Jothe Jotheyali: ಅನು ಮುಂದೆ ಎಲ್ಲಾ ಸತ್ಯ ಬಾಯಿ ಬಿಡ್ತಾನಾ ಆರ್ಯವರ್ಧನ್?

ಅನು ಹೇಳಿದ ಜಾಗಕ್ಕೆ ಆರ್ಯವರ್ಧನ್ ಬರುತ್ತಾರೆ. ರಾಜನಂದಿನಿ ವಿಷಯದಲ್ಲಿ ಆದ ತಪ್ಪು ಮತ್ತೆ ಆಗಲು ಬಿಡಲ್ಲ. ನಾನು ಎಲ್ಲವನ್ನೂ ಹೇಳುತ್ತೇನೆ ಅನು. ಮೊದಲಿನಿಂದ ಎಲ್ಲಾ ಹೇಳುತ್ತೇನೆ. ರಾಜನಂದಿಗೆ ಹೇಳಬೇಕು ಅಂದುಕೊಂಡಿದ್ದೇಲ್ಲಾ ಹೇಳುತ್ತೇನೆ. ಆರ್ಯವರ್ಧನ್ ಸುಳ್ಳಲ್ಲ. ಆರ್ಯನ ಅಸ್ತತ್ವ ಅನಿವಾರ್ಯ ಎಂದು ಆರ್ಯವರ್ಧನ್ ಹೇಳುತ್ತಾರೆ.

ಜೊತೆ ಜೊತೆಯಲಿ ಸೀರಿಯಲ್

ಜೊತೆ ಜೊತೆಯಲಿ ಸೀರಿಯಲ್

  • Share this:
    ಜೊತೆ ಜೊತೆಯಲಿ (Jothe Jotheyali) ಸೀರಿಯಲ್ (Serial) , ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಇದು ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಧಾರಾವಾಹಿ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿದ ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು (Anu) ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರು ಅನುಮತಿ ಪಡೆದು ಮದುವೆ ಮಾಡಿಕೊಂಡಿದ್ದಾರೆ. ಮೊದ ಮೊದಲು ಇಬ್ಬರು ಚೆನ್ನಾಗೇ ಇದ್ದರೂ. ಆದ್ರೆ ಇತ್ತೀಚೆಗೆ ಅನುಗೆ, ಆರ್ಯವರ್ಧನ್ ಅವರು ಹಳೇ ಜೀವನದ ಸತ್ಯಗಳು ಗೊತ್ತಾಗಿವೆ. ಅದಕ್ಕೆ ನ್ಯಾಯ ಕೊಡಿಸಬೇಕು ಎಂಬ ಸತ್ಯದ ಹೋರಾಟದಲ್ಲಿ ಇದ್ದಾಳೆ. ರಾಜನಂದಿನಿ (Raja Nandini) ಸಾವನ್ನಪ್ಪಿದ ಸ್ಥಳದಲ್ಲೇ ಆರ್ಯವರ್ಧನ್ ಅನು ಮುಂದೆ ಎಲ್ಲಾ ಸತ್ಯ (Truth) ಹೇಳಿದ್ದಾನೆ.

    ರಾಜನಂದಿನಿ ಸಾವನ್ನಪ್ಪಿದ ಜಾಗದಲ್ಲಿ ಅನು
    ಇನ್ನು ಅನುಗೆ ಹಳೆಯ ಸತ್ಯಗಳು ಗೊತ್ತಾಗಿದ್ದು, ಆರ್ಯ ಎಷ್ಟೇ ಹೇಳಿದ್ರೂ ಅನು ಅವರ ಮಾತುಗಳನ್ನು ಕೇಳುತ್ತಿಲ್ಲ. ಅನು ರಾಜನಂದಿನಿ ಸಾವನ್ನಪ್ಪಿದ ಸ್ಥಳಕ್ಕೆ ಹೋಗಿದ್ದಾಳೆ. ಅಲ್ಲಿ ರಾಜನಂದಿನಿ ಸತ್ತ ಘಟನೆಯನ್ನು ನೆನಪಿಸಿಕೊಳ್ಳುತ್ತಿದ್ದಾಳೆ. ಯಾವ ಜಾಗದಲ್ಲಿ ಎಲ್ಲಾ ಮುಗಿದೋಯ್ತು ಅಂತ ಖುಷಿ ಪಟ್ರೂ, ಆ ಜಾಗದಲ್ಲಿ ಹಳೇ ಬಾಕಿ ವಸೂಲಿ ಮಾಡೋಕೆ ಬಂದಿದ್ದೇನೆ ಎಂದು ಅನು ಹೇಳುತ್ತಿದ್ದಾಳೆ. ಅಲ್ಲಿಗೆ ಆರ್ಯವರ್ಧನ್‍ಗೆ ಬರುವಂತೆ ಹೇಳಿರುತ್ತಾಳೆ.

    Zee Kannada serial, Jote Joteyali serial, Kannada serial, jote joteyali serial song, today episode in serial, ಜೊತೆ ಜೊತೆಯಲಿ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ರಾಜನಂದಿನಿ


    ಇವತ್ತೇ ಎಲ್ಲ ಸತ್ಯ ಬಯಲಾಗುತ್ತಾ?
    ಆರ್ಯವರ್ಧನ್ ಅನುಗೆ ನೀನು, ನಾನು ಹೇಳೋದನ್ನೆಲ್ಲಾ ಕೇಳೋ ತಾಳ್ಮೆ ಇದೆ ಎನ್ನಿಸಲ್ಲ ಅನ್ನುತ್ತಾನೆ. ಅದಕ್ಕೆ ಅನು ನಾನು ಮದುವೆಗೂ ಮುಂಚೆ ಎಲ್ಲಾ ಸತ್ಯ ಹುಡುಕಲು ಹೊರಟವಳು ಸರ್ ನಾನು. ಈಗಲೂ ನೀವೂ ಯಾವುದಕ್ಕೂ ಉತ್ತರ ಕೊಟ್ಟಿಲ್ಲ ಸರ್ ಎನ್ನುತ್ತಾಳೆ. ಆಗ ಕೋಪಗೊಂಡ ಆರ್ಯ ನೀನು ರಾಜನಂದಿನಿ ತರ ಮಾತನಾಡಬೇಡ ಎಂದು ಜೋರಾಗಿ ಹೇಳುತ್ತಾನೆ. ನಾನು ಅವತ್ತೇ ರಾಜನಂದಿನಿಗೆ ಎಲ್ಲಾ ಸತ್ಯ ಹೇಳಿ ಬಿಡುತ್ತಿದ್ದೆ. ಆದ್ರೆ ಅವರು ನನ್ನ ಮಾತನ್ನು ಕೇಳದೇ, ನಿನ್ನ ಹಾಗೆ ನನ್ನ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಹೋಗಿ ಬಿಟ್ಟು ಎನ್ನುತ್ತಾನೆ.

    ಇದನ್ನೂ ಓದಿ: Kannadathi: ಮನೆಗೆ ಪೊಲೀಸರನ್ನು ಕರೆಸಿದ್ದಾಳೆ ಅಮ್ಮಮ್ಮ, ಸಾನಿಯಾ ವಿರುದ್ಧ ದೂರು ನೀಡ್ತಾರಾ ರತ್ನಮಾಲಾ?

    ಅಪ್ಪನಿಗಾಗಿ ಹೀಗೆಲ್ಲಾ ಮಾಡಿದ್ರಾ ಆರ್ಯವರ್ಧನ್?
    ಅನು ಹೇಳಿದ ಜಾಗಕ್ಕೆ ಆರ್ಯವರ್ಧನ್ ಬರುತ್ತಾರೆ. ರಾಜನಂದಿನಿ ವಿಷಯದಲ್ಲಿ ಆದ ತಪ್ಪು ಮತ್ತೆ ಆಗಲು ಬಿಡಲ್ಲ. ನಾನು ಎಲ್ಲವನ್ನೂ ಹೇಳುತ್ತೇನೆ ಅನು. ಮೊದಲಿನಿಂದ ಎಲ್ಲಾ ಹೇಳುತ್ತೇನೆ. ರಾಜನಂದಿಗೆ ಹೇಳಬೇಕು ಅಂದುಕೊಂಡಿದ್ದೆಲ್ಲಾ ಹೇಳುತ್ತೇನೆ. ಆರ್ಯವರ್ಧನ್ ಸುಳ್ಳಲ್ಲ. ಆರ್ಯನ ಅಸ್ತತ್ವ ಅನಿವಾರ್ಯ ಎಂದು ಆರ್ಯವರ್ಧನ್ ಹೇಳುತ್ತಾರೆ.

    ತಂದೆಯವರಿಗೆ ಕೊಟ್ಟ ಮತು ಉಳಿಸಿಕೊಳ್ಳುವ ಅನಿವಾರ್ಯ ಇತ್ತು. ವರ್ಧನ್ ಸಾಮ್ರಾಜ್ಯದ ದೊರೆ ಆಗ್ತೀನಿ ಅನ್ನೋ ಮಾತನ್ನು ನಮ್ಮ ತಂದೆಯವರಿಗೆ ಕೊಟ್ಟಿದ್ದೆ. ಅದಕ್ಕೋಸ್ಕರನೇ ಹೀಗೆಲ್ಲಾ ಮಾಡಬೇಕಾಯ್ತು. ರಾಜನಂದಿನಿ ಅವರನ್ನು ಪ್ರೀತಿಸೋ ನಾಟಕವಾಡಬೇಕಿತ್ತು. ಆದ್ರೆ ನಿಜವಾಗಿಯೂ ಪ್ರೀತಿ ಆಯ್ತು ಎಂದು ಹೇಳುತ್ತಾರೆ.

    ಅನುಗೆ ಆರ್ಯವರ್ಧನ್ ಬಗ್ಗೆ ಗೊತ್ತಾಗಿರುವ ಸತ್ಯವೇನು?
    ಅನು ಸಿರಿಮನೆ ಈ ಧಾರಾವಾಹಿಯಲ್ಲಿ ಬರುವ ಆರ್ಯವರ್ಧನ್ ಅವರ ಮೊದಲನೇ ಹೆಂಡತಿ ರಾಜನಂದಿಯ ಮರುಜನ್ಮ. ಮದುವೆ ಆಗಿ ಅನು ಆರ್ಯ ಮನೆಗೆ ಬಂದ ನಂತರ, ಆಕೆಗೆ ಒಂದೊಂದೆ ಸತ್ಯಗಳು ಗೊತ್ತಾಗಿವೆ. ರಾಜನಂದಿನಿಯ ತಂದೆ ಸಾವಿಗೆ ಆರ್ಯವರ್ಧನ್ ಕಾರಣ. ರಾಜನಂದಿನಿ ಸಾವಿಗೆ ಆರ್ಯ ಕಾರಣ, ಮೋಸದಿಂದ ಆಸ್ತಿ, ಅಧಿಕಾರಕ್ಕಾಗಿ ಹೀಗೆಲ್ಲಾ ಮಾಡಿದ್ದಾರೆ ಎಂದು ತಿಳಿದಿದೆ.

    ಇದನ್ನೂ ಓದಿ: Bigg Boss OTT: ಬಿಗ್ ಬಾಸ್ ಮನೆಯಲ್ಲಿ ಸ್ವಾತಂತ್ರೋತ್ಸವದ ಸಂಭ್ರಮ; ದೊಡ್ಮನೆಯಲ್ಲಿ ಹಾರಾಡಿದ ತ್ರಿವರ್ಣ ಧ್ವಜ

    ಇವತ್ತಿನ ಸಂಚಿಕೆಯಲ್ಲಿ ಆರ್ಯನ ಮಾತಿಗೆ ಅನು ಹೇಗೆ ಪ್ರತಿಕ್ರಿಯಿಸುತ್ತಾಳೆ ಅಂತ ನೋಡಬೇಕು.
    Published by:Savitha Savitha
    First published: