Hitler Kalyana: ಲೀಲಾ ಮನೆಯಲ್ಲಿ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಂತೆ ದುರ್ಗಾ! ಎಜೆ ಸೊಸೆಯ ಹೊಸ ವರಸೆ ಶುರು

ನಿಮ್ಮ ಮಗಳು ಅಲ್ಲೇ ಇರಬೇಕು. ಅದು ನಮ್ಮ ಮನೆಯಲ್ಲಿ. ಇಲ್ಲಿ ನಾವು ಅನುಭವಿಸಿದ ನೋವು, ಹತಾಶೆ, ಸಂಕಟವನ್ನು, ನಿಮ್ಮ ಮಗಳು ಪ್ರತಿ ಕ್ಷಣವೂ ಅನುಭವಿಸಬೇಕು. ಹಾಗೇ ಮಾಡಲಿಲ್ಲ ಅಂದ್ರೆ ನನ್ನ ಹೆಸರು ದುರ್ಗಾನೇ ಅಲ್ಲ ಎನ್ನುತ್ತಾಳೆ. ಮುಂದೇನಾಗುತ್ತೆ?

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial) . ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. (A.J) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಎಜೆ ಸೊಸೆಯಂದಿರಿಗೆ ಲೀಲಾ ತವರು ಮನೆಯಲ್ಲಿ ಅವಮಾನ ಆಗಿದೆ. ಅದಕ್ಕೆ ಸೇಡು (Revenge) ತೀರಿಸಿಕೊಳ್ಳಲು ದುರ್ಗಾ (Durga) ರೆಡಿಯಾಗಿದ್ದಾಳೆ.

  ಸೊಸೆಯಂದಿರನ್ನು ತವರು ಮನೆಗೆ ಕಳಿಸಿದ್ದ ಲೀಲಾ
  ಲೀಲಾ ಮತ್ತು ಅವರ ತಾಯಿ ಕೌಸಲ್ಯಾಗೆ ದುರ್ಗಾ, ಲಕ್ಷ್ಮಿ, ಸರು ಈ ಮೂವರು ಸೊಸೆಯಂದಿರು ತುಂಬಾ ಅವಮಾನ ಮಾಡಿರುತ್ತಾರೆ. ಮಿಡಲ್ ಕ್ಲಾಸ್ ಜನ, ಭಿಕಾರಿಗಳು ಅಂತೆಲ್ಲಾ ಬೈದಿರುತ್ತಾರೆ. ಅದಕ್ಕೆ ದುರ್ಗಾ, ಲಕ್ಷ್ಮಿ, ಸರುಗೆ ಬುದ್ಧಿ ಕಲಿಸಲು ಲೀಲಾ ಅವರನ್ನು ತನ್ನ ತವರು ಮನೆಗೆ ಕಳಿಸಿರುತ್ತಾಳೆ. ನಮಗೆ ಬೈಯ್ತಾರೆ. ನಮ್ಮ ಮನೆಯಲ್ಲಿ ಬುದ್ಧಿ ಕಲಿಯಲಿ. ಬುದ್ಧಿ ಕಲಿಸುವುದರಲ್ಲಿ ನಮ್ಮಮ್ಮ ಸೂಪರ್ ಎಂದು ಅವರ ಮನೆಗೆ ಕಳಿಸಿದ್ದಳು.

  ಸೊಕ್ಕಿನ ರಾಣಿಯರಿಗೆ ನರಕ ದರ್ಶನ ಮಾಡಿಸಿದ ಕೌಸಲ್ಯ
  ಮನೆಗೆ ಬಂದಿದ್ದ ಎ.ಜೆ ಸೊಸೆಯಂದಿರ ಬಳಿಯೇ ಕೌಸಲ್ಯ ಮನೆ ಕ್ಲೀನ್ ಮಾಡಿಸಿದ್ದಳು. ಒಬ್ಬಳು ಧೂಳು ತೆಗೆದ್ರೆ, ಇನ್ನೊಬ್ಬಳು ಪಾತ್ರೆ ತೊಳೆದಿದ್ದಳು. ಇನ್ನೊಬ್ಬಳು ನೆಲ ಒರೆಸುತ್ತಿದ್ದಳು. ಅವರಿಗೆ ಹಳೆಯ ಸೀರೆಗಳನ್ನು ಕೊಟ್ಟಿದ್ದಳು. ಅಲ್ಲದೇ ಮಲಗಲು, ನೆಲದ ಮೇಲೆ ಹಾಸಿಕೊಳ್ಳಲು ಹಳೇ ಸೀರೆ, ಪಂಚೆ ಕೊಟ್ಟಿದ್ದಳು. ಊಟ ನೀಡದೇ ಒದ್ದಾಡಿಸಿದ್ದಳು. ಅದಕ್ಕೆ ಮೂವರಿಗೂ ಕೋಪ ಬಂದಿದೆ.

  ಇದನ್ನೂ ಓದಿ: Mayamruga: 25 ವರ್ಷಗಳ ಬಳಿಕ 'ಮತ್ತೆ ಮಾಯಾಮೃಗ', ಕುತೂಹಲ ಹೆಚ್ಚಿಸಿದ ಟಿ ಎನ್ ಸೀತಾರಾಮ್

  ನಿಮ್ಮ ಮಗಳ ಮೇಲೆ ನಮ್ಮ ಸೇಡು ಎಂದ ದುರ್ಗಾ
  ಕೌಸಲ್ಯಾಗೆ, ದುರ್ಗಾ ಈ ರೀತಿ ಹೇಳುತ್ತಾಳೆ. ಇಲ್ಲಿ ನೀವೊಬ್ಬರು, ನಾವು ಮೂರ ಜನ ಮೂರೇ ದಿನ ಇದ್ದಿದ್ದು. ನಿಮ್ಮ ಮಗಳು ಅಲ್ಲೇ ಇರಬೇಕು. ಅದು ನಮ್ಮ ಮನೆಯಲ್ಲಿ. ಇಲ್ಲಿ ನಾವು ಅನುಭವಿಸಿದ ನೋವು, ಹತಾಶೆ, ಸಂಕಟವನ್ನು, ನಿಮ್ಮ ಮಗಳು ಪ್ರತಿ ಕ್ಷಣವೂ ಅನುಭವಿಸಬೇಕು. ಹಾಗೇ ಮಾಡಲಿಲ್ಲ ಅಂದ್ರೆ ನನ್ನ ಹೆಸರು ದುರ್ಗಾನೇ ಅಲ್ಲ ಎನ್ನುತ್ತಾಳೆ.

  Zee Kannada serial, Kannada serial, Hitler Kalyana serial today episode, Hitler Kalyana serial cast, Durga plan to revenge, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ದುರ್ಗಾ


  ಲೀಲಾ ಬಳಿ ಹುಷಾರಾಗಿರಿ
  ಕೌಸಲ್ಯ, ದುರ್ಗಾಗೆ ಕೌಂಟರ್ ಕೊಡುತ್ತಾಳೆ. 50 ವರ್ಷ ಆಗಿರೋ ನಾನೇ ಈ ರೇಂಜ್‍ನಲ್ಲಿ ರುಬ್ಬಿದ್ದೇನೆ. ನನ್ನ ಮಗಳು ಲೀಲಾ ಬಿಸಿ ರಕ್ತದ ಯುವತಿ. ನಿಮ್ಮ ಮೂರು ಜನರನ್ನು ಯಾವ ರೇಂಜ್‍ನಲ್ಲಿ ರುಬ್ಬಬಹುದು? ನೀವೇ ಸ್ಪಲ್ಪ ಯೋಚ್ನೆ ಮಾಡಿ. ಇವಳು ಕೌಸಲ್ಯನ ಮಗಳು.

  ಇದನ್ನೂ ಓದಿ: Ismart Jodi: ಸ್ಟಾರ್ ಸುವರ್ಣ ಇಸ್ಮಾರ್ಟ್ ಜೋಡಿ ಇವರೇ ನೋಡಿ, 7 ಲಕ್ಷದ ಜೊತೆ ಟೈಟಲ್ ವಿನ್ನರ್ ಆದ ಕಪಲ್

  ಇವಳು ಮನಸ್ಸು ಮಾಡಿದ್ರೆ, ಕ್ರಿಕೆಟ್ ಗ್ರೌಂಡ್‍ನಲ್ಲಿ ಕಬ್ಬಡಿ, ಕಬ್ಬಡಿ ಆಡಿ ಮಣ್ಣು ಮುಕ್ಕಿಸುತ್ತಾಳೆ. ಮೂರು ಜನಕ್ಕೆ ಮೂರು ಸಿಕ್ಸ್. ನನ್ನ ಮಗಳ ಬಳಿ ಹುಷಾರಾಗಿರು ದುರ್ಗಾ ಎಂದು ಹೇಳಿ ಕಳಿಸುತ್ತಾಳೆ.

  Zee Kannada serial, Kannada serial, Hitler Kalyana serial today episode, Hitler Kalyana serial cast, Durga plan to revenge, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಲಕ್ಷ್ಮಿ, ದುರ್ಗಾ, ಸರಸ್ವತಿ


  ದುರ್ಗಾ ಇದಕ್ಕೆಲ್ಲಾ ಲೀಲಾ ಮೇಲೆ ಸೇಡು ತೀರಿಸಿಕೊಳ್ತಾಳಾ? ಲೀಲಾ ಸುಮ್ಮನೇ ಇರುತ್ತಾಳಾ? ಎಲ್ಲವನ್ನೂ ನೋಡಲು ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
  Published by:Savitha Savitha
  First published: