Jote Joteyali Anirudh: ದೊಡ್ಡ ಆಫರ್ ಕಳೆದುಕೊಂಡ ಅನಿರುದ್ಧ್! ಆ ಕಿರಿಕ್ಕೇ ಕಾರಣ

ಸಾಕಷ್ಟು ಶೋಗಳು, ಸಾಕಷ್ಟು ವೇದಿಕೆಗಳಿವೆ. ಜೀ ಹಿಂದಿ, ಮರಾಠಿಯಿಂದಲೂ ಅನಿರುದ್ಧ್ ಅವರನ್ನು ಆಫರ್ ಹುಡುಕಿಕೊಂಡು ಬಂದಿತ್ತಂತೆ.

ಅನಿರುದ್ಧ್

ಅನಿರುದ್ಧ್

  • Share this:
    ಜೊತೆ ಜೊತೆಯಲಿ (Jote Joteyali) ಸೀರಿಯಲ್ (Serial), ಜೀ ಕನ್ನಡದ (Zee Kannada) ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಪ್ರೀತಿ ವಯಸ್ಸಿನ ಅಂತರ ಇಲ್ಲ ಎಂದು ತೋರಿಸಿಕೊಟ್ಟ ಸೀರಿಯಲ್. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8.30ಕ್ಕೆ ಜನ ಟಿವಿ ಮುಂದೆ ಕೂರುವಂತೆ ಮೋಡಿ ಮಾಡಿರುವ ಸೀರಿಯಲ್. ನಟ ಆರ್ಯವರ್ಧನ್, ನಟಿ ಅನು ಸಿರಿಮನೆ. ಎಲ್ಲವೂ ಚೆನ್ನಾಗಿತ್ತು. ಆದ್ರೆ ಶೂಟಿಂಗ್ ವೇಳೆಯಲ್ಲಿ ಆದ ಗಲಾಟೆ ಪರಿಣಾಮ, ಅನಿರುದ್ಧ (Anirudh) ಜತ್ಕರ್ ಹಾಗೂ ಆರೂರು ಜಗದೀಶ್ ಮಧ್ಯೆ ವೈಮನಸ್ಯ ತಾರಕಕ್ಕೇರಿತ್ತು. ಆದ ಕಾರಣ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು (Jote Joteyali Anirudh) ಅವರನ್ನ ಕೈಬಿಡಲು ಆರೂರು ಜಗದೀಶ್ ಹಾಗೂ ಜೀ ಕನ್ನಡ ವಾಹಿನಿ ನಿರ್ಧರಿಸಿ ತೆಗೆದಿದ್ದಾರೆ. ಇದು ಅನಿವೃದ್ಧ್ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ದೊಡ್ಡ ದೊಡ್ಡ (Big Offers) ಆಫರ್​ಗಳನ್ನು ಕಳೆದುಕೊಂಡಿದ್ದಾರೆ.

    ಜೀ ಕನ್ನಡ ಫಿಕ್ಷನ್ ಹೆಡ್ ಸುಧೀಂದ್ರ ಭಾರದ್ವಾಜ್ ಹೇಳಿದ್ದೇನು?
    ಅನಿರುದ್ಧ್ ಅವರ ಜೊತೆ ನಮಗೆ ಸಾಕಷ್ಟು ಯೋಜನೆಗಳಿದ್ದವು. ಇನ್ನೂ ಸಾಕಷ್ಟು ಶೋಗಳು ಬರುತ್ತವೆ, ಸಾಕಷ್ಟು ವೇದಿಕೆಗಳಿವೆ. ಜೀ ಹಿಂದಿ, ಮರಾಠಿಯಿಂದಲೂ ಅನಿರುದ್ಧ್ ಅವರನ್ನು ಆಫರ್ ಹುಡುಕಿಕೊಂಡು ಬಂದಿತ್ತು. ಬೇರೆ ಭಾಷೆಯವರಿಗೆ ಜೊತೆ ಜೊತೆಯಲಿ ಧಾರಾವಾಹಿ ಮುಗಿಯುತ್ತಿದ್ದಂತೆ ನೀವು ಅವರನ್ನು ಪ್ರಾಜೆಕ್ಟ್​ಗೆ ಹಾಕಿಕೊಳ್ಳಿ ಎಂದು ಹೇಳಿದ್ದೆವು. ಈ ವಿಚಾರವನ್ನು ಅನಿರುದ್ಧ್ ಅವರಿಗೂ ತಿಳಿಸಿದ್ದೆವು. ಆದ್ರೆ ಅವರು ಶೂಟಿಂಗ್ ವೇಳೆ ಮಾಡುತ್ತಿದ್ದ ಕಿರಿಕ್‍ನಿಂದ ಆಫರ್​ಗಳನ್ನು ಕಳೆದುಕೊಂಡಿದ್ದಾರೆ ಎಂದು ಜೀ ಕನ್ನಡ ಫಿಕ್ಷನ್ ಹೆಡ್ ಸುಧೀಂದ್ರ ಭಾರದ್ವಾಜ್ ಹೇಳಿದ್ದಾರೆ.

    ವಾಹಿನಿಗೂ, ಪ್ರೋಡಕ್ಷನ್ ಹೌಸ್‍ಗೂ ತಂದಿಡುವ ಕೆಲಸ
    ಅನಿರುದ್ಧ್ ಅವರು ವಾಹಿನಿಗೂ, ಪ್ರೋಡಕ್ಷನ್ ಹೌಸ್‍ಗೂ ತಂದಿಡುವ ಕೆಲಸ ಮಾಡುತ್ತಿದ್ರು ಎಂದು ಸುಧೀಂದ್ರ ಭಾರದ್ವಾಜ್ ಹೇಳಿದ್ದಾರೆ. ಅಲ್ಲದೇ ಶೂಟಿಂಗ್‍ಗೆ ತೊಂದ್ರೆ ಮಾಡಿ, ಕಲಾವಿದರನ್ನು ಎತ್ತಿ ಕಟ್ಟುವ ಕೆಲಸ ಮಾಡ್ತಿದ್ರಂತೆ. ದೊಡ್ಡ ದೊಡ್ಡ ಕಲಾವಿದರಿಗೂ ಮರ್ಯಾದೆ ಕೊಡುತ್ತಿರಲಿಲ್ವಂತೆ. ಜನಪ್ರಿಯತೆ ತಲೆಗೇರಿದೆ. ನೆಗೆಟಿವ್ ಶೆಟ್ ಮಾಡಲು ಅವರು ರೆಡಿ ಇರಲಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: Dance Karnataka Dance: ಅಬ್ಬಬ್ಬಾ ಏನ್ ಗುರು ಶಿವಣ್ಣನ ಡ್ಯಾನ್ಸ್! ಜೋಗಿ ಕುಣಿದ್ರೆ ಅಲ್ಲಿ ಸೃಷ್ಟಿಯಾಗೋದು ಜಾತ್ರೆನೆ ಅಲ್ವಾ?

    ಸಂಭಾವನೆ ವಿಷಯದಲ್ಲೂ ಗಲಾಟೆ
    ನಟ ಅನಿರುದ್ಧ್ ಸಂಭಾವನೆ ವಿಯದಲ್ಲೂ ಗಲಾಟೆ ಮಾಡಿದ್ರಂತೆ. ಕೊರೊನಾ ವೇಳೆ ಬಹುತೇಕ ಕಲಾವಿದರ ಸಂಭಾವನೆ ಕಡಿಮೆ ಮಾಡಿದ್ರಂತೆ. ಅನಿರುದ್ಧ್‍ಗೆ 18% ಸಂಭಾವನೆ ಕಡಿತ ಮಾಡಿದ್ರು ಎನ್ನುವ ಕಾರಣಕ್ಕಾಗಿ, ನನ್ನ ದುಡ್ಡು ತಿಂದು ಬೆಳಿತಿದ್ದಾರೆ ಅಂತ ಸೆಟ್‍ನಲ್ಲಿ ಶಾಪ ಹಾಕಿ ಪ್ರೋಡಕ್ಷನ್ ಹೌಸ್ ವಿರುದ್ಧ ಮಾತನಾಡಿದರು ಎಂದು ಜೀ ಕನ್ನಡ ಫಿಕ್ಷನ್ ಹೆಡ್ ಸುಧೀಂದ್ರ ಭಾರದ್ವಾಜ್ ಹೇಳಿದ್ದಾರೆ.

    ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿದ್ದ ಅನಿರುದ್ಧ್ ಅವಕಾಶಗಳು ಕಡಿಮೆಯಾದ ಮೇಲೆ ಕಿರುತೆರೆಗೆ ಕಾಲಿಟ್ಟಿದ್ರು. ಅವರಿಗೆ ಜೊತೆ ಜೊತೆಯಲಿ ಧಾರಾವಾಹಿ ತುಂಬಾ ಹೆಸರು ತಂದುಕೊಟ್ಟಿದೆ. ಆದ್ರೆ ಅವರು ಮಾಡಿಕೊಂಡಿರುವ ಕಿರಿಕ್ ನಿಂದ ದೊಡ್ಡ ದೊಡ್ಡ ಆಫರ್  ಕೈತಪ್ಪಿವೆ.

    ಇದನ್ನೂ ಓದಿ: Jote Joteyali: ಆಸ್ತಿ ಹಾಗೂ ಅನುವನ್ನು ಬಿಟ್ಟು ಹೋಗ್ತಾನಾ ಆರ್ಯವರ್ಧನ್​? ಇವತ್ತೇ ಅನಿರುದ್ಧ್ ಕೊನೇ ಸಂಚಿಕೆ!?

    ಆರ್ಯವರ್ಧನ್ ಪಾತ್ರಕ್ಕೆ ಯಾರು ಬರ್ತಾರೆ?
    ಇನ್ನು ಅನಿರುದ್ಧ್ ಧಾರಾವಾಹಿ ತಂಡ ಕೈ ಬಿಟ್ಟ ಮೇಲೆ, ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ನಿರ್ದೇಶಕ ಸನೂಪ್ ಭಂಡಾರಿ ಸಹ ಆರ್ಯವರ್ಧನ್ ಆಗಿ ನಟಿಸಲು ಒಪ್ಪಿಲ್ಲ. ಆದ ಕಾರಣ ಆ ಪಾತ್ರಕ್ಕೆ ಯಾರು ಬರ್ತಾರೆ ಅನ್ನೋದು ಗೊತ್ತಾಗಿಲ್ಲ. ಸದ್ಯ ಮೊದಲೇ ಶೂಟ್ ಮಾಡಿರುವ ಸಂಚಿಕೆಗಳು ರನ್ ಆಗುತ್ತಿವೆ.
    Published by:Savitha Savitha
    First published: