Hitler Kalyana: 200 ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ‌ ಹಿಟ್ಲರ್ ಕಲ್ಯಾಣ

ಇದೀಗ ಈ ಧಾರಾವಾಹಿಯು 200 ಸಂಚಿಕೆ (200 Episode) ಗಳನ್ನು ಪೂರೈಸಿ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಹಿಟ್ಲರ್ ಕಲ್ಯಾಣ ಎಂದು ಸೋಲಲಿಲ್ಲ

hitler kalayana serail complted its 200th episode

hitler kalayana serail complted its 200th episode

 • Share this:
  ಜೀ ಕನ್ನಡ ( Zee Kannada) ವಾಹಿನಿಯಲ್ಲಿ ಪ್ರಸಾರಗೊಳ್ಳುವ ಹಿಟ್ಲರ್ ಕಲ್ಯಾಣ‌ ಧಾರವಾಹಿ ಪ್ರತಿವಾರ ಟಿಆರ್ ಪಿ (TRP) ನಲ್ಲಿ ಅಗ್ರಸ್ಥಾನವನ್ನು ಪಡೆದುಕೊಳ್ಳುತ್ತ ಬಂದಿದೆ. ಇದೀಗ ಈ ಧಾರಾವಾಹಿಯು 200 ಸಂಚಿಕೆ (200 Episode) ಗಳನ್ನು ಪೂರೈಸಿ ಯಶಸ್ಸಿನಿಂದ ಮುನ್ನುಗ್ಗುತ್ತಿದೆ. ವೀಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಹಿಟ್ಲರ್ ಕಲ್ಯಾಣ ಎಂದು ಸೋಲಲಿಲ್ಲ. ಪ್ರತಿದಿನ ಹೊಸ ಹೊಸ ತಿರುವುಗಳೊಂದಿಗೆ ಧಾರವಾಹಿ ವೀಕ್ಷಕರನ್ನು ಮನರಂಜಿಸುತ್ತಿದೆ. ಈ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ದಿಲೀಪ್ ರಾಜ್ (Dileep Raj) ಹಾಗೂ ಮಲೈಕಾ ವಸುಪಾಲ್ (Malaika Vasupal) ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ತುಂಬಾ ಮುಖ್ಯವಾದ ಪಾತ್ರವಹಿಸಿರುವುದು ಅಂತರ. ಇಷ್ಟು ದಿನ ಬರೀ ಫೋಟೊದಲ್ಲಿ ಕಾಣಿಸುತ್ತಿದ್ದರು. ಯಾವ್ಯಾಗ, ಹೇಗೆ ಎಂಟ್ರಿ ಕೊಡುತ್ತಾರೆ ಅನ್ನೋ ಕ್ಯೂರಿಯಾಸಿಟಿ ಇತ್ತು. ಆದರೆ ನಿರೀಕ್ಷೆಗೂ ಮೀರಿದ ಎಂಟ್ರಿ ಅಂತರದ್ದಾಗಿತ್ತು. 

  ಎಜೆ ಅಲಿಯಾಸ್ ಅಭಿರಾಮ್ ಜೈಶಂಕರ್ ತಮ್ಮ ಗಂಭೀರ ನಟನೆಯಿಂದ ಹಾಗೂ ಮಿಸ್ಟರ್ ‌ ಪರ್ಫೆಕ್ಟ್ ಗುಣದಿಂದ ಯುವಕರಿಂದ ಹಿಡಿದು ವಯಸ್ಕರ ಮನಸ್ಸನ್ನು ಗೆದ್ದಿದ್ದಾರೆ. ಇನ್ನು ನಾಯಕಿ ಪಾತ್ರದಲ್ಲಿ ಅಭಿನಯಿಸುತ್ತಿರುವ ಲೀಲಾ ತನ್ನ ಎಡವಟ್ಟು ಕೆಲಸಗಳಿಂದ ಪೆದ್ದು ಪೆದ್ದು ನಟನೆಯಿಂದ ವೀಕ್ಷಕರನ್ನು ಗೆದ್ದಿದ್ದಾರೆ.

  ಲೀಲಾ ಅಂದರೆ ವೀಕ್ಷಕರಿಗೆ ಅಚ್ಚುಮೆಚ್ಚು

  ಮಲೈಕಾ ವಸುಪಾಲ್ ಸದಾ ನಾನ್ ಸ್ಟಾಪ್ ತರ‌ ಮಾತನಾಡುತ್ತಲೇ ಇರುತ್ತಾರೆ. ದಿನಕ್ಕೆ ಒಂದೊಂದರಂತೆ ಎಡವಟ್ಟು ಮಾಡಿಕೊಂಡು ಎಜೆ ಕೈಯಿಂದ ಪನಿಷ್ಮೆಂಟ್ ಪಡಕೊಳ್ಳುವುದು ಅಂದರೆ ಲೀಲಾಗೆ ಅಚ್ಚುಮೆಚ್ಚು. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪೆದ್ದು ಪೆದ್ದಾಗಿ ನಟಿಸಿದ್ದು, ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಸದಾ ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಎಲ್ಲರನ್ನೂ ತನ್ನ ನಟನೆಯ ಮೂಲಕವೇ ಕಟ್ಟಿ ಹಾಕುತ್ತಿರುವ ಹುಡುಗಿ ಲೀಲಾ. ಇತ್ತೀಚಿಗೆ ಕಿರುತೆರೆಯಲ್ಲಿ ವೀಕ್ಷಕರಿಗೂ ಲೀಲಾ ಎಂದರೆ ಬಹಳ ಅಚ್ಚು ಮೆಚ್ಚು.

  ಮೂವರು ಸೊಸೆಯಂದಿರಿಗೆ ಅತ್ತೆಯಾಗಿ, ಲೀಲಾ ಮಾಡುತ್ತಿರುವ ಪಾತ್ರ ಅಂತಿದ್ದಲ್ಲ. ಇಡೀ ಮನೆಯ ಜವಾಬ್ದಾರಿ ಹೊರುವಂತಹ ಸ್ಥಾನ. ಮೊದ ಮೊದಲಿಗೆ ಎಜೆ ಎಂದರೆ ಅಂಕಲ್ ಎನ್ನುತ್ತಿದ್ದ ಲೀಲಾ ಇದೀಗ ಪತಿಯಾಗಿ ಪಡೆದಿದ್ದಾಳೆ. ಕುಟುಂಬವೇ ಎಲ್ಲಾ ಎನ್ನುತ್ತಿದ್ದವಳು ಆದರೆ ಎಲ್ಲವನ್ನೂ ಮರೆತು ಎಜೆ ಕುಟುಂಬಕ್ಕೆ ತಕ್ಕ ಸೊಸೆಯಾಗಿ, ಗೌರವಯುತವಾಗಿ ನಡೆದುಕೊಳ್ಳುತ್ತಿದ್ದಾಳೆ. ಇದು ಅವಳ ಮೊದಲ ಧಾರಾವಾಹಿ ಎನ್ನಿಸುವುದೇ ಇಲ್ಲ. ಅಷ್ಟು ಲೀಲಾಜಾಲಾವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾಳೆ. ಅದಕ್ಕೆಂದೇ ಹಲವು ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿವೆ.

  ಇದನ್ನೂ ಓದಿ: Vinaya Prasad: ಅರಸನ ಕೋಟೆ ಅಖಿಲಾಂಡೇಶ್ವರಿಯ ರಿಯಲ್​ ಲೈಫ್​ ಸ್ಟೋರಿ ಇದು

  ಮಿಸ್ಟರ್ ಪರ್ಫೆಕ್ಟ್ ಏಜೆ ಅಲಿಯಾಸ್ ದಿಲೀಪ್ ರಾಜ್ ಇಟ್ಟರು ಕಲ್ಯಾಣಕ್ಕೂ ಮುನ್ನ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನಾಗಿ ಖಳನಾಯಕನಾಗಿ ಸಹನಟನಾಗಿ ಹೀಗೆ ಹಲವಾರು ಪಾತ್ರಗಳಲ್ಲಿ ನಟಿಸಿ ಸೈ‌ ಎನಿಸಿಕೊಂಡಿದ್ದಾರೆ. ಆದರೆ 'ಹಿಟ್ಲರ್ ಕಲ್ಯಾಣ'ದಲ್ಲಿ ಅದ್ಯಾವಾಗ ಎಜೆ ಆಗಿ ಎಂಟ್ರಿ ಕೊಟ್ಟರೋ ಅಂದಿನಿಂದ ಅದೆಷ್ಟೋ ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಫಿಟ್ನೆಸ್, ಬ್ಯೂಟಿ, ಲೈಫ್ ಸ್ಟೈಲ್, ಬ್ಯುಸಿನೆಸ್ ಹೀಗೆ ಎಲ್ಲಾ ರೀತಿಯಲ್ಲೂ ಮಾದರಿಯಾಗಿದ್ದಾರೆ.

  ಇದನ್ನೂ ಓದಿ: Gouthami Jadav: ರಫ್ ಅಂಡ್ ಟಫ್ ಲುಕ್ ನಲ್ಲಿ ಮಿಂಚುತ್ತಿರುವ ಗೌತಮಿ ಜಾಧವ್ ರಿಯಲ್ ಲೈಫ್ ನಲ್ಲಿ ಹಾಗಿಲ್ವಂತೆ!

  ಕೆಲವು ಸಮಯದ ಹಿಂದೆ ಈ ಸೀರಿಯಲ್‌ಗೆ ಅಂತರಾ ಅನ್ನೋ ಪಾತ್ರ ಎಂಟ್ರಿ ಕೊಟ್ಟಿದೆ. 'ಅಮೃತವರ್ಷಿಣಿ' ಎಂಬ ಹಿಟ್ ಸೀರಿಯಲ್‌ನ ನಾಯಕಿಯಾಗಿದ್ದ ರಜನಿ ಈ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ಅಂತರಾ ಎಜೆಯ ಮೊದಲ ಹೆಂಡತಿ. ಅಂತರಾ ಈಗ ಫೋಟೋದಲ್ಲಿ ಹಾಗೂ ಎಜೆ ಅಂತರಂಗದಲ್ಲಿ ಮಾತ್ರ ಇರುವ ಪಾತ್ರ. ಈಕೆಯ ಕಾಲಾನಂತರ ಎಜೆ ಸಾಕಷ್ಟು ಕಾಲ ಒಂಟಿಯಾಗಿದ್ದವನು ಕೊನೆಗೆ ಅಮ್ಮನ ಬಲವಂತಕ್ಕೆ ಲೀಲಾಗೆ ತಾಳಿ ಕಟ್ಟುತ್ತಾನೆ.
  Published by:Swathi Nayak
  First published: