ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿ (Serial), ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಸೀರಿಯಲ್. ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. (AJ) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು (Leela) ಮದುವೆಯಾಗಿದ್ದಾರೆ. ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಲೀಲಾಳ ಯಾವುದೋ ಸತ್ಯ ಎಜೆ ಹಿರಿಯ ಸೊಸೆ ದುರ್ಗಾಗೆ ಗೊತ್ತಾಗಿದೆಯಂತೆ. ಎಜೆ ಮತ್ತು ಲೀಲಾ ಮಧ್ಯೆ ವೈಮನಸ್ಸು ತಂದಿಡಲು ಪ್ರಯತ್ನ ಮಾಡ್ತಾ ಇದ್ದಾಳೆ.
ಲೀಲಾಗೆ ಕಾಲ್ ಮಾಡ್ತಿರೋ ವಿಕ್ರಂ
ವಿಕ್ರಂ ಎಜೆ ಮೊದಲನೇ ಹೆಂಡತಿ ಅಂತರ ಅಣ್ಣ. ತನ್ನ ತಂಗಿ ಸಾವಿಗೆ ಎಜೆ ಕಾರಣ ಎಂದು ತಿಳಿದುಕೊಂಡಿದ್ದಾನೆ. ಅದಕ್ಕೆ ಎಜೆ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾನೆ. ಎಜೆ ವಿರುದ್ಧ ಸೇಡು ತೀರಿಸಿಕೊಳ್ಳಲು ಲೀಲಾ ಸಹಾಯ ಬೇಕೇ ಬೇಕು. ಅದಕ್ಕೆ ಲೀಲಾಳಗೆ ಎಜೆ ಬಗ್ಗೆ ಇಲ್ಲ ಸಲ್ಲದ್ದನ್ನು ಹೇಳಿದ್ದಾನೆ. ಮೊದಲು ಅದನ್ನು ನಂಬಿದ್ದ ಲೀಲಾ ಎಜೆ ಮೇಲೆ ತಪ್ಪು ತಿಳಿದುಕೊಂಡಿರುತ್ತಾಳೆ. ಆಮೇಲೆ ಎಜೆಯ ಕಾಳಜಿ ನೋಡಿ ಎಜೆ ತಪ್ಪಿಲ್ಲ ಎಂದು ಗೊತ್ತಾಗುತ್ತೆ.
ಲೀಲಾ ಬಳಿ ಮಾತನಾಡಬೇಕಂತೆ!
ವಿಕ್ರಂ ಮಾತನ್ನು ಲೀಲಾ ಕೇಳುತ್ತಿಲ್ಲ. ವಿಕ್ರಂಗೆ ಎಜೆ ಮೇಲೆ ಸೇಡು ತೀರಿಸಿಕೊಳ್ಳಲು ಲೀಲಾ ಸಹಾಯ ಬೇಕು. ಅದಕ್ಕೆ ಲೀಲಾ ಸಹಾಯ ಮಾಡಲ್ಲ ಅಂದ್ರೂ ಪದೇ ಪದೇ ಕಾಲ್ ಮಾಡ್ತಾ ಇದ್ದಾನೆ. ಹೇಗಾದ್ರೂ ಮಾಡಿ ಅವನ ಬಳಿ ಹೋಗಿ ನಾನು ನಿಮ್ಮ ಜೊತೆ ಮಾತನಾಡಲ್ಲ ಎಂದು ಹೇಳಲು ಹೋಗಿರುತ್ತಾಳೆ. ಇಬ್ಬರು ಮಾತನಾಡಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ.
ಇದನ್ನೂ ಓದಿ: BBK Season 09: ದಿವ್ಯಾ ಉರುಡುಗಗೆ ಇವರನ್ನು ನೋಡಿದ್ರೆ ನಗು ತಡೆದುಕೊಳ್ಳೋಕೆ ಆಗಲ್ವಂತೆ! ಯಾರವರು?
ಲೀಲಾಗೆ ಹೆಚ್ಚಿದ ಟೆನ್ಶನ್
ವಿಕ್ರಂ ಲೀಲಾಗೆ ಪದೇ ಪದೇ ಕಾಲ್ ಮಾಡ್ತಾ ಇದ್ದಾನೆ. ಅದು ಎಜೆ ಇರುವಾಗ್ಲೇ ಕಾಲ್ ಮಡ್ತಾನೆ. ಅದಕ್ಕೆ ಲೀಲಾ ಹೆಚ್ಚು ಟೆನ್ಶನ್ ಮಾಡಿಕೊಂಡಿದ್ದಾಳೆ. ಎಲ್ಲಿ ತಾನು ಮಾತನಾಡುವುದು ಎಜೆಗೆ ಗೊತ್ತಾಗುತ್ತೋ ಅಂತ ಗಾಬರಿಗೊಂಡಿದ್ದಾಳೆ. ಟೆನ್ಶನ್ ನಿಂದ ಮನೆಯೆಲ್ಲಾ ಓಡಾಡುತ್ತಿದ್ದಾಳೆ. ಆಗ ದುರ್ಗಾ ಅಡ್ಡ ಬಂದು ನಿಂತಿದ್ದಾಳೆ.
ದುರ್ಗಾಗೆ ಎಲ್ಲಾ ಸತ್ಯ ಗೊತ್ತಂತೆ.
ಲೀಲಾ ಗಾಬರಿಗೊಂಡು ತಿರುಗಾಡ್ತಾ ಇದ್ರೆ, ದುರ್ಗಾ ಅಡ್ಡ ಬಂದು ನಿಂತಿದ್ದಾಳೆ. ಯಾಕ್ ಲೀಲಾ ಈ ರೀತಿ ಓಡಾತ್ತಿದ್ದಿ. ಏನ್ ಆಗಿದೆ ಎಂದು ಕೇಳ್ತಾಳೆ. ಅದಕ್ಕೆ ಲೀಲಾ ಏನೂ ಆಗಿಲ್ಲ. ನನಗೆ ಏನ್ ಆಗಿದೆ ಅಂತಾಳೆ. ಅದಕ್ಕೆ ದುರ್ಗಾ ನಿನ್ನ ಎಲ್ಲಾ ಸತ್ಯ ನನಗೆ ಗೊತ್ತು ನನ್ನ ಮುಂದೆ ನಾಟಕವಾಡಬೇಡ ಎನ್ನುತ್ತಾಳೆ. ಹಾಗಾದ್ರೆ ವಿಕ್ರಂ ಬಳಿ ಮಾತನಾಡುತ್ತಿರುವುದನ್ನು ನೋಡಿರುವುದು ದುರ್ಗಾನಾ? ಅವಳೇ ವಿಡಿಯೋ ಮಾಡಿರಬಹುದು.
ಎಜೆ ಖುಷಿಯಲ್ಲಿದ್ದಾರೆ
ಎಜೆ ಮೊದಲನೇ ಹೆಂಡತಿ ಅಂತರ. ಅವಳು ಈಗ ಬದುಕಿಲ್ಲ. ಆದ್ರೆ ಎಜೆ ಖುಷಿಗೆ ಅವಳೇ ಕಾರಣವಂತೆ. ಎಜೆ ಎಜೆ ಲೀಲಾಳೆ ಬಳಿ ನನ್ನ ಖುಷಿಗೆ ಕಾರಣ ಕೇಳು ಎನ್ನುತ್ತಾನೆ. ಅದಕ್ಕೆ ಲೀಲಾ ನಿಮ್ಮ ಖುಷಿಗೆ ಏನು ಕಾರಣ ಎನ್ನುತ್ತಾಳೆ. ಆಗ ಎಜೆ ಲೀಲಾ, ಅಂತರ ಬಂದಿದ್ದಾಳೆ ಎಂದು ಹೇಳ್ತಾನೆ ಅದನ್ನು ಕೇಳಿ ಲೀಲಾ ಗಾಬರಿಯಾಗಿದ್ದಾಳೆ.
ಇದನ್ನೂ ಓದಿ: Actress Sara Annaiah: ಗೋಲ್ಡನ್ ಟೆಂಪಲ್ ಮುಂದೆ ವರೂಧಿನಿ, ಸಾರಾ ಅಣ್ಣಯ್ಯ ಸಿಂಪಲ್ ಲುಕ್ ಸೂಪರ್
ಎಜೆ ಮೊದಲನೇ ಪತ್ನಿ ಸಾವನ್ನಪ್ಪಿ ಹಲವು ವರ್ಷಗಳಾಗಿವೆ. ಆದರೆ ಈಗ ನೋಡಿದ್ರೆ ಎಜೆ ಅಂತರ ಬಂದಿದ್ದಾಳೆ ಎನ್ನುತ್ತಿದ್ದಾರೆ. ಅದನ್ನು ಕೇಳಿಸಿಕೊಂಡ ಲೀಲಾಗೆ ಶಾಕ್ ಆಗಿದೆ. ಇದೇನಿದು ಈ ರೀತಿ ಹೇಳ್ತಾ ಇದ್ದಾರೆ ಎಂದು ಕೊಳ್ತಿದ್ದಾಳೆ.
ಎಜೆಗೆ ಲೀಲಾಳ ಸತ್ಯ ತಿಳಿಯುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ