Jote Joteyali: ಅಧಿಕೃತವಾಗಿ ಜೊತೆ ಜೊತೆಯಲಿ ಧಾರಾವಾಹಿಗೆ ಹರೀಶ್ ರಾಜ್ ಎಂಟ್ರಿ

ನಟ ಹರೀಶ್ ರಾಜ್ ಆರ್ಯವರ್ಧನ್ ಪಾತ್ರಕ್ಕೆ ಬರುತ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೆ ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್‍ಗೆ ಎಂಟ್ರಿ ಆಗಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಅವನ ಸಹೋದರ ಪಾತ್ರ ವಿಶ್ವಾಸ್ ದೇಸಾಯಿ ಪಾತ್ರಕ್ಕೆ.

ಅನಿರುದ್ಧ್- ಹರೀಶ್ ರಾಜ್

ಅನಿರುದ್ಧ್- ಹರೀಶ್ ರಾಜ್

 • Share this:
  ಜೀ ಕನ್ನಡದಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳಲ್ಲಿ (Serials) ಜೊತೆ ಜೊತೆಯಲಿ (Jote Joteyali) ಸೀರಿಯಲ್ ಸಹ ಒಂದು. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಪ್ರಸಾರವಾಗುತ್ತೆ. ಧಾರಾವಾಹಿಗೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಆರ್ಯವರ್ಧನ್ ಅಂದ್ರೆ ಅನಿರುದ್ಧ್‍ಗೆ ತುಂಬಾ ಜನ ಅಭಿಮಾನಿಗಳು ಇದ್ದಾರೆ. ಸೀರಿಯಲ್ ಶೂಟಿಂಗ್‍ನಲ್ಲಿ ಆದ ಕಿರಿಕ್‍ನಿಂದ ಅನಿರುದ್ಧ್ ಧಾರಾವಾಹಿಯಿಂದ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ನಟ ಹರೀಶ್ ರಾಜ್  (Harish Raj)ಆರ್ಯವರ್ಧನ್ ಪಾತ್ರಕ್ಕೆ ಬರುತ್ತಾರೆ ಅಂತ ಹೇಳಲಾಗ್ತಿತ್ತು. ಆದ್ರೆ ಹರೀಶ್ ರಾಜ್ ಅವರು ಜೊತೆ ಜೊತೆಯಲಿ ಸೀರಿಯಲ್‍ಗೆ ಎಂಟ್ರಿ ಆಗಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಅವನ ಸಹೋದರ (Brother) ಪಾತ್ರ ವಿಶ್ವಾಸ್ ದೇಸಾಯಿ ಪಾತ್ರಕ್ಕೆ.

  ವಿಶ್ವಾಸ್ ದೇಸಾಯಿ ಪಾತ್ರಕ್ಕೆ ಹರೀಶ್ ರಾಜ್

  ಧಾರಾವಾಹಿ ತಂಡವು ಹೊಸ ಪ್ರೋಮವೊಂದನ್ನು ಬಿಟ್ಟಿದೆ. ಅದರಲ್ಲಿ ಹರೀಶ್ ರಾಜ್ ಕಾಣಿಸಿಕೊಂಡಿದ್ದಾರೆ. ಆರ್ಯವರ್ಧನ್ ನಿಜವಾದ ಅಮ್ಮ ಅಂದ್ರೆ ಪ್ರಿಯದರ್ಶಿನಿ ಬಳಿ, ವಿಶ್ವಾಸ್ ದೇಸಾಯಿ ಸಾಲದ ಮೇಲೆ ಸಾಲ ತಗೊಂಡು ನನ್ನ ಕಂಪನಿ ಮುಳುಗಿ ಹೋಯಿತು. ಸಾಲು ಇರೋದು 700 ಕೋಟಿ ರೂಪಾಯಿ ಅಮ್ಮ ಎನ್ನುತ್ತಾನೆ. ಅದಕ್ಕೆ ಅಮ್ಮ ಪ್ರಿಯದರ್ಶಿನಿ ಎಲ್ಲ ಕೋಟಿಗಳನ್ನು ಮೀರಿಸುವಂತಹ, ನಿನ್ನನ್ನ ಬದುಕಿಸುವಂತ ಒಬ್ಬ ಇದಾನೆ ಎಂದು ಹೇಳುತ್ತಾಳೆ.

  ಒಬ್ಬ ಮಗನಿಂದ ಮತ್ತೊಬ್ಬ ಮಗನಿಗೆ ಸಹಾಯ
  ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳು ಒಬ್ಬ ಆರ್ಯವರ್ಧನ್, ಮತ್ತೊಬ್ಬ ವಿಶ್ವಾಸ್ ದೇಸಾಯಿ. ವಿಶ್ವಾಸ್ ದೇಸಾಯಿ ಈಗ ಸಂಕಷ್ಟದಲ್ಲಿದ್ದು, ತಾಯಿ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾನೆ. ಅದಕ್ಕೆ ಪ್ರಿಯದರ್ಶಿನಿ, ಆರ್ಯವರ್ಧನ್‍ಗೆ ಹೇಳಿ ತನ್ನ ಮಗನ ಸಂಕಷ್ಟ ದೂರ ಮಾಡುವ ಪ್ರಯತ್ನದಲ್ಲಿ ಇದ್ದಾಳೆ.

  ಇದನ್ನೂ ಓದಿ: Hero Anirudh: ಕೈ ಕುಯ್ದುಕೊಂಡ ಅನಿರುದ್ಧ್ ಅಭಿಮಾನಿ! ಈ ರೀತಿ ಮಾಡಬೇಡಿ ಎಂದು ವಿಷ್ಣುವರ್ಧನ್ ಅಳಿಯ ಮನವಿ

  ಆರ್ಯವರ್ಧನ್ ಯಾರಾಗ್ತಾರೆ ಅನ್ನೋ ಕುತೂಹಲ

  ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ಅನಿರುದ್ಧ್ ಸೀರಿಯಲ್‍ನಿಂದ ಔಟ್ ಆದಾಗಿನಿಂದ ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ. ಆರೂರ್ ಜಗದೀಶ್ ಅವರು ನಿರ್ದೇಶಕ ಅನೂಪ್ ಭಂಡಾರಿಯನ್ನು ಈ ಪಾತ್ರಕ್ಕೆ ತರಲು ಪ್ರಯತ್ನ ಮಾಡಿದ್ರು. ಆದ್ರೆ ಅನೂಪ್ ಭಂಟಾರಿ ಅವರು ಒಪ್ಪಿಲ್ಲ. ನಂತರ್ ಹರೀಶ್ ರಾಜ್ ಬರ್ತಾರೆ ಅಂದ್ರು. ಅವರೇನೋ ಬಂದಿದ್ದಾರೆ. ಆದ್ರೆ ಆರ್ಯವರ್ಧನ್ ಪಾತ್ರಕ್ಕಲ್ಲ. ಬದಲಿಗೆ ಅವರ ಸಹೋದರರಾಗಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ಯಾರು ಆರ್ಯವರ್ಧನ್ ಆಗ್ತಾರೆ ಅನ್ನೋ ಕುತೂಹಲ ಹಾಗೇ ಉಳಿದಿದೆ.

  ನಿಮ್ಮ ವಿಶ್ವಾಸ್ ನಿಮ್ಮ ಮುಂದೆ

  ಇನ್ನು ಧಾರಾವಾಹಿಗೆ ಎಂಟ್ರಿ ಆಗಿರುವ ಹರೀಶ್ ರಾಜ್ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಇಂದು ರಾತ್ರಿ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ 8.30ಕ್ಕೆ ನೋಡಿ ಹರಸಿ ಆಶೀರ್ವದಿಸಿ ಎಂದು ಪೋಸ್ಟ್ ಹಾಕಿದ್ದಾರೆ.
  View this post on Instagram


  A post shared by Zee Kannada (@zeekannada)
  ಶೂಟಿಂಗ್ ವೇಳೆ ಕಿರಿಕ್‍ನಿಂದ ಅನಿರುದ್ಧ್ ಔಟ್

  ಜೊತೆ ಜೊತೆಯಲಿ ಧಾರಾವಾಹಿಯ ಶೂಟಿಂಗ್ ನಲ್ಲಿ ಅನಿರುದ್ಧ್ ಪದೇ ಪದೇ ಕಿರಿಕ್ ಮಾಡ್ತಾ ಇದ್ರಂತೆ. ಅದಕ್ಕೆ ಧಾರಾವಾಹಿ ತಂಡವು ಅನಿರುದ್ಧ್ ಅವರನ್ನು ಬ್ಯಾನ್ ಮಾಡಿದೆ. ಯಾವುದೇ ಕಾರಣಕ್ಕೂ ಕನ್ನಡ ಕಿರುತೆರೆ ನಿರ್ಮಾಪಕರ ಸಂಘವು ಅನಿರುದ್ಧ್ ಅವರನ್ನು ತಮ್ಮ ಪ್ರಾಜೆಕ್ಟ್‍ನಲ್ಲಿ ಹಾಕಿಕೊಳ್ಳೋದಿಲ್ಲ ಎಂದು ಹೇಳಿದೆ. ಆದ್ರೆ ಅನಿರುದ್ಧ್ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.

  ಇದನ್ನೂ ಓದಿ: Sathya Serial: ಈ ಬಾರಿ ಗಲ್ಲಿ ಗಣೇಶ ಹಬ್ಬಕ್ಕೆ ಸತ್ಯಾ ಹೋಗಬಾರದಾ? ಬೇಸರದಲ್ಲಿದ್ದಾಳೆ ಲೇಡಿ ರಾಮಾಚಾರಿ!

  ಸದ್ಯಕ್ಕೆ ಆರ್ಯವರ್ಧನ್ ಪಾತ್ರ ಬಿಟ್ಟು, ಬೇರೆ ಪಾತ್ರಗಳ ಮೂಲಕ ಧಾರಾವಾಹಿ ರನ್ ಮಾಡುವ ಸಾಧ್ಯತೆಗಳು ಹೆಚ್ಚಿವೆ. ಏನಾಗುತ್ತೆ? ಯಾರು ಆರ್ಯವರ್ಧನ್ ಆಗಿ ಬರುತ್ತಾರೆ ಅಂತ ನೋಡೋದಕ್ಕೆ ಜೊತೆ ಜೊತೆಯಲ್ಲಿ ಸೀರಿಯಲ್ ನೋಡಬೇಕು.
  Published by:Savitha Savitha
  First published: