Hitler Kalyana: ಅಜ್ಜಿ ಮುಂದೆ ಮಾರು ವೇಷದಲ್ಲಿ ಬಂದಿರೋ ಲೀಲಾ ಎಜೆ ಕೈಗೆ ಸಿಕ್ಕಿ‌ ಬೀಳ್ತಾಳ!

ಎಜೆ ಮನೆಗೆ ವಾಪಸ್ಸು ಹೋಗುತ್ತಾಳ ಲೀಲಾ ಎಂಬುದೇ ಬಹು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅಲ್ಪಸ್ವಲ್ಪ ಎಜೆಯನ್ನು ಇಷ್ಟಪಡುತ್ತಿದ್ದ ಲೀಲಾ ಇದೀಗ ಸಂಪೂರ್ಣವಾಗಿ ದ್ವೇಷಿಸಲು ಆರಂಭಿಸಿದ್ದಾಳೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಹಿಟ್ಲರ್ ಕಲ್ಯಾಣ (Hitler Kalyana). ಮಿಸ್ಟರ್ ಪರ್ಫೆಕ್ಟ್ ಮತ್ತು ಯಡವಟ್ಟು ಲೀಲಾ (Leela) ನಟನೆಗೆ ಸೋಲದವರಿಲ್ಲ. ಇದೀಗ ಧಾರಾವಾಹಿಯಲ್ಲಿ ಎಜೆ (AJ) ಮತ್ತು ಲೀಲಾಳ ಎಡವಟ್ಟು ಸನ್ನಿವೇಶಗಳನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಪ್ರತಿದಿನ ಹೊಸ ಹೊಸ ಟ್ವಿಸ್ಟ್ ಗಳ ಮೂಲಕ ಧಾರಾವಾಹಿ (Serial) ಪ್ರಸಾರಗೊಳ್ಳುತ್ತಿದೆ. ಇದೀಗ ಲೀಲಾ ತನ್ನ ತಂದೆಗಾದ ಅವಮಾನದಿಂದ ಮನೆ ಬಿಟ್ಟು ತವರು ಮನೆ ಕಡೆಗೆ ಬಂದಿದ್ದಾಳೆ. ಮುಂದೆ ಎಜೆ ಮನೆಗೆ ವಾಪಸ್ಸು ಹೋಗುತ್ತಾಳ ಲೀಲಾ ಎಂಬುದೇ ಬಹು ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅಲ್ಪಸ್ವಲ್ಪ ಎಜೆಯನ್ನು ಇಷ್ಟಪಡುತ್ತಿದ್ದ ಲೀಲಾ ಇದೀಗ ಸಂಪೂರ್ಣವಾಗಿ ದ್ವೇಷಿಸಲು ಆರಂಭಿಸಿದ್ದಾಳೆ.

  ಲೀಲಾ ಇಲ್ಲದೆ ಎಜೆ ತಾಯಿ ಕಂಗಾಲು

  ಎಜೆ ಬಂದು ಲೀಲಾಳನ್ನು ಮನೆಗೆ ಬರುವಂತೆ ಕೇಳಿಕೊಂಡರು ಲೀಲಾ ಒಪ್ಪಿಕೊಳ್ಳುತ್ತಿಲ್ಲ. ಆದರೆ ಇತ್ತ ಅಜ್ಜಿ ಲೀಲಾ ಮನೆಗೆ ಬರದೆ ನಾನೇನು ತಿನ್ನುವುದಿಲ್ಲ ಎಂದು ಹಠ ಹಿಡಿದು ಕುಳಿತಿದ್ದಾರೆ. ತಾವೇ ಲೀಲಾಳನ್ನು ಮನೆಗೆ ಬರುವಂತೆ ಕರೆದರೂ ಲೀಲಾ ಅಜ್ಜಿಗೆ ಮುಖ ತೋರಿಸದೆ ಕೊನೆಗೆ ಬಾಗಿಲು ಹಾಕಿ ಕುಳಿತುಕೊಳ್ಳುತ್ತಾಳೆ. ಇದನ್ನೆಲ್ಲ ಕಂಡು ಅಚ್ಚಿಗೆ ಬೇಸರವಾಗಿ ಅವರ ಆರೋಗ್ಯದಲ್ಲಿ ಏರುಪೇರು ಕೂಡ ಆಗುತ್ತಿದೆ.

  ಇದನ್ನೂ ಓದಿ: Olavina Nildana: ಕಲರ್ಸ್ ಕನ್ನಡದಲ್ಲಿ ಹೊಸ ರಂಗಿನ ಕಥೆ! 'ಒಲವಿನ ನಿಲ್ಗಾಣ'ದಲ್ಲಿ ಒಂದು ಸುತ್ತು ಹಾಕೋಣ ಬನ್ನಿ

  ಅಂತರಾಳದ ನೆನಪಿನಲ್ಲಿ ಎಜೆ ಭಾವುಕ

  ಅಂತರಾಳನ್ನು ನೆನೆದು ಎಜೆ ಭಾವುಕರಾಗಿದ್ದಾರೆ. ಆಕೆಯ ಕಿವಿಯೋಲೆಯನ್ನು ಹಿಡಿದುಕೊಂಡು ಯಾಕೆ ನನಗಿಷ್ಟು ಕಷ್ಟ ಕೊಡುತ್ತಿದ್ದಾರೆ ದೇವರು. ನೀನೇ ಹೇಳಿದ ಹುಡುಗಿಯನ್ನು ನಾನು ಮದುವೆಯಾಗಿದ್ದೇನೆ ಆದರೂ ಅವಳಿಂದ ಇದಕ್ಕೆ ಮನೆಯಲ್ಲಿ ಎಲ್ಲರೂ ಕಣ್ಣೀರು ಇಡುವಂತಾಗಿದೆ. ಇಲ್ಲಿಯವರೆಗೆ ನಿನ್ನ ಎಜೆ ಯಾರ ಬಳಿಯೂ ಏನನ್ನೂ ಕೇಳಿದವನಲ್ಲ, ಆದರೆ ಅಮ್ಮನ ಸಂತೋಷಕ್ಕಾಗಿ ಮನೆ ತನಕ ಹೋಗಿ ಲೀಲಾಳನ್ನು ಕರೆದರೂ ಆಕೆ ಬರಲು ಒಪ್ಪುತ್ತಿಲ್ಲಾ. ಯಾಕೆ ಹೀಗೆಲ್ಲ ಆಗುತ್ತಿದೆ ಎಂದು ಕಂಬನಿ ಸುರಿಸುತ್ತಿದ್ದಾರೆ ಎಜೆ.

  ಲೀಲಾಳಿಗೆ ಮಾಡಿದ ಕರೆ ಎಜೆ ಪಿಎ ವಿಶ್ವರೂಪ್ 

  ಎಜೆ ಪಿಎ ವಿಶ್ವರೂಪ್ ಲೀಲಾಳಿಗೆ ಕರೆ ಮಾಡಿ ಅಜ್ಜಿಯ ಈ ಸ್ಥಿತಿಗೆ ನೀವೇ ಕಾರಣ ನಿಮ್ಮ ಹಠದಿಂದ ಅಜ್ಜಿ ಆರೋಗ್ಯ ತಪ್ಪಿ ಹಾಸಿಗೆ ಹಿಡಿದಿದ್ದಾರೆ. ಇನ್ನಾದರೂ ನಿಮ್ಮ ಹಠ ಬಿಟ್ಟು ಮರಳಿ ಮನೆಗೆ ಬನ್ನಿ ಎಂದು ವಿಶ್ವರೂಪ್ ಲೀಲಾಳಲ್ಲಿ ವಿನಂತಿ ಮಾಡಿಕೊಂಡಿದ್ದಾನೆ.
  ಲೀಲಾಳಿಗೆ ಅಜ್ಜಿಯ ಮೇಲೆ ಅಕ್ಕರೆ ಜೊತೆಗೆ ಪ್ರೀತಿ ಕೂಡ ಇದೆ. ಅಜ್ಜಿಯ ಈ ಪರಿಸ್ಥಿತಿಗೆ ನಾನೇ ಕಾರಣ ಎಂದು ಕೊರಗುತ್ತಿರುವ ಲೀಲಾ ಮಾರುವೇಷದಲ್ಲಿ ಅಜ್ಜಿಯನ್ನು ಭೇಟಿಯಾಗಲು ಎಜೆ ಮನೆಗೆ ಹೋಗಿದ್ದಾಳೆ.

  ಇದನ್ನೂ ಓದಿ: Sushma Shekhar: ಗಿಣಿರಾಮ ಧಾರಾವಾಹಿ ಮೂಲಕ ಮತ್ತೆ ನಟನೆಗೆ ಮರಳುತ್ತಿದ್ದಾರೆ ಸುಷ್ಮಾ ಶೇಖರ್

  ಏಜೆ ಎದುರು ಸಿಕ್ಕಿ ಬೀಳುತ್ತಾಳ ಲೀಲಾ

  ಮನೆ ಕ್ಲೀನ್ ಮಾಡುವ ಕೆಲಸದವಳಾಗಿ ಲೀಲಾ ಎಜೆ ಮನೆಗೆ ತಲುಪಿದ್ದಾಳೆ. ಇತ್ತ ದುರ್ಗಾ ಹಾಗೂ ಇನ್ನಿಬ್ಬರು ಸೊಸೆಯಂದಿರು ಲೀಲಾಳ ಬಳಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಮಾಡಿ ಲೀಲಾಳನ್ನು ಭಯಪಡಿಸುತ್ತಿದ್ದಾರೆ. ಆದರೂ ಧೈರ್ಯ ಮಾಡಿ ಇದೆಯಲ್ಲ ಮನೆಯೊಳಗೆ ನುಗ್ಗಿ ಅಜ್ಜಿಯ ಕೊನೆಯ ಕಡೆ ಹೆಜ್ಜೆ ಹಾಕಿದ್ದಾಳೆ. ಇತ್ತ ದೊಡ್ಡ ಸೊಸೆ ದುರ್ಗಾ ಆಕೆ ಮೇಲೆ ಒಂದು ಕಣ್ಣಿಟ್ಟಿರು ಎಂದು ಹೇಳಿದ್ದಾಳೆ. ಲೀಲಾ ಅಜ್ಜಿ ರೂಮಿಗೆ ಹೋಗಿ ಕ್ಷಮಿಸಿಬಿಡು ಅಜ್ಜಿ ನನ್ನ ಎಂದು ಕಾಲು ಮುಟ್ಟುವ ವೇಳೆ ಏಜೆ ಅಜ್ಜಿ ರೂಮ್‌ಗೆ ಎಂಟ್ರಿ ನೀಡುತ್ತಾರೆ. ಏಜೆ ಎದುರು ಸಿಕ್ಕಿ ಬೀಳುತ್ತಾಳ ಲೀಲಾ ಕಾದು ನೋಡಬೇಕಿದೆ. ಇನ್ನು ಲೀಲಾ ತಾಯಿ ಕೌಸಲ್ಯಾ ಹಣದ ಮೋಹಕ್ಕೆ ಒಳಗಾಗಿ ಮಗಳ ಜೀವನ ಹಾಳದರೂ ಚಿಂತೆ ಇಲ್ಲ ದುಡ್ಡು ಮಾತ್ರ ಮುಖ್ಯ ಎನ್ನುವ ರೀತಿಯಲ್ಲಿ ಆಡುತ್ತಿರುವುದು ಅಭಿಮಾನಿಗಳಲ್ಲಿ ಕೋಪ ತರಿಸಿದೆ.
  Published by:Swathi Nayak
  First published: