಹೀಗಾಗಿ, ಅವರಿಬ್ಬರನ್ನು ಒಂದು ಮಾಡಲು ಆಕೆ ನಿರ್ಧರಿಸಿದ್ದಾಳೆ. ಈ ಕಾರಣಕ್ಕೆ ನಿಮ್ಮನ್ನು ಕಾಪಾಡುವ ಜವಾಬ್ದಾರಿ ನನ್ನದು ಎಂದು ಅನು ಹೇಳಿದ್ದಾಳೆ.


  ಇದನ್ನೂ ಓದಿ: Roopesh Shetty: ನಾನು ಗಡಿನಾಡು ಕನ್ನಡಿಗ ಎಂದಿದ್ದ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಬೆದರಿಕೆ; ಮಂಗಳೂರಿನಲ್ಲಿ ಕೇಸ್ ದಾಖಲು 


  ವಿಶ್ವಾಸ್‍ಗೆ ಸಪ್ರೈಸ್ ನೀಡಿದ ಅನು
  ವಿಶ್ವಾಸ್ ನನ್ನು ಎಲ್ಲರು ಸಂಜು, ಸಂಜು ಎಂದು ಕರೆಯುತ್ತಾರೆ. ಸಂಜು ಅನು ಬರ್ತ್‍ಡೇ ಆಚರಿಸಲು ಸಂಭ್ರಮದಿಂದ ಕಾಯ್ತಾ ಇದ್ದ. ಎಲ್ಲ ರೆಡಿ ಮಾಡಿಕೊಂಡಿದ್ದ. ಅಷ್ಟರಲ್ಲಿ ಮನೆಗೆ ಅನು ಬರುತ್ತಾಳೆ. ಅದನ್ನು ನೋಡಿ ಸಂಜು ಖುಷಿ ಆಗ್ತಾನೆ. ಆದ್ರೆ ಆ ಖುಷಿ ಕ್ಷಣದಲ್ಲಿ ಮಾಯವಾಗುತ್ತೆ. ಯಾಕಂದ್ರೆ ಜೊತೆಗೆ, ವಿಶ್ವಾಸ್ ಪತ್ನಿ ಆರಾಧಾನ ಬಂದಿರುತ್ತಾಳೆ.


  zee kannada serial, kannada serial, jothe jotheyali kannada serial, jothe jotheyali serial timing change, chaitra rao enter to serial as vishwas wife, ಜೊತೆ ಜೊತೆಯಲಿ ಧಾರಾವಾಹಿ, ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್, ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ಚೈತ್ರಾ ರಾವ್ ಎಂಟ್ರಿ!, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ವಿಶ್ವಾಸ್‍


  ಆರಾಧಾನ ಆಗಿ ಬಂದಿರುವ ಚೈತ್ರಾ ರಾವ್
  ವಿಶ್ವಾಸ್ ನ ಪತ್ನಿ ಪಾತ್ರಕ್ಕೆ ಅಂದ್ರೆ ಆರಾಧಾನ ಪಾತ್ರಕ್ಕೆ, ಟಾಮ್ ಅಂಡ್ ಜೆರ್ರಿಯ ನಟಿ ಮತ್ತು ಜೋಡಿ ಹಕ್ಕಿ ಖ್ಯಾತಿಯ ಚೈತ್ರಾ ರಾವ್ ಎಂಟ್ರಿ ಬಂದಿದ್ದಾರೆ. ಅನು ಇದನ್ನು ವಿಶ್ವಾಸ್ ಗೆ ಸಪ್ರೈಸ್ ಎಂದಿದ್ದು. ಅದನ್ನು ನೋಡಿ ವಿಶ್ವಾಸ್ ಶಾಕ್ ಆಗಿದ್ದಾನೆ. ಯಾಕಂದ್ರೆ ಅವನಿಗೆ ಹಳೆಯ ನೆನಪು ಯಾವುದು ಇಲ್ಲ.


  zee kannada serial, kannada serial, jothe jotheyali kannada serial, jothe jotheyali serial timing change, chaitra rao enter to serial as vishwas wife, ಜೊತೆ ಜೊತೆಯಲಿ ಧಾರಾವಾಹಿ, ಜೊತೆ ಜೊತೆಯಲಿ ಸೀರಿಯಲ್ ಟೈಮ್ ಚೇಂಜ್, ಜೊತೆ ಜೊತೆಯಲಿ ಧಾರಾವಾಹಿಗೆ ಟಾಮ್ ಅಂಡ್ ಜೆರ್ರಿಯ ಚೈತ್ರಾ ರಾವ್ ಎಂಟ್ರಿ!, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, kannada news, karnataka news,
  ಅನು


  ಹೊಸ ಎಂಟ್ರಿ ಯಾಕೆ?
  ಜೊತೆ ಜೊತೆಯಲ್ಲಿ ಧಾರಾವಾಹಿಗೆ ತುಂಬಾ ಜನ ಅಭಿಮಾನಿಗಳು ಇದ್ರು. ಅದರಲ್ಲೂ ಆರ್ಯನ ಪಾತ್ರ ಮಾಡ್ತಿದ್ದ ಅನಿರುದ್ಧ್​ಗಾಗಿ ಅದೆಷ್ಟೋ ಅಭಿಮಾನಿಗಳು ಸೀರಿಯಲ್ ನೋಡ್ತಾ ಇದ್ರು. ಈಗ ಅವರಿಲ್ಲದ ಧಾರಾವಾಹಿಯನ್ನು ಜನ ನೋಡ್ತಾ ಇಲ್ವಾ? ಅದಕ್ಕೆ ಧಾರಾವಾಹಿ ಸಮಯವನ್ನು ಬದಲು ಮಾಡಿದ್ರಾ ಅನ್ನೋದು ಎಲ್ಲರ ಪ್ರಶ್ನೆ. ಅದರ ಜೊತೆಗೆ ಹೊಸ ಹೊಸ ಎಂಟ್ರಿ ಮೂಲಕ ಟ್ವಿಸ್ಟ್ ಕೊಟ್ಡು ಅಭಿಮಾನಿಗಳನ್ನು ಸೆಳೆಯುವ ತಂತ್ರ ನಡೆಯುತ್ತಿದೆ.


  ಇದನ್ನೂ ಓದಿ: Kendasampige: ಸುಮನಾಗೆ ತೊಂದ್ರೆ ಕೊಡಲು ಸಾಧನಾ ಕುತಂತ್ರ, ಮನೆಗೆ ಕರೆಸಿದ್ದು ಯಾರನ್ನು? 


  ಧಾರಾವಾಹಿ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.

  Published by:Savitha Savitha
  First published: