• Home
  • »
  • News
  • »
  • entertainment
  • »
  • Jothe Jotheyali: ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ! ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ

Jothe Jotheyali: ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ! ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ

ಝೇಂಡೆ ಅಕ್ರಮ ಬಯಲೆಗೆಳೆಯಲು ಅನು ಸಿದ್ಧತೆ

ಝೇಂಡೆ ಅಕ್ರಮ ಬಯಲೆಗೆಳೆಯಲು ಅನು ಸಿದ್ಧತೆ

ಇಷ್ಟು ದಿನ ಝೇಂಡೆ ಸಹ ಆರ್ಯ ಸತ್ತಿದ್ದಾನೆ ಎಂದುಕೊಂಡಿದ್ದ. ಈಗ ಸತ್ಯ ಗೊತ್ತಾಗಿದೆ. ಪ್ರಿಯದರ್ಶಿನಿ ಆರ್ಯ ಬದುಕಿರುವ ಸತ್ಯ ಹೇಳಿದ್ದಾಳೆ. ತನ್ನ ಗೆಳೆಯ ಬದುಕಿದ್ದಾನೆ ಎಂದು ಖುಷಿಯಾಗಿ ಇದ್ದಾನೆ.

  • News18 Kannada
  • Last Updated :
  • Karnataka, India
  • Share this:

    ಜೊತೆ ಜೊತೆಯಲಿ (Jothe Jotheyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ ಸ್ವಲ್ಪ ಅಭಿಮಾನಿಗಳು ಕಡಿಮೆ ಆಗಿದ್ದಾರೆ ಎಂದು ಹೇಳಲಾಗ್ತಿದೆ. ಆರ್ಯನ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ನಿಧಾನವಾಗಿ ಆರ್ಯನ ಸ್ಥಾನವನ್ನು ಆವರಿಸಿಕೊಳ್ತಿದ್ದಾರೆ. ಸದ್ಯ ಧಾರಾವಾಹಿಯಲ್ಲಿ ಮುಖ ಸಂಜುದು, ಮನಸ್ಸು ಆರ್ಯವರ್ಧನ್. ತನ್ನ ಗೆಳೆಯ  (Friend) ಸಾವನ್ನಪ್ಪಿದ್ದಾನೆ ಎಂದುಕೊಂಡಿದ್ದ ಝೇಂಡೆಗೆ ಆರ್ಯ ಬದುಕಿರುವ ಸತ್ಯ (Truth) ತಿಳಿದಿದೆ.


    ಅಪಘಾತದಲ್ಲಿ ವಿಶ್ವಾಸ್ ಸಾವು
    ಅನಿರುದ್ಧ್ ಅವರ ಪಾತ್ರವನ್ನು ಬದಲು ಮಾಡಲು, ಅಪಘಾತದ ಎಪಿಸೋಡ್ ನಡೆದಿತ್ತು. ಆಗ ವಿಶ್ವಾಸ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆರ್ಯನಿಗೆ ಅಪಘಾತವಾಗುತ್ತೆ. ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಇರುತ್ತಾರೆ. ಬದುಕಿ ಉಳಿದ ಆರ್ಯನಿಗೆ ವಿಶ್ವಾಸ್ ಮುಖ ಹಾಕಲಾಗುತ್ತೆ. ಆರ್ಯನಿಗೂ ಹಳೆಯದು ಮರೆತು ಹೋದ ಕಾರಣ, ತಾನು ಯಾರು ಎಂಬುದರ ಅರಿವಿಲ್ಲದೇ ಜೀವನ ನಡೆಸುತ್ತಿದ್ದಾನೆ.


    ಬದುಕಿರುವವನು ಆರ್ಯ, ಆದ್ರೆ ಮುಖ ವಿಶ್ವಾಸ್
    ಎಲ್ಲರೂ ಅಪಘಾತದಲ್ಲಿ ಆರ್ಯನೇ ಸತ್ತು ಹೋಗಿದ್ದಾನೆ ಎಂದು ತಿಳಿದುಕೊಂಡಿದ್ದಾರೆ. ಈಗಲೂ ಪ್ರಿಯದರ್ಶಿನಿ ಮತ್ತು ಪೊಲೀಸ್ ಗೆ ಬಿಟ್ರೆ ಬೇರೆ ಯಾರಿಗೂ ವಿಚಾರ ಗೊತ್ತಿಲ್ಲ. ಆದ್ರೂ ಪ್ರಿಯದರ್ಶಿನಿ ಅವನನ್ನು ಅವರ ಮನೆಗೆ ಕರೆದುಕೊಂಡು ಬಂದು, ಸಂಜು ಸ್ವಲ್ಪ ದಿನ ಇಲ್ಲೇ ಇರ್ತಾನೆ ಎಂದು ಹೇಳಿ ಬಿಟ್ಟು ಹೋಗಿದ್ದಾನೆ. ಏನೂ ನೆನಪಿಲ್ಲದೇ, ವಿಶ್ವಾಸ್ ದೇಸಾಯಿ, ಸಂಜು ಹೆಸರಿನಲ್ಲಿ ಬದುಕುತ್ತಿದ್ದಾನೆ.


    ಇದನ್ನೂ ಓದಿ: Bigg Boss Kannada: ರಾಜಣ್ಣನ ಕೈಯ್ಯಲ್ಲಿ ಭಿಕ್ಷೆ ಬೇಡಿಸಿದ ರೂಪೇಶ್ ಶೆಟ್ಟಿ! 


    ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ!
    ಇಷ್ಟು ದಿನ ಝೇಂಡೆ ಸಹ ಆರ್ಯ ಸತ್ತಿದ್ದಾನೆ ಎಂದುಕೊಂಡಿದ್ದ. ಈಗ ಸತ್ಯ ಗೊತ್ತಾಗಿದೆ. ಪ್ರಿಯದರ್ಶಿನಿ ಆರ್ಯ ಬದುಕಿರುವ ಸತ್ಯ ಹೇಳಿದ್ದಾಳೆ. ತನ್ನ ಗೆಳೆಯ ಬದುಕಿದ್ದಾನೆ ಎಂದು ಖುಷಿಯಾಗಿ ಇದ್ದಾನೆ. ಅಲ್ಲದೇ ಈ ವಿಷ್ಯವನ್ನು ಯಾರಿಗೂ ಹೇಳಬೇಡಿ ಎಂದು ಪ್ರಿಯದರ್ಶಿನ ಅವರ ಬಳಿ ಹೇಳಿದ್ದಾನೆ.


    zee Kannada serial, jothe jotheyali serial, arya is alive zende know the truth, ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ, ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ, ಜೊತೆ ಜೊತೆಯಲಿ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, kannada news, karnataka news,
    ಆರ್ಯ


    ಝೇಂಡೆ ಅಕ್ರಮ ಬಯಲೆಗೆಳೆಯಲು ಅನು ಸಿದ್ಧತೆ
    ವಿಶ್ವಾಸ್, ಅನುವನ್ನು ಭೇಟಿಯಾಗಲು ಸುಬ್ಬು ಮನೆಗೆ ಬಂದಿರುತ್ತಾನೆ. ಆಕೆಗೆ ಯಾವುದೋ ದಾಖಲೆಯನ್ನು ನೋಡಲೇಬೇಕು ಎಂದು ಹೇಳುತ್ತಾನೆ. ಅದನ್ನು ನೋಡಿದ ಅನು ಗಾಬರಿ ಆಗುತ್ತಾಳೆ. ಅದಕ್ಕೆ ಸಂಜು, ಈ ಆಸ್ತಿ ಹೋದ ವರ್ಷದ ತನಕ ನಿಮ್ಮದಾಗಿತ್ತು. ಈಗ ಅದು ಬೇರೆಯವರ ಹೆಸರಿನಲ್ಲಿ ಇದೆ ಎಂದು ಹೇಳ್ತಾನೆ. ಅದಕ್ಕೆ ಅನು ಅದನ್ನು ವಾಪಸ್ ಪಡೆದೇ ಪಡೆಯುತ್ತೇನೆ ಎಂದು ಹೇಳಿದ್ದಾಳೆ.


    zee Kannada serial, jothe jotheyali serial, arya is alive zende know the truth, ಝೇಂಡೆಗೆ ಗೊತ್ತಾದ ಆರ್ಯ ಬದುಕಿರುವ ಸತ್ಯ, ವಿಶ್ವಾಸ್ ತನ್ನ ಗೆಳೆಯನೇ ಎಂದು ಖುಷಿ, ಜೊತೆ ಜೊತೆಯಲಿ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, kannada news, karnataka news,
    ಅನು


    ಆರಾಧನಾಗೆ ವಿಶ್ವಾಸ್ ಚಿಂತೆ
    ವಿಶ್ವಾಸ್ ಮುಖ ಹೊತ್ತಿರುವುದು ಆರ್ಯವರ್ಧನ್ ಎಂದು ಗೊತ್ತಿಲ್ಲದೇ, ವಿಶ್ವಾಸ್ ಪತ್ನಿ ಆರಾಧನ ತನ್ನ ಗಂಡನನ್ನು ಕರೆದುಕೊಂಡು ಹೋಗಲು ಬಂದಿದ್ದಾಳೆ. ಆದ್ರೆ ವಿಶ್ವಾಸ್ ಅವಳನ್ನು ಸರಿಯಾಗಿ ಮಾತನಾಡಿಸುತ್ತಿಲ್ಲ. ಅದಕ್ಕೆ ಅವಳು ಬೇಸರ ಮಾಡಿಕೊಂಡಿದ್ದಾಳೆ. ನನ್ನ ಗಂಡ ಯಾಕೋ ನನ್ನ ಜೊತೆ ಮೊದಲಿನ ರೀತಿ ಇಲ್ಲ ಎಂದು ಕೊರಗುತ್ತಿದ್ದಾಳೆ.


    ಇದನ್ನೂ ಓದಿ: Sagar Biligowda: ಅಮುಲ್ ಬೇಬಿ ಕಾರ್ತಿಕ್ ಮದುವೆ, ಸಂಗಾತಿಯನ್ನ ಪರಿಚಯಿಸಿದ ನಟ 


    ಅನು ಮುಂದಿನ ನಡೆ ಏನು? ಝೇಂಡೆ ತನ್ನ ಗೆಳೆಯನನ್ನು ಹೇಗೆ ಸರಿ ಮಾಡ್ತಾನೆ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಧಾರಾವಾಹಿ ನೋಡಬೇಕು.

    Published by:Savitha Savitha
    First published: