Jote Joteyali: ಆಸ್ತಿ ಹಾಗೂ ಅನುವನ್ನು ಬಿಟ್ಟು ಹೋಗ್ತಾನಾ ಆರ್ಯವರ್ಧನ್​? ಇವತ್ತೇ ಅನಿರುದ್ಧ್ ಕೊನೇ ಸಂಚಿಕೆ!?

ಶೂಟಿಂಗ್ ವೇಳೆ ಮಾತಿನ ಚಕಮಕಿ ನಡೆದು, ಧಾರಾವಾಹಿಯಿಂದ ನಟ ಅನಿರುದ್ಧ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಇನ್ನೂ ಹಾಗೇ ಇದೆ. ಈ ನಡುವೆ ಇಂದಿನ ಸಂಚಿಕೆಯಲ್ಲಿ ಆರ್ಯ ಪತ್ರ ಬರೆದು ಮನೆ ಬಿಟ್ಟು ಹೋಗುತ್ತಿದ್ದಾನೆ. ಹಾಗಾದ್ರೆ ಅನಿರುದ್ಧ್ ಅವರ ಕೊನೆ ಸಂಚಿಕೆನಾ ಇದು ಎಂಬ ಪ್ರಶ್ನೆಗಳು ಮೂಡಿವೆ.

ಜೊತೆ ಜೊತೆಯಲಿ ಸೀರಿಯಲ್

ಜೊತೆ ಜೊತೆಯಲಿ ಸೀರಿಯಲ್

 • Share this:
  ಜೊತೆ ಜೊತೆಯಲಿ (Jote Joteyali) ಸೀರಿಯಲ್, ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ (Serials) ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರ ಅನುಮತಿ ಪಡೆದು ಮದುವೆಯಾಗಿದ್ದಾರೆ. ರೀಲ್ ಕಥೆಯೇನೋ ಚೆನ್ನಾಗಿ ಓಡುತಿತ್ತು. ಅದ್ರೆ ರಿಯಲ್ (Real) ಆಗಿ ಶೂಟಿಂಗ್ ವೇಳೆ ಮಾತಿನ ಚಕಮಕಿ ನಡೆದು, ಧಾರಾವಾಹಿಯಿಂದ ನಟ ಅನಿರುದ್ಧ ಔಟ್ ಆಗಿದ್ದಾರೆ. ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಇನ್ನೂ ಹಾಗೇ ಇದೆ. ಈ ನಡುವೆ ಇಂದಿನ ಸಂಚಿಕೆಯಲ್ಲಿ ಆರ್ಯ (Arya) ಪತ್ರ (Letter) ಬರೆದು ಮನೆ ಬಿಟ್ಟು ಹೋಗುತ್ತಿದ್ದಾನೆ. ಹಾಗಾದ್ರೆ ಅನಿರುದ್ಧ್ ಅವರ ಕೊನೆ ಸಂಚಿಕೆನಾ (Last episode) ಇದು ಎಂಬ ಪ್ರಶ್ನೆಗಳು ಮೂಡಿವೆ.

  ಆರ್ಯವರ್ಧನ್ ಮೇಲೆ ಕೋಪಿಸಿಕೊಂಡಿರುವ ಅನು
  ಅನುಗೆ ಆರ್ಯವರ್ಧನ್ ಕೆಟ್ಟವರು ಎಂಬ ಅಭಿಪ್ರಾಯ ಬಂದಿದೆ. ಈ ಧಾರಾವಾಹಿಯಲ್ಲಿ ಆರ್ಯನ ಮೊದಲ ಪತ್ನಿ ರಾಜನಂದಿನಿ ಮರುಜನ್ಮ ಅನು. ಅನುಗೆ ಹಳೆಯದ್ದೆಲ್ಲಾ ನೆನಪಾಗಿ, ತನ್ನ ತಂದೆ ಸಾವಿಗೆ, ರಾಜನಂದಿನಿ ಸಾವಿಗೆ ಆರ್ಯವರ್ಧನ್ ಕಾರಣ ಎಂದು ತಿಳಿದಿದೆ. ಅದಕ್ಕೆ ಆಕೆ ಆರ್ಯ ಸರ್ ಜೊತೆ ಮಾತು ಬಿಟ್ಟಿದ್ದಾಳೆ. ಆತನಿಗೆ ಏನೂ ಹೇಳದೇ ತನ್ನ ಪಾಡಿಗೆ ತಾನು ಓಡಾಡಿಕೊಂಡು ಇದ್ದಾಳೆ. ಅದಕ್ಕೆ ಆರ್ಯ ಸರ್ ಗೆ  ಬೇಸರವಾಗಿದೆ.

  ಪತ್ರ ಬರೆದು ಮನೆ ಬಿಟ್ಟು ಹೊರಟ ಆರ್ಯ ಸರ್

  ನನ್ನ ಅತ್ಯಂತ ಪ್ರೀತಿಯ ಅನು,
  ನಿನಗಿಂತ ಹೆಚ್ಚಾಗಿ ನಾನು ಇಲ್ಲಿ, ಇನ್ಯಾರನ್ನಾದರೂ ಪ್ರೀತಿಸುತ್ತಿನಿ ಅಂತ ಹೇಳಿದ್ರೆ, ಅದು ಸುಳ್ಳಾಗುತ್ತೆ. ಆದ್ರೆ ವಿಪರ್ಯಸ ನೋಡು, ಸತ್ಯನೇ ಹೇಳಿದ್ರೂ, ನಿನ್ನ ಪ್ರಕಾರ ಅದು ಸುಳ್ಳಿನ ಬುಟ್ಟಿಗೆ ಹೋಗಿ ಬೀಳುತ್ತಿದೆ. ಇರಲಿ, ನಾನು ಹೇಳಿದ್ದು ಸತ್ಯ ಎಂಬ ನಂಬಿಕೆ ನಿನಗೆ ಬರಲಿಲ್ಲ ಅಂದ್ರೆ, ತಪ್ಪು ನಿನ್ನದಲ್ಲ ಅನು ನಂದೇ. ನನ್ನಿಂದ ಇಲ್ಲಿ ಸಾಕಷ್ಟು ಮನಸ್ಸುಗಳಿಗೆ ನೋವಾಗಿದೆ. ನನ್ನ ಮೇಲಿಟ್ಟ ನಂಬಿಕೆಗೆ ಪೆಟ್ಟು ಬಿದ್ದಿದೆ.

  ಇದನ್ನೂ ಓದಿ: Jote Joteyali: ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದ ಅನೂಪ್ ಭಂಡಾರಿ, ಒಪ್ತಾರಾ ಸ್ಟಾರ್ ಡೈರೆಕ್ಟರ್?

  ನನ್ನಿಂದ ಉಂಟಾಗಿರುವ ಈ ಕಹಿ ವಾತಾವರಣ, ನಾನು ಇಲ್ಲದೇ ಹೋದಾಗ ಸರಿ ಹೋಗಬಹುದು ಎನ್ನುವ ನಂಬಿಕೆ ನನಗೆ ಇದೆ. ನಿಮ್ಮೆಲ್ಲರ ನೆಮ್ಮದಿಗೆ ನಾನು ಏನು ಮಾಡಬಹುದು ಅಂತ ಯೋಚಿಸಿದ್ರೆ, ನನಗೆ ಕಾಣ್ತಿರೋದು ಇದೊಂದೆ ದಾರಿ. ನಾನು ನನ್ನ ಜೀವನವನ್ನು ಹೇಗೆ ಶುರು ಮಾಡಿದ್ನೋ, ಮತ್ತೆ ಹಾಗೆ ಅದೇ ದಾರಿಯಲ್ಲಿ ಸಾಗೋಕೆ ತೀರ್ಮಾನ ಮಾಡಿದ್ದೇನೆ. ನಾನು ಹೋಗ್ತಾ ಇದೀನಿ ಅನು. ಎದೆ ತುಂಬಾ ನಿನ್ನ ನೆನಪು. ಪ್ರೀತಿ ತುಂಬಿಕೊಂಡು ಹೋಗ್ತಾ ಇದೀನಿ. ಅಷ್ಟರ ಮಟ್ಟಿಗೆ ನಾನು ಶ್ರೀಮಂತ. ಅನು, ಸದಾ ನಿನ್ನ ಹಿತವನ್ನೇ ಬಯಸುತ್ತೇನೆ.

  ಹರ್ಷ ಮತ್ತು ಅತ್ತಿಗೆಯ ಬದುಕು ನೆಮ್ಮದಿಯಿಂದ ಕೂಡಿರಲಿ. ಅಮ್ಮ ನಿಮಗೆ ನಾನು ಏನು ಹೇಳಲಿ? ನನಗೆ ಕೃಷ್ಣ ಆಗೋ ಯೋಗ್ಯತೆ ಇದೆಯೋ, ಇಲ್ವೋ ಗೊತ್ತಿಲ್ಲ. ಆದ್ರೆ ನೀವು ಯಶೋಧೆಗಿಂತ ಹೆಚ್ಚು. ಹೋಗ್ತೀನಿ ಅಮ್ಮ.'
  ಇಂತಿ ನಿಮ್ಮ ಆರ್ಯವರ್ಧನ್

  ಇದನ್ನೂ ಓದಿ: Sa Ri Ga Ma Pa: ಹಾಡಿನಿಂದ ಮೋಡಿ ಮಾಡೋ ಮುದ್ದು ಮಕ್ಕಳಿಗೆ ಅವಕಾಶ, ಸರಿಗಮಪ ಸೀಸನ್-19 ಲಿಟಲ್ ಚಾಂಪ್ಸ್ ಆಡಿಷನ್

  ಹಾಗಾದ್ರೆ ಇದೇ ಅನಿರುದ್ಧ್ ಅವರ ಕೊನೆ ಸಂಚಿಕೆನಾ
  ಶೂಟಿಂಗ್ ವೇಳೆಯಲ್ಲಿ ಆದ ಗಲಾಟೆ ಪರಿಣಾಮ, ಅನಿರುದ್ಧ ಜತ್ಕರ್ ಹಾಗೂ ಆರೂರು ಜಗದೀಶ್ ಮಧ್ಯೆ ವೈಮನಸ್ಯ ತಾರಕಕ್ಕೇರಿತ್ತು. ಆದ ಕಾರಣ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಅವರನ್ನ ಕೈಬಿಡಲು ಆರೂರು ಜಗದೀಶ್ ಹಾಗೂ ಜೀ ಕನ್ನಡ ವಾಹಿನಿ ನಿರ್ಧರಿಸಿ ತೆಗೆದಿದ್ದಾರೆ. ಅದಕ್ಕೆ ತಕ್ಕಂತೆ ಈ ಸೀನ್ ಅನ್ನು ಮಾಡಿದ್ದಾರೆ ಅನ್ನುವ ಅನುಮಾನಗಳು ಹೆಚ್ಚಾಗಿವೆ.
  Published by:Savitha Savitha
  First published: