ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. (A.J) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಪರ್ಫೆಕ್ಟ್ (Perfect) ಅಂಡ್ ಸ್ಟ್ರಿಕ್ಟ್ ಆಗಿದ್ದ ಎಜೆ ಇದ್ದಕ್ಕಿದ್ದ ಹಾಗೇ ಬದಲಾಗಿದ್ದಾರೆ. ಅದಕ್ಕೆ ಲೀಲಾ ಕಾರಣ ಹುಡುಕುತ್ತಿದ್ದಾರೆ.
ಗೊಂಬೆ ಹಬ್ಬಕ್ಕೆ ಒಪ್ಪಿಕೊಂಡ ಎ.ಜೆ
ಎ.ಜೆ ಮನೆಯಲ್ಲಿ ದಸರಾ ಗೊಂಬೆ ಹಬ್ಬವನ್ನು ಆಚರಣೆ ಮಾಡುವುದಿಲ್ಲವಂತೆ. ಹಬ್ಬ ಆಚರಣೆ ಮಾಡೋಣ ಎಂದ ಲೀಲಾಗೆ ಎಜೆ ಬೈದು ಕಳಿಸಿರುತ್ತಾರೆ. ಅವರು ಏಕೆ ಬೈದ್ರು. ಈ ಮನೆಯಲ್ಲಿ ಹಬ್ಬ ಏಕೆ ಆಚರಣೆ ಮಾಡಲ್ಲ ಎಂದು ತಿಳಿದುಕೊಳ್ಳಲು ಲೀಲಾ ಒದ್ದಾಡುತ್ತಿದ್ದಾಳೆ. ಎಜೆ ಅವರ ತಾಯಿಗೆ ಕಾಲ್ ಮಾಡಿ ತಿಳಿದುಕೊಳ್ಳುವ ಯತ್ನ ಮಾಡುತ್ತಿದ್ದಾಳೆ.
ತನ್ನ ರೂಮ್ ನಲ್ಲಿ ಗೊಂಬೆ ಕೂರಿಸಿಕೊಂಡ ಸರು
ಎಜೆಯ ಕೊನೆ ಸೊಸೆ ಸರುಗೆ ಗೊಂಬೆ ಹಬ್ಬ ಅಂದ್ರೆ ಚಿಕ್ಕ ವಯಸ್ಸಿನಿಂದ ತುಂಬಾ ಇಷ್ಟ ಅಂತೆ. ಆದ್ರೆ ಎಜೆ ಮನೆಯಲ್ಲಿ ಹಬ್ಬ ಮಾಡಲ್ಲ ಎಂದು ಬೇಸರ ಮಾಡಿಕೊಂಡು, ತನ್ನ ರೂಮ್‍ನಲ್ಲಿ ಯಾರಿಗೂ ಕಾಣದಂತೆ ಗೊಂಬೆ ಇಟ್ಟುಕೊಂಡಿದ್ದಾಳೆ. ಅದನ್ನು ನೋಡಿದ ದುರ್ಗಾ ಮೊದಲು ಇದನ್ನೆಲ್ಲಾ ತೆಗೆ ಎಜೆ ನೋಡಿದ್ರೆ ಕೋಪ ಮಾಡಿಕೊಳ್ತಾರೆ ಅಂತ ಹೇಳ್ತಾಳೆ.
ಇದನ್ನೂ ಓದಿ: BBK Season 09: ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾದ ಗೊಬ್ಬರಗಾಲಾ-ಕಾವ್ಯಶ್ರೀ ಜಗಳ, ಮರ್ಯಾದೆ ಪ್ರಶ್ನೆ: ಕಣ್ಣೀರು ಹಾಕಿದ್ಯಾರು?
ಸಂಪೂರ್ಣ ಬದಲಾಗಿರುವ ಎಜೆ
ಎಜೆ ಮೊದಲಿನ ರೀತಿ ಸ್ಟ್ರಿಕ್ಟ್ ಇಲ್ಲ. ಮುಖ ಗಂಟು ಹಾಕಿಕೊಂಡು ಇರಲ್ಲ ಎಲ್ಲರ ಬಳಿ ನಗುತ್ತಾ ಮಾತನಾಡುತ್ತಾರೆ. ಲೀಲಾಳ ಬಳಿ ಏನೋ ಕೇಳಲು ಲೀಲಾಳನ್ನು ಹುಡುಕ್ತಾ ಇದ್ರಂತೆ. ಲೀಲಾ ಏನ್ ಎಜೆ ಎಂದು ಕೇಳಿದ್ದಕ್ಕೆ, ಎಜೆ ನನ್ನನ್ನು ನೋಡಿದ್ರೆ ನಿನಗೆ ಏನ್ ಅನ್ನಿಸುತ್ತೆ ಎಂದು ಕೇಳ್ತಾನೆ. ಅದಕ್ಕೆ ಲೀಲಾ ಎಜೆ ಅನ್ನಿಸುತ್ತೆ ಎನ್ನುತ್ತಾಳೆ. ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ರೆ ಏನ್ ಅನ್ನಿಸುತ್ತೆ ಎನ್ನುತ್ತಾನೆ. ಅದಕ್ಕೆ ಲೀಲಾ ನೀವು ತುಂಬಾ ಒಳ್ಳೆಯವರು. ಎಲ್ಲರಿಗೂ ಸಹಾಯ ಮಾಡ್ರೀರಿ. ನಿಮ್ಮದು ದಾರಳ ಮನಸ್ಸು ಎನ್ನಿಸುತ್ತೆ ಎನ್ನುತ್ತಾಳೆ.
ಅಂತರ ಬಂದಿದ್ದಾಳಂತೆ
ಎಜೆ ಮೊದಲನೇ ಹೆಂಡತಿ ಅಂತರ. ಅವಳು ಈಗ ಬದುಕಿಲ್ಲ. ಆದ್ರೆ ಎಜೆ ಖುಷಿಗೆ ಅವಳೇ ಕಾರಣವಂತೆ. ಎಜೆ ಲೀಲಾಳ ಬಳಿ ನನ್ನ ಖುಷಿಗೆ ಕಾರಣ ಕೇಳು ಎನ್ನುತ್ತಾನೆ. ಅದಕ್ಕೆ ಲೀಲಾ ನಿಮ್ಮ ಖುಷಿಗೆ ಏನು ಕಾರಣ ಎನ್ನುತ್ತಾಳೆ. ಆಗ ಎಜೆ ಲೀಲಾ, ಅಂತರ ಬಂದಿದ್ದಾಳೆ ಎಂದು ಹೇಳ್ತಾನೆ ಅದನ್ನು ಕೇಳಿ ಲೀಲಾ ಗಾಬರಿಯಾಗಿದ್ದಾಳೆ.
ಅಂತರ ಸಾವನ್ನಪ್ಪಿ ಹಲವು ವರ್ಷಗಳಾಗಿವೆ
ಎಜೆ ಮೊದಲನೇ ಪತ್ನಿ ಸಾವನ್ನಪ್ಪಿ ಹಲವು ವರ್ಷಗಳಾಗಿವೆ. ಆದರೆ ಈಗ ನೋಡಿದ್ರೆ ಎಜೆ ಅಂತರ ಬಂದಿದ್ದಾಳೆ ಎನ್ನುತ್ತಿದ್ದಾರೆ. ಅದನ್ನು ಕೇಳಿಸಿಕೊಂಡ ಲೀಲಾಗೆ ಶಾಕ್ ಆಗಿದೆ. ಇದೇನಿದು ಈ ರೀತಿ ಹೇಳ್ತಾ ಇದ್ದಾರೆ ಎಂದು ಕೊಳ್ತಿದ್ದಾಳೆ.
ಇದನ್ನೂ ಓದಿ: Kannadathi: ಸಾನಿಯಾಗೆ ಶೂಟ್ ಮಾಡಿದ್ನಾ ಹರ್ಷ? ಹಬ್ಬದ ದಿನ ಅಮ್ಮಮ್ಮನ ಮನೆಯಲ್ಲಿ ರಕ್ತದ ಕಲೆ!
ಎಜೆ ಖುಷಿಗೆ ಅಂತರ ಕಾರಣಾನಾ? ಅಥವ ಎಜೆ ಭ್ರಮೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಖುಷಿಯಾಗಿದ್ದಾನೆ. ಮುಂದೇನಾಗುತ್ತೆ ಅಂತ ನೋಡೋಕೆ ಹಿಟ್ಲರ್ ಕಲ್ಯಾಣ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ