Hitler Kalyana: ದೇವ್ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಪವಿತ್ರಾ! ಎಜೆ ಏನ್ ಶಿಕ್ಷೆ ಕೊಡ್ತಾರೆ ಈಗ?

ಎಜೆಗೆ ದೇವ್ ಮೇಲೆ ತುಂಬಾ ಕೋಪ ಬಂದಿದ್ದು, ಅವನಿಗೆ ಹೊಡೆದು ಬುದ್ಧಿ ಹೇಳಬಹುದು. ಇಲ್ಲವೇ ಪೊಲೀಸರನ್ನು ಕರೆಸಿ ಅವನನ್ನು ಅರೆಸ್ಟ್ ಮಾಡಿಸಬಹುದು. ಏನ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಇನ್ನೂ ಗೊತ್ತಾಗಿಲ್ಲ. ಎಜೆ ಏನ್ ಶಿಕ್ಷೆ ಕೊಡ್ತಾರೆ ಅಂತ ಎಲ್ಲರೂ ಕಾಯ್ತಾ ಇದ್ದಾರೆ.

ಎಜೆ-ದೇವ್‍

ಎಜೆ-ದೇವ್‍

 • Share this:
  ಹಿಟ್ಲರ್ ಕಲ್ಯಾಣ (Hitler Kalyana), ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎಜೆ ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ದೇವ್ ಈ ಧಾರಾವಾಹಿಯಲ್ಲಿ ಪೊಲೀಸ್ (Police) ಪಾತ್ರ ಮಾಡ್ತಿದ್ರೂ ವಿಲನ್ ರೋಲ್. ತನ್ನ ಹೆಂಡತಿ ಪವಿತ್ರಾಳನ್ನು ಬಿಲ್ಡಿಂಗ್ ಮೇಲಿಂದ ತಳ್ಳಿ ಕೋಮ ಸ್ಥಿತಿಗೆ ತಂದಿರುವ ಪಾಪಿ. ಒಳ್ಳೆಯವನಂತೆ ಎಜೆ ಮುಂದೆ ನಟಿಸುತ್ತಿದ್ದ ದೇವ್‍ನ (Dev) ಮೋಸವನ್ನು ಪವಿತ್ರಾ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.

  ಹೆಂಡತಿ ಬರ್ತ್ ಡೇ ದಿನ ದೇವ್ ಬಣ್ಣ ಬಯಲು
  ಕೋಮಗೆ ಹೋಗಿರೋ ಪವಿತ್ರ ಬರ್ತ್‍ಡೇಯನ್ನು ಎಜೆ ಮನೆಯವರು ಸಂಭ್ರಮದಿಂದ ಆಚರಿಸಬೇಕು ಎಂದು ಎಲ್ಲ ಸಿದ್ಧತೆ ಮಾಡಿರುತ್ತಾರೆ. ಅಂತೆಯೇ ಪವಿತ್ರಾ ಹುಟ್ಟುಹಬ್ಬ ಚೆನ್ನಾಗಿಯೇ ಆಗುತ್ತದೆ. ಸಂಭ್ರಮಾಚರಣೆ ಎಲ್ಲಾ ಮುಗಿದ ಮೇಲೆ ಲೀಲಾ, ನಾನು ಒಂದು ವಿಡಿಯೋ ಎಲ್ಲರಿಗೂ ತೋರಿಸಬೇಕು ಎಂದು ಟಿವಿಯಲ್ಲಿ ಹಾಕುತ್ತಾಳೆ. ಅದರಲ್ಲಿ ಎಜೆ, ಲೀಲಾಳನ್ನು ಬಿಲ್ಡಿಂಗ್ ಮೇಲಿಂದ ತಳ್ಳುತ್ತಿರು ದೃಶ್ಯ ಇತ್ತು. ಅದನ್ನು ನೋಡಿ ಪವಿತ್ರಾ ಮಾತನಾಡಿದ್ದಾಳೆ. ದೇವ್ ಮೋಸಗಾರ ಎಂದಿದ್ದಾಳೆ.

  ನನ್ನ ಪರಿಸ್ಥಿತಿಗೆ ದೇವ್ ಕಾರಣ ಎಂದ

  Zee Kannada serial, Hitler Kalyan serial today episode, Hitler Kalyan serial cast, Birthday party in Hitler Kalyan serial, Pavitra told all the truth, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಪವಿತ್ರಾ


  ಲೀಲಾ ಹಾಕಿದ ವಿಡಿಯೋ ನೋಡಿ ಪವಿತ್ರಾ ಗಾಬರಿಯಾಗಿ ದೇವ್ ಅನ್ನುತ್ತಾಳೆ. ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ರೆಡಿಯಾಗುತ್ತಾನೆ. ಆಗ ಪವಿತ್ರಾ ತಡೆದು. ನಾನು ಸತ್ಯ ಹೇಳಬೇಕು. ನಿಮ್ಮ, ಲೀಲಾ ಮದುವೆಯಾಗಲು ದೇವ್ ಕಾರಣ. ಅವನಿಗೆ ಬೇರೆ ಹುಡುಗಿಯರ ಜೊತೆ ಸಂಬಂಧ ಇದೆ. ನನ್ನ ಮದುವೆಯಾಗಿ ಮೋಸ ಮಾಡುತ್ತಿದ್ದಾರೆ. ನನ್ನ ಮೇಲಿಂದ ತಳ್ಳಿ ಬಿಟ್ಟ. ಮನೆಯಲ್ಲೂ ಎಷ್ಟೋ ಸಾರಿ ಸಾಯಿಸಲು ಯತ್ನಿಸಿದ್ದಾನೆ. ಅವರನ್ನು ಸುಮ್ಮನೇ ಬಿಡ ಬೇಡಿ ಎಜೆ ಎಂದು ಪವಿತ್ರಾ ಹೇಳಿದ್ದಾಳೆ.

  ಇದನ್ನೂ ಓದಿ: Kendasampige: ಕೆಂಡಸಂಪಿಗೆ ಪರಿಮಳ ಹರಡಲು ನಾಲ್ಕೇ ದಿನ ಬಾಕಿ! ಖಡಕ್ ಹೀರೋ ಇವರೇ!

  ದೇವ್‍ಗೆ ಏನ್ ಶಿಕ್ಷೆ ಕೊಡ್ತಾರೆ ಎಜೆ?
  ಎಜೆ ದೇವ್‍ನನ್ನು ಒಳ್ಳೆಯವನು ಎಂದುಕೊಂಡಿದ್ದನು. ಪವಿತ್ರಾಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ ಎಂದಕೊಂಡಿದ್ದ. ಈಗ ಪವಿತ್ರಾಳನ್ನೇ ಕೊಲ್ಲಲು ದೇವ್ ಮುಂದಾಗಿದ್ದ ಎಂದು ಗೊತ್ತಾಗಿದೆ. ಅಲ್ಲದೇ ದೇವ್ ಒಬ್ಬ ಮೋಸಗಾರ, ಹುಡುಗಿಯರಿಗೆ ವಂಚಿಸಿದ್ದಾನೆ ಎಂದು ಗೊತ್ತಾಗಿದೆ. ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಅಲ್ಲದೇ ರೇವತಿ ಸಹ ದೇವ್ ಕೆನ್ನೆಗೆ ಹೊಡೆದು, ನಿನ್ನ ನಾನು ಪ್ರೀತಿಸಿ ಬಿಟ್ಟೆ. ನನ್ನ ಅಕ್ಕನ ವಿರೋಧ ಕಟ್ಟಿಕೊಂಡೆ ಎಂದು ಅಳುತ್ತಾಳೆ. ಈಗ ದೇವ್‍ಗೆ ಎಜೆ ಏನ್ ಶಿಕ್ಷೆ ಕೊಡ್ತಾರೆ ಅಂತ ಕಾಯ್ತಾ ಇದ್ದಾರೆ.

  Zee Kannada serial, Hitler Kalyan serial today episode, Hitler Kalyan serial cast, Birthday party in Hitler Kalyan serial, Pavitra told all the truth, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಎಜೆ-ಲೀಲಾ


  ಕೋಪಗೊಂಡಿರುವ ಎಜೆ
  ಎಜೆಗೆ ದೇವ್ ಮೇಲೆ ತುಂಬಾ ಕೋಪ ಬಂದಿದ್ದು, ಅವನಿಗೆ ಹೊಡೆದು ಬುದ್ಧಿ ಹೇಳಬಹುದು. ಇಲ್ಲವೇ ಪೊಲೀಸರನ್ನು ಕರೆಸಿ ಅವನನ್ನು ಅರೆಸ್ಟ್ ಮಾಡಿಸಬಹುದು. ಏನ್ ನಿರ್ಧಾರ ತೆಗೆದುಕೊಳ್ಳುತ್ತಾರೆ ಅಂತ ಇನ್ನೂ ಗೊತ್ತಾಗಿಲ್ಲ. ಎಜೆ ಏನ್ ಶಿಕ್ಷೆ ಕೊಡ್ತಾರೆ ಅಂತ ಎಲ್ಲರೂ ಕಾಯ್ತಾ ಇದ್ದಾರೆ.

  ಲೀಲಾ ಬಳಿ ಕ್ಷಮೆ ಕೇಳುವಂತೆ ಸರುಗೆ ಹೇಳಿದ ಎಜೆ
  ಲೀಲಾ ತಂಗಿ ರೇವತಿ ದೇವ್ ಜೊತೆ ಓಡಿ ಹೋಗಿ ಮದುವೆ ಆಗಲು ರೆಡಿ ಆಗಿರುತ್ತಾಳೆ. ಆಗ ಲೀಲಾ ಅದನ್ನು ಮನೆಯಲ್ಲಿ ಹೇಳಿದ್ರೆ ಯಾರೂ ನಂಬುವುದಿಲ್ಲ. ಆಗ ತನ್ನ ಅಣ್ಣನ ಮೇಲೆ ಆರೋಪ ಮಾಡ್ತೀಯಾ ಅಂತ ಸರು, ಲೀಲಾಗೆ ಬೈದಿರುತ್ತಾಳೆ. ಈಗ ನಿಜ ಗೊತ್ತಾಗಿರೋ ಹಿನ್ನೆಲೆ, ಲೀಲಾ ಬಳಿ ಕ್ಷಮೆ ಕೇಳು ಎಂದು ಎಜೆ ಹೇಳ್ತಿದ್ದಾರೆ.

  ಇದನ್ನೂ ಓದಿ: Jote Joteyali: ಅನು ಅಮ್ಮನಾಗ್ತಿರೋ ವಿಷಯ ಆರ್ಯವರ್ಧನ್‍ಗೆ ಗೊತ್ತಾಯ್ತು! ಆಸ್ಪತ್ರೆಗೆ ಓಡೋಡಿ ಬಂದ ಆರ್ಯ

  ದೇವ್ ಗೆ ಏನ್ ಶಿಕ್ಷೆ ಕೊಡ್ತಾರೆ. ಲೀಲಾ ಬಳಿ ಸರು ಕ್ಷಮೆ ಕೇಳ್ತಾಳಾ? ಎಲ್ಲವನ್ನೂ ನೋಡಲು ಹಿಟ್ಲರ್ ಕಲ್ಯಾಣ ಸೀರಿಯಲ್ ನೋಡಬೇಕು.
  Published by:Savitha Savitha
  First published: