Hitler Kalyana: ಹಿಟ್ಲರ್ ಕಲ್ಯಾಣದಲ್ಲಿ ಸೊಸೆಯಂದಿರ ಕಿತಾಪತಿಯಿಂದ ಬಿಗ್ ಟ್ವಿಸ್ಟ್!

ಲೀಲಾ ವಿಕ್ರಂನನ್ನು ಭೇಟಿ ಮಾಡಲು ಎಜೆ ಕಣ್ತಪ್ಪಿಸಿ ಹೋಗಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಎಜೆ ಬಳಿ ಎಷ್ಟೊತ್ತಿಗೆ ವಾಪಸ್ ಬರ್ತಿರಿ ಎಂದು ಕೇಳಿದ್ದಾಳೆ. ಎಜೆಗೆ ಗೊತ್ತಿಲ್ಲದಂತೆ ಹೋಗೋ ಪ್ಲ್ಯಾನ್ ಮಾಡಿದ್ದಾಳೆ. ಇದನ್ನು ಕೇಳಿಸಿಕೊಂಡ ಸರು, ಲೀಲಾಳನ್ನು ಹಿಂಬಾಲಿಸುತ್ತಾಳೆ. ಲೀಲಾ ವಿಕ್ರಂ ಬಳಿ ಮಾತನಾಡುವುದನ್ನು ವಿಡಿಯೋ ಮಾಡಿಕೊಳ್ತಾಳೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

  • Share this:
    ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. (AJ) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಆದ್ರೆ ಈಗ ಇಬ್ಬರ ಮಧ್ಯೆ ಸ್ಪಲ್ಪ ಸ್ವಲ್ಪ ಪ್ರೀತಿ (Love) ಹುಟ್ಟುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಲೀಲಾಳ ತಪ್ಪು ಕಂಡು ಹಿಡಿಯಲು ಸದಾ ಮುಂದಿರುತ್ತಾರೆ.

    ಲೀಲಾ ಮೇಲೆ ಎಜೆಗೆ ಪ್ರೀತಿಯಾಗುತ್ತಿದೆಯಾ?
    ಲೀಲಾಗೆ ಎಜೆ ಸೊಸೆಯಂದಿರಾದ ದುರ್ಗಾ, ಸರು, ಲಕ್ಷ್ಮಿ ಯಾವಾಗಲೂ ತೊಂದರೆ ಕೊಡುತ್ತಾರೆ. ಆದ್ರೂ ಲೀಲಾ ಕಾಪಾಡೋಕೆ ಎಜೆ ಇರ್ತಾನೆ. ಲೀಲಾ ಹುಷಾರಿಲ್ಲದೇ ಒದ್ದಾಡುತ್ತಿದ್ರೆ, ಎಜೆಗೆ ನೆಮ್ಮದಿಯಿಂದ ನಿದ್ದೆ ಬರಲ್ವಂತೆ. ಮೊದಲೆಲ್ಲಾ ತನ್ನ ಅಮ್ಮನ ವಿಷಯಕ್ಕೆ ಮಾತ್ರ ಈ ರೀತಿ ಆಗ್ತಿತ್ತಂತೆ. ಈಗ ಲೀಲಾ ವಿಚಾರಕ್ಕೂ ಈ ರೀತಿ ಸಂಕಟ ಆಗುತ್ತಂತೆ. ಅದಕ್ಕೆ ಎಜೆಗೆ ಲೀಲಾ ಮೇಲೆ ಪ್ರೀತಿ ಆಗಿರಬಹುದು ಎಂಬ ಅನುಮಾನ ಶುರುವಾಗಿದೆ.

    ವಿಕ್ರಂ ಭೇಟಿಯಾಗ್ತಾಳಾ ಲೀಲಾ?
    ವಿಕ್ರಂ ಅಂದ್ರೆ, ಎಜೆ ಮೊದಲನೇ ಹೆಂಡತಿ ಅಣ್ಣ. ಅವನಿಗೆ ಎಜೆ ಕಂಡ್ರೆ ಆಗಲ್ಲ. ಅವನ ತಂಗಿ ಸಾವಿಗೆ ಎಜೆ ಕಾರಣ ಎಂದು ತಿಳಿದುಕೊಂಡಿದ್ದಾನೆ. ಅದಕ್ಕೆ ಹೇಗಾದ್ರೂ ಮಾಡಿ ಅವನ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದುಕೊಳ್ತಿದ್ದಾನೆ. ಅವನ ಒಬ್ಬನ ಕೈಯಲ್ಲಿ ಆಗಲ್ಲ ಎಂದು ಲೀಲಾಳನ್ನು ದಾಳವಾಗಿ ಬಳಸಿಕೊಳ್ಳಲು ಮುಂದಾಗಿದ್ದಾನೆ. ಲೀಲಾ ಈತನನ್ನು ಭೇಟಿ ಮಾಡಬಹುದು.

    ಇದನ್ನೂ ಓದಿ: Kendasampige: ಕಣ್ಮುಂದೆಯೇ ಹೊತ್ತಿ ಉರಿಯುತ್ತಿದ್ದಾನೆ ತಮ್ಮ, ಸುಮಿಯ ನೋವಿನ ಕಣ್ಣೀರು!

    ಮೊದಲು ವಿಕ್ರಂ ಮಾತು ನಂಬಿದ್ದ ಲೀಲಾ
    ಈ ಮೊದಲು ವಿಕ್ರಂ ಲೀಲಾಳನ್ನು ಭೇಟಿ ಆಗಿ, ಎಜೆ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿರುತ್ತಾನೆ. ಎಜೆ ಕೆಟ್ಟವನು. ನನ್ನ ತಂಗಿಯನ್ನು ಕೊಲೆ ಮಾಡಿದ್ದಾನೆ. ಅವನ ಕೆಲಸ ಆಗಬೇಕು ಅಂದ್ರೆ ಯಾರನ್ನು ಬೇಕಾದ್ರೂ ಕೊಲ್ತಾನೆ. ನೀನು ಹುಷಾರಾಗಿರೋ ಎಂದು ಹೇಳಿರುತ್ತಾನೆ. ಅದನ್ನು ನಂಬಿ ಲೀಲಾ ಎಜೆ ಮೇಲೆ ಅನುಮಾನ ಪಡುತ್ತಾ ಇರುತ್ತಾಳೆ. ಆದ್ರೆ ಈಗ ಎಜೆ ಮೇಲೆ ನಂಬಿಕೆ ಬಂದಿದ್ದು, ವಿಕ್ರಂ ಹೇಳಿದ್ದೆಲ್ಲಾ ಸುಳ್ಳು ಎಂದು ಗೊತ್ತಾಗಿದೆ.

    Zee Kannada serial, Kannada serial, Hitler Kalyana serial today episode, Hitler Kalyana serial cast, Leela plan to Meet Vikram, ಹಿಟ್ಲರ್ ಕಲ್ಯಾಣ ಧಾರಾವಾಹಿ, ವಿಕ್ರಂ ಭೇಟಿಯಾಗಲು ಹೋಗಿ ಎ.ಜೆ ನಂಬಿಕೆ ಕಳೆದುಕೊಳ್ತಾಳಾ ಲೀಲಾ?, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ವಿಕ್ರಂ


    ಲೀಲಾಳನ್ನು ಭೇಟಿ ಆಗು ಎಂದು ಪೀಡಿಸುತ್ತಿರುವ ವಿಕ್ರಂ
    ವಿಕ್ರಂ ಮಾತನ್ನು ಲೀಲಾ ನಂಬುತ್ತಿಲ್ಲ ಎಂದು ಗೊತ್ತಾಗಿದೆ. ಅದಕ್ಕೆ ವಿಕ್ರಂ ಎಜೆ ಮುಗಿಸಲು ಲೀಲಾ ಬೆಂಬಲ ಬೇಕೇ ಬೇಕು. ಅದಕ್ಕೆ ವಿಕ್ರಂ ಪದೇ ಪದೇ ಲೀಲಾಗೆ ಕಾಲ್ ಮಾಡಿ, ನೀವು ಬನ್ನಿ ಒಮ್ಮೆ ಭೇಟಿ ಆಗಬೇಕು. ಎಜೆಯನ್ನು ನಂಬಬೇಡಿ ಎಂದು ಹೇಳುತ್ತಿದ್ದಾನೆ. ಲೀಲಾಳು ಒಮ್ಮೆ ಭೇಟಿ ಮಾಡಿ ಅವರಿಗೆ ನನ್ನ ಸುದ್ದಿ ಬರಬೇಡಿ ಎಂದು ಹೇಳಲು ರೆಡಿಯಾಗಿದ್ದಾಳೆ.

    ಇದನ್ನೂ ಓದಿ: Ramachari: ಚಿತ್ರದುರ್ಗದ ಕಲ್ಲಿನಕೋಟೆಯ ಓಬವ್ವನ ಕಥೆ ಹೇಳ್ತಿದ್ದಾನೆ ರಾಮಾಚಾರಿ, ನೀವೂ ಕೇಳಿ!

    ಎಜೆ ಕಣ್ತಪ್ಪಿಸಿ ಭೇಟಿ ಮಾಡಲು ಹೋಗುತ್ತಿದ್ದಾಳೆ
    ಲೀಲಾ ವಿಕ್ರಂನನ್ನು ಭೇಟಿ ಮಾಡಲು ಎಜೆ ಕಣ್ತಪ್ಪಿಸಿ ಹೋಗಬೇಕು ಎಂದುಕೊಂಡಿದ್ದಾಳೆ. ಅದಕ್ಕೆ ಎಜೆ ಬಳಿ ಎಷ್ಟೊತ್ತಿಗೆ ವಾಪಸ್ ಬರ್ತಿರಿ ಎಂದು ಕೇಳಿದ್ದಾಳೆ. ಎಜೆಗೆ ಗೊತ್ತಿಲ್ಲದಂತೆ ಹೋಗೋ ಪ್ಲ್ಯಾನ್ ಮಾಡಿದ್ದಾಳೆ. ಇದನ್ನು ಕೇಳಿಸಿಕೊಂಡ ಸರು, ಲೀಲಾಳನ್ನು ಹಿಂಬಾಲಿಸುತ್ತಾಳೆ. ಲೀಲಾ ವಿಕ್ರಂ ಬಳಿ ಮಾತನಾಡುವುದನ್ನು ವಿಡಿಯೋ ಮಾಡಿಕೊಳ್ತಾಳೆ.

    Zee Kannada serial, Kannada serial, Hitler Kalyana serial today episode, Hitler Kalyana serial cast, Leela plan to Meet Vikram, ಹಿಟ್ಲರ್ ಕಲ್ಯಾಣ ಧಾರಾವಾಹಿ, ವಿಕ್ರಂ ಭೇಟಿಯಾಗಲು ಹೋಗಿ ಎ.ಜೆ ನಂಬಿಕೆ ಕಳೆದುಕೊಳ್ತಾಳಾ ಲೀಲಾ?, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ಸರು


    ವಿಕ್ರಂನ ಭೇಟಿಯಾದ ಲೀಲಾ ಎಜೆ ನಂಬಿಕೆ ಕಳೆದುಕೊಳ್ತಾಳಾ? ದುರ್ಗಾ ಆ ವಿಡಿಯೋ ಇಟ್ಟುಕೊಂಡು ಲೀಲಾಳನ್ನು ಆಟ ಆಡಿಸ್ತಾಳಾ? ಇಬ್ಬರ ಮಧ್ಯೆ ಪ್ರೀತಿ ಹುಟ್ಟೋ ಟೈಂನಲ್ಲಿ ಮತ್ತೆ ಬಿರುಕು ಮೂಡುತ್ತಾ? ಎಲ್ಲವನ್ನೂ ನೋಡಲು ಹಿಟ್ಲರ್ ಕಲ್ಯಾಣ ಸೀರಿಯಲ್ ನೋಡಬೇಕು.
    Published by:Savitha Savitha
    First published: