ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ (Anirudh) ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ (Harish Raj) ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ಕರೆಯುವ ಹೆಸರು ವಿಶ್ವಾಸ್ ದೇಸಾಯಿ ಅಂತ.
ಬದುಕಿರುವವನು ಆರ್ಯ, ಆದ್ರೆ ಮುಖ ವಿಶ್ವಾಸ್
ಧಾರಾವಾಹಿಯಲ್ಲಿ ಅನಿರುದ್ಧ್ ಪಾತ್ ಬದಲಾಯಿಸಲು ಅಪಘಾತದ ಸಂಚಿಕೆ ಮಾಡಲಾಗಿತ್ತು. ಅಪಘಾತದಲ್ಲಿ ಆರ್ಯನೇ ಸತ್ತು ಹೋಗಿದ್ದಾನೆ ಎಂದು ತಿಳಿದುಕೊಂಡಿದ್ದಾರೆ. ಈಗಲೂ ಪ್ರಿಯದರ್ಶಿನಿ ಮತ್ತು ಪೊಲೀಸ್ ಗೆ ಬಿಟ್ರೆ ಬೇರೆ ಯಾರಿಗೂ ವಿಚಾರ ಗೊತ್ತಿಲ್ಲ. ವಿಶ್ವಾಸ್ ದೇಸಾಯಿ ಎಂಬ ಹೆಸರಿನಿಂದ ಗೊಂದಲ ಉಂಟಾಗುತ್ತಿದೆ.
ನಾನೇ ಆರ್ಯವರ್ಧನ್ ಎಂದ ವಿಶ್ವಾಸ್ ದೇಸಾಯಿ
ವಿಶ್ವಾಸ್ ದೇಸಾಯಿಗೆ ತಾನು ಯಾರು ಎಂದು ತಿಳಿದುಕೊಳ್ಳುವ ಹಂಬಲ ಇರುತ್ತೆ. ಅದಕ್ಕೆ ತನಗೆ ಚಿಕಿತ್ಸೆ ನೀಡಿದ ಡಾಕ್ಟರ್ ಬಳಿ ಹೋಗಿ, ಅವರಿಗೆ ಹೊಡೆದು ಸತ್ಯ ತಿಳಿದುಕೊಂಡಿದ್ದಾನೆ, ಮನೆಯಲ್ಲಿ ಬಂದ ನಾನೇ ಆರ್ಯವರ್ಧನ್. ವಿಶ್ವಾಸ್ ದೇಸಾಯಿ ಅಲ್ಲ ಎಂದು ಹೇಳಿದ್ದಾನೆ. ಆದ್ರೆ, ಆ ಮಾತನ್ನು ಯಾರು ನಂಬಿಲ್ಲ. ಒತ್ತಡಕ್ಕೆ ಒಳಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಮನೆಯವರು ಅಂದುಕೊಳ್ತಾ ಇದ್ದಾರೆ.
ಇದನ್ನೂ ಓದಿ: Bigg Boss Kannada: ಫಿಶ್ ತಿನ್ನುವ ಭರದಲ್ಲಿ ಸಾನ್ಯಾನ ಮರೆತ್ರಾ ರೂಪೇಶ್ ಶೆಟ್ಟಿ! ದೀಪಿಕಾ ಬಳಿ ಹೇಳಿದ್ದೇನು?
ಆರಾಧನಾ ಸಾಯಲು ಹೊರಟಿದ್ಲು
ಈ ನಡುವೆ ವಿದೇಶದಿಂದ ಬಂದಿರುವ ವಿಶ್ವಾಸ್ ಪತ್ನಿ ಆರಾಧನಾ ಸೂಸೈಡ್ ಮಾಡಿಕೊಳ್ಳಲು ಯತ್ನಿಸಿದ್ರು. ನನ್ನ ಗಂಡ ನನ್ನನ್ನು ಮಾತನಾಡಿಸಲ್ಲ. ಅಲ್ಲದೇ ನಾನು ವಿಶ್ವಾಸ್ ದೇಸಾಯಿ ಅಲ್ಲವೇ ಅಲ್ಲ ಎನ್ನುತ್ತಿದ್ದಾರೆ. ನಾನು ಅವರನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಸಾಯ್ತೀನಿ ಎಂದು ಹೇಳಿದ್ರು.
ಝೇಂಡೆಯಿಂದ ವಂಚನೆ
ಝೇಂಡೆಗೂ ಸಹ ಆರ್ಯ ಬದುಕಿರುವ ವಿಚಾರ ಗೊತ್ತು. ಹೇಗಾದ್ರೂ ಅವನ ಸ್ನೇಹ ಸಂಪಾದನೆ ಮಾಡಬೇಕು ಎಂದು ಆಗಾಗ ಕರೆದುಕೊಂಡು ಹೋಗಿ ಮಾತನಾಡುತ್ತಾ ಇರುತ್ತಾನೆ. ಈ ನಡುವೆ ಕಂಪನಿಗೆ ಮೋಸ ಮಾಡಿದ್ದಾನೆ. ಬ್ಯಾಂಕ್ ನಲ್ಲಿದ್ದ ಹಣವನ್ನು ತೆಗೆದುಕೊಂಡು, ಅಕೌಂಟ್ ಕ್ಲೋಸ್ ಮಾಡಿದ್ದಾನೆ. ಆ ಟೆನ್ಶನ್ ನಲ್ಲಿ ಅನು ಇದ್ದಾಳೆ.
ರಹಸ್ಯ ಕೋಣೆಗೆ ಹೋದ ಆರ್ಯ
ನನ್ನನ್ನು ಆರ್ಯ ಎಂದು ಯಾರು ನಂಬುತ್ತಿಲ್ಲ ಎಂದು ಚಿಂತೆಯಲ್ಲಿ ಓಡಾಡುತ್ತಾ ಇರುತ್ತಾನೆ. ಆಗ ಅಲ್ಲಿಗೆ ಹೊಸ್ಮನಿ ಬರುತ್ತಾನೆ. ನಾನು ನಿಮ್ಮನ್ನು ಆರ್ಯ ಎಂದು ನಂಬುತ್ತೇನೆ ಎಂದು ಹೇಳ್ತಾನೆ. ಯಾಕೆ ಎಂದು ಆರ್ಯ ಕೇಳಿದ್ದಕ್ಕೆ, ನೀವು ಆ ಕೋಣೆಗೆ ನಮ್ಮ ಸಾಹೇಬ್ರ ತರ ಹೋದ್ರಿ ಅದಕ್ಕೆ ಎಂದು ಹೇಳ್ತಾನೆ. ಮತ್ತೆ ಆ ಕೋಣೆಗೆ ಆರ್ಯ ಹೋಗಿದ್ದಾನೆ.
ಇದನ್ನೂ ಓದಿ: Ramachari Actor: 'ಚಾರಿ' ಅಲ್ಲ 'ಚೋರ' ಇವನು! 'ರಾಮಾಚಾರಿ' ಖ್ಯಾತಿಯ ರಿತ್ವಿಕ್ ಸ್ಟೈಲಿಶ್ ಲುಕ್ ನೋಡಿ
ವಿಶ್ವಾಸ್ ಆರ್ಯ ಅಂತ ಗೊತ್ತಾಗುತ್ತಾ. ತನ್ನನ್ನು ತಾನು ಸಾಬೀತು ಪಡಿಸಿಕೊಳ್ಳಲು ಆರ್ಯ ಏನ್ ಮಾಡ್ತಾನೆ? ಮುಂದೆನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ