ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗೋ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ ಆರಂಭದಿಂದಲೂ ತುಂಬಾ ಇನ್ಟ್ರೆಸ್ಟಿಂಗ್ ಆಗಿಯೇ ಆಗಿದೆ. ಲೀಲಾ ತನ್ನ ಎಡವಟ್ಟುಗಳಿಂದಲೇ ಫೇಮಸ್. ಎಡವಟ್ಟು ಲೀಲಾ ಅಂತಲೇ ಹೆಸರಾದವಳು. ಈ ಸೀರಿಯಲ್ (Serial) ಉದ್ದಕ್ಕೂ ಈಕೆಯ ಯಡವಟ್ಟುಗಳೇ ಕಥೆಯ ಮುಖ್ಯಭಾಗವಾಗಿ ಬಂದಿದೆ. ಎಷ್ಟೇ ಯಡವಟ್ಟು ಮಾಡಿದ್ರೂ ಪ್ರಾಮಾಣಿಕತೆ, ಮುಗ್ಧತೆಯ ಕಾರಣಕ್ಕೆ ಈಕೆ ಪ್ರೇಕ್ಷಕರ ಮನಸ್ಸು ಗೆಲ್ಲುತ್ತಲೇ ಹೋಗುತ್ತಿದ್ದಾಳೆ. ಒಂದು ಕಡೆ ಎಜೆಯ ಮಹಾನ್ ಶಿಸ್ತು, ಮಿ.ಪರ್ಫೆಕ್ಟ್ (Mr. Perfect) ಅಂತಲೇ ಹೆಸರಾದ ಪಾತ್ರ, ಇನ್ನೊಂದೆಡೆ ಅದಕ್ಕೆ ಸರೀ ವಿರುದ್ಧ ಒಂದಲ್ಲ ಒಂದು ಯಡವಟ್ಟು ಮಾಡುತ್ತಲೇ ಇರುವ ಲೀಲಾ, ಈ ಎರಡೂ ಪಾತ್ರಗಳ ಫ್ಲೋ ಚೆನ್ನಾಗಿ ವರ್ಕ್ ಆಗುತ್ತಿದೆ.
ದುರ್ಗಾಳ ಆಟಕ್ಕೆ ಅಂತ್ಯ ಹಾಡಲು ಸಜ್ಜಾದ ಲೀಲಾ
ದುರ್ಗಾಳ ಆಟಕ್ಕೆ ಅಂತ್ಯ ಹಾಡಲು ಸಜ್ಜಾಗಿದ್ದಾಳೆ ಲೀಲಾ. ಆದರೆ ಲೀಲಾಗೆ ಈ ಬಗ್ಗೆ ಸರಿಯಾದ ಕ್ಲೂ ಸಿಗುತ್ತಿಲ್ಲ. ದುರ್ಗಾ ಏನೇ ಕಿತಾಪತಿ ಮಾಡಿದರೂ ಅದನ್ನು ಲೀಲಾಗೆ ಕಂಡು ಹಿಡಿಯಲು ಆಗುತ್ತಿಲ್ಲ. ಪೆದ್ದು ಲೀಲಾಳನ್ನು ದುರ್ಗಾ ಚೆನ್ನಾಗಿಯೇ ಆಟ ಆಡಿಸುತ್ತಿದ್ದಾಳೆ. ಇನ್ನೂ ಲೀಲಾ ಯಾವ ರೀತಿಯಲ್ಲಿ ತನ್ನ ಮನೆತನದ ಗೌರವ ಉಳಿಸಿಕೊಳ್ಳುತ್ತಾಳೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಇನ್ನೂ ಲಕ್ಷ್ಮೀ ವೆಡ್ಡಿಂಗ್ ಆನಿವರ್ಸರಿಯ ದಿನದಂದು ಲೀಲಾಳ ತಂದೆ ಮರ್ಯಾದೆ ಹರಾಜು ಹಾಕಲು ಯೋಚಿಸುತ್ತಿದ್ದಾಳೆ ದುರ್ಗಾ.
ಇನ್ನೂ ದೇವ್, ಎಜೆಯ ಮನೆ ಹೆಂಡತಿ ಲೀಲಾಳ ತಂಗಿ ಚುಕ್ಕಿಯ ಮನಸ್ಸನ್ನ ಹಾಳು ಮಾಡಲು ಯತ್ನಿಸುತ್ತಿರುವಾತ. ಇತ್ತ ಚುಕ್ಕಿಗೆ ಒಳ್ಳೆ ಪ್ರಪೋಸಲ್ ಬರುತ್ತಿದೆ. ನಿನ್ನೆಯ ಸಂಚಿಕೆಯಲ್ಲಿ ಚುಕ್ಕಿಯನ್ನು ನೋಡಲು ಒಬ್ಬ ವರ ಆಗಮಿಸಿದ್ದ ಇದರಿಂದ ಲೀಲಾ ತಂದೆ ತಾಯಿ ಬಹಳ ಖುಷಿ ಪಟ್ಟರು, ಆದರೆ ಆ ಖುಷಿ ನೀರಿನ ಮೇಲಿನ ಗುಳ್ಳೆ ಇದ್ದ ಹಾಗೆ ಎಂಬುವುದು ಅವರಿಗೆ ಗೊತ್ತಿಲ್ಲ. ಮೆನೆಯವರಿಗೆ ಎಲ್ಲರಿಗೂ ಇಷ್ಟವಾಗಿತ್ತು ಈ ಸಂಬಂಧ ಆದರೆ ಚುಕ್ಕಿಯೇ ತನ್ನ ಜೀವನವನ್ನು ಕೈಯಾರೇ ಹಾಳು ಮಾಡಿಕೊಳ್ಳುತ್ತಿರುವುದು ಎಂದು ಲೀಲಾಳಿಗೆ ಬಲವಾದ ಅನುಮಾನ ಮೂಡಿದೆ. ಅಭಿರಾಮ್ ಜಯಶಂಕರ್ ಅಲಿಯಾಸ್ ಎಜೆ ಮೊದಲ ಪತ್ನಿ ಅಂತರಾ ಸಾವನ್ನಪ್ಪಿದ ಬಳಿಕ ಒಬ್ಬಂಟಿಯಾಗಿದ್ದ ಎಜೆಗೆ ಸೊಸೆಯಂದಿರೇ ಮದುವೆ ಮಾಡಿಕೊಳ್ಳಲು ಒಪ್ಪಿಸಿದ್ರು. ಅತ್ತೆ ಆಯ್ಕೆ ಮಾಡಲು ಹಲವು ಹುಡುಗಿಯರನ್ನು ಹುಡುಕಾಡಿದ್ರು. ಕೊನೆಗೇ ಸೊಸೆಯಂದಿರಿಗೆ ಇಷ್ಟವಿಲ್ಲದ ಎಡವಟ್ಟು ಲೀಲಾ ಎಜೆ ಕೈ ಹಿಡಿದಿದ್ದಾಳೆ. ಅತ್ತೆ ಕಂಡ್ರೆ ಕೆಂಡಕಾರೋ ಸೊಸೆಯಂದಿರು ಲೀಲಾಳನ್ನು ಮನೆಯಿಂದ ಹೊರಗೆ ಹಾಕೋಕೆ ಕುತಂತ್ರ ಮಾಡ್ತಿದ್ದಾರೆ. ಇದೀಗ ಮನೆ ಜವಾಬ್ದಾರಿ ಹೊತ್ತಿರೋ ಲೀಲಾಗಿ ಅಡುಗೆಯೇ ಬರಲ್ಲ ಅನ್ನೋ ವಿಷಯ ಎಜೆಗೆ ತಿಳಿದು ಹೋಗಿದೆ. ಅಡುಗೆ ಬರದ ಲೀಲಾಗೆ ಎಜೆಯೇ ಅಡುಗೆ ಪಾಠ ಹೇಳಿಕೊಡಲು ಹೊರಟಿದ್ದಾನೆ.
ರಿಸಪ್ಶನ್ನಲ್ಲಿ ಲೀಲಾಳ ತಂದೆಗೆ ಅವಮಾನ ಮಾಡಬೇಕೆಂದು ಸಂಚು ಮಾಡುತ್ತಿರುವ ದುರ್ಗಾ
ದುರ್ಗಾ, ರಿಸಪ್ಶನ್ನಲ್ಲಿ ಲೀಲಾಳ ತಂದೆಗೆ ಅವಮಾನ ಮಾಡಬೇಕೆಂದು ಸಂಚುಮಾಡುತ್ತಿರು ಮಾಡುತ್ತಿದ್ದಾಳೆ. ಆದರೆ ಈ ಬಗ್ಗೆ ಲೀಲಾಗೆ ಅರಿವೇ ಇಲ್ಲ, ಇಷ್ಟೂ ಕೆಳ ಮಟ್ಟಕ್ಕೆ ದುರ್ಗಾ ಹೋಗಬಹುದು ಎಂದುಕೊಂಡಿರಲು ಇಲ್ಲ. ಆದರೆ ದುರ್ಗಾ, ಲೀಲಾಳ ತಂದೆಯ ಜೀವದ ಜೊತೆ ಚೆಲ್ಲಾಟ ಆಡಲು ಹೊರಟಿದ್ದಾಳೆ, ರಿಸೆಪ್ಶನ್ನಲ್ಲಿ ಎಲ್ಲರ ಮುಂದೆ ಆಗುವ ಅವಮಾನವನ್ನು ಹೇಗೆ ಸಹಿಸಿಕೊಳ್ಳುತ್ತಾರೆ ಲೀಲಾ ತಂದೆ? ದುರ್ಗಾಳ ಕುತಂತ್ರಕ್ಕೆ ಬಿಳುತ್ತಾ ಕಡಿವಾಣ ಎಂಬುವುದನ್ನು ಕಾದು ನೋಡಬೇಕಿದೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ