Jodi No 1: ಜೋಡಿ ನಂಬರ್ ಒನ್ ಜೊತೆ ಸೀರಿಯಲ್ ತಾರೆಗಳ ಗಣೇಶೋತ್ಸವ ಸಂಭ್ರಮ, ವಾತ್ಸಲ್ಯ ತುಂಬಿದ ಮೆರುಗು!

ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಶನಿವಾರ ಗಣೇಶೋತ್ಸವ ಆಚರಿಸಲು ಸೀರಿಯಲ್ ತಾರೆಗಳು ಜೊತೆಯಾಗಿದ್ದಾರೆ. ಶನಿವಾರ ಸಂಜೆ 7ಕ್ಕೆ ಮಹಾಸಂಚಿಕೆ ಪ್ರಸಾರವಾಗಲಿದ್ದು, ಹೇಗೆ ಸ್ಪರ್ಧಿಗಳು ಹಬ್ಬ ಆಚರಿಸಿದ್ದಾರೆ ಅಂತ ನೋಡಬೇಕು. ಜೋಡಿ ನಂಬರ್ ಒನ್ ವೇದಿಕೆ ಧೂಳೆದ್ದಿದೆ.

ಜೋಡಿ ನಂಬರ್ ಒನ್

ಜೋಡಿ ನಂಬರ್ ಒನ್

 • Share this:
  ಜೀ ಕನ್ನಡ (Zee Kannada) ವಾಹಿನಿಯೂ ಜನರನ್ನು ಮನರಂಜಿಸುವಲ್ಲಿ ಯಾವಾಗಲು ಮುಂದೆ ಇರುತ್ತೆ. ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ (Reality show) ಶೋಗಳ ಮೂಲಕ ಜನರನ್ನು ರಂಜಿಸುತ್ತೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಇನ್ನೂ ಜೋಡಿ ನಂಬರ್ ಒನ್ (Jodi No 1) ಕಾರ್ಯಕ್ರಮ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಈ ಬಾರಿ ಜೀ ಕನ್ನಡದಲ್ಲಿ ಗಣೇಶೋತ್ಸವದ ಸಂಭ್ರಮ (Ganesh Festival) ರಂಗೇರಿದೆ. ಜೋಡಿ ನಂಬರ್ ಒನ್ ಸ್ಪರ್ಧಿಗಳ ಜೊತೆ, ವಾಹಿನಿಯ ಸೀರಿಯಲ್ ತಾರೆಗಳು ಗಣೇಶೋತ್ಸವ ಆಚರಣೆ ಮಾಡಲಿದ್ದಾರೆ.

  ಗಣೇಶ ಹೇಗೆ ಅಲಂಕಾರ ಮಾಡಿದ್ರೂ ಸ್ವೀಕರಿಸುತ್ತಾನಂತೆ
  ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಶನಿವಾರ ಗಣೇಶೋತ್ಸವ ಆಚರಿಸಲು ಸೀರಿಯಲ್ ತಾರೆಗಳು ಜೊತೆಯಾಗಿದ್ದಾರೆ. ಶನಿವಾರ ಸಂಜೆ 7ಕ್ಕೆ ಮಹಾಸಂಚಿಕೆ ಪ್ರಸಾರವಾಗಲಿದ್ದು, ಹೇಗೆ ಸ್ಪರ್ಧಿಗಳು ಹಬ್ಬ ಆಚರಿಸಿದ್ದಾರೆ ಅಂತ ನೋಡಬೇಕು. ಜೋಡಿ ನಂಬರ್ ಒನ್ ವೇದಿಕೆ ಧೂಳೆದ್ದಿದೆ. ಮಕ್ಕಳಿಗೆ ಗಣೇಶನ ರೀತಿ ಅಲಂಕಾರ ಮಾಡಿ ಸ್ಪರ್ಧೆ ಮಾಡಿದ್ದಾರೆ. ಗಣೇಶನನ್ನು ನೋಡಿ ಜೊತೆ ಜೊತೆಯಲಿ ಧಾರಾವಾಹಿಯ ಪುಷ್ಪ ಕಣ್ಣೀರು ಹಾಕಿದ್ದಾರೆ. ನನ್ನ ಮಗನನ್ನು ನೋಡಿದಂತೆ ಆಯ್ತು ಎಂದಿದ್ದಾರೆ.

  ಗುಳುಂ ಗುಳುಂ ಮೋದಕ
  ಅಲ್ಲದೇ ಕಾರ್ಯಕ್ರಮದಲ್ಲಿ ಜೋಡಿ ನಂಬರ್ ಒನ್ ಸ್ಪರ್ಧಿಗಳ ಜೊತೆ ಜೀ ತಾರೆಯರು ಮೋದಕ ತಿನ್ನು ಸ್ಪರ್ಧೆ ಏರ್ಪಡಿಸಿದ್ದಾರೆ. ಯಾರು ಎಷ್ಟು ತಿಂತಾರೆ, ಹೆಚ್ಚು ತಿಂದವರು ವಿನ್ನರ್ ಎಂದು ಹೇಳಲಾಗಿದೆ. ಅಂತೆಯೇ ಎಲ್ಲರೂ ಬೇಗ ಬೇಗ ಮೋದಕ ತಿನ್ನುತ್ತಾರೆ.

  ಚಕ್ಕುಲಿ ಮಾಡೋ, ತಮಾಷೆ ನೋಡು
  ಜೋಡಿಗಳು ಕೈಗೆ ಕೋಳ ಹಾಕಿಕೊಂಡು ಚಕ್ಕುಲಿ ತಯಾರು ಮಾಡಬೇಕು. ಅದನ್ನು ಗಟ್ಟಿಮೇಳ ಧಾರಾವಾಹಿಯ ಪರಿಮಳ ತಿಂದು ಬಿಟ್ಟು ಟೇಸ್ಟ್ ಹೇಗಿದೆ ಅಂತ ಹೇಳಬೇಕು. ಪರಿಮಳ, ಚಕ್ಕುಲಿಗೆ ಶೇಪ್ ಇಲ್ಲ, ಇದನ್ನು ತಿನ್ನಬೇಕ ಎಂದು ಕೇಳುತ್ತಾಳೆ. ಎಲ್ಲರೂ ನಗೆ ಗಡಲಲ್ಲಿ ತೇಲುತ್ತಾರೆ.

  ಜೋಡಿ ನಂಬರ್ ಒನ್
  ಜೋಡಿ ನಂಬರ್ ಒನ್ ರಿಯಾಲಿಟಿ ಶೋ, ಈ ಬಾರಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತದೆ. ಪತಿ-ಪತ್ನಿಯರು ಭಾಗವಹಿಸೋ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ, ಗಂಡ-ಹೆಂಡತಿ ಒಬ್ಬರಿಗೊಬ್ಬರು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದನ್ನು ಆಟದ ಮೂಲಕ ತಿಳಿಯುವುದ. ಇದೊಂತರ ಅವರಿಗೆ ಜೀವನ ಪಾಠವೂ ಹೌದು. ಕಾರ್ಯಕ್ರಮದ ಜಡ್ಜ್ ಗಳಾಗಿ ನಟಿ ಮಾಳ್ವಿಕಾ, ನಟ ಪ್ರೇಮ್ ಇದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ಚೆಂಗಪ್ಪ ಮಾಡುತ್ತಿದ್ದಾರೆ.

  Zee Kannada program, Jodi No 1 show, Reality show, zee serial actress, Ganesh Festival, ಜೀ ಕನ್ನಡದಲ್ಲಿ ಗಣೇಶೋತ್ಸವ, ಜೋಡಿ ನಂಬರ್ ಒನ್, ಜೀ ಕನ್ನಡ ಕಾರ್ಯಕ್ರಮಗಳು, Kannada news, Karnataka news,
  ನಟ ಪ್ರೇಮ್-ನಟಿ ಮಾಳ್ವಿಕಾ


  ಈಗಾಗಲೇ ಅನೇಕ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಶ್ವೇತಾ ಗಳಿಸಿದ್ದು, ಸುಕನ್ಯಾ, ಸುಮತಿ, ಕಾದಂಬರಿ, ಪುನರ್ಜನ್ಮ, ಅರುಂಧತಿ, ಗೆಜ್ಜೆನಾದ, ಬಾ ನನ್ನ ಸಂಗೀತ ಸೇರಿದಂತೆ ವಿವಿಧ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಲ್ಲದೇ,  ಯಾರಿಗುಂಟು ಯಾರಿಗಿಲ್ಲ, ಡ್ಯಾನ್ಸ್ ಡ್ಯಾನ್ಸ್ ಜೂನಿಯರ್ಸ್ ರಿಯಾಲಿಟಿ ಶೋ, ತಂಗಿಗಾಗಿ ಸೇರಿದಂತೆ ಕೆಲ ಚಲನಚಿತ್ರಗಳ ಮೂಲಕ ನಾಡಿನ ಮನೆಮಾತಾಗಿರುವ ಮುದ್ದುಮುಖದ ಗೃಹಿಣಿ ಎನ್ನಬಹುದು.

  ಜೋಡಿ ನಂಬರ್ ಒನ್ ಜೋಡಿಗಳು

  ಈ ರಿಯಾಲಿಟಿ ಶೋನಲ್ಲಿ ಕಿರಿಕ್ ಕೀರ್ತಿ- ಅರ್ಪಿತ, ಹಾಗೆ ಇತ್ತೀಚೆಗಷ್ಟೇ ಮದುವೆಯಾದ ನವಜೋಡಿಗಳಾದ ನಿನಾದ್ ಹರಿತ್ಸಾ ಮತ್ತು ರಮ್ಯಾ ಜೋಡಿ, ಕಾಮಿಡಿ ಕಿಲಾಡಿ ಖ್ಯಾತಿಯ ಗೋವಿಂದೇಗೌಡ ಹಾಗೂ ದಿವ್ಯಶ್ರೀ, ಹಿರಿಯ ನಟ ಸತ್ಯ ಧಾರವಾಹಿಯ ಅಭಿಜಿತ್ ಹಾಗೂ ರೋಹಿಣಿ ಹಿಟ್ಲರ್ ಕಲ್ಯಾಣ ಧಾರಾವಾಹಿಯ ನೇಹಾ ಪಾಟೀಲ್ ಪ್ರಣವ್ ರಾಜಶೇಖರ್ ದಂಪತಿ ಸ್ಪರ್ಧಿಸಿದ್ದಾರೆ.
  Published by:Savitha Savitha
  First published: