ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ. ಹಿಟ್ಲರ್ ಕಲ್ಯಾಣ ಧಾರಾವಾಹಿ (Serial) ಬೇರೆ ಧಾರಾವಾಹಿಗಳಿಗಿಂತ ವಿಭಿನ್ನ ವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. ಅವರಿಗಾಗಿ ಅತ್ತೆ (Mother) ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾ ಳನ್ನು ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಅದರಲ್ಲೂ ಹಿರಿ ಸೊಸೆ ದುರ್ಗಾ ಪ್ಲ್ಯಾನ್ (Plan) ಮಾಡಿ ಲೀಲಾ ಮೇಲೆ ಸುಳ್ಳು ಆರೋಪ ಮಾಡಿದ್ದಾಳೆ. ಲೀಲಾ ಮತ್ತೆ ಎಜೆ (AJ) ಮನೆಗೆ ವಾಪಸ್ ಬಂದಿದ್ದಾಳೆ.
ಲೀಲಾಗೆ ಬೈದಿದ್ದ ಎಜೆ
ನನ್ನೊಳಗೆ ಬಚ್ಚಿಟ್ಟ ಅಂತರಾಳಾ ಭಾವನೆಗಳನ್ನು ಕೋರ್ಟ್ ವರೆಗೂ ತಂದು. ಪರ್ಫೆಕ್ಟ್ ಆಗಿದ್ದ ಎಜೆಯನ್ನು ಜೈಲಿನಲ್ಲಿ ಕೂರುವಂತೆ ಮಾಡಿದೆ ನೀನು. ತಪ್ಪು ಮಾಡಿದ ಮೇಲೆ ಶಿಕ್ಷೆ ಆಗಲೇ ಬೇಕು. ಎಲ್ಲರ ಎದುರಿಗೆ ಅಭಿರಾಮ್ ಜೈ ಶಂಕರ್ ಹೆಂಡ್ತಿ ಸ್ಥಾನವನ್ನು ಕಿತ್ತುಕೊಳ್ತಾ ಇದ್ದೇನೆ ಎಂದು ತಾಳಿ ಕಿತ್ತಿದ್ದ.
ಮನೆ ಬಿಟ್ಟು ಹೋಗಿದ್ದ ಲೀಲಾ
ಲೀಲಾ ಎಜೆ ಬಳಿ ಕ್ಷಮೆ ಕೇಳಿ, ಸೊಸೆಯಾಗಿರಲು ಬಯುಸುತ್ತಿದ್ದಳು. ಆದ್ರೆ ಅದನ್ನು ಎಜೆ ಒಪ್ಪಿಕೊಂಡಿಲ್ಲ. ನೀನು ನನ್ನ ಮುಂದೆ ಕಾಣಬೇಡ. ಪರಿಣಾಮ ಚೆನ್ನಾಗಿರಲ್ಲ. ನಾನು ಇದ್ದ ಕಡೆ ಇರಬೇಡ ಎಂದಿದ್ದಾನೆ. ಲೀಲಾಗೆ ಮುಂದೇನು ಮಾಡಬೇಕು ಎಂದು ದಿಕ್ಕೇ ತೋಚದಂತಾಗಿತ್ತು. ಅದಕ್ಕೆ ನಾನು ಈ ಮನೆಯಲ್ಲಿದ್ರೆ, ಇವರಿಗೆಲ್ಲಾ ಸಮಸ್ಯೆ ಎಂದು ಮನೆ ಬಿಟ್ಟು ಹೋಗಿದ್ದಳು.
ಎಲ್ಲಾ ದುರ್ಗಾ ಪ್ಲ್ಯಾನ್
ಲೀಲಾ ವಿರುದ್ಧ ಎಲ್ಲಾ ಪಿತೂರಿ ಮಾಡಿದ್ದು ದುರ್ಗಾ. ಎಜೆ ಸ್ನೇಹಿತ ವಿಕ್ರಂ ಮಾಡಿದ್ದು ಎಲ್ಲಾ ತಪ್ಪನ್ನು. ಲೀಲಾ ಮೇಲೆ ಹಾಕಿದ್ದಾಳೆ. ಎಜೆ ಬಳಿ ಲೀಲಾ ಮೇಲೆ ತಪ್ಪು ಭಾವನೆ ಮೂಡಿಸಿದ್ದಾಳೆ. ಅಂತರ ವಿಷ್ಯ ಮುಂದಿಟ್ಟುಕೊಂಡು ಎಜೆಗೆ ಇಲ್ಲ ಸಲ್ಲದ್ದನ್ನು ಹೇಳಿದ್ದಾಳೆ. ದುರ್ಗಾ ಪ್ಲ್ಯಾನ್ ಸಕ್ಸಸ್ ಆಗಿತ್ತು.
ಲೀಲಾ ಕರೆದುಕೊಂಡು ಬಂದ ಅಜ್ಜಿ
ಲೀಲಾ ತವರು ಮನೆಯಲ್ಲಿದ್ದಳು. ಅದಕ್ಕೆ ಎಜೆ ತಾಯಿ ಬಂದು, ಲೀಲಾಳ ಮನವೊಲಿಸಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಲೀಲಾ ಮೊದಲು ಬರಲ್ಲ. ಎಜೆಗೆ ನನ್ನ ಕಂಡ್ರೆ ಆಗಲ್ಲ ಎನ್ನುತ್ತಿದ್ದಳು. ಆದ್ರೂ ಅಜ್ಜಿ ಮತ್ತು ವಿಶ್ವರೂಪ ಸೇರಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದ್ರೆ ಈ ಬಾರಿ ಲೀಲಾ ರೌದ್ರಾವತಾರ ತಾಳಿ ಬಂದಿದ್ದಾಳೆ.
ಮೂವರು ಸೊಸೆಯರಿಗೆ ವಾರ್ನ್
ಮೂರು ಜನ ಮಳ್ಳಿಯರ ರೀತಿ ಇದ್ದಾರೆ. ಏನ್ ಮೂರು ಜನ ಗುರಾಯಿಸುತ್ತಿದ್ದೀರಿ. ಲುಕ್ ಚೇಂಜ್ ಮಾಡಿ, ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ಮೂರು ಜನದ ಉದ್ದೇಶ ನನ್ನ ಮನೆಯಿಂದ ಆಚೆ ಕಳಿಸುವುದು ತಾನೇ.
ನಿಮ್ಮ ಬ್ರೇನ್ ಯೂಸ್ ಮಾಡಿಕೊಂಡು, ಏನ್ ಮಾಡಿಕೊಳ್ತೀರೋ ಮಾಡಿಕೊಳ್ಳಿ. ಆದ್ರೆ ನನ್ನ ಮನೆಯಿಂದ ಆಚೆ ಕಳಿಸೋಕೆ ಏನಾದ್ರೂ ಮಾಡಿದ್ರೆ, ಬೆಚ್ಚಿ ಬೀಳೋ ತರ ಮಾಡ್ತೀನಿ ಎಂದು ಲೀಲಾ ಮೂವರು ಸೊಸೆಯರಿಗೆ ಎಚ್ಚರಿಕೆ ನೀಡಿದ್ದಾಳೆ.
ಇದನ್ನೂ ಓದಿ: Weekend With Ramesh: ಶುರುವಾಗಲಿದೆ ವೀಕೆಂಡ್ ವಿತ್ ರಮೇಶ್, ಮೊದಲ ಗೆಸ್ಟ್ ರಿಷಬ್ ಶೆಟ್ಟಿ?
ಲೀಲಾಳನ್ನು ಎಜೆ ಒಪ್ಪಿಕೊಳ್ತಾನಾ? ಲೀಲಾ ಹೊಸ ಅವತಾರ ಸೊಸೆಯಂದಿರು ಹೇಗೆ ಸ್ವೀಕರಿಸುತ್ತಾರೆ. ದುರ್ಗಾ, ಲಕ್ಷ್ಮಿ, ಸರಸ್ವತಿಗೆ ಕಾದಿದ್ಯಾ ಗ್ರಹಚಾರ? ಮುಂದೇನಾಗುತ್ತೆ ಅಂತ ನೋಡೋಕೆ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ