Jote Joteyali: ಸಾಯಲು ಹೊರಟಿದ್ದಾನೆ ವಿಶ್ವಾಸ್ ದೇಸಾಯಿ, ಸಾವಿನ ದವಡೆಯಲ್ಲಿ ಸಿಲುಕಿದ್ದಾನೆ ಆರ್ಯವರ್ಧನ್!

ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಇನ್ನು ಆರ್ಯವರ್ಧನ್ ಸಹೋದರ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ಮಾಡಿದ ಸಾಲಕ್ಕೆ ವಿಶ್ವಾಸ್ ದೇಸಾಯಿ ಸಾಯಲು ಹೊರಟಿದ್ದಾನೆ. ಇತ್ತ ಆರ್ಯವರ್ಧನ್‍ಗೆ ಅಪಘಾತವಾಗಿದೆ. ಇಬ್ಬರ ಪ್ರಾಯದಲ್ಲಿಣವೂ ಅಪಾದೆ.

ಜೊತೆ ಜೊತೆಯಲಿ

ಜೊತೆ ಜೊತೆಯಲಿ

 • Share this:
  ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jote Joteyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್ (Anirudh) ಗೆ ತುಂಬಾ ಜನ ಅಭಿಮಾನಿಗಳು (Fans) ಇದ್ದಾರೆ. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಧಾರಾವಾಹಿಯಿಂದ ಔಟ್ (Out) ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಇನ್ನು ಆರ್ಯವರ್ಧನ್ ಸಹೋದರ ಪಾತ್ರಕ್ಕೆ ನಟ ಹರೀಶ್ ರಾಜ್ ಬಂದಿದ್ದಾರೆ. ಮಾಡಿದ ಸಾಲಕ್ಕೆ ವಿಶ್ವಾಸ್ ದೇಸಾಯಿ ಸಾಯಲು ಹೊರಟಿದ್ದಾನೆ. ಇತ್ತ ಆರ್ಯವರ್ಧನ್‍ಗೆ ಅಪಘಾತವಾಗಿದೆ (Accident). ಇಬ್ಬರ ಪ್ರಾಣವೂ ಅಪಾಯದಲ್ಲಿದೆ.

  ವಿಶ್ವಾಸ್ ದೇಸಾಯಿ ಪಾತ್ರಕ್ಕೆ ಹರೀಶ್ ರಾಜ್
  ಆರ್ಯವರ್ಧನ್ ನಿಜವಾದ ಅಮ್ಮ ಅಂದ್ರೆ ಪ್ರಿಯದರ್ಶಿನಿ. ಪ್ರಿಯದರ್ಶಿನಿ ಇನ್ನೊಬ್ಬ ಮಗ ವಿಶ್ವಾಸ್ ದೇಸಾಯಿ. ಆತ ಇಷ್ಟು ದಿನ ದುಡಿಯಲು ಹೊರ ದೇಶಕ್ಕೆ ಹೋಗಿರುತ್ತಾನೆ. ಆದ್ರೆ ಅಲ್ಲಿ 700 ಕೋಟಿ ಲಾಸ್ ಮಾಡಿಕೊಂಡು ಮನೆಗೆ ವಾಪಸ್ ಆಗಿದ್ದಾನೆ. ಅವನ ತಾಯಿ ನಾನು ಆರ್ಯವರ್ಧನ್ ಬಳಿ ಸಹಾಯ ಕೇಳ್ತೀನಿ ಅಂತ ಹೇಳ್ತಾ ಇದ್ದಾರೆ.

  ಜೋಗತವ್ವ ಹೇಳಿದ ಮಾತು ನಿಜ ಆಗುತ್ತಿದೆ
  ಪ್ರಿಯದರ್ಶಿನಿ ಮನೆಗೆ ಜೋಗತವ್ವ ಬಂದಿದ್ದು ಆಕೆಗೆ ಎಚ್ಚರಿಕೆ ಕೊಟ್ಟಿದ್ದಾರೆ. ನಿನ್ನ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಂಟಕ ಇದೆ ಎಂದು ಹೇಳುತ್ತಾಳೆ. ಆದ್ರೆ ಯಾವ ಮಗನಿಗೆ ಎಂಬುದನ್ನು ಹೇಳುವುದಿಲ್ಲ. ಅದನ್ನು ಕೇಳಿಸಿಕೊಂಡ ಪ್ರಿಯದರ್ಶಿನಿ ಗಾಬರಿ ಆಗಿದ್ದಾಳೆ. ಯಾಕಂದ್ರೆ ಜೋಗತವ್ವ ಹೇಳಿದ ಮಾತುಗಳೆಲ್ಲಾ ನಿಜ ಆಗುತ್ತೆ ಅದಕ್ಕೆ.

  ಇದನ್ನೂ ಓದಿ: Kannadathi: ಅಮ್ಮಮ್ಮನ ಮರೆವಿನ ಕಾಯಿಲೆ ಬಗ್ಗೆ ಹರ್ಷನಿಗೆ ಹೆಚ್ಚಾದ ಚಿಂತೆ; ಮನೆ ಬಿಟ್ಟು ಹೋಗ್ತೀವಿ ಅಂತಿದ್ದಾನೆ ಆದಿ!

  ಸಾಯಲು ಮನೆ ಬಿಟ್ಟು ಹೊರಟ ವಿಶ್ವಾಸ್ ದೇಸಾಯಿ
  ವಿಶ್ವಾಸ್ ದೇಸಾಯಿ ವಿದೇಶಕ್ಕೆ ದುಡಿಯಲು ಹೋಗಿ ಕೋಟಿ ಕೋಟಿ ನಷ್ಟ ಅನುಭವಿಸುತ್ತಿದ್ದಾರೆ. ಮಾಡಿದ ಸಾಲ ತೀರಿಸಲು ಆಗದೇ ಸಾಯುವ ನಿರ್ಧಾರ ಮಾಡಿದ್ದಾನೆ. ಮನೆ ಬಿಟ್ಟು ಬರುವಾಗ ಅಮ್ಮನ ಕೈ ತುತ್ತು ತಿಂದು ಬಂದಿದ್ದಾನೆ. ಸಾಯೋ ಮುನ್ನ ಕೊನೆ ಊಟ ಎಂದು ಮಾಡಿ ಬಂದಿದ್ದಾನೆ. ಪ್ರಪಂಚವನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳುತ್ತಾ ಎಲ್ಲಿಗೂ ಹೊರಟಿದ್ದಾರೆ.

  ವಿಶ್ವಾಸ್ ದೇಸಾಯಿ


  ಆರ್ಯವರ್ಧನ್‍ಗೆ ಅಪಘಾತ
  ಇನ್ನು ಇದ್ದಕ್ಕಿದ್ದ ಹಾಗೇ ಮನೆ ಬಿಟ್ಟು ಆರ್ಯವರ್ಧನ್ ಎಲ್ಲೋ ಹೋಗಿದ್ದಾನೆ. ಆರ್ಯ ಸರ್ ಕಾಣದೇ ಅನು ಕಂಗಾಲಾಗಿದ್ದಾಳೆ. ಎಲ್ಲ ಕಡೆ ಅವರನ್ನು ಹುಡುಕುತ್ತಿದ್ದಾಳೆ. ಝೇಂಡೆ ಸಹ ಆರ್ಯನನ್ನು ಹುಡುಕುತ್ತಿದ್ದಾನೆ. ಎಲ್ಲಿಗೂ ಕಾರಿನಲ್ಲಿ ಹೊರಟಿರುವ ಆರ್ಯನಿಗೆ ಅ ಪಘಾತವಾಗಿದೆ. ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದಾರೆ. ಹಾಗಾದ್ರೆ ಇಬ್ಬರಲ್ಲಿ ಯಾರ ಜೀವಕ್ಕೆ ಅಪಾಯ ಅಂತ ಗೊತ್ತಾಗಿಲ್ಲ.

  ಆರ್ಯವರ್ಧನ್ ಯಾರಾಗ್ತಾರೆ ಅನ್ನೋ ಕುತೂಹಲ
  ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಸೀರಿಯಲ್‍ನಿಂದ ಔಟ್ ಆದಾಗಿನಿಂದ ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಆರೂರ್ ಜಗದೀಶ್ ಅವರು ನಿರ್ದೇಶಕ ಅನೂಪ್ ಭಂಡಾರಿಯನ್ನು ಈ ಪಾತ್ರಕ್ಕೆ ತರಲು ಪ್ರಯತ್ನ ಮಾಡಿದ್ರು. ಆದ್ರೆ ಅನೂಪ್ ಭಂಡಾರಿ ಅವರು ಒಪ್ಪಿಲ್ಲ.

  ಇದನ್ನೂ ಓದಿ: Ramachari: ಅಮ್ಮನಿಗಾಗಿ ರಾಮಾಚಾರಿ ಕಾಲು ಹಿಡಿದ ಸೊಕ್ಕಿನ ರಾಣಿ ಚಾರು!

  ನಂತರ್ ಹರೀಶ್ ರಾಜ್ ಬರ್ತಾರೆ ಅಂದ್ರು. ಅವರೇನೋ ಬಂದಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಬದಲಿಗೆ ಅವರ ಸಹೋದರರಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಯಾರು ಆರ್ಯವರ್ಧನ್ ಆಗ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಹಾಗಾದ್ರೆ ಯಾರು ಬರ್ತಾರೆ ಅಂತ ಇನ್ನೂ ಗೊತ್ತಾಗಿಲ್ಲ.
  Published by:Savitha Savitha
  First published: