• Home
 • »
 • News
 • »
 • entertainment
 • »
 • Malavika Avinash: ರಾಜ್‍ಕುಮಾರ್ ಹೇಳಿದ್ದು ಕೇಳಿದ್ವಿ, ಮಾಳವಿಕಾ ಅವಿನಾಶ್ ಬಾಯಲ್ಲಿ ನೀವೂ ಈ ಡೈಲಾಗ್ ಕೇಳಲೇಬೇಕು

Malavika Avinash: ರಾಜ್‍ಕುಮಾರ್ ಹೇಳಿದ್ದು ಕೇಳಿದ್ವಿ, ಮಾಳವಿಕಾ ಅವಿನಾಶ್ ಬಾಯಲ್ಲಿ ನೀವೂ ಈ ಡೈಲಾಗ್ ಕೇಳಲೇಬೇಕು

ಮಾಳವಿಕಾ ಅವಿನಾಶ್

ಮಾಳವಿಕಾ ಅವಿನಾಶ್

ಎಲ್ಲಾ ಕಾಲಕ್ಕೂ, ಸಾರ್ವಕಾಲಿಕವಾಗಿ ಪ್ರೇರಣೆ ಕೊಡುವ ಸರ್ವ ಶ್ರೇಷ್ಠ ನಟರು ಎಂದ್ರೆ ಅದು ಡಾ. ರಾಜ್‍ಕುಮಾರ್. ಅವರಿಗಾಗಿ ಇದು ಎಂದು ಮಾಳವಿಕಾ ಅವರು ಈ ಡೈಲಾಗ್ ಹೇಳ್ತಾರೆ . ಮಾಳವಿಕಾ ಡೈಲಾಗ್ ಗೆ ಎಲ್ಲರು ಚಪ್ಪಾಳೆ ತಟ್ಟಿದ್ದಾರೆ.

 • Share this:

  ಜೀ ಕನ್ನಡ (Zee Kannada) ವಾಹಿನಿ ಜನರನ್ನು ರಂಜಿಸಲು ಸದಾ ಮುಂದೆ ಇರುತ್ತೆ. ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ ಮೂಲಕ ಜನ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೋಡಿ ನಂಬರ್ 01 (Jodi Nuber 01), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಜೋಡಿ ನಂಬರ್ ಕಾರ್ಯಕ್ರಮ ಬರುತ್ತೆ. ಕಾರ್ಯಕ್ರಮ ಅದ್ಭುತವಾಗಿ ಮೂಡಿ ಬರುತ್ತಿವೆ. ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಸೆಮಿ ಫಿನಾಲೆ. ಕಾರ್ಯಕ್ರಮದಲ್ಲಿ ಜಡ್ಜ್ ಗಳಾಗಿ ನೆನಪಿರಲಿ ಪ್ರೇಮ್, ನಟಿ ಮಾಳವಿಕಾ (Malavika) ಅವಿನಾಶ್.  ಮಾಳವಿಕಾ, ಕಾರ್ಯಕ್ರಮದಲ್ಲಿ ಬಭ್ರುವಾಹನ ಚಿತ್ರದ ಡೈಲಾಗ್ ಹೊಡೆದಿದ್ದಾರೆ. ಮಾಳವಿಕಾ ಡೈಲಾಗ್ ಗೆ ಎಲ್ಲರು ಚಪ್ಪಾಳೆ ತಟ್ಟಿದ್ದಾರೆ.


  ಜೋಡಿ ನಂಬರ್ 01 ಸೆಮಿ ಫಿನಾಲೆ
  ಜೋಡಿ ನಂಬರ್ ಒನ್ ಕಾರ್ಯಕ್ರಮವು ಪತಿ-ಪತ್ನಿಯರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಆಟದ ಮೂಲಕ ಜೀವನ ಪಾಠ ಹೇಳಿಕೊಡುವ ಕಾರ್ಯಕ್ರಮ. ಕಾರ್ಯಕ್ರವು ಅದ್ಭುತವಾಗಿ ಮೂಡಿ ಬರುತ್ತಿದೆ. ಈ ಕಾರ್ಯಕ್ರಮಕ್ಕೆ ಬಂದ ಮೇಲೆ ಜೋಡಿಗಳ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆಯಂತೆ. ಜಡ್ಜ್ ಗಳಾಗಿ, ನಟಿ ಮಾಳ್ವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಇದ್ದಾರೆ. ಸ್ಪರ್ಧಿಗಳ ಅಭಿನಯಕ್ಕೆ ತಕ್ಕಂತೆ ಜಡ್ಜ್ ಮೆಂಟ್ ನೀಡುತ್ತಾರೆ.


  ಬಭ್ರುವಾಹನ ಡೈಲಾಗ್
  ಎಲ್ಲಾ ಕಾಲಕ್ಕೂ, ಸಾರ್ವಕಾಲಿಕವಾಗಿ ಪ್ರೇರಣೆ ಕೊಡುವ ಸರ್ವ ಶ್ರೇಷ್ಠ ನಟರು ಎಂದ್ರೆ ಅದು ಡಾ. ರಾಜ್‍ಕುಮಾರ್. ಅವರಿಗಾಗಿ ಇದು ಎಂದು ಮಾಳವಿಕಾ ಅವರು ಈ ಡೈಲಾಗ್ ಹೇಳ್ತಾರೆ. ಏನು ಪಾರ್ಥ? ಕೆಂಗಣ್ಣಿನಿಂದ ನೋಡಿ ನೀನು ನನ್ನನ್ನು ಗೆಲ್ಲಲಾರೆ. ಈಗ ಆ ಶಕ್ತಿ ನಿನ್ನಲ್ಲಿ ಇಲ್ಲ. ಪರಮ ಪತಿವ್ರತೆಯನ್ನು ನಿಂದಿಸಿದ ಮರು ಕ್ಷಣವೇ, ನಿನ್ನ ಪುಣ್ಯವೆಲ್ಲಾ ಉರಿದು ಹೋಗಿ, ಪಾಪಾದ ಮೂಟೆ ನಿನ್ನ ಹೆಗಲು ಹತ್ತಿದೆ.


  ಇದನ್ನೂ ಓದಿ: Actress Malavika: ವಿಶೇಷಚೇತನ ಮಗನ ನೆನೆದು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್! ಡಿಕೆಡಿ, ಜೋಡಿ ನಂಬರ್ 1 ಮಹಾಸಂಗಮದಲ್ಲಿ ಎಮೋಷನಲ್


  ಎತ್ತು ನಿನ್ನ ಗಾಂಡಿವಾ, ಹೂಡು ಪರಮೇಶ್ವರನು ಕೊಟ್ಟ ಆ ನಿನ್ನ ಪಾಶು ಪಾತಾಸ್ತ್ರ. ಶಿವನನ್ನು ಗೆದ್ದ ನಿನ್ನ ಶೌರ್ಯ ನಮಗೂ ತಿಳಿಯಲಿ. ಅಥವಾ ಶಿವನನ್ನು ಗೆದ್ದೇ ಎನ್ನುವ ಅಹಂಕಾರ ನನ್ನಿಂದಲೇ ಮುರಿಯಲಿ ಎಂದು ಹೇಳ್ತಾರೆ. ಮಾಳವಿಕಾ ಅವರ ಡೈಲಾಗ್ ಕೇಳಿ ಎಲ್ಲರೂ ಖುಷಿಯಾಗಿದ್ದಾರೆ.


  ಡಾ. ರಾಜ್‍ಕುಮಾರ್ ಅವರ ಮನೋಜ್ಞ ಅಭಿನಯ
  ಬಭ್ರುವಾಹನ ಚಿತ್ರ 1977ರ ಫೆಬ್ರವರಿ 16ರಂದು ಬಿಡುಗಡೆಯಾಗಿ ಈಗ 45 ವರ್ಷಗಳನ್ನು ಪೂರೈಸಿದೆ. ಹಲವು ಮೇರು ಮಟ್ಟದ ಸಿನಿಮಾಗಳನ್ನು ಕನ್ನಡ ಸಿನಿರಂಗಕ್ಕೆ ಕಾಣಿಕೆಯಾಗಿ ನೀಡಿದ ಡಾ. ರಾಜ್ ಕುಮಾರ್, ತಮ್ಮ ಮನೋಜ್ಞ ಅಭಿನಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದವರು. ಮತ್ತು ಇಂದಿಗೂ ಜನಮಾನಸದಲ್ಲಿ ಅಮರರಾಗಿದ್ದಾರೆ. ಡಾ. ರಾಜ್ ಕುಮಾರ್ ಅವರು ಬಭ್ರುವಾಹನ ಚಿತ್ರದಲ್ಲಿ ರಾಜಕುಮಾರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅರ್ಜುನ ಮತ್ತು ಅವನ ಮಗ ಬಭ್ರುವಾಹನನ ಪಾತ್ರಗಳಲ್ಲಿ ಮಿಂಚಿದ್ದರು.


  ಇದನ್ನೂ ಓದಿ: Actress Sara Annaiah: ಗೋಲ್ಡನ್ ಟೆಂಪಲ್ ಮುಂದೆ ವರೂಧಿನಿ, ಸಾರಾ ಅಣ್ಣಯ್ಯ ಸಿಂಪಲ್ ಲುಕ್ ಸೂಪರ್


  ತೆಲುಗು, ಹಿಂದಿಗೆ ಡಬ್ ಆಗಿದ್ದ ಬಭ್ರುವಾಹನ
  ಚಿತ್ರದಲ್ಲಿ ಶ್ರೀಕೃಷ್ಣನ ಪಾತ್ರ ಮಾಡುವುದಕ್ಕೆ ಜನಪ್ರಿಯರಾಗಿದ್ದ ತೆಲುಗು ನಟ ಎನ್‍ಟಿಆರ್ ಅವರನ್ನು ಕರೆಸಬೇಕು ಎಂದು ಮೊದಲು ಚರ್ಚೆಗಳು ನಡೆದಿದ್ದವು. ಬಳಿಕ ಪಾತ್ರಕ್ಕೆ ರಾಮಕೃಷ್ಣ ಅಂತಿಮವಾಗಿ ಆಯ್ಕೆಯಾದರು ಎಂದು ಹೇಳಲಾಗಿದೆ. ಚಿತ್ರದ ನಿರೂಪಣೆ ಮತ್ತು ಅಭಿನಯ, ಹಾಡು, ಸಂಭಾಷಣೆ, ಡೈಲಾಗ್ ನಿಂದ ಇಂದಿಗೂ ಜನಪ್ರಿಯವಾಗಿದೆ. ಚಿತ್ರದಲ್ಲಿನ ಹಾಡು ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ಎವೆರ್ ಗ್ರೀನ್ ಹಾಡಾಗಿದೆ.

  Published by:Savitha Savitha
  First published: