Hitler Kalyana: ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ AJ? ಅಯ್ಯೋ, ಇಬ್ಬರ ಮಧ್ಯೆ ಹೀಗೇಕಾಯ್ತು?

ಕೋಪಗೊಂಡಿರುವ ಎಜೆ, ಲೀಲಾಳನ್ನು ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗಾದ್ರೆ ಎಜೆ ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ? ಅಥವಾ ಎಚ್ಚರಿಕೆ ನೀಡಲು ಈ ರೀತಿ ಮಾಡ್ತಿದ್ದಾನಾ? ಯಾವ ತಿರುವು ಪಡೆದುಕೊಳ್ಳುತ್ತೆ? ಇಂದಿನ ಎಪಿಸೋಡ್‌ನಲ್ಲಿ ಏನಾಗಲಿದೆ?

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

  • Share this:
ಹಿಟ್ಲರ್ ಕಲ್ಯಾಣ (Hitler Kalyana), ಜೀ ಕನ್ನಡ (Zee Kannada)ದಲ್ಲಿ ಸೋಮವಾರ (Monday)ದಿಂದ ಶುಕ್ರವಾರ (Friday)ದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ  ಧಾರಾವಾಹಿ. ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎಜೆ ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ (Leela) ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ (AJ) ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರುಗೂ ಆಗಲ್ಲ. ಲೀಲಾಳನ್ನು ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸಹ ಸೃಷ್ಟಿಸುತ್ತಿದ್ದಾರೆ.

ಮನೆಯಲ್ಲಿ ತಮಾಷೆ ತಂದಿಟ್ಟು ನೋಡ್ತಿರೋ ದೇವ್
ದೇವ್. ಹಿಟ್ಲರ್ ಕಲ್ಯಾಣದಲ್ಲಿ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದಾರೆ. ಆದ್ರೆ ಕೆಟ್ಟ ಮನಸ್ಥಿತಿಯಲ್ಲಿ. ಎ.ಜೆ ಸೊಸೆಯ ಅಣ್ಣ. ತನ್ನ ಪತ್ನಿ ಪವಿತ್ರಾಳನ್ನು ಬಿಲ್ಡಿಂಗ್ ಮೇಲಿಂದ ತಳ್ಳಿ ಕೋಪ ಪರಿಸ್ಥಿತಿಗೆ ತಂದಿರುವ ಪಾಪಿ. ಈಗ ಎ.ಜೆ ಮನೆಯಲ್ಲಿ ಇರುವ ಪವಿತ್ರಾಳನ್ನು ನೋಡಿಕೊಳ್ಳುವ ನೆಪದಲ್ಲಿ ಅವರ ಮನೆಯಲ್ಲಿ ಜಗಳ ತರುತ್ತಿದ್ದಾನೆ. ತನ್ನ ಹೆಂಡತಿಗಾಗಿ ಕೈಯನ್ನು ಕುಯ್ದುಕೊಳ್ಳುವ ನಾಟಕವಾಡಿ, ಎ.ಜೆಗೆ ಹತ್ತಿರವಾಗಿದ್ದಾನೆ.

ದೇವ್ ಕೆನ್ನೆಗೆ ಹೊಡೆದ ಲೀಲಾ, ಮನೆಯಲ್ಲಿ ರಂಪಾಟ!
ದೇವ್‍ಗೆ ಮದುವೆಯಾಗಿ ಹೆಂಡತಿ ಇದ್ದರೂ, ಲೀಲಾ ತಂಗಿ ರೇವತಿಯನ್ನು ಪ್ರೀತಿಸುತ್ತಿದ್ದಾನೆ. ಅವಳನ್ನೇ ಮದುವೆಯಾಗಬೇಕೆಂದು ತನ್ನ ಪತ್ನಿಯನ್ನು ಕೊಲ್ಲಲು ಯತ್ನಿಸುತ್ತಿದ್ದಾನೆ. ಈ ವಿಷಯ ಲೀಲಾಗೆ ಗೊತ್ತಾಗಿದೆ. ಕಾರಣ ಲೀಲಾ ಬಳಿ ಬಂದು, ನಿನ್ನ ತಂಗಿಯನ್ನು ಬಿಟ್ಟು ಬಿಡುತ್ತೇನೆ. ನೀನು ನನ್ನ ಅಡ್ಜೆಸ್ಟ್ ಮಾಡಿಕೋ ಎಂದು ಲೀಲಾಳ ದುಪ್ಪಟ್ಟ ಎಳೆಯುತ್ತಾನೆ. ಅದಕ್ಕೆ ಲೀಲಾ, ಆತನ ಕೆನ್ನೆಗೆ ಬಾರಿಸುತ್ತಾಳೆ. ಇದನ್ನು ನೋಡಿದ ಎ.ಜೆ ಸೊಸೆ, ಅಂದ್ರೆ ಸರಸ್ವತಿ ಲೀಲಾ ಮೇಲೆ ಕೂಗಾಡುತ್ತಾಳೆ. ನಿನ್ನ ನಡತೆ ಸರಿ ಇಲ್ಲ ಎನ್ನುತ್ತಾಳೆ. ಕೋಪಗೊಂಡ ಲೀಲಾ ಸರು ಅನ್ನು ಹೊಡೆಯಲು ಕೈ ಎತ್ತುತ್ತಾಳೆ. ಅದಕ್ಕೆ ಕೋಪಗೊಂಡು ಮನೆ ಬಿಟ್ಟು ಹೋಗುವುದಾಗಿ ಹೇಳುತ್ತಾಳೆ.

ಇದನ್ನೂ ಓದಿ: Paaru Serial: ರೊಚ್ಚಿಗೆದ್ದ ಅಖಿಲಾಂಡೇಶ್ವರಿ, ಪಾರು-ಜನನಿ ಜೊತೆ ಅರುಂಧತಿ ಮನೆಗೆ ಎಂಟ್ರಿ! ಇವತ್ತು ರೋಚಕ ತಿರುವು

ಲೀಲಾಗೆ ಕಪಾಳಮೋಕ್ಷ ಮಾಡಿದ ಎ.ಜೆ
ಅಲ್ಲಿ ಏನೂ ನಡೆಯುತ್ತದೆ ಎಂದು ತಿಳಿಯದ ಎಜೆ, ತನ್ನ ಹಿರಿಯ ಸೊಸೆ ದುರ್ಗಾ ಮಾತು ಕೇಳಿ, ಲೀಲಾಗೆ ದೇವ್ ಮತ್ತು ಸರು ಬಳಿ ಕಾಲು ಹಿಡಿದು ಕ್ಷಮೆ ಕೇಳುವಂತೆ ಹೇಳುತ್ತಾನೆ. ಅದಕ್ಕೆ ಕೋಪಗೊಂಡ ಲೀಲಾ, ನೀವು ಸರಿಯಿಲ್ಲ, ಸೊಸೆಯಂದಿರೂ ಸರಿ ಇಲ್ಲ, ಈ ಮನೆಯೇ ಸರಿಯಿಲ್ಲ ಅನ್ನುತ್ತಾಳೆ. ಅದಕ್ಕೆ ಕೋಪಗೊಂಡ ಎ.ಜೆ ಅವಳ ಕನ್ನೆಗೆ ಹೊಡೆದು, ಅವಳನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಕೂರಿಸಿಕೊಂಡು ಹೋಗುತ್ತಾನೆ.

ಇವತ್ತು ಲೀಲಾಳನ್ನು ಬಿಲ್ಡಿಂಗ್ ಮೇಲಿಂದ ತಳ್ತಾನಾ ಎಜೆ?
ಕೋಪಗೊಂಡಿರುವ ಎ.ಜೆ ಲೀಲಾಳನ್ನು ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಕರೆದುಕೊಂಡು ಹೋಗುತ್ತಾನೆ. ನನ್ನ ಬಗ್ಗೆ ಮಾತನಾಡುತ್ತಿಯಾ, ನನ್ನ ಸೊಸೆಯರ ಬಗ್ಗೆ ಮಾತನಾಡುತ್ತಿಯಾ, ಮನೆ ಒಡೆಯುವ ಕೆಲಸ ಮಾಡುತ್ತಿದ್ದೀಯಾ ಎಂದು ಎ.ಜೆ ಕೋಪಗೊಂಡಿದ್ದಾನೆ. ಕಟ್ಟಡದ ಮೇಲೆ ಲೀಲಾಳಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ. ಅಲ್ಲದೇ ಕೆಳಗೆ ತೋರಿಸುತ್ತಿದ್ದಾನೆ.

ಇದನ್ನೂ ಓದಿ: Ramachari Serial: ಶೂ ಪಾಲೀಶ್ ಮಾಡ್ತಿದ್ದ ಚಾರು ವೈಲೆಂಟ್, ರೌಡಿಗಳಿಗೆಲ್ಲ ತಕ್ಕ ಪಾಠ ಕಲಿಸ್ತಾಳೆ ಇವತ್ತು!

ಹಾಗಾದ್ರೆ ಎ.ಜೆ, ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ. ಅಥವಾ ಎಚ್ಚರಿಕೆ ನೀಡಲು ಈ ರೀತಿ ಮಾಡ್ತಿದ್ದಾನಾ ಗೊತ್ತಿಲ್ಲ. ಎಲ್ಲವನ್ನು ನೋಡುಲು ಇವತ್ತು ಮಿಸ್ ಮಾಡ್ದೇ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು. ಇದು ಇನ್ನೂ ಯಾವ ತಿರುವು ಪಡೆದುಕೊಳ್ಳತ್ತದೋ ಅನ್ನೋ ಕುತೂಹಲ ಹೆಚ್ಚಿಸಿದೆ.
Published by:Savitha Savitha
First published: