Jote Joteyali: ಅನು ಅಮ್ಮನಾಗ್ತಿರೋ ವಿಷಯ ಆರ್ಯವರ್ಧನ್‍ಗೆ ಗೊತ್ತಾಯ್ತು! ಆಸ್ಪತ್ರೆಗೆ ಓಡೋಡಿ ಬಂದ ಆರ್ಯ

ಅನು ಡಾಕ್ಟರ್ ಬಳಿ ತೋರಿಸಿಕೊಂಡ ಆಚೆ ಬರುತ್ತಿದ್ದಂತೆ, ಆರ್ಯ ಪ್ರತ್ಯಕ್ಷನಾಗಿದ್ದಾನೆ. ಅನು ಆರ್ಯನನ್ನು ನೋಡಿ ಶಾಕ್ ಆಗಿದ್ದಾಳೆ. ಅನು ನನಗೆ ಸಂಶಯ ಇತ್ತು. ಈಗ ನನಗೆ ಅದು ಗೊತ್ತಾಯ್ತು. ನೀನು ನನಗೆ ಹೇಳಿಲ್ಲ ಅಂದ್ರೆ ನನಗೆ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ. ನಿನ್ನಲ್ಲಿ ಒಂದು ಚಿಕ್ಕ ಬದಲಾವಣೆಯಾದ್ರೂ ನನಗೆ ಗೊತ್ತಾಗುತ್ತೆ.

ಜೊತೆ ಜೊತೆಯಲಿ ಧಾರಾವಾಹಿ

ಜೊತೆ ಜೊತೆಯಲಿ ಧಾರಾವಾಹಿ

  • Share this:
    ಜೊತೆ ಜೊತೆಯಲಿ (Jote Joteyali) ಸೀರಿಯಲ್ (Serial), ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಇದು ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್ (Arya Vardhan), ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರು ಅನುಮತಿ ಪಡೆದು ಮದುವೆಯಾಗಿದ್ದಾರೆ. ಮೊದ ಮೊದಲು ಇಬ್ಬರು ಚೆನ್ನಾಗೇ ಇದ್ದರೂ. ಆದ್ರೆ ಇತ್ತೀಚೆಗೆ ಅನುಗೆ, ಆರ್ಯವರ್ಧನ್ ಅವರು ಹಳೇ ಜೀವನದ ಸತ್ಯಗಳು ಗೊತ್ತಾಗಿವೆ. ಅದಕ್ಕೆ ನ್ಯಾಯ ಕೊಡಿಸಬೇಕು ಎಂಬ ಸತ್ಯದ ಹೋರಾಟದಲ್ಲಿ ಇದ್ದಾಳೆ. ಅದಕ್ಕೆ ತಾನು ಗರ್ಭಿಣಿ ಆಗಿರುವುದನ್ನು ಮನೆಯಲ್ಲಿ ಮುಚ್ಚಿಟ್ಟಿದ್ದಾಳೆ.

    ಆಸ್ಪತ್ರೆಗೆ ಈ ಬಾರಿಯು ಒಬ್ಬಳೇ ಬಂದಿದ್ದಾಳೆ ಅನು
    ಅನು ಗರ್ಭಿಣಿ ಅನ್ನೋ ವಿಚಾರ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಆ ವಿಷ್ಯವನ್ನು ಮುಚಿಟ್ಟಿದ್ದಾಳೆ. ಒಬ್ಬಳೇ ಬಂದು ಆಸ್ಪತ್ರೆಗೆ ತೋರಿಸಿಕೊಳ್ಳುತ್ತಿದ್ದಾಳೆ. ಈ ಬಾರಿಯೂ ಆಸ್ಪತ್ರೆಗೆ ಒಬ್ಬಳೆ ಬಂದಿದ್ದಾಳೆ. ಡಾಕ್ಟರ್ ನಿಮ್ಮ ಪತಿ ಜೊತೆ ಬಂದಿಲ್ಲ ಎಂದು ಕೇಳಿದ್ದಕ್ಕೆ. ನಾನು ಅವರಿಗೆ ಇನ್ನೂ ವಿಷ್ಯ ತಿಳಿಸಿಲ್ಲ ಎಂದು ಹೇಳುತ್ತಾಳೆ.

    ಆಸ್ಪತ್ರೆಗೆ ಬಂದ ಆರ್ಯವರ್ಧನ್
    ಅನು ಒಬ್ಬಳೇ ಎಲ್ಲಿಗೂ ಹೋಗುತ್ತಿದ್ದಾಳೆ ಎಂದು ಆರ್ಯ ಅವಳ ಹಿಂದೆಯೇ ಬಂದಿದ್ದಾನೆ. ಅನು ಡಾಕ್ಟರ್ ಬಳಿ ತೋರಿಸಿಕೊಂಡ ಆಚೆ ಬರುತ್ತಿದ್ದಂತೆ, ಆರ್ಯ ಪ್ರತ್ಯಕ್ಷನಾಗಿದ್ದಾನೆ. ಅನು ಆರ್ಯನನ್ನು ನೋಡಿ ಶಾಕ್ ಆಗಿದ್ದಾಳೆ. ಅನು ನನಗೆ ಸಂಶಯ ಇತ್ತು. ಈಗ ನನಗೆ ಅದು ಗೊತ್ತಾಯ್ತು. ನೀನು ನನಗೆ ಹೇಳಿಲ್ಲ ಅಂದ್ರೆ ನನಗೆ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ. ನಿನ್ನಲ್ಲಿ ಒಂದು ಚಿಕ್ಕ ಬದಲಾವಣೆಯಾದ್ರೂ ನನಗೆ ಗೊತ್ತಾಗುತ್ತೆ. ಅದು ನನಗೆ ಗೊತ್ತಾಗುತ್ತೆ ಅನು. ಅಷ್ಟು ನಾನು ನಿನ್ನ ಅರ್ಥ ಮಾಡಿಕೊಂಡಿದ್ದೇನೆ. ನೀನು ನನ್ನನ್ನು ಅರ್ಥ ಮಾಡಿಕೊಂಡಿದ್ದೀಯಾ ಅಂದು ಕೊಂಡಿದ್ದೆ ಎಂದು ಆರ್ಯ ಹೇಳಿದ್ದಾನೆ.

    ಇದನ್ನೂ ಓದಿ: Kannadathi: ಕನ್ನಡ ಟೀಚರ್​ಗೆ ಒಗಟು ಕೇಳಿದ ವರೂಧಿನಿ? ಉತ್ತರ ಹೇಳ್ತಾರಾ ಭುವನೇಶ್ವರಿ?

    ಆರ್ಯವರ್ಧನ್ ಬಳಿ ಸತ್ಯ ಬಾಯ್ಬಿಡಿಸಲು ಯತ್ನ!
    ರಾಜನಂದಿನಿಯ ಮತ್ತೆ ಅನು ಆಗಿ ಹುಟ್ಟಿ ಬಂದಿದ್ದಾಳೆ. ಕಳೆದ ಜನ್ಮದಲ್ಲಿ ತನಗಾದ ಮೋಸ ಗೊತ್ತಾಗಿದೆ. ಅದಕ್ಕೆ ಆ ಸತ್ಯವನ್ನು ಆರ್ಯವರ್ಧನ್ ಬಾಯಿಂದ ಕೇಳಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದಾಳೆ. ಮೀರಾ, ಹರ್ಷವರ್ಧನ್ ಜೊತೆ ಸೇರಿ ಬಲೆಗಳನ್ನು ಎಣೆಯುತ್ತಿದ್ದಾರೆ. ಅದಕ್ಕೆ ಆರ್ಯ, ಝೇಂಡೆ ಮಾತ್ರ ಬೀಳ್ತಾ ಇಲ್ಲ.

    ಮನೆಯವರು ಬಳಿ ಗರ್ಭಿಣಿ ಅನ್ನೋದನ್ನ ಮುಚ್ಚಿಟ್ಟ ಅನು!
    ಆರ್ಯವರ್ಧನ್ ಸತ್ಯ ಬಯಲು ಮಾಡುವ ತವಕದಲ್ಲಿ ಇದ್ದಾಳೆ ಅನು. ಆದ ಕಾರಣ ತಾನು ಗರ್ಭಿಣಿಯಾಗಿದ್ರೂ, ಅದನ್ನು ಮನೆಯವರ ಮುಂದೆ ಹೇಳಿಲ್ಲ. ಹೇಳಿದ್ರೆ ಇನ್ನೇನು ತೊಂದರೆ ಆಗುತ್ತೋ ಅನ್ನೋ ಭಯದಲ್ಲಿ ಇದ್ದಾಳೆ. ಅದಕ್ಕೆ ತಾನು ಗರ್ಭಿಣಿ ಅನ್ನೋದನ್ನ ಮುಚ್ಚಿಟ್ಟಿದ್ದಾಳೆ. ಒಬ್ಬಳೇ ಆಸ್ಪತ್ರೆಗೆ ಹೋಗಿ ಚೆಕ್ ಅಪ್ ಮಾಡಿಸಿಕೊಳ್ತಿದ್ದಾಳೆ.

    ಇದನ್ನೂ ಓದಿ: Neha Gowda: ಕಿರುತೆರೆ ‘ಗೊಂಬೆ’ಗೆ ಹುಟ್ಟುಹಬ್ಬದ ಸಂಭ್ರಮ; ನೇಹಾ ಗೌಡಗೆ ಅಭಿಮಾನಿಗಳ ಶುಭಾಶಯ

    ಅನು ಗರ್ಭಿಣಿ ಇರಬಹುದು ಎಂದು ಪುಷ್ಪಾಗೆ ಅನುಮಾನ
    ಗರ್ಭಿಣಿಯರು ಹೇಗಿರಬೇಕು ಎಂದು ಅನು ಈಗಾಗಲೇ ತಾಯಿ ಪುಷ್ಪ ಬಳಿ ಕೇಳಿ ತಿಳಿದುಕೊಂಡಿದ್ದಾಳೆ. ಅದಕ್ಕೆ ಅನು ಗರ್ಭಿಣಿ ಇರಬಹುದು ಎಂಬ ಅನುಮಾನ ಪುಷ್ಪಾಗೆ ಬಂದಿದೆ. ಅದಕ್ಕೆ ತಾಯಿ ಪದೇ ಪದೆ ಅನುವಿನ ಆರೋಗ್ಯ ವಿಚಾರಿಸುತ್ತಿದ್ದಾಳೆ. ಏನೆಲ್ಲಾ ಆಗ್ತಿದೆ. ಈಗ ಆರ್ಯ ಮನೆಯವರ ಮುಂದೆ ಕರುಳಿನ ಕುಡಿ ಬರೋ ವಿಚಾರ ತಿಳಿಸುತ್ತಾನಾ, ಅನು ಈಗ ಏನ್ ಹೇಳುತ್ತಾಳೆ. ಎಲ್ಲವನ್ನೂ ನೋಡಲು ಜೊತೆ ಜೊತೆಯಲಿ ಧಾರಾವಾಹಿ ಸಂಚಿಕೆ ನೋಡಬೇಕು.
    Published by:Savitha Savitha
    First published: