Hitler Kalyana: ಲೀಲಾ ತಂಗಿಯನ್ನು ಕಿಡ್ನ್ಯಾಪ್ ಮಾಡಿ ಎ.ಜೆಗೆ ಸವಾಲ್ ಹಾಕಿದ ದೇವ್! ಮುಂದಿದೆ ಬಿಗ್ ಟ್ವಿಸ್ಟ್

ದೇವ್ ಎಜೆಗೆ ಕಾಲ್ ಮಾಡಿದ್ದಾನೆ. ನಾನು ರೇವತಿಯನ್ನು ಕಿಡ್ನ್ಯಾಪ್ ಮಾಡಿದ್ದೇನೆ. ಈಗಲೇ ನಮ್ಮಿಬ್ಬರ ಮದುವೆ ಆಗುತ್ತೆ. ಅದಕ್ಕೆ ನೀವು ಹೆಣ್ಣಿನ ಕಡೆಯವರಾಗಿ ಬನ್ನಿ. ಆದ್ರೆ ಈ ಮದುವೆ ನಿಲ್ಲಿಸಿ ಎಂದು ಸವಾಲ್ ಹಾಕಿದ್ದಾನೆ.

ಎ.ಜೆ-ದೇವ್

ಎ.ಜೆ-ದೇವ್

 • Share this:
  ಹಿಟ್ಲರ್ ಕಲ್ಯಾಣ (Hitler Kalyana), ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ, ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಎಜೆ ಕೊನೆ ಸೊಸೆ ಸರು ಅಣ್ಣ ದೇವ್. ಪವಿತ್ರಾ ಎಂಬಾ ಹುಡುಗಿಯನ್ನು ಮದುವೆ ಆಗಿ ಮೋಸ ಮಾಡಿದ್ದಾನೆ. ಈಗ ಲೀಲಾ ತಂಗಿ ರೇವತಿಯನ್ನು ಕಿಡ್ನ್ಯಾಪ್ (Kidnap) ಮಾಡಿ ಮದುವೆ (Marriage) ಆಗ್ತೀನಿ ಅಂತ ಎ.ಜೆಗೆ ಸವಾಲ್ (Challenge) ಹಾಕಿದ್ದಾನೆ.

  ಹೆಂಡತಿ ಪವಿತ್ರಾಗೆ ದೇವ್ ಮೋಸ

  ದೇವ್ ಈ ಧಾರಾವಾಹಿಯಲ್ಲಿ ಪೊಲೀಸ್ ಪಾತ್ರ ನಿರ್ವಹಿಸುತ್ತಿದ್ದು, ಪವಿತ್ರಾಳನ್ನು ಮದುವೆ ಆಗಿರುತ್ತಾನೆ. ಆದ್ರೆ ಇವನಿಗೆ ಹುಡುಗಿಯರ ಹುಚ್ಚು ಇರುತ್ತೆ. ಪ್ರೀತಿ ಹೆಸರಲ್ಲಿ ಹುಡುಗಿಯರಿಗೆ ಮೋಸ ಮಾಡುತ್ತಾನೆ. ಆ ವಿಷಯ ಪವಿತ್ರಾಗೆ ಗೊತ್ತಾಗಿ, ಎಜೆ ಬಳಿ ಹೇಳಲು ಹೊರಟಾಗ ಆಕೆಯನ್ನು ಬಿಲ್ಡಿಂಗ್ ಮೇಲಿಂದ ತಳ್ಳಿ ಇರುತ್ತಾನೆ. ಆಕೆ ಕೋಮಾಗೆ ಹೋಗಿರುತ್ತಾಳೆ. ಒಂದು ದಿನ ಎಚ್ಚರಗೊಂಡಾಗ ಎಲ್ಲ ಸತ್ಯವನ್ನು ಹೇಳುತ್ತಾಳೆ. ಎಜೆ ಆಗ ಸುಮ್ಮನೆ ಬಿಟ್ಟು ಕಳಿಸುತ್ತಾನೆ.

  ರೋಡ್ ನಲ್ಲಿ ಸಿಕ್ಕವರಿಂದ ದೇವ್‍ಗೆ ಧರ್ಮದೇಟು
  ಎಜೆ ಆ ಕ್ಷಣಕ್ಕೆ ಏನೂ ಶಿಕ್ಷೆ ನೀಡದೇ ಬಿಟ್ಟು ಕಳಿಸಿರುತ್ತಾರೆ. ಆದ್ರೆ ರೋಡ್‍ನಲ್ಲಿ ದೇವ್ ಯಾರ ಕಣ್ಣಿಗೆ ಬೀಳ್ತಾನೋ ಅವರು, ಅವನನ್ನು ಹೊಡೆಯುತ್ತಾರೆ. ಆಗ ದೇವ್‍ಗೆ ಇದು ಎಜೆ ಪ್ಲ್ಯಾನ್ ಎಂದು ಗೊತ್ತಾಗುತ್ತೆ. ಒದೆ ತಿಂದು ತಿಂದು ಸಾಕಾದ ದೇವ್, ಲೀಲಾ ತಂಗಿ ರೇವತಿಯನ್ನು ಕಿಡ್ನ್ಯಾಪ್ ಮಾಡಿದ್ದಾನೆ.

  ಇದನ್ನೂ ಓದಿ: Gattimela: ಕೆಡುಕು ಬಯಸುವ ಸುಹಾಸಿನಿಗೆ ಮತ್ತೊಬ್ಬ ಬಾಸ್! ಯಾರದು ಹೊಸ ಪರಿಚಯ?

  ರೇವತಿ ಕಿಡ್ನ್ಯಾಪ್ ಮಾಡಿದ ದೇವ್
  ಗಣೇಶ ಹಬ್ಬಕ್ಕೆ ಏನನ್ನೋ ತರಲು ಅಂಗಡಿಗೆ ಹೊರಟ ರೇವತಿಯನ್ನು ದೇವ್ ಕಿಡ್ನ್ಯಾಪ್ ಮಾಡಿಸಿದ್ದಾನೆ. ರೇವತಿ ಎಷ್ಟೇ ಕೇಳಿದ್ರೂ ಬಿಡುತ್ತಿಲ್ಲ. ಭಾವನಿಗೆ ಗೊತ್ತಾದ್ರೆ ನಿನ್ನ ಸುಮ್ಮನೇ ಬಿಡಲ್ಲ ದೇವ್. ನನ್ನ ಬಿಟ್ಟು ಬಿಡು ಎಂದು ರೇವತಿ ಕೇಳಿಕೊಳ್ಳುತ್ತಾಳೆ. ಎಷ್ಟೇ ಅಂದ್ರೂ ದೇವ್ ಬಿಡಲ್ಲ.

  Zee Kannada serial, Kannada serial, Hitler Kalyana serial today episode, Hitler Kalyana serial cast, Dev Kidnap Reavthi, ಹಿಟ್ಲರ್ ಕಲ್ಯಾಣ ಧಾರಾವಾಹಿ, ರೇವತಿಯನ್ನು ಕಿಡ್ನ್ಯಾಪ್ ಮಾಡಿ ಎ.ಜೆಗೆ ಸವಾಲ್ ಹಾಕಿದ ದೇವ್, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ರೇವತಿ


  ಎಜೆಗೆ ಕಾಲ್ ಮಾಡಿ ಸವಾಲ್ ಹಾಕಿದ ದೇವ್
  ಅಷ್ಟೇ ಅಲ್ಲದೇ ದೇವ್ ಎಜೆಗೆ ಕಾಲ್ ಮಾಡಿದ್ದಾನೆ. ನಾನು ರೇವತಿಯನ್ನು ಕಿಡ್ನ್ಯಾಪ್ ಮಾಡಿದ್ದೇನೆ. ಈಗಲೇ ನಮ್ಮಿಬ್ಬರ ಮದುವೆ ಆಗುತ್ತೆ. ಅದಕ್ಕೆ ನೀವು ಹೆಣ್ಣಿನ ಕಡೆಯವರಾಗಿ ಬನ್ನಿ. ಆದ್ರೆ ಈ ಮದುವೆ ನಿಲ್ಲಿಸಿ ಎಂದು ಸವಾಲ್ ಹಾಕಿದ್ದಾನೆ.

  ಇದನ್ನೂ ಓದಿ: Jote Joteyali: ಸಾಯಲು ಹೊರಟಿದ್ದಾನೆ ವಿಶ್ವಾಸ್ ದೇಸಾಯಿ, ಸಾವಿನ ದವಡೆಯಲ್ಲಿ ಸಿಲುಕಿದ್ದಾನೆ ಆರ್ಯವರ್ಧನ್!

  ದೇವ್ ಇರೋ ಜಾಗಕ್ಕೆ ಬಂದ ಎಜೆ
  ದೇವ್ ಕಾಲ್ ಅಷ್ಟು ಹೇಳಿದ್ದೇ ತಡ, ಹಬ್ಬದ ಸಂಭ್ರಮದಲ್ಲಿದ್ದ ಎಜೆ, ದೇವ್ ಇರೋ ಜಾಗಕ್ಕೆ ಹೋಗಿದ್ದಾನೆ. ಮೊದಲೇ ಕೋಪದಲ್ಲಿರುವ ಎಜೆ ದೇವ್‍ಗೆ ಒಂದು ಗತಿ ಕಾಣಿಸ್ತಾರಾ? ರೇವತಿಯನ್ನು ಆ ಕಷ್ಟದಿಂದ ಪಾರು ಮಾಡ್ತಾರಾ? ದೇವ್‍ನನ್ನು ಪೊಲೀಸರಿಗೆ ಒಪ್ಪಿಸ್ತಾರಾ? ಏನ್ ಮಾಡ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಎಲ್ಲದಕ್ಕೂ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
  Published by:Savitha Savitha
  First published: