Hitler Kalyana: ಎಜೆ ಪತ್ನಿ ಅಪಾಯದಲ್ಲಿ! ಹೆಂಡತಿಯನ್ನು ಕಾಪಾಡ್ತಾನಾ ಮಿಸ್ಟರ್ ಪರ್ಫೆಕ್ಟ್?

ಲೀಲಾ ಚಳಿ, ಹೊಟ್ಟೆ ಹಸಿವಿನಿಂದ ಬಳಲಿ, ಅಲ್ಲೇ ಪ್ರಜ್ಞೆ ತಪ್ಪಿ ಬೀಳ್ತಾಳೆ. ಅದನ್ನು ನೋಡಿ ಎಜೆ ಸೊಸೆಯರು ಮಜಾ ತೆಗೆದುಕೊಳ್ತಾರೆ. ಅವಳ ಒದ್ದಾಟ ಕಂಡು ಖುಷಿ ಪಡ್ತಾರೆ.

ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಲೀಲಾ

ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ ಲೀಲಾ

  • Share this:
    ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannda) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. (AJ) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು (Leela) ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಎಜೆ ಸೊಸೆಯಂದಿರಿಗೆ ಲೀಲಾ ತವರು ಮನೆಯಲ್ಲಿ ಅವಮಾನ ಆಗಿದೆ. ಅದಕ್ಕೆ ಸೇಡು ತೀರಿಸಿಕೊಳ್ತಿದ್ದಾಳೆ ದುರ್ಗಾ.

    ಎ.ಜೆ ಸೊಸೆಯರಿಗೆ ನರಕ ದರ್ಶನ ಮಾಡಿಸಿದ ಕೌಸಲ್ಯ
    ಎ.ಜೆ ಸೊಸೆಯಂದಿರು ಲೀಲಾ ತವರು ಮನೆಗೆ ಹೋಗಿದ್ದರು. ಮನೆಗೆ ಬಂದಿದ್ದ ಎ.ಜೆ ಸೊಸೆಯಂದಿರ ಬಳಿಯೇ ಕೌಸಲ್ಯ ಮನೆ ಕ್ಲೀನ್ ಮಾಡಿಸಿದ್ದಳು. ಒಬ್ಬಳು ಧೂಳು ತೆಗೆದ್ರೆ, ಇನ್ನೊಬ್ಬಳು ಪಾತ್ರೆ ತೊಳೆದಿದ್ದಳು. ಇನ್ನೊಬ್ಬಳು ನೆಲ ಒರೆಸುತ್ತಿದ್ದಳು. ಅವರಿಗೆ ಹಳೆಯ ಸೀರೆಗಳನ್ನು ಕೊಟ್ಟಿದ್ದಳು. ಅಲ್ಲದೇ ಮಲಗಲು, ನೆಲದ ಮೇಲೆ ಹಾಸಿಕೊಳ್ಳಲು ಹಳೇ ಸೀರೆ, ಪಂಚೆ ಕೊಟ್ಟಿದ್ದಳು. ಊಟ ನೀಡದೇ ಒದ್ದಾಡಿಸಿದ್ದಳು. ಅದಕ್ಕೆ ಮೂವರಿಗೂ ಕೋಪ ಬಂದಿದೆ. ಅದಕ್ಕೆ ಆ ಕೋಪವನ್ನು ಲೀಲಾ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ.

    ಲೀಲಾ ಮೇಲೆ ನಮ್ಮ ಸೇಡು ಎಂದ ದುರ್ಗಾ
    ಕೌಸಲ್ಯಾಗೆ ದುರ್ಗಾ ಈ ರೀತಿ ಹೇಳಿರುತ್ತಾಳೆ, ಇಲ್ಲಿ ನೀವೊಬ್ಬರು, ನಾವು ಮೂರ ಜನ ಮೂರೇ ದಿನ ಇದ್ದಿದ್ದು. ನಿಮ್ಮ ಮಗಳು ಅಲ್ಲೇ ಇರಬೇಕು. ಅದು ನಮ್ಮ ಮನೆಯಲ್ಲಿ. ಇಲ್ಲಿ ನಾವು ಅನುಭವಿಸಿದ ನೋವು, ಹತಾಶೆ, ಸಂಕಟವನ್ನು, ನಿಮ್ಮ ಮಗಳು ಪ್ರತಿ ಕ್ಷಣವೂ ಅನುಭವಿಸಬೇಕು. ಹಾಗೇ ಮಾಡಲಿಲ್ಲ ಅಂದ್ರೆ ನನ್ನ ಹೆಸರು ದುರ್ಗಾನೇ ಅಲ್ಲ ಎನ್ನುತ್ತಾಳೆ. ಅದೇ ರೀತಿ ಲೀಲಾಗೆ ತೊಂದರೆ ಕೊಡುತ್ತಿದ್ದಾರೆ.

    ಇದನ್ನೂ ಓದಿ: Shrirasthu Shubhamasthu: 'ಶ್ರೀರಸ್ತು ಶುಭಮಸ್ತು' ಅಂತ ಕಿರುತೆರೆಗೆ ಬರ್ತಿದ್ದಾರೆ ಸುಧಾರಾಣಿ, ಜೀ ಕನ್ನಡದಲ್ಲಿ ಹೊಸ ಧಾರಾವಾಹಿ

    ಲೀಲಾ ಬಳಿ ಹುಷಾರಾಗಿರಿ
    ಕೌಸಲ್ಯ, ದುರ್ಗಾಗೆ ಕೌಂಟರ್ ಕೊಡುತ್ತಾಳೆ. 50 ವರ್ಷ ಆಗಿರೋ ನಾನೇ ಈ ರೇಂಜ್‍ನಲ್ಲಿ ರುಬ್ಬಿದ್ದೇನೆ. ನನ್ನ ಮಗಳು ಲೀಲಾ ಬಿಸಿ ರಕ್ತದ ಯುವತಿ. ನಿಮ್ಮ ಮೂರು ಜನರನ್ನು ಯಾವ ರೇಂಜ್‍ನಲ್ಲಿ ರುಬ್ಬಬಹುದು? ನೀವೇ ಸ್ಪಲ್ಪ ಯೋಚನೆ ಮಾಡಿ. ಇವಳು ಕೌಸಲ್ಯನ ಮಗಳು.
    ಇವಳು ಮನಸ್ಸು ಮಾಡಿದ್ರೆ, ಕ್ರಿಕೆಟ್ ಗ್ರೌಂಡ್‍ನಲ್ಲಿ ಕಬ್ಬಡಿ, ಕಬ್ಬಡಿ ಆಡಿ ಮಣ್ಣು ಮುಕ್ಕಿಸುತ್ತಾಳೆ. ಮೂರು ಜನಕ್ಕೆ ಮೂರು ಸಿಕ್ಸ್. ನನ್ನ ಮಗಳ ಬಳಿ ಹುಷಾರಾಗಿರು ದುರ್ಗಾ ಎಂದು ಹೇಳಿ ಕಳಿಸುತ್ತಾಳೆ.

    Zee Kannada serial, Kannada serial, Hitler Kalyana serial today episode, Hitler Kalyana serial cast, Leela in problem, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಹಿಟ್ಲರ್ ಕಲ್ಯಾಣ


    ಟೇರಸ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಲೀಲಾ
    ಸರು ಮತ್ತು ದುರ್ಗಾ ಸೇರಿ ಪ್ಲ್ಯಾನ್ ಮಾಡಿ, ಲೀಲಾಳನ್ನು ಟೇರಸ್‍ಗೆ ಹೋಗುವಂತೆ ಮಾಡ್ತಾರೆ. ಲೀಲಾ ಅಲ್ಲಿಗೆ ಹೋಗಿದ್ದೇ ತಡ. ಟೇರಸ್ ಬಾಗಿಲು ಹಾಕಿ, ಪರದೇ ಹಾಕಿಬಿಡುತ್ತಾರೆ. ಲೀಲಾ ಯಾರಿಗೂ ಕಾಣುವುದಿಲ್ಲ. ಕೂಗಿದ್ರೂ ಕೇಳದಂತೆ ಮಾಡ್ತಾರೆ. ಲೀಲಾ ಚಳಿ, ಹೊಟ್ಟೆ ಹಸಿವಿನಿಂದ ಬಳಲಿ, ಅಲ್ಲೇ ಪ್ರಜ್ಞೆ ತಪ್ಪಿ ಬೀಳ್ತಾಳೆ. ಅದನ್ನು ನೋಡಿ ಎಜೆ ಸೊಸೆಯರು ಮಜಾ ತೆಗೆದುಕೊಳ್ತಾರೆ. ಅವಳ ಒದ್ದಾಟ ಕಂಡು ಖುಷಿ ಪಡ್ತಾರೆ.

    ಇದನ್ನೂ ಓದಿ: Ramachari: ಒನಕೆ ಓಬವ್ವ ಮತ್ತೆ ಹುಟ್ಟಿ ಬರ್ತಿದ್ದಾರೆ! ರಾಮಾಚಾರಿ ಧಾರಾವಾಹಿಲಿ ಹೊಸ ಸಾಹಸ

    ಲೀಲಾ ಹುಡುಕಿಕೊಂಡು ಬಂದ ಎಜೆ
    ಎಜೆ ಮಲಗಿರುತ್ತಾನೆ. ಏನೂ ಸಂಕಟದಿಂದ ಮೇಲೆ ಎದ್ದು ಬಿಡುತ್ತಾನೆ. ನೋಡಿದ್ರೆ ಲೀಲಾ ಇರುವುದಿಲ್ಲ. ಲೀಲಾ ಎಲ್ಲಿ ಹೋದ್ಲು ಎಂದು ಎಜೆ ಹುಡುಕುತ್ತಿರುತ್ತಾನೆ.

    Zee Kannada serial, Kannada serial, Hitler Kalyana serial today episode, Hitler Kalyana serial cast, Leela in problem, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಲಕ್ಷ್ಮಿ, ದುರ್ಗಾ, ಸರಸ್ವತಿ


    ಹಾಗಾದ್ರೆ ಆಕೆಯನ್ನು ಎಜೆ ಕಾಪಾಡಿಕೊಳ್ತಾನಾ? ತಪ್ಪಿತಸ್ಥರಿಗೆ ಶಿಕ್ಷೆ ಕೊಡ್ತಾನಾ? ಎಲ್ಲವನ್ನು ನೋಡಲು ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: