Hitler Kalyana: ಲೀಲಾ ತವರು ಮನೆಗೆ ಗಣೇಶ ಬರದಂತೆ ತಡೆ ಹಿಡಿದಿದ್ದಾಳೆ ಎ.ಜೆ ಸೊಸೆ ದುರ್ಗಾ, ಕೆಡುಕು ಕಾದಿದ್ಯಾ?

ಒಂದು ವರ್ಷ ಲೀಲಾ ಮನೆಯಲ್ಲಿ ಗಣೇಶನನ್ನು ಸರಿಯಾದ ಟೈಂಗೆ ತಂದಿರುವುದಿಲ್ಲ. ಅದಕ್ಕೆ ಲೀಲಾಗೆ ಜನ್ಮ ಕೊಟ್ಟ ತಾಯಿ ಸಾವನ್ನಪ್ಪಿದ್ದರು. ಆ ವಿಷ್ಯ ದುರ್ಗಾಗೆ ಗೊತ್ತಾಗಿದೆ. ನಮಗೆ ಕಾಟ ಕೊಟ್ಟ ಇವರ ಮನೆಗೆ ಗಣೇಶ ಸರಿಯಾದ ಸಮಯಕ್ಕೆ ಬರಬಾರದು ಎಂದು ಪ್ಲ್ಯಾನ್ ಮಾಡಿದ್ದಾಳೆ.

ಹಿಟ್ಲರ್ ಕಲ್ಯಾಣ

ಹಿಟ್ಲರ್ ಕಲ್ಯಾಣ

 • Share this:
  ಹಿಟ್ಲರ್ ಕಲ್ಯಾಣ (Hitler Kalyana) , ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ (A.J) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ (Leela) ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಲೀಲಾ ಸೊಸೆಯರಿಗೆ ಬುದ್ಧಿ ಕಲಿಸಲು ತನ್ನ ತವರು ಮನೆಗೆ ಕಳಿಸಿದ್ದಾಳೆ. ಲೀಲಾ ತವರು ಮನೆಗೆ ಸರಿಯಾದ ಟೈಂಗೆ ಗಣೇಶ  (Ganesh) ಬರದಂತೆ ಎ.ಜೆ ಹಿರಿಯ ಸೊಸೆ ದುರ್ಗಾ ಪ್ಲ್ಯಾನ್ (Plan) ಮಾಡಿದ್ದಾಳೆ.

  ಜಂಭದ ಕೋಳಿಗಳಿಗೆ ನರಕ ದರ್ಶನ
  ಲೀಲಾ ಮತ್ತು ಅವರ ತಾಯಿ ಕೌಸಲ್ಯಾಗೆ ಈ ಮೂವರು ಸೊಸೆಯಂದಿರು ತುಂಬಾ ಅವಮಾನ ಮಾಡಿರುತ್ತಾರೆ. ಮಿಡಲ್ ಕ್ಲಾಸ್ ಜನ. ಬಿಕಾರಿಗಳು ಅಂತೆಲ್ಲಾ ಬೈದಿರುತ್ತಾರೆ. ಅದಕ್ಕೆ ದುರ್ಗಾ, ಲಕ್ಷ್ಮಿ, ಸರುಗೆ ಬುದ್ಧಿ ಕಲಿಸಲು ಲೀಲಾ ಈ ರೀತಿ ಮಾಡಿದ್ದಾಳೆ. ನಮಗೆ ಬೈಯ್ತಾರೆ. ನಮ್ಮ ಮನೆಯಲ್ಲಿ ಬುದ್ಧಿ ಕಲಿಯಲಿ. ಬುದ್ಧಿ ಕಲಿಸುವುದರಲ್ಲಿ ನಮ್ಮಮ್ಮ ಸೂಪರ್ ಎಂದು ಅವರ ಮನೆಗೆ ಕಳಿಸಿದ್ದಾಳೆ. ಮನೆಗೆ ಬಂದಿರುವವರಿಗೆ ನರಕ ದರ್ಶನ ಮಾಡಿಸುತ್ತಿದ್ದಾಳೆ ಕೌಸಲ್ಯ.

  ಗೌರಿ ಹಬ್ಬಕ್ಕೆ ಮನೆ ಕ್ಲೀನ್ ಮಾಡಿಸಿಕೊಂಡ ಕೌಸಲ್ಯ
  ಮನೆಗೆ ಬಂದಿರುವ ಎ.ಜೆ ಸೊಸೆಯಂದಿರ ಬಳಿಯೇ ಕೌಸಲ್ಯ ಮನೆ ಕ್ಲೀನ್ ಮಾಡಿಸಿದ್ದಾಳೆ. ಒಬ್ಬಳು ಧೂಳು ತೆಗೆದ್ರೆ, ಇನ್ನೊಬ್ಬಳು ಪಾತ್ರೆ ತೊಳೆದಿದ್ದಾಳೆ. ಇನ್ನೊಬ್ಬಳು ನೆಲ ಒರೆಸುತ್ತಿದ್ದಾರೆ. ಅವರಿಗೆ ಹಳೆಯ ಸೀರೆಗಳನ್ನು ಕೊಟ್ಟಿದ್ದಾಳೆ. ಅಲ್ಲದೇ ಮಲಗಲು, ನೆಲದ ಮೇಲೆ ಹಾಸಿಕೊಳ್ಳಲು ಹಳೇ ಸೀರೆ, ಪಂಚೆ ಕೊಟ್ಟಿದ್ದಾಳೆ. ದುರ್ಗಾ, ಲಕ್ಷ್ಮಿ, ಸರು ಕೌಸಲ್ಯ ಮೇಲೆ ಉರಿ ಉರಿ ಕೋಪ ಬಂದಿದೆ. ಆದ್ರೆ ತೋರಿಸಿಕೊಳ್ಳಲು ಆಗ್ತಾ ಇಲ್ಲ. ಏಕಂದ್ರೆ ಎ.ಜೆ ಭಯ.

  ಇದನ್ನೂ ಓದಿ: Actress Malavika: ವಿಶೇಷಚೇತನ ಮಗನ ನೆನೆದು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್! ಡಿಕೆಡಿ, ಜೋಡಿ ನಂಬರ್ ವನ್ ಮಹಾಸಂಗಮದಲ್ಲಿ ಎಮೋಷನಲ್

  ಗೌರಿ ಹಬ್ಬಕ್ಕೆ ಮುತ್ತೈದೆಯರು ಬಾರದೇ ಊಟ ಮಾಡಂಗಿಲ್ಲ
  ಇನ್ನು ಕೌಸಲ್ಯ ತನ್ನ ಮನೆಯಲ್ಲಿ ಗೌರಿ ಹಬ್ಬವನ್ನು ಮಾಡುತ್ತಿದ್ದಾಳೆ. ಮುತ್ತೈದೆಯರು ಮನೆಗೆ ಬಂದು ಬಾಗಿನ ತೆಗೆದುಕೊಳ್ಳೋವರೆಗೂ, ಯಾರು ಊಟ ಮಾಡಂಗಿಲ್ಲ. ಈ ರೂಲ್ಸ್ ಎ.ಜೆ ಮೂವರು ಸೊಸೆಯರಿಗೂ ಅಪ್ಲೈ ಆಗುತ್ತೆ. ಮನೆಗೆ ಮುತ್ತೈದೆಯರು ಬಾರದೇ ಹೊಟ್ಟೆ ಹಸಿವಿನಿಂದ ಎ.ಜೆ ಸೊಸೆಯಂದಿರು ಒದ್ದಾಡಿ ಹೋಗಿದ್ದಾರೆ. ಹೇಗಾದ್ರೂ ಕೌಸಲ್ಯಗೆ ಬುದ್ಧಿ ಕಲಿಸಬೇಕು ಎಂದು ಕೊಂಡಿದ್ದಾರೆ.

  Zee Kannada serial, Hitler Kalyan serial today episode, Hitler Kalyan serial cast, Ganesh Festival in Hitler Kalyan serial, ಹಿಟ್ಲರ್ ಕಲ್ಯಾಣ ಧಾರಾವಾಹಿ, ಲೀಲಾ ತವರು ಮನೆಗೆ ಗಣೇಶ ಬರದಂತೆ ತಡೆ ,ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಹಿಟ್ಲರ್ ಕಲ್ಯಾಣ


  ಗಣೇಶ ಮೂರ್ತಿ ಸರಿಯಾದ ಸಮಯಕ್ಕೆ ತರದಂತೆ ಪ್ಲ್ಯಾನ್
  ಒಂದು ವರ್ಷ ಲೀಲಾ ಮನೆಯಲ್ಲಿ ಗಣೇಶನನ್ನು ಸರಿಯಾದ ಟೈಂಗೆ ತಂದಿರುವುದಿಲ್ಲ. ಅದಕ್ಕೆ ಲೀಲಾಗೆ ಜನ್ಮ ಕೊಟ್ಟ ತಾಯಿ ಸಾವನ್ನಪ್ಪಿದ್ದರು. ಗಣೇಶ ಮುಹೂರ್ತದೊಳಗೆ ಬರಲಿಲ್ಲ ಎಂದರೆ ಅವರ ಮನೆಗೆ ಕಂಟಕ. ಆ ವಿಷ್ಯ ದುರ್ಗಾಗೆ ಗೊತ್ತಾಗಿದೆ. ನಮಗೆ ಕಾಟ ಕೊಟ್ಟ ಇವರ ಮನೆಗೆ ಗಣೇಶ ಸರಿಯಾದ ಸಮಯಕ್ಕೆ ಬರಬಾರದು ಎಂದು ಪ್ಲ್ಯಾನ್ ಮಾಡಿದ್ದಾಳೆ.

  ಮೂರ್ತಿ ತರುಲು ಹೋದವರಿಗೆ ಕೆಲಸದ ಒತ್ತಡ
  ಕೌಸಲ್ಯ ಗಂಡ ಸರಿಯಾದ ಸಮಯಕ್ಕೆ ಗಣೇಶ ಮೂರ್ತಿ ತರುವುದಕ್ಕೆ ಮನೆಯಿಂದ ಹೊರಟಿದ್ದಾರೆ. ಅಷ್ಟರಲ್ಲಿ ದುರ್ಗಾ ಪ್ಲ್ಯಾನ್ ಪ್ರಕಾರ, ಅವರಿಗೆ ಕರೆ ಬರುತ್ತೆ. ನೀವು ಆಡಿಟ್ ಸರಿಯಾಗಿ ಮಾಡಿಲ್ಲ. ಲಕ್ಷ ಲಕ್ಷ ಟ್ಯಾಲಿ ಆಗುತ್ತಿಲ್ಲ. ಬೇಗ ಬನ್ನಿ ಎಂದು ಹೇಳುತ್ತಾರೆ. ಅದಕ್ಕೆ ಕೌಸಲ್ಯ ಪತಿ ಅಲ್ಲಿಗೆ ಹೊರಟಿದ್ದಾನೆ.

  ಇದನ್ನೂ ಓದಿ: Shiva Rajkumar: ಶಿವಣ್ಣನ ಮನೆಗೆ ಭೇಟಿ ನೀಡಿದ ನಟಿ ಜೆನಿಲಿಯಾ!

  ಹಾಗಾದ್ರೆ ಲೀಲಾ ತವರು ಮನೆಗೆ ಸರಿಯಾದ ಟೈಂಗೆ ಗಣೇಶ ಬರಲ್ವಾ? ಅವರ ಮನೆಗೆ ಕಂಟಕ ಕಾದಿದ್ಯಾ? ಇಲ್ಲ ಎಲ್ಲವನ್ನು ಲೀಲಾ ಸರಿ ಮಾಡ್ತಾಳಾ? ಎಲ್ಲ ಕುತೂಹಲ ಕಳೆಯಬೇಕು ಅಂದ್ರೆ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಿ.
  Published by:Savitha Savitha
  First published: