Hitler Kalyana: ಎಜೆಯಿಂದ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಲೀಲಾಗೆ ಅಪ್ಪನ ಫೋನ್ ಕಾಲ್ ಉರುಳಾಯ್ತೆ?

ಹೇಗೋ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಲೀಲಾಗೆ ಫೋನ್ ಕಾಲ್ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇನ್ನು ಇವತ್ತು ಎ.ಜೆ ಕೈಗೆ ಲೀಲಾ ಸಿಕ್ಕರೆ, ಬಿಲ್ಡಿಂಗ್ ಮೇಲಿಂದ ತಳ್ಳಿ ಬಿಡ್ತಾನಾ? ಇವತ್ತೇ ಲೀಲಾ ಕೊನೆ ದಿನಾನಾ? ಹೇಗೋ ಎಡವಟ್ಟು ಮಾಡ್ತಿದ್ರೂ ತುಂಬಾ ಒಳ್ಳೆಯ ಹುಡುಗಿ ಲೀಲಾ. ಎ.ಜೆ ಗೆ ಬುದ್ದಿ ಇಲ್ಲ ಅಂತ ಅಭಿಮಾನಿಗಳು ಕೋಪಗೊಂಡಿದ್ದಾರೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗಳಲ್ಲಿ ಹಿಟ್ಲರ್ ಕಲ್ಯಾಣವು  ((Hitler Kalyana),)ಒಂದು. ಬೇರೆ ಧಾರಾವಾಹಿ (Serial)ಗಳಿಗಿಂತ ವಿಭಿನ್ನವಾಗಿದ್ದು, ತನ್ನದೇ ಆದ ಅಭಿಮಾನಿಗಳ (Fans) ಬಳಗವನ್ನು ಹೊಂದಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 7 ಗಂಟೆಗೆ ಪ್ರಸಾರವಾಗುತ್ತೆ. ಮನೆಯಲ್ಲಿ ನಡೆದ ಗಲಾಟೆಯಿಂದ, ಕೋಪಗೊಂಡಿರುವ ಎ.ಜೆ ಲೀಲಾಳನ್ನು ನಿರ್ಮಾಣವಾಗುತ್ತಿರುವ ಕಟ್ಟಡ (Building)ಕ್ಕೆ ಕರೆದುಕೊಂಡು ಹೋಗುತ್ತಾನೆ. ನನ್ನ ಬಗ್ಗೆ ಮಾತನಾಡುತ್ತಿಯಾ, ನನ್ನ ಸೊಸೆಯರ ಬಗ್ಗೆ ಮಾತನಾಡುತ್ತಿಯಾ, ಮನೆ ಒಡೆಯುವ ಕೆಲಸ ಮಾಡುತ್ತಿದ್ದೀಯಾ ಎಂದು ಎ.ಜೆ ಕೋಪಗೊಂಡಿದ್ದಾನೆ. ಕಟ್ಟಡದ ಮೇಲೆ ಲೀಲಾಳಿಗೆ ಕ್ಲಾಸ್ (Class)ತೆಗೆದುಕೊಂಡಿದ್ದಾನೆ. ಅಲ್ಲದೇ ಕೆಳಗೆ ತೋರಿಸುತ್ತಿದ್ದಾನೆ. ಲೀಲಾಗೆ ಎಜೆ ತನ್ನನ್ನು ತಳ್ಳಿ ಬಿಡುತ್ತಾನೆ ಎಂಬ ಭಯ ಶುರುವಾಗಿದೆ.

  ತಲೆ ತಿರುಗಿ ಬಿದ್ದ ಲೀಲಾ

  ಎ.ಜೆ ಲೀಲಾಗೆ ಬಿಲ್ಡಿಂಗ್ ಮೇಲಿಂದ ಕೆಳಗೆ ತೋರಿಸಿದ್ದ ತಡ ಲೀಲಾ ತಲೆ ಸುತ್ತಿ ಬೀಳುತ್ತಾಳೆ. ಗಾಬರಿಗೊಂಡ ಎ.ಜೆ ಲೀಲಾಳಿಗೆ ನೀರು ತರಲು ಕೆಳಗೆ ಹೋಗುತ್ತಾನೆ. ಅಲ್ಲಿ ಮಡಿಕೆಯಲ್ಲಿದ್ದ ನೀರು ತಂದು ಲೀಲಾಗೆ ಕೊಡಲು ಹೋಗತ್ತಾನೆ. ಆದ್ರೆ ಲೀಲಾ ಅಲ್ಲಿ ಇರುವುದಿಲ್ಲ. ಎಜೆ ತನ್ನನ್ನು ಸಾಯಿಸಿ ಬಿಡುತ್ತನೆ ಎಂದು ಕೊಂಡ ಲೀಲಾ ತಪ್ಪಿಸಿಕೊಂಡ ಅಲ್ಲೇ ಅಡಗಿ ಕೂತಿರುತ್ತಾಳೆ.

  ಮತ್ತಷ್ಟು ಕೋಪಗೊಂಡಿರುವ ಎ.ಜೆ

  ಲೀಲಾ ಕಾಣಿಸಿದ್ದನ್ನು ಕಂಡು ಎ.ಜೆ ಗಾಬರಿ ಜೊತೆ ಮತ್ತಷ್ಟು ಕೋಪ ಮಾಡಿಕೊಂಡಿದ್ದಾನೆ. ಲೀಲಾಗಾಗಿ ಹುಡುಕಾಟ ನಡೆಸುತ್ತಿದ್ದಾನೆ. ಆದ್ರೆ ಲೀಲಾ ಮಾತ್ರ ಎ.ಜೆ ಕಣ್ಣ ಮುಂದೆ ಬರುತ್ತಿಲ್ಲ. ಎ.ಜೆ ತನ್ನನ್ನು ಸಾಯಿಸಿ ಬಿಡುತ್ತಾನೆ. ಮೇಲಿಂದ ತಳ್ಳಿ ಬಿಡುತ್ತಾನೆ ಎಂದು ಗಾಬರಿಗೊಂಡು ತನ್ನ ಅಪ್ಪನನ್ನು ನೆನೆಯುತ್ತಾಳೆ.

  ಅಪ್ಪ, ನನಗೆ ಸಾಯಲು ಇಷ್ಟ ಇಲ್ಲ. ನಿನ್ನ ನಾನು ಚೆನ್ನಾಗಿ ನೋಡಿಕೊಳ್ಳಬೇಕಿತ್ತು. ಚುಕ್ಕಿ ಮದುವೆ ಮಾಡಬೇಕಿತ್ತು. ಆದ್ರೆ ಎ.ಜೆ ನನ್ನ ಸುಮ್ಮನೆ ಬಿಡಲ್ಲ ಎಂದು ಅಳುತ್ತಾ ಅವಿತು ಕುಳಿತಿರುತ್ತಾಳೆ.

  ಇದನ್ನೂ ಓದಿ: Hitler Kalyana: ಲೀಲಾಳನ್ನು ಮೇಲಿಂದ ತಳ್ಳಿ ಬಿಡ್ತಾನಾ AJ? ಅಯ್ಯೋ, ಇಬ್ಬರ ಮಧ್ಯೆ ಹೀಗೇಕಾಯ್ತು? 

  ದೂರದಲ್ಲಿರುವ ಅಪ್ಪನಿಗೆ ಬಿಕ್ಕಳಿಕೆ

  ಲೀಲಾ ಮತ್ತು ಅವರ ತಂದೆ ನಡುವೆ ಹೆಚ್ಚಿನ ಬಾಂದವ್ಯ ಇದೆ. ಬಿಕ್ಕಳಿಕೆ ಬಂತು ಎಂದ್ರೆ ಮಗಳು ನೆನೆಸಿಕೊಳ್ಳುತ್ತಿದ್ದಾಳೆ ಎನ್ನುವುದು ಪಕ್ಕ. ನೀರು ಕುಡಿದರೂ ಬಿಕ್ಕಳಿಕೆ ಹೋಗದ ಕಾರಣ ಲೀಲಾಗೆ ಕಾಲ್ ಮಾಡಲು ಪೋನ್ ತೆಗೆಯುತ್ತಾರೆ.

  ಅಪ್ಪನ ಫೋನ್ ಕಾಲ್ ಲೀಲಾ ಬಾಳಿಗೆ ಉರುಳಾಗುತ್ತಾ?

  ಎ.ಜೆಯಿಂದ ತಪ್ಪಿಸಿಕೊಂಡು ಅಲ್ಲಿ, ಇಲ್ಲಿ ಕಾಣದಂತೆ ಲೀಲಾ ಕಣ್ಣೀರು ಹಾಕುತ್ತಾ ಕುಳಿತಿರುತ್ತಾಳೆ. ಅಷ್ಟರಲ್ಲಿ ಲೀಲಾ ತಂದೆ ಫೋನ್ ಮಾಡುತ್ತಾರೆ. ಕಣ್ಮರೆಸಿ ಕೂತಿದ್ದ ಲೀಲಾ ಫೋನ್ ರಿಂಗ್ ಆಗ ತೊಡಗುತ್ತೆ. ಆ ಸೌಂಡ್ ಎ.ಜೆಗೆ ಕೇಳಿಸಿ ಬಿಡುತ್ತೆ. ಅವಳು ಎಲ್ಲಿ ಕೂತಿದ್ದಾಳೆ ಎಂದು ಎ.ಜೆಗೆ ಗೊತ್ತಾಗುತ್ತೆ.

  ಇವತ್ತು ಲೀಲಾ ಕೊನೆ ದಿನನಾ?

  ಹೇಗೋ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದ ಲೀಲಾಗೆ ಫೋನ್ ಕಾಲ್ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಇನ್ನು ಇವತ್ತು ಎ.ಜೆ ಕೈಗೆ ಲೀಲಾ ಸಿಕ್ಕರೆ, ಬಿಲ್ಡಿಂಗ್ ಮೇಲಿಂದ ತಳ್ಳಿ ಬಿಡ್ತಾನಾ? ಇವತ್ತೇ ಲೀಲಾ ಕೊನೆ ದಿನಾನಾ? ಹೇಗೋ ಎಡವಟ್ಟು ಮಾಡ್ತಿದ್ರೂ ತುಂಬಾ ಒಳ್ಳೆಯ ಹುಡುಗಿ ಲೀಲಾ. ಎ.ಜೆ ಗೆ ಬುದ್ದಿ ಇಲ್ಲ ಅಂತ ಅಭಿಮಾನಿಗಳು ಕೋಪಗೊಂಡಿದ್ದಾರೆ.

  ಇದನ್ನೂ ಓದಿ: Olavina Nildana: ತಾರಿಣಿಯ ರೇಗಿಸಿದವರಿಗೆ ಸರಿಯಾಗಿ ಮಾಂಜಾ ನೀಡಿದ ಸಿದ್ಧಾಂತ್! ಮನದಲ್ಲಿ ಕುಚ್ ಕುಚ್

  ಲೀಲಾ  ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ  ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರುಗೂ ಆಗಲ್ಲ. ಲೀಲಾಳನ್ನು ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸನ್ನಿವೇಶಗಳನ್ನು ಸಹ ಸೃಷ್ಟಿಸುತ್ತಿದ್ದಾರೆ.

  ಇವತ್ತು ಏನಾಗುತ್ತೋ ಅಂತ ಕಾಯ್ತಾ ಇದ್ದಾರೆ. ಎಲ್ಲದಕ್ಕೂ ಇವತ್ತಿನ ಸಂಚಿಕೆ ನೋಡಬೇಕು.
  Published by:Savitha Savitha
  First published: