• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Jote Joteyali: ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದ ಅನೂಪ್ ಭಂಡಾರಿ, ಒಪ್ತಾರಾ ಸ್ಟಾರ್ ಡೈರೆಕ್ಟರ್?

Jote Joteyali: ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದ ಅನೂಪ್ ಭಂಡಾರಿ, ಒಪ್ತಾರಾ ಸ್ಟಾರ್ ಡೈರೆಕ್ಟರ್?

ಅನೂಪ್ ಭಂಡಾರಿ-ಅನಿರುದ್ಧ್

ಅನೂಪ್ ಭಂಡಾರಿ-ಅನಿರುದ್ಧ್

ಜೊತೆ ಜೊತೆಯಲಿ ಸೀರಿಯಲ್‍ನಲ್ಲಿರುವ ಆರ್ಯವರ್ಧನ್ ಪಾತ್ರಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕರೆತರುವ ಪ್ರಯತ್ನ ನಡೆದಿದೆ. ಇದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಅಲ್ಲ. ಇದು ನಿಜ. ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕಾಗಿ ಅನೂಪ್ ಭಂಡಾರಿ ಅವರಿಗೆ ಆಫರ್ ಕೊಟ್ಟಿರುವುದು ಸತ್ಯ ಎಂದು ಅವರೇ ಹೇಳಿದ್ದಾರೆ.

ಮುಂದೆ ಓದಿ ...
  • Share this:

ಜೊತೆ ಜೊತೆಯಲಿ (Jote Joteyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರ ಅನುಮತಿ ಪಡೆದು ಮದುವೆಯಾಗಿದ್ದಾರೆ. ರೀಲ್ ಕಥೆಯೇನೋ ಚೆನ್ನಾಗಿ ಓಡುತಿತ್ತು. ಅದ್ರೆ ರಿಯಲ್ ಆಗಿ ಶೂಟಿಂಗ್ ವೇಳೆ ಮಾತಿನ ಚಕಮಕಿ ನಡೆದು, ಧಾರಾವಾಹಿಯಿಂದ ನಟ ಅನಿರುದ್ಧ ಔಟ್ (Out) ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿತ್ತು. ನಿರ್ದೇಶಕ ಅನೂಪ್ ಭಂಡಾರಿ (Director Anup Bhandari) ಅನು ಜೋಡಿಯಾಗ್ತಾರೆ ಅಂತ ಸುದ್ದಿ ಹರಡಿತ್ತು. ಹೌದು ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ಸತ್ಯ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.


ಅನಿರುದ್ಧ್ ಬದಲು ಅನೂಪ್ ಬಂಡಾರಿಗೆ ಅವಕಾಶ


ಅನಿರುದ್ಧ್ ಜಾಗಕ್ಕೆ ಬೇರೆ ಕಲಾವಿದನನ್ನು ತರಲು ಧಾರಾವಾಹಿ ತಂಡ ನಿರ್ಧಾರ ಮಾಡಿದೆ. ಹಾಗಾಗಿ ಆರ್ಯವರ್ಧನ್ ಪಾತ್ರದಲ್ಲಿ ಯಾವ ನಟ ಕಾಣಿಸಿಕೊಳ್ಳಲಿದ್ದಾರೆ. ಆರ್ಯವರ್ಧನ್ ಖಡಕ್ ಲುಕ್‍ಗೆ ಸೂಕ್ತವಾದ ವ್ಯಕ್ತಿ ಯಾರು ಅನ್ನೋದು ಇದೀಗ ಪ್ರಶ್ನೆಯಾಗಿದೆ. ಸೀರಿಯಲ್ ತಂಡ, ಆರ್ಯವರ್ಧನ್ ಪಾತ್ರಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದಾರೆ. ಸದ್ಯಕ್ಕೆ ಕಿರುತೆರೆ ವಲಯದಲ್ಲಿ ಕೇಳಿ ಬರುತ್ತಿರುವ ಹೆಸರು ನಿರ್ದೇಶಕ ಅನೂಪ್ ಭಂಡಾರಿ.


ಸಾಮಾಜಿಕ ಜಾಲತಾಣದಲ್ಲಿ ವೈರಲ್?


ಅನಿರುದ್ಧ್ ಬದಲು, ಆರ್ಯವರ್ಧನ್ ಪಾತ್ರಕ್ಕೆ ಅನೂಪ್ ಭಂಡಾರಿ ಅವರು ಆಯ್ಕೆಯಾಗಿದ್ದಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದ್ರೆ ಈ ಬಗ್ಗೆ ಧಾರಾವಾಹಿ ತಂಡವಾಗಲಿ ಅಥವಾ ಅನೂಪ್ ಭಂಡಾರಿಯಾಗಲಿ ಅಧಿಕೃತವಾಗಿ ಮಾಹಿತಿ ನೀಡಿರಲಿಲ್ಲ. ಈಗ ಅನೂಪ್ ಭಂಡಾರಿ ಅವರು, ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ.


ಇದನ್ನೂ ಓದಿ: Kannadathi: ಕಣ್ಮರೆಯಾದ ರತ್ನಮಾಲಾ, ಅಮ್ಮಮ್ಮ ಕಾಣದೇ ಕಂಗಾಲಾದ ಭುವಿ; ಇತ್ತ ಮೊಬೈಲ್​​ಗಾಗಿ ಸಾನಿಯಾ ಹುಡುಕಾಟ 


ಆಫರ್ ಬಂದಿದ್ದು ಸತ್ಯ ಎಂದ ಅನೂಪ್ ಭಂಡಾರಿ
ಜೊತೆ ಜೊತೆಯಲಿ ಸೀರಿಯಲ್‍ನಲ್ಲಿರುವ ಆರ್ಯವರ್ಧನ್ ಪಾತ್ರಕ್ಕೆ ನಿರ್ದೇಶಕ ಅನೂಪ್ ಭಂಡಾರಿ ಅವರನ್ನು ಕರೆತರುವ ಪ್ರಯತ್ನ ನಡೆದಿದೆ. ಇದು ಕೇವಲ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಅಲ್ಲ. ಇದು ನಿಜ. ಜೊತೆ ಜೊತೆಯಲಿ ಧಾರಾವಾಹಿಯ ಆರ್ಯವರ್ಧನ್ ಪಾತ್ರಕ್ಕಾಗಿ ಅನೂಪ್ ಭಂಡಾರಿ ಅವರಿಗೆ ಆಫರ್ ಕೊಟ್ಟಿರುವುದು ಸತ್ಯ ಎಂದು ಅನೂಪ್ ಭಂಡಾರಿ ಅವರೇ ಹೇಳಿದ್ದಾರೆ.


ಆಫರ್ ರಿಜೆಕ್ಟ್ ಅನೂಪ್ ಭಂಡಾರಿ


ಈ ಬಗ್ಗೆ ಮಾತನಾಡಿದ ನಿರ್ದೇಶಕ ಅನೂಪ್ ಭಂಡಾರಿ, ಜೊತೆ ಜೊತೆಯಲಿ ತಂಡದವರು ನನಗೆ ಕರೆ ಮಾಡಿದ್ದು ಸತ್ಯ. ಆದರೆ ನಾನು ಅದನ್ನ ರಿಜೆಕ್ಟ್ ಮಾಡಿದ್ದೇನೆ. ನಾನೀಗ ನನ್ನ ಮುಂದಿನ ಸಿನಿಮಾದ ಸ್ಕ್ರಿಪ್ಟಿಂಗ್ ಕೆಲಸದಲ್ಲಿ ತೊಡಗಿದ್ದೇನೆ. ಅತೀ ಶೀಘ್ರದಲ್ಲೇ ನಮ್ಮ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.


ಇದನ್ನೂ ಓದಿ: Jote Joteyali: ಅನು ಜೊತೆ ಜೊತೆಯಾಗಲಿದ್ದಾರೆ ಸ್ಟಾರ್ ಡೈರೆಕ್ಟರ್; ಆರ್ಯವರ್ಧನ್ ಪಾತ್ರಕ್ಕೆ ಇವ್ರೇ ಫಿಕ್ಸ್!?


ಯಾರಾಗ್ತಾರೆ ಆರ್ಯವರ್ಧನ್?


ಅನಿರುದ್ಧ ಜತ್ಕರ್ ಹಾಗೂ ಆರೂರು ಜಗದೀಶ್ ಮಧ್ಯೆ ವೈಮನಸ್ಯ ತಾರಕಕ್ಕೇರಿದ ಪರಿಣಾಮ, ಧಾರಾವಾಹಿಯಿಂದ ಅನಿರುದ್ಧ ಅವರನ್ನು ಅವರನ್ನ ಕೈಬಿಡಲು ಆರೂರು ಜಗದೀಶ್ ಹಾಗೂ ಜೀ ಕನ್ನಡ ವಾಹಿನಿ ನಿರ್ಧರಿಸಿದೆ. ನಿರ್ದೇಶಕ ಅನೂಪ್ ಭಂಡಾರಿ ಅವರು ಈ ಪಾತ್ರಕ್ಕೆ ಒಪ್ಪಿಲ್ಲ. ಹಾಗಾದ್ರೆ ಯಾರಾಗ್ತಾರೆ ಆರ್ಯವರ್ಧನ್ ಅನ್ನೋದನ್ನ ಮುಂದಿನ ದಿನಗಳಲ್ಲಿ ನೋಡಬೇಕು.

First published: