Hitler Kalyana: ಎಜೆ ಸೊಸೆಯಂದಿರಿಗೆ ಲೀಲಾ ತಾಯಿ ಕೌಸಲ್ಯ ನರಕ ದರ್ಶನ! ಎಂಥಾ ಶಿಕ್ಷೆ ಇದು

ಮನೆಗೆ ಬಂದಿರುವ ಎ.ಜೆ ಸೊಸೆಯಂದಿರ ಬಳಿಯೇ ಕೌಸಲ್ಯ ಮನೆ ಕ್ಲೀನ್ ಮಾಡಿಸಿದ್ದಾಳೆ. ಒಬ್ಬಳು ಧೂಳು ತೆಗೆದ್ರೆ, ಇನ್ನೊಬ್ಬಳು ಪಾತ್ರೆ ತೊಳೆದಿದ್ದಾಳೆ. ಇನ್ನೊಬ್ಬಳು ನೆಲ ಒರೆಸುತ್ತಿದ್ದಾಳೆ. ಅವರಿಗೆ ಹಳೆಯ ಸೀರೆಗಳನ್ನು ಕೊಟ್ಟಿದ್ದಾಳೆ. ಮಲಗಲು, ನೆಲದ ಮೇಲೆ ಹಾಸಿಕೊಳ್ಳಲು ಹಳೇ ಸೀರೆ, ಪಂಚೆ ಕೊಟ್ಟಿದ್ದಾಳೆ.

 ಹಿಟ್ಲರ್ ಕಲ್ಯಾಣ ಸೀರಿಯಲ್

ಹಿಟ್ಲರ್ ಕಲ್ಯಾಣ ಸೀರಿಯಲ್

 • Share this:
  Zeeಹಿಟ್ಲರ್ ಕಲ್ಯಾಣ (Hitler Kalyana), ಜೀ ಕನ್ನಡದಲ್ಲಿ (Zee Kannad) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಈ ಕಥೆ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ AJ) ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾಳನ್ನು ಮದುವೆಯಾಗಿದ್ದಾರೆ. ಲೀಲಾ (Leela) ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ (Work) ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಲೀಲಾಳನ್ನು ಹೇಗಾದ್ರೂ ಮನೆಯಿಂದ ಆಚೆ ಹಾಕಬೇಕು ಎಂದು ಕಾಯುತ್ತಿದ್ದಾರೆ. ಆದ್ರೆ ಲೀಲಾಳೇ ಸೊಸೆಯರಿಗೆ ಬುದ್ಧಿ ಕಲಿಸಲು ತನ್ನ ತವರು ಮನೆಗೆ ಕಳಿಸಿದ್ದಾಳೆ.

  ಮೂವರು ಸೊಸೆಯರನ್ನು ಕೌಸಲ್ಯ ಮನೆಗೆ ಕಳಿಸಿದ ಎ.ಜೆ
  ಎ.ಜೆ ತನ್ನ ಮೂವರು ಸೊಸೆಯರಾದ ದುರ್ಗಾ, ಲಕ್ಷ್ಮಿ, ಸರಸ್ವತಿಯನ್ನು ಕರೆದು, ನೀವು ಸ್ಪಲ್ಪ ಬ್ರೇಕ್ ತಗೊಳ್ಳಿ. ನಿಮ್ಮ ಮೂವರನ್ನು ಟ್ರಿಪ್ ಕಳಿಸುತ್ತಿದ್ದೇನೆ ಎಂದು ಹೇಳುತ್ತಾರೆ. ಮೂವರು ಖುಷಿಯಿಂದ ತಮಗೆ ಬೇಕಾದ ಎಲ್ಲಾ ವಸ್ತಗಳನ್ನು ಪ್ಯಾಕ್ ಮಾಡಿಕೊಂಡಿದ್ದಾರೆ. ಎ.ಜೆ ನಮ್ಮನ್ನು ವಿದೇಶಕ್ಕೆ ಕಳಿಸಬಹುದು ಎಂದು ಆಸೆ ಇಟ್ಟುಕೊಂಡಿರುತ್ತಾರೆ. ಆದ್ರೆ ಅವರನ್ನು ಎ.ಜೆ, ಲೀಲಾ ತಾಯಿ ಕೌಸಲ್ಯ ಮನೆಗೆ ಕಳಿಸಿದ್ದಾರೆ.

  Zee Kannada serial, Hitler Kalyana serial today episode, Hitler Kalyana serial cast, Big twist in episode, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಲಕ್ಷ್ಮಿ, ದುರ್ಗಾ, ಸರಸ್ವತಿ


  ಸೊಕ್ಕಿನ ರಾಣಿಯರಿಗೆ ನರಕ ದರ್ಶನ
  ಲೀಲಾ ಮತ್ತು ಅವರ ತಾಯಿ ಕೌಸಲ್ಯಾಗೆ ಈ ಮೂವರು ಸೊಸೆಯಂದಿರು ತುಂಬಾ ಅವಮಾನ ಮಾಡಿರುತ್ತಾರೆ. ಮಿಡಲ್ ಕ್ಲಾಸ್ ಜನ. ಬಿಕಾರಿಗಳು ಅಂತೆಲ್ಲಾ ಬೈದಿರುತ್ತಾರೆ. ಅದಕ್ಕೆ ದುರ್ಗಾ, ಲಕ್ಷ್ಮಿ, ಸರುಗೆ ಬುದ್ಧಿ ಕಲಿಸಲು ಲೀಲಾ ಈ ರೀತಿ ಮಾಡಿದ್ದಾಳೆ. ನಮಗೆ ಬೈಯ್ತಾರೆ. ನಮ್ಮ ಮನೆಯಲ್ಲಿ ಬುದ್ಧಿ ಕಲಿಯಲಿ. ಬುದ್ಧಿ ಕಲಿಸುವುದರಲ್ಲಿ ನಮ್ಮಮ್ಮ ಸೂಪರ್ ಎಂದು ಅವರ ಮನೆಗೆ ಕಳಿಸಿದ್ದಾಳೆ. ಮನೆಗೆ ಬಂದಿರುವವರಿಗೆ ನರಕ ದರ್ಶನ ಮಾಡಿಸುತ್ತಿದ್ದಾಳೆ.

  Zee Kannada serial, Hitler Kalyana serial today episode, Hitler Kalyana serial cast, Big twist in episode, ಹಿಟ್ಲರ್ ಕಲ್ಯಾಣ ಧಾರಾವಾಹಿ, ಜೀ ಕನ್ನಡ ಧಾರಾವಾಹಿಗಳು, Kannada news, Karnataka news,
  ಕೌಸಲ್ಯ


  ಗೌರಿ ಹಬ್ಬಕ್ಕೆ ಮನೆ ಕ್ಲೀನ್ ಮಾಡಿಸಿಕೊಂಡ ಕೌಸಲ್ಯ
  ಮನೆಗೆ ಬಂದಿರುವ ಎ.ಜೆ ಸೊಸೆಯಂದಿರ ಬಳಿಯೇ ಕೌಸಲ್ಯ ಮನೆ ಕ್ಲೀನ್ ಮಾಡಿಸಿದ್ದಾಳೆ. ಒಬ್ಬಳು ಧೂಳು ತೆಗೆದ್ರೆ, ಇನ್ನೊಬ್ಬಳು ಪಾತ್ರೆ ತೊಳೆದಿದ್ದಾಳೆ. ಇನ್ನೊಬ್ಬಳು ನೆಲ ಒರೆಸುತ್ತಿದ್ದಾರೆ. ಅವರಿಗೆ ಹಳೆಯ ಸೀರೆಗಳನ್ನು ಕೊಟ್ಟಿದ್ದಾಳೆ. ಅಲ್ಲದೇ ಮಲಗಲು, ನೆಲದ ಮೇಲೆ ಹಾಸಿಕೊಳ್ಳಲು ಹಳೇ ಸೀರೆ, ಪಂಚೆ ಕೊಟ್ಟಿದ್ದಾಳೆ. ದುರ್ಗಾ, ಲಕ್ಷ್ಮಿ, ಸರು ಕೌಸಲ್ಯ ಮೇಲೆ ಉರಿ ಉರಿ ಕೋಪ ಬಂದಿದೆ. ಆದ್ರೆ ತೋರಿಸಿಕೊಳ್ಳಲು ಆಗ್ತಾ ಇಲ್ಲ. ಏಕಂದ್ರೆ ಎ.ಜೆ ಭಯ.

  ಇದನ್ನೂ ಓದಿ: Vijay: ಹೊಸ ಮನೆ ಖರೀದಿಸಿದ್ದಾರಂತೆ ದಳಪತಿ ವಿಜಯ್​! ಈ ದುಡ್ಡಲ್ಲಿ ಬೆಂಗ್ಳೂರಲ್ಲಿ 5 ಮನೆ ಕಟ್ಬಹುದು

  ಮೂವರಿಗೆ ರೂಮ್ ಬಿಟ್ಟು ಕೊಟ್ಟ ರೇವತಿ
  ಮೂವರು ಸೊಸೆಯಂದಿರು ಕಷ್ಟ ಪಡುವುದನ್ನು ನೋಡಲಾಗದೇ ಲೀಲಾ ತಂಗಿ, ತನ್ನ ರೂಮ್ ಬಿಟ್ಟು ಕೊಟ್ಟಿದ್ದಾಳೆ. ಹಾಯಾಗಿ ಮಲಗೋಣ ಅಂತ ಎಲ್ಲಾ ಸಿದ್ಧರಾಗುತ್ತಿದ್ದಾರೆ. ಅಷ್ಟರಲ್ಲೇ ಕೌಸಲ್ಯ ಎಂಟ್ರಿ ಆಗುತ್ತೆ. ಅವಳು ಗೊತ್ತಲ್ಲ. ಮೊದಲೇ ಮಿಡಲ್ ಕ್ಲಾಸ್, ನಾವ್ ಮಾಸ್ ಎನ್ನುತ್ತಾ ಅವರಿಗೆ ಆಚೆ ಹೋಗಿ ಎನ್ನುತ್ತಿದ್ದಾಳೆ. ಮೂವರು ತೀವ್ರ ಬೇಸರ ಮಾಡಿಕೊಂಡಿದ್ದಾರೆ.

  ಇದನ್ನೂ ಓದಿ: Kendasampige: ಕೆಂಡಸಂಪಿಗೆಯ ನಟಿ ಸುಮನಾ ರಿಯಲ್ ತಮ್ಮನಿಂದ ಚಿನ್ನದ ಗಿಫ್ಟ್!

  ಮುಂದೆ ಏನಾಗುತ್ತೆ. ಇನ್ನೂ ಎಷ್ಟು ದಿನ ದುರ್ಗಾ, ಲಕ್ಷ್ಮಿ, ಸರು, ಕೌಸಲ್ಯ ಮನೆಯಲ್ಲಿ ಇರ್ತಾರೆ. ಕೌಸಲ್ಯ ಇನ್ನು ಯಾವ ವಿಧದ ಶಿಕ್ಷೆ ನೀಡ್ತಾಳೆ? ಇದಕ್ಕಿಂತ ದೊಡ್ಡ ನರಕ ಕಾದಿದ್ಯಾ ಮೂವರಿಗೆ? ಎಲ್ಲವನ್ನೂ ನೋಡಲು ಹಿಟ್ಲರ್ ಕಲ್ಯಾಣ ಸೀರಿಯಲ್ ನೋಡಬೇಕು.
  Published by:Savitha Savitha
  First published: