ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jothe Jotheyali) ಸೀರಿಯಲ್ ಕೂಡ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‍ಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಆದ್ರೆ ಸೀರಿಯಲ್ ಸೆಟ್ ನಲ್ಲಿ ಆದ ಗಲಾಟೆಯಿಂದ ಅನಿರುದ್ಧ್ ಔಟ್ ಆದ ಮೇಲೆ, ಆರ್ಯನ ಪಾತ್ರವನ್ನು ನಟ ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಆರ್ಯವರ್ಧನ್ ಆದ ಅಪಘಾತದಿಂದ (Accident) ಎಲ್ಲವನ್ನೂ ಮರೆತಿದ್ದರು. ಈಗ ಹಳೆಯದೆಲ್ಲಾ ನೆನಪಿಗೆ ಬಂದಿದೆ. ಮೋಸ ಮಾಡಿದ ಝೇಂಡೆ ವಿರುದ್ಧ ಆರ್ಯ ಕೋಪಗೊಂಡಿದ್ದಾನೆ.
ಮರುಕಳಿಸಿದ ನೆನೆಪು
ಆರ್ಯವರ್ಧನ್‍ಗೆ ಅಪಘಾತವಾಗಿರುತ್ತೆ. ಹಳೆಯದೆಲ್ಲಾ ಮರೆತು ಹೋಗಿರುತ್ತೆ. ಅಪಘಾತದಲ್ಲಿ ಮುಖ ಎಲ್ಲಾ ಜಜ್ಜಿ ಹೋಗಿದ್ದ ಕಾರಣ ವಿಶ್ವಾಸ್ ದೇಸಾಯಿ ಮುಖ ಹಾಕಿರುತ್ತಾರೆ. ಆರ್ಯನಿಗೆ ತಾನು ಯಾರು ಎಂದು ಗೊತ್ತಿಲ್ಲದೇ, ಯಾರು ಏನ್ ಹೇಳ್ತಾರೋ, ಅದನ್ನು ನಂಬುತ್ತಿದ್ದ. ಡಾಕ್ಟರ್ ನೀವೇ ಆರ್ಯ ಎಂದು ಒಮ್ಮೆ ಹೇಳಿದ್ರು. ಆದ್ರೂ ಮನೆಯವರು ಒಪ್ಪಲು ರೆಡಿ ಇರಲಿಲ್ಲ.
ತನ್ನ ಮುಖ ತಾನೇ ನೋಡಿ ಗಾಬರಿ
ಆರ್ಯವರ್ಧನ್‍ಗೆ 3 ವರ್ಷದ ಹಿಂದೆ ನಡೆದಿದ್ದು ನೆನಪಿದೆ. 2020ರವರೆಗೆ ಎಲ್ಲವೂ ನೆನಪಿದೆ. ಆದ್ರೆ 3 ವರ್ಷ ಏನ್ ಆಯ್ತು ಎಂದು ಗೊತ್ತಿಲ್ಲ. ಅಲ್ಲದೇ ನೆನಪು ಬಂದ ಕೂಡಲೇ ಅನು ಹುಡುಕಿದ್ದಾನೆ. ಆಕೆ ಸಿಕ್ಕಿಲ್ಲ. ಅದಕ್ಕೆ ಗಾಬರಿಯಿಂದ ಮನೆಗೆ ಹೋಗಿದ್ದಾನೆ. ಅಲ್ಲಿ ಕನ್ನಡಿಯಲ್ಲಿ ತನ್ನ ಮುಖ ತಾನೇ ನೋಡಿಕೊಂಡು ಶಾಕ್ ಆಗಿದ್ದಾನೆ. ಇದ್ಯಾವ ಮುಖ ಎಂದು ಎಲ್ಲರನ್ನೂ ಪ್ರಶ್ನೆ ಮಾಡಿದ್ದಾನೆ.
ಅನು ಸಿರಿಮನೆ ಎಲ್ಲಿ ಹೋದ್ಲು?
ಅನುಗೆ ಇವನೇ ಆರ್ಯ ಅಂತ ಹೇಳಿದ್ರೂ ಯಾಕೋ ನಂಬೋಕೆ ಆಗ್ತಾ ಇಲ್ಲ. ಅಲ್ಲದೇ ವಿಶ್ವಾಸ್ ದೇಸಾಯಿ ಹೆಂಡ್ತಿ ಆರಾಧನ ಇಲ್ಲಿಗೆ ಬಂದಿದ್ದಾಳೆ. ವಿಶ್ ನನಗೆ ಬೇಕು ಎನ್ನುತ್ತಿದ್ದಾಳೆ. ಅದಕ್ಕೆ ಅನುಗೆ ಬೇಸರವಾಗಿದೆ. ಆಕೆ ಮನೆ ಬಿಟ್ಟು ಹೋಗಿದ್ದಾಳೆ. ನನ್ನನ್ನು ನಾನು ಸುರಕ್ಷಿತವಾಗಿ ನೋಡಿಕೊಳ್ತೇನೆ ಎಂದು ಪತ್ರ ಬರೆದಿಟ್ಟು ಹೋಗಿದ್ದಾಳೆ.
ಝೇಂಡೆ ವಿರುದ್ಧ ತಿರುಗಿ ಬಿದ್ದ ಆರ್ಯವರ್ಧನ್
ಆರ್ಯವರ್ಧನ್ ಗೆ ತಾನು ಇಲ್ಲದ ಸಮಯದಲ್ಲಿ ಝೇಂಡೆ ಮೋಸ ಮಾಡಿದ್ದಾನೆ ಎಂದು ತಿಳಿದಿದೆ. ಮೋಸದಿಂದ ಹಣ ಹೊಡೆದಿದ್ದಾನೆ ಎಂದು ಗೊತ್ತಾಗಿದೆ. ಅದಕ್ಕೆ ಬೇಸರ ಮಾಡಿಕೊಂಡ ಆರ್ಯ ಝೇಂಡೆಯನ್ನು ಹುಡುಕಿಕೊಂಡು ಹೋಗಿದ್ದಾನೆ. ಅವನ ಜೊತೆ ಊಟ ಮಾಡಿಸಿಕೊಂಡು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾನೆ.
ಸಾವನ್ನೂ ಖುಷಿ ಪಡ್ತಿಯಾ ನೀನು
ಸ್ವಾರ್ಥಿ ನೀನು. ಒಬ್ಬರ ಸಾವನ್ನು ನಿನ್ನ ಉಪಯೋಗಕ್ಕೆ ತಕ್ಕಂತೆ ಬಳಸಿಕೊಳ್ತೀಯಾ. ಖಾಲಿ ಪೇಪರ್ ಮೇಲೆ ಸಹಿ ಹಾಕಿಸಿಕೊಳ್ಳೋದು. ಇಷ್ಟೇ ಅಲ್ವಾ ನಿನಗೆ ಗೊತ್ತಿರೋದು. ನೀನು ಈ ರೀತಿ ಇರುವಾಗ, ಪ್ರೀತಿ ಬೆರೆಸಿ ಊಟ ಕೊಡ್ತೀಯಾ? ಊಟದಲ್ಲಿ ಏನಾದ್ರೂ ಬೆರಸಿ ಕೊಟ್ಟಿರುತ್ತಿಯಾ ತಾನೇ ಎಂದು ಕೇಳಿದ್ದಾನೆ.
ಜೀವಕ್ಕೆ ಜೀವ ಕೊಡುವ ಗೆಳೆಯ ಬದಲಾಗಿದ್ದಾನೆ ಎಂದು ತಿಳಿದು ಆರ್ಯವರ್ಧನ್ ಬೇಸರ ಮಾಡಿಕೊಂಡಿದ್ದಾರೆ. ಇನ್ಯಾವತ್ತು ಯಾರನ್ನೂ ನಂಬಬಾರದು ಎಂದು ಹೇಳುತ್ತಿದ್ದಾನೆ. ಝೇಂಡೆ ಮಾಡಿದ ತಪ್ಪಿನಿಂದ ಎಲ್ಲವನೂ ಕೇಳಿಸಿಕೊಂಡು ಸುಮ್ಮನೇ ನಿಂತಿದ್ದಾನೆ.
ಇದನ್ನೂ ಓದಿ: Ranjani Raghavan: ಗಣರಾಜ್ಯೋತ್ಸವಕ್ಕೆ ವಿಶ್ ಮಾಡಿರೋ ಈ ಪೋರಿ ಯಾರು ಗೊತ್ತಾ?
ಆರ್ಯನ ಪ್ರಶ್ನೆಗೆ ಝೇಂಡೆ ಏನ್ ಉತ್ತರ ಕೊಡ್ತಾನೆ? ಅನು ಸಿರಿಮನೆ ಹೋಗಿದ್ದೆಲ್ಲಿಗೆ? ಆರ್ಯನನ್ನು ಅನು ಒಪ್ಪಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಜೊತೆ ಜೊತೆಯಲಿ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ