Hitler Kalyana: ಎಲ್ಲಾ ಲೀಲಾ ಪ್ಲ್ಯಾನ್! ಮೂವರು ಸೊಸೆಯರ ಆಸೆ ಎಲ್ಲಾ ನಿರಾಸೆ!

ಅಲ್ಲದೇ ಇವರು ಮೂವರು ಬರುತ್ತಾರೆ ಎಂದು ಕೌಸಲ್ಯ ಮನೆ ಮುಂದೆ ದೊಡ್ಡ ರಂಗೋಲಿ ಹಾಕಿ, ಮೂವರ ಹೆಸರು ಬರೆದು, ಸ್ವಾಗತ ಎಂದು ಬರೆದಿದ್ದಾಳೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

  • Share this:
    ಹಿಟ್ಲರ್ ಕಲ್ಯಾಣ (Hitler Kalyana), ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ (AJ) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು (Leela) ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರುಗೂ ಆಗಲ್ಲ. ಲೀಲಾಳನ್ನು ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದಾರೆ. ಆದ್ರೆ ಲೀಲಾಳೇ ಸೊಸೆಯರಿಗೆ ಬುದ್ಧಿ ಕಲಿಸಲು ತನ್ನ ತವರು ಮನೆಗೆ ಕಳಿಸಿದ್ದಾಳೆ.

    ಮೂವರು ಸೊಸೆಯರಿಗೆ ಬ್ರೇಕ್ ಕೊಟ್ಟ ಎ.ಜೆ
    ಎ.ಜೆ ತನ್ನ ಮೂವರು ಸೊಸೆಯರಾದ ದುರ್ಗಾ, ಲಕ್ಷ್ಮಿ, ಸರಸ್ವತಿಯನ್ನು ಕರೆದು, ನೀವು ಸ್ಪಲ್ಪ ಬ್ರೇಕ್ ತಗೋಳಿ. ನಿಮ್ಮ ಮೂವರನ್ನು ಟ್ರಿಪ್ ಕಳಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಮೂವರು ಖುಷಿಯಿಂದ ತಮಗೆ ಬೇಕಾದ ಎಲ್ಲಾ ವಸ್ತಗಳನ್ನು ಪ್ಯಾಕ್ ಮಾಡಿಕೊಂಡಿದ್ದಾರೆ. ಎ.ಜೆ ನಮ್ಮನ್ನು ವಿದೇಶಕ್ಕೆ ಕಳಿಸಬಹುದು ಎಂದು ಆಸೆ ಇಟ್ಟುಕೊಂಡಿದ್ದಾರೆ.

    ಕೌಸಲ್ಯ ಮನೆ ಮುಂದೆ ಬಂದಿಳಿದ ತ್ರಿಮೂರ್ತಿಗಳು
    ಬೇರೆ ಬೇರೆ ದೇಶಕ್ಕೆ ಹೋಗಬಹುದು ಎಂದು ನೂರಾರು ಕನಸು ಹೊತ್ತು, ಕಣ್ಣಿಗೆ ಪಟ್ಟಿ ಕಟ್ಟಿಕೊಂಡು, ಬಂದಿಳಿದವರಿಗೆ ಶಾಕ್ ಆಗಿದೆ. ಅವರು ಬಂದಿರೋದು ಕೌಸಲ್ಯ ಮನೆಗೆ ಅಂದ್ರೆ, ಲೀಲಾಳ ತಾಯಿ ಮನೆಗೆ. ಅದನ್ನು ನೋಡಿ ಮೂವರು ಶಾಕ್ ಆಗಿದ್ದಾರೆ. ಅಲ್ಲದೇ ಇವರು ಮೂವರು ಬರುತ್ತಾರೆ ಎಂದು ಕೌಸಲ್ಯ ಮನೆ ಮುಂದೆ ದೊಡ್ಡ ರಂಗೋಲಿ ಹಾಕಿ, ಮೂವರ ಹೆಸರು ಬರೆದು, ಸ್ವಾಗತ ಎಂದು ಬರೆದಿದ್ದಾಳೆ.

    ಇದನ್ನೂ ಓದಿ: Kendasampige: ತಂದೆ ಪ್ರಾಣ ಉಳಿಸಿಕೊಳ್ಳಲು ಸುಮಿ ಪರದಾಟ, ದುಡ್ಡು ಕೊಟ್ಟು ತನ್ನ ಮಗನನ್ನು ಮದುವೆ ಮಾಡಿಕೋ ಎಂದ ವಿಜಯ!

    ಎಲ್ಲಾ ಲೀಲಾ ಪ್ಲ್ಯಾನ್!
    ಲೀಲಾ ಮತ್ತು ಅವರ ತಾಯಿ ಕೌಸಲ್ಯಾಗೆ ಈ ಮೂವರು ಸೊಸೆಯಂದಿರು ತುಂಬಾ ಅವಮಾನ ಮಾಡಿರುತ್ತಾರೆ. ಮಿಡಲ್ ಕ್ಲಾಸ್ ಜನ. ಬಿಕಾರಿಗಳು ಅಂತೆಲ್ಲಾ ಬೈದಿರುತ್ತಾರೆ. ಅದಕ್ಕೆ ದುರ್ಗಾ, ಲಕ್ಷ್ಮಿ, ಸರುಗೆ ಬುದ್ಧಿ ಕಲಿಸಲು ಲೀಲಾ ಈ ರೀತಿ ಮಾಡಿದ್ದಾಳೆ. ನಮಗೆ ಬೈಯ್ತಾರೆ. ನಮ್ಮ ಮನೆಯಲ್ಲಿ ಬುದ್ಧಿ ಕಲಿಯಲಿ. ಬುದ್ಧಿ ಕಲಿಸುವುದರಲ್ಲಿ ನಮ್ಮಮ್ಮ ಸೂಪರ್ ಎಂದು ಅವರ ಮನೆಗೆ ಕಳಿಸಿದ್ದಾಳೆ. ಇದಕ್ಕೆ ಎ.ಜೆಯನ್ನು ಲೀಲಾ ಒಪ್ಪಿಸಿದ್ದಾಳೆ.

    Zee Kannada serial, Hitler Kalyan serial today episode, Hitler Kalyan serial cast, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
    ದುರ್ಗಾ, ಸರು, ಲಕ್ಷ್ಮಿ


    ಸೇಡು ತೀರಿಸಿಕೊಳ್ಳಲು ಕೌಸಲ್ಯ ರೆಡಿಯಾಗಿದ್ದಾಳೆ
    ಕೌಸಲ್ಯಾಗೂ ಮೂವರ ಮೇಲೆ ತುಂಬ ಕೋಪ ಇದೆ. ಪ್ರತಿ ಬಾರಿ ಎ.ಜೆ ಮನೆಗೆ ಹೋದಾಗ ಅವಮಾನ ಮಾಡಿದ್ದಾರೆ. ಅದಕ್ಕೆ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾಳೆ. ಮೂವರಿಗೆ ಯಾವ ರೀತಿ ಪಾಠ ಹೇಳಿದ್ರೆ, ಕಲಿತಾರೆ ಎಂದು ಎಲ್ಲವನ್ನೂ ಸಿದ್ಧ ಮಾಡಿದ್ದಾಳೆ. ಮೂವರ ಕೈಯಲ್ಲಿ ಮನೆ ಕೆಲಸ ಮಾಡಿಸಲು ಪ್ಲ್ಯಾನ್ ಮಾಡಿದ್ದಾಳೆ. ಅಲ್ಲದೇ ಅದನ್ನು ಸ್ನೇಹಿತೆಯರ ಮುಂದೆ ಸಹ ಹೇಳಿದ್ದಾಳೆ.

    ಮೂವರು ಸೊಸೆಯರ ಆಸೆ ಎಲ್ಲಾ ನಿರಾಸೆ
    ದುರ್ಗಾ, ಲಕ್ಷ್ಮಿ, ಸರು ಎ.ಜೆ ನಮ್ಮನ್ನು ಬೇರೆ ಎಲ್ಲೋ ಕಳಿಸುತ್ತಾರೆ ಎಂದು ಸಂತೋಷವಾಗಿದ್ರೂ, ಆದ್ರೆ ಅವರ ಕನಸೆಲ್ಲಾ ನುಚ್ಚುನೂರಾಗಿದೆ. ನೋಡಿದ್ರೆ ಅವರಿಗೆ ಆಗದ ಅಂದ್ರೆ ಕೌಸಲ್ಯ ಮನೆಗೆ ಕಳಿಸಿರೋದು ಬೇಸರ ತಂದಿದೆ. ಎಲ್ಲರೂ ಆತಂಕಗೊಂಡಿದ್ದಾರೆ.

    ಇದನ್ನೂ ಓದಿ: Lakshana: ನಕ್ಷತ್ರಾಳನ್ನು ಕೊಲ್ಲಲು ಭೂಪತಿ ಮನೆಯಲ್ಲೇ ಮೌರ್ಯನಿಗೆ ಸಹಾಯ! ಕಾಣದ ಕೈ ಯಾರದ್ದು?

    ಕೌಸಲ್ಯ ಮನೆಯಲ್ಲಿ ದುರ್ಗಾ, ಲಕ್ಷ್ಮಿ, ಸರು ಯಾವ ರೀತಿ ಹೊಂದಾಣಿಕೆ ಮಾಡಿಕೊಂಡು ಹೋಗುತ್ತಾರೆ ಎಂದು ಕಾದು ನೋಡಬೇಕು. ಎಲ್ಲದಕ್ಕೂ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
    Published by:Savitha Savitha
    First published: