ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಹಿಟ್ಲರ್ ಕಲ್ಯಾಣ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಈಗ ಎಜೆ ತಾಳಿ ಕಿತ್ತು ಹೆಂಡ್ತಿ (Wife) ಅಲ್ಲ ಎಂದಿದ್ದಾಕ್ಕೆ ಲೀಲಾ ಮನೆ ಬಿಟ್ಟು ಹೋಗಿದ್ದಾಳೆ. ಅಪ್ಪ (Father) ಚಂದ್ರಶೇಖರ್ ಆಕೆಯನ್ನು ಹುಡುಕುತ್ತಿದ್ದಾರೆ.
ಎಜೆಯಿಂದ ಲೀಲಾಗೆ ಅವಮಾನ!
ಅಂತರ ವಿಷ್ಯವಾಗಿ ಲೀಲಾ ಎಜೆ ವಿರುದ್ಧ ದೂರು ನೀಡಿದ್ಲು. ಅದಕ್ಕೆ ಎಜೆ ಕೋರ್ಟ್ ಮೆಟ್ಟಿಲೇರುವಂತೆ ಆಗಿತ್ತು. ಆ ವಿಷ್ಯ ಎಜೆಗೆ ಗೊತ್ತಾಗಿ, ನನ್ನ ಭಾವನೆಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ಬಿಟ್ಟಿ ಎಂದು ಕೋಪ ಮಾಡಿಕೊಂಡಿದ್ದ. ತಾಳಿ ಕಿತ್ತುಕೊಂಡು ನೀನು ನನ್ನ ಹೆಂಡ್ತಿ ಅಲ್ಲ ಎಂದು ಹೇಳಿದ್ದಾನೆ. ಇದರಿಂದ ಲೀಲಾ ಮನಸ್ಸಿಗೆ ತುಂಬಾ ನೋವಾಗಿದೆ.
ಮನೆ ಬಿಟ್ಟು ಹೋದ ಲೀಲಾ
ಲೀಲಾ ಎಜೆ ಬಳಿ ಕ್ಷಮೆ ಕೇಳಿ, ಸೊಸೆಯಾಗಿರಲು ಬಯುಸುತ್ತಿದ್ದಳು. ಆದ್ರೆ ಅದನ್ನು ಎಜೆ ಒಪ್ಪಿಕೊಂಡಿಲ್ಲ. ನೀನು ನನ್ನ ಮುಂದೆ ಕಾಣಬೇಡ. ಪರಿಣಾಮ ಚೆನ್ನಾಗಿರಲ್ಲ. ನಾನು ಇದ್ದ ಕಡೆ ಇರಬೇಡ ಎಂದಿದ್ದಾನೆ. ಲೀಲಾಗೆ ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿತ್ತು. ಅದಕ್ಕೆ ನಾನು ಈ ಮನೆಯಲ್ಲಿದ್ರೆ, ಇವರಿಗೆಲ್ಲಾ ಸಮಸ್ಯೆ ಎಂದು ಮನೆ ಬಿಟ್ಟು ಹೋಗಿದ್ದಾಳೆ.
ಇದನ್ನೂ ಓದಿ: Rashmika Mandanna: ಕನ್ನಡಿಗರ ಮನಸ್ಸು ಬದಲಾಗಲ್ವಾ? ರಶ್ಮಿಕಾ ಮಂದಣ್ಣ ಮೇಲೆ ಕಮ್ಮಿಯಾಗಿಲ್ಲ ಕೋಪ!
ದೇವಸ್ಥಾನದಲ್ಲಿರುವ ಲೀಲಾ
ಮನೆ ಬಿಟ್ಟು ಬಂದಿರುವ ಲೀಲಾ ದೇವಸ್ಥಾನದಲ್ಲಿ ಇದ್ದಾಳೆ. ಲೀಲಾ ಅಳುವುದನ್ನು ನೋಡಿದ ಪೂಜಾರಿ ಲೀಲಾಳನ್ನು ಪ್ರಶ್ನೆ ಮಾಡಿದ್ದಾರೆ. ಯಾರಾದ್ರೂ ಕರೆದುಕೊಂಡು ಹೋಗಲು ಬರುತ್ತಾರಾ ಎಂದು, ಲೀಲಾ ಇಲ್ಲ ಎಂದಿದ್ದಾಳೆ. ಅದಕ್ಕೆ ಪೂಜಾರಿ ದೇವಸ್ಥಾನ ಬಾಗಿಲು ಹಾಕುವ ಸಮಯ ಬಂತು. ದಯವಿಟ್ಟು ಇಲ್ಲಿಂದ ಹೋಗಿ ಎಂದು ಹೇಳಿದ್ದಾನೆ. ಲೀಲಾ ದೇವಸ್ಥಾನದಿಂದ ಹೋಗಿದ್ದಾಳೆ. ಆದ್ರೆ ಮೋಬೈಲ್ ಅಲ್ಲೇ ಬಿಟ್ಟು ಹೋಗಿದ್ದಾಳೆ.
ಮಗಳನ್ನು ಹುಡುಕುತ್ತಿರುವ ಚಂದ್ರಶೇಖರ್
ಲೀಲಾ ಮನೆ ಬಿಟ್ಟು ಹೋಗಿರುವ ವಿಷ್ಯವನ್ನು ಎಜೆ ತಾಯಿ ಲೀಲಾ ಅಪ್ಪ ಚಂದ್ರಶೇಖರ್ ಗೆ ತಿಳಿಸಿದ್ದಾರೆ. ಅದಕ್ಕೆ ಬೇಜಾರು ಮಾಡಿಕೊಂಡು, ಅಳುತ್ತಾ ಚಂದ್ರಶೇಖರ್ ತನ್ನ ಮಗಳನ್ನು ಹುಡುಕುತ್ತಿದ್ದಾನೆ. ಆದ್ರೆ ಲೀಲಾ ಎಲ್ಲೂ ಸಿಗುತ್ತಿಲ್ಲ. ಕಂಡ ಕಂಡ ಜನ. ಕಂಡ ಕಂಡ ಅಂಗಡಿಯಲ್ಲಿ ಲೀಲಾ ಫೋಟೋ ತೋರಿಸಿ ಹುಡುಕುತ್ತಿದ್ದಾನೆ.
ಲೀಲಾ ಹೋಗಿದ್ದೇಲ್ಲಿಗೆ?
ಲೀಲಾಗೆ ದೇವಸ್ಥಾನದಲ್ಲೂ ಜಾಗ ಇಲ್ಲ ಎಂದು ಗೊತ್ತಾಗಿ ಅಲ್ಲಿಂದ ಹೋಗಿದ್ದಾಳೆ. ಆದ್ರೆ ಎಲ್ಲಿಗೆ ಹೋಗಿದ್ದಾಳೆ. ಸುರಕ್ಷಿತವಾಗಿದ್ದಾಳಾ? ಆಕೆಗೆ ಏನಾದ್ರೂ ಅನಾಹುತ ಆಯ್ತಾ ಎಂದು ಅಪ್ಪ ಚಂದ್ರಶೇಖರ್ ಗೋಳಾಡುತ್ತಿದ್ದಾನೆ. ಆದ್ರೆ ಲೀಲಾ ಮಾತ್ರ ಸಿಕ್ಕಿಲ್ಲ. ಮಗಳನ್ನು ಕಾಣದೇ ಕಂಗಾಲಾಗಿ ಹೋಗಿದ್ದಾರೆ.
ಇದನ್ನೂ ಓದಿ: Gattimela: ಆಸ್ತಿಯ ಹಕ್ಕು ಚಂದ್ರಕಲಾಗೆ ಕೊಟ್ಟ ವೇದಾಂತ್! ಮೋಸದ ಜಾಲ ಬಯಲಾಗೋದು ಯಾವಾಗ?
ಲೀಲಾ-ಎಜೆ ಮುನಿಸು ಬಗೆಹರಿಯಲ್ವಾ? ಮತ್ತೆ ಈ ಜೋಡಿ ಜೊತೆಯಾಗಲ್ವಾ? ಲೀಲಾ ಸಿಗ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ