Hero Anirudh: ಕೈ ಕುಯ್ದುಕೊಂಡ ಅನಿರುದ್ಧ್ ಅಭಿಮಾನಿ! ಈ ರೀತಿ ಮಾಡಬೇಡಿ ಎಂದು ವಿಷ್ಣುವರ್ಧನ್ ಅಳಿಯ ಮನವಿ

ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆದ ಮೇಲೆ ಅಭಿಮಾನಿಗಳು ನಿರ್ದೇಶಕರು ಮತ್ತು ವಾಹಿನಿ ಮೇಲೆ ಗರಂ ಆಗಿದ್ದರು. ಅನಿರುದ್ಧ್ ಅವರನ್ನು ವಾಪಸ್ ಕರೆಸಿ, ಇಲ್ಲ ಅಂದ್ರೆ ನಾವು ಧಾರಾವಾಹಿ ನೋಡಲ್ಲ ಎಂದಿದ್ದರು. ಆದ್ರೆ ಈಗ ಒಂದು ಹೆಜ್ಜೆ ಮುಂದಾಗಿ, ಅಭಿಮಾನಿ ಕೈ ಕುಯ್ದುಕೊಂಡಿದ್ದಾರಂತೆ.

ಅನಿರುದ್ಧ್

ಅನಿರುದ್ಧ್

  • Share this:
    ಜೊತೆ ಜೊತೆಯಲಿ (Jote Joteyali) ಸೀರಿಯಲ್ (Serial), ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್ , ನಟಿ ಅನು ಸಿರಿಮನೆ. ಅನು, ಆರ್ಯವರ್ಧನ್‍ಗಿಂತ 20 ವರ್ಷ ಚಿಕ್ಕವಳು ಆದರೂ ಅವರನ್ನೇ ಪ್ರೀತಿಸಿ, ಮನೆಯವರ ಅನುಮತಿ ಪಡೆದು ಮದುವೆಯಾಗಿದ್ದಾರೆ. ರೀಲ್ ಕಥೆಯೇನೋ ಚೆನ್ನಾಗಿ ಓಡುತಿತ್ತು. ಅದ್ರೆ ರಿಯಲ್ (Real) ಆಗಿ ಶೂಟಿಂಗ್ ವೇಳೆ ಮಾತಿನ ಚಕಮಕಿ ನಡೆದು, ಧಾರಾವಾಹಿಯಿಂದ ನಟ ಅನಿರುದ್ಧ್ (Anirudh) ಔಟ್ (Out) ಆಗಿದ್ದಾರೆ. ಅಭಿಮಾನಿಯೊಬ್ಬ ಅನಿರುದ್ಧ್ ವಾಪಸ್ ಆಗಬೇಕು ಎಂದು ಕೈ ಕೊಯ್ದುಕೊಂಡಿದ್ದಾರಂತೆ. ನಿಮ್ಮ ಅಭಿಮಾನಕ್ಕೆ ಚಿರಋಣಿ ಈ ರೀತಿ ಮಾಡಬೇಡಿ ಎಂದು ಅನಿರುದ್ಧ್ ಮನವಿ ಮಾಡಿದ್ದಾರೆ.

    ಕೈ ಕೊಯ್ದುಕೊಂಡ ಅಭಿಮಾನಿ

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆದ ಮೇಲೆ ಅಭಿಮಾನಿಗಳು ನಿರ್ದೇಶಕರು ಮತ್ತು ವಾಹಿನಿ ಮೇಲೆ ಗಂರ ಆಗಿದ್ದರು. ಅನಿರುದ್ಧ್ ಅವರನ್ನು ವಾಪಸ್ ಕರೆಸಿ, ಇಲ್ಲ ಅಂದ್ರೆ ನಾವು ಧಾರಾವಾಹಿ ನೋಡಲ್ಲ ಎಂದಿದ್ದರು. ಆದ್ರೆ ಈಗ ಒಂದು ಹೆಜ್ಜೆ ಮುಂದಾಗಿ, ಅಭಿಮಾನಿ ಕೈ ಕುಯ್ದುಕೊಂಡಿದ್ದಾರಂತೆ. ಅನಿರುದ್ಧ್ ಅವರನ್ನು ಸೀರಿಯಲ್‍ನಿಂದ ತೆಗೆದು ಹಾಕಿದ್ದಕ್ಕೆ ಬೇಸರವಾಗಿ ಈ ರೀತಿ ಮಾಡಿದ್ದಾರಂತೆ. ಅನಿರುದ್ಧ್ ಸರ್ ಅಂದ್ರೆ ನನಗೆ ತುಂಬಾ ಇಷ್ಟ. ಅವರು ಸೀರಿಯಲ್‍ಗೆ ಬರಲಿಲ್ಲ ಅಂದ್ರೆ ನಾನು ಸೀರಿಯಲ್ ನೋಡಲ್ಲ. ಪ್ಲೀಸ್ ಎಲ್ಲಾ ಅಭಿಮಾನಿಗಳು ಸಪೋರ್ಟ್ ಮಾಡಬೇಕು ಅಂತ ನನ್ನ ಮನವಿ ಮಾಡಿದ್ದಾರಂತೆ.

    ದಯವಿಟ್ಟು ಹೀಗೆಲ್ಲಾ ಮಾಡಿಕೊಳ್ಳಬೇಡಿ

    ಅಭಿಮಾನಿಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅನಿರುದ್ಧ್, ತಮ್ಮ ಪ್ರೀತಿಗೆ ನಾನು ಚಿರಋಣಿ. ಆದರೆ ದಯವಿಟ್ಟು ಹೀಗೆಲ್ಲಾ ಮಾಡಿಕೊಳ್ಳಬೇಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ. ತಮ್ಮ ಪ್ರೀತಿ ಹಾಗೂ ಬೆಂಬಲ, ಹಾರೈಕೆ, ಆಶೀರ್ವಾದ, ಪ್ರಾರ್ಥನೆಯನ್ನ ಅಹಿಂಸಾತ್ಮಕ ಮಾರ್ಗಗಳಿಂದ ತೋರಿಸಿ ಎಂದು ಅನಿರುದ್ಧ್ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ.

    ಇದನ್ನೂ ಓದಿ: Sathya Serial: ಈ ಬಾರಿ ಗಲ್ಲಿ ಗಣೇಶ ಹಬ್ಬಕ್ಕೆ ಸತ್ಯಾ ಹೋಗಬಾರದಾ? ಬೇಸರದಲ್ಲಿದ್ದಾಳೆ ಲೇಡಿ ರಾಮಾಚಾರಿ!

    ಅನಿರುದ್ಧ್ ಪರ ನಿಂತಿದ್ದ ಮಹಿಳಾ ಫ್ಯಾನ್ಸ್
    ಜೊತೆ ಜೊತೆಯಲಿ ಸೀರಿಯಲ್‍ನಿಂದ ಅನಿರುದ್ಧ್‍ರನ್ನು ಹೊರಹಾಕಿದ ವಿಷಯ ತಿಳಿದ ಮಹಿಳೆ ಅಭಿಮಾನಿಗಳು ನಿರ್ಮಾಪಕರ ವಿರುದ್ಧ ತಿರುಗಿ ಬಿದ್ದಿದ್ರು. ಧಾರಾವಾಹಿಯ 20ನೇ ಸಂಚಿಕೆಯಲ್ಲಿ ಆದ ತೊಂದರೆಗಳನ್ನು 700 ಎಪಿಸೋಡ್ ನಂತರ ಹೇಳಿದ್ದು ಸರಿನಾ? ಆರೂರು ಜಗದೀಶ್ ಅವರದ್ದೇ ತಪ್ಪು. ನಟರು ಮೊದಲೇ ಸೀನ್ ಪೇಪರ್ ಕೊಡಿ ಅಂತ ಕೇಳುವುದೇ ತಪ್ಪಾ?

    Zee Kannada serial, Jote Joteyali serial, Kannada serial, Anirudh out from serial, Anirudh miss big offers, Anirudh Fans, ಜೊತೆ ಜೊತೆಯಲಿ ಧಾರಾವಾಹಿ, ದೊಡ್ಡ ದೊಡ್ಡ ಆಫರ್ ಕಳೆದುಕೊಂಡ ಅನಿರುದ್ಧ್, ಅನಿರುದ್ಧ್ ಗಾಗಿ ಕೈ ಕೊಯ್ದುಕೊಂಡ ಅಭಿಮಾನಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಅನಿರುದ್ಧ್- ಹರೀಶ್ ರಾಜ್


    ಬಹಿಷ್ಕಾರ ಮಾಡಿದ್ದರಲ್ಲಿ ದುರುದ್ದೇಶ ಕಾಣುತ್ತಿದೆ. ಇದು ಬೇರೆ ಎಲ್ಲಾ ಕಲಾವಿದರಿಗೂ ಒಂದು ವಾರ್ನಿಂಗ್ ರೀತಿ ಇದೆ . ಯಾವುದೇ ನಟ-ನಟಿಯರು ಧ್ವನಿ ಎತ್ತಿದರೆ ಅವರಿಗೂ ಹೀಗೆಯೇ ಆಗಲಿದೆ ಎಂಬಂತಾಗಿದೆ ಎಂದು ಅಭಿಮಾನಿಗಳು ಹೇಳಿದ್ದರು.

    ಇದನ್ನೂ ಓದಿ: Kendasampige: ಆಪರೇಷನ್​ಗೆ ಬೇಕು ಲಕ್ಷ ಲಕ್ಷ! ಸುಮಿ ಕೈಲಿ ಇದೆಲ್ಲಾ ಸಾಧ್ಯಾನಾ?

    ಆರ್ಯನ ಪಾತ್ರಕ್ಕೆ ಹರೀಶ್ ರಾಜ್?
    ಜೊತೆ ಜೊತೆಯಲಿ ಧಾರಾವಾಹಿ ತಂಡದಿಂದ ಹರೀಶ್ ರಾಜ್ ಅವರಿಗೆ ಕಾಲ್ ಹೋಗಿದೆಯಂತೆ. ಆದರೆ ಯಾವ ಪಾತ್ರಕ್ಕೆ ಎಂಬುದರ ಬಗ್ಗೆ ಹರೀಶ್ ರಾಜ್ ಅವರಿಗೆ ಹೇಳಿಲ್ವಂತೆ. ಆರ್ಯವರ್ಧನ್ ಪಾತ್ರ ಕೊಟ್ಟರೆ ಖುಷಿಯ ವಿಚಾರವೇ ಎಂದು ಹರೀಶ್ ರಾಜ್ ಅವರು ಹೇಳಿದ್ದಾರೆ. ಇನ್ನೂ ನಾನು ಜೀ ಕನ್ನಡ ವಾಹಿನಿ ಜೊತೆ ಮಾತನಾಡಬೇಕಿದೆ. ಈ ಧಾರಾವಾಹಿ ತಂಡ ಸೇರುವ ಬಗ್ಗೆ ಮಾತುಕತೆ ಆಗಬೇಕಾಗಿದೆ. ಹಾಗಾಗಿ ಈಗಲೇ ನಾನು ಏನೂ ಹೇಳುವ ಆಗಿಲ್ಲ ಎಂದಿದ್ದಾರೆ.
    Published by:Savitha Savitha
    First published: