• Home
 • »
 • News
 • »
 • entertainment
 • »
 • Jothe Jotheyali: ಆರ್ಯನಿಗೆ ಹಳೆಯದೆಲ್ಲಾ ನೆನಪಾಯ್ತಾ, ಅನು ಮುಂದಿನ ನಡೆ ಏನು?

Jothe Jotheyali: ಆರ್ಯನಿಗೆ ಹಳೆಯದೆಲ್ಲಾ ನೆನಪಾಯ್ತಾ, ಅನು ಮುಂದಿನ ನಡೆ ಏನು?

ಆರ್ಯವರ್ಧನ್

ಆರ್ಯವರ್ಧನ್

ಇಷ್ಟು ದಿನ ಆರ್ಯ ತಾನೇ ಆರ್ಯ ಅಂದ್ರೂ ಯಾರು ನಂಬುತ್ತಿಲ್ಲ. ಈಗ ಎಲ್ಲಾ ನೆನಪಾಗಿರುವ ಆರ್ಯನನ್ನು ಯಾರು ಒಪ್ಪಿಕೊಳ್ತಾರೆ? ಯಾರು ಒಪ್ಪಿಕೊಳ್ಳದಿದ್ರೂ ಅನು ಒಪ್ಪಿಕೊಳ್ಳಬೇಕು ಎಂದು ಆರ್ಯ ಬಯಸುತ್ತಿದ್ದಾನೆ.

 • News18 Kannada
 • 5-MIN READ
 • Last Updated :
 • Karnataka, India
 • Share this:

  ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali)  ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ (Out) ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರವನ್ನು ನಟ ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ವಿಶ್ವಾಸ್ ದೇಸಾಯಿದ್ದು, ಮನಸ್ಸು ಆರ್ಯವರ್ಧನ್. ಆರ್ಯನಿಗೆ ಹಳೆಯದೆಲ್ಲಾ (Old) ನೆನಪಾಗಿದೆ.


  ಆರ್ಯವರ್ಧನ್‍ಗೆ ಅಪಘಾತವಾಗಿತ್ತು
  ಆರ್ಯವರ್ಧನ್ ತನ್ನ ತಾಯಿ ಪ್ರಿಯದರ್ಶಿನಿ ನೋಡಲು ಹೊರಟಾಗ ಅಪಘಾತ ಆಗಿರುತ್ತೆ. ಆಗ ವಿಶ್ವಾಸ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಇಬ್ಬರನ್ನು ಒಂದೇ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗ ವಿಶ್ವಾಸ್ ದೇಸಾಯಿ ಸತ್ತು ಹೋಗಿರುತ್ತಾನೆ. ಆರ್ಯ ಬದುಕಿರುತ್ತಾನೆ. ಆದ್ರೆ ಮುಖಕ್ಕೆ ಡ್ಯಾಮೇಜ್ ಆಗಿರುತ್ತೆ. ಅದಕ್ಕೆ ವಿಶ್ವಾಸ ದೇಸಾಯಿ ಮುಖ ಹಾಕಿರುತ್ತಾರೆ.


  ಆರ್ಯನಿಗೆ ಎಲ್ಲಾ ಮರೆತು ಹೋಗಿರುತ್ತೆ
  ಅಪಘಾತವಾಗಿದ್ದ ಕಾರಣ ಆರ್ಯವರ್ಧನ್‍ಗೆ ಎಲ್ಲಾ ಮರೆತು ಹೋಗಿರುತ್ತೆ. ತಾನು ಯಾರು ಎನ್ನುವುದೇ ಗೊಂದಲವಾಗಿರುತ್ತೆ. ತಾಯಿ ಪ್ರಿಯದರ್ಶಿನಿಗೆ ಸತ್ಯ ಗೊತ್ತಿರುತ್ತೆ. ಅದಕ್ಕೆ ವಿಶ್ವಾಸ್ ದೇಸಾಯಿ ಮುಖ ಇದ್ದ ಆರ್ಯನನ್ನು ಅವರ ಮನೆಗೆ ಕರೆ ತಂದು ಬಿಟ್ಟಿರುತ್ತಾಳೆ. ಸ್ವಲ್ಪ ದಿನದ ಮಟ್ಟಿಗೆ ಇಲ್ಲಿರುತ್ತಾನೆ ಎಂದು ಹೇಳಿ ಇರ್ತಾರೆ. ಅದಕ್ಕೆ ಶಾರಾದಾ ದೇವಿ ಸಹ ಒಪ್ಪಿರುತ್ತಾಳೆ.


  ನಾನೇ ಆರ್ಯ ಎಂದ್ರೂ ಯಾರು ನಂಬಲಿಲ್ಲ
  ವಿಶ್ವಾಸ್ ದೇಸಾಯಿ ರೂಪದಲ್ಲಿದ್ದ ಆರ್ಯ, ತನ್ನ ಬಗ್ಗೆ ತಿಳದುಕೊಳ್ಳಬೇಕು ಎಂದು, ತನಗೆ ಚಿಕಿತ್ಸೆ ನೀಡಿದ ವೈದ್ಯರನ್ನು ಭೇಟಿಯಾಗಿರುತ್ತಾನೆ. ಅವರು ಸತ್ಯ ಹೇಳದಿದ್ದಾಗ, ಅವರಿಗೆ ಹೊಡೆದು ನಿಜ ಹೇಳಿ ಎಂದು ಕೇಳುತ್ತಾನೆ. ಅದಕ್ಕೆ ಡಾಕ್ಟರ್ ನೀವು ಆರ್ಯವರ್ಧನ್ ಎಂದು ಹೇಳಿರುತ್ತಾರೆ. ಆದ್ರೆ ಯಾರೂ ಅವನ ಮಾತು ನಂಬಿರಲಿಲ್ಲ.
  ಆರ್ಯನಿಗೆ ಹಳೆಯದೆಲ್ಲಾ ನೆನಪಾಯ್ತಾ?
  ಆರ್ಯವರ್ಧನ್ ಮತ್ತು ಕೆಲ ರೌಡಿಗಳಿಗೆ ಗಲಾಟೆ ಆಗುತ್ತೆ. ಆಗ ಆರ್ಯನ ತಲೆಗೆ ಪೆಟ್ಟು ಬೀಳುತ್ತೆ. ಅನು ಅವರನ್ನು ಕರೆದುಕೊಂಡು ಬಂದು ಹೋಟೆಲ್‍ನಲ್ಲಿ ಇರಿಸಿರುತ್ತಾಳೆ. ತಲೆಗೆ ಪೆಟ್ಟು ಬಿದ್ದಿದ್ದರಿಂದ ಎಚ್ಚರವಾದಾಗ ಆರ್ಯನಿಗೆ ಹಳೆಯದೆಲ್ಲಾ ನೆನಪಾಗಿದೆ. ನೋಡಿದ್ರೆ ಇಲ್ಲಿಗೆ ಹೇಗೆ ಬಂದೆ ಎಂದು ಚಿಂತೆ ಮಾಡುತ್ತಿದ್ದಾನೆ.


  ಪ್ರಿಯದರ್ಶಿನಿ-ಶಾರಾದಾ ದೇವಿ


  ಅನು ಒಪ್ಪಿಕೊಳ್ತಾಳಾ?
  ಇಷ್ಟು ದಿನ ಆರ್ಯ ತಾನೇ ಆರ್ಯ ಅಂದ್ರೂ ಯಾರು ನಂಬುತ್ತಿಲ್ಲ. ಈಗ ಎಲ್ಲಾ ನೆನಪಾಗಿರುವ ಆರ್ಯನನ್ನು ಯಾರು ಒಪ್ಪಿಕೊಳ್ತಾರೆ? ಯಾರು ಒಪ್ಪಿಕೊಳ್ಳದಿದ್ರೂ ಅನು ಒಪ್ಪಿಕೊಳ್ಳಬೇಕು ಎಂದು ಆರ್ಯ ಬಯಸುತ್ತಿದ್ದಾನೆ. ಅನು ಇವರನ್ನು ಆರ್ಯ ಎಂದು ಒಪ್ಪಿಕೊಳ್ತಾಳಾ ನೋಡಬೇಕು. ಮುಖ ಬದಲಾಗಿರುವುದು ಆರ್ಯನಿಗೆ ಗೊತ್ತಾದ್ರೆ, ಅದನ್ನು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು.


  ಅನು


  ಅಲ್ಲದೇ ಶಾರಾದಾ ದೇವಿಗೆ ಪ್ರಿಯದರ್ಶಿನಿ ಸತ್ಯ ಹೇಳಿದ್ದಾಳೆ. ಅದಕ್ಕೆ ಝೇಂಡೆ ಮೋಸದಿಂದ ಕಂಪನಿಯನ್ನು ತನ್ನ ಹೆಸರಿಗೆ ಮಾಡಿಕೊಂಡಿದ್ದ ಸಮಯದಲ್ಲಿ , ಇವನೇ ಆರ್ಯ ಎಂದು ಜಗತ್ತಿಗೆ ಪರಿಚಯ ಮಾಡಿದ್ರು.


  ಇದನ್ನೂ ಓದಿ: Sagar Biligowda: ಸಂಭ್ರಮದಲ್ಲಿ 'ಸತ್ಯ' ನಟ, ಶೀಘ್ರದಲ್ಲೇ ಸಾಗರ್ ಬಿಳಿಗೌಡ-ಸಿರಿ ರಾಜು ಮದುವೆ


  ಆರ್ಯನಿಗೆ ಹಳೆಯದೆಲ್ಲಾ ನೆನಪಾಗಿದೆ, ಅನು ಆರ್ಯನನ್ನು ಆರಾಧನಾ ಅವರನ್ನು ಮದುವೆ ಆಗಿ ಎನ್ನುತ್ತಿದ್ದಾಳೆ. ಆರ್ಯನ ಮುಂದಿನ ನಡೆ ಏನು? ಅನು ಏನ್ ಮಾಡ್ತಾಳೆ? ಎಲ್ಲವನ್ನೂ ನೋಡಲು ಜೊತೆ ಜೊತೆಯಲಿ ಸೀರಿಯಲ್ ನೋಡಬೇಕು.

  Published by:Savitha Savitha
  First published: