ಹಿಟ್ಲರ್ ಕಲ್ಯಾಣ (Hitler Kalyana) ಜೀ ಕನ್ನಡದಲ್ಲಿ (Zee Kannada) ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ (Serial). ಹಿಟ್ಲರ್ ಕಲ್ಯಾಣ ಧಾರಾವಾಹಿ ಬೇರೆ ಧಾರಾವಾಹಿಗಳಿಗಿಂತ ವಿಭಿನ್ನ ವಾಗಿದ್ದು ಜನಪ್ರಿಯತೆ ಗಳಿಸಿದೆ. ಈಗಾಗಲೇ ಮೂವರು ಸೊಸೆಯರನ್ನು ಹೊಂದಿರುವ ಎ.ಜೆ. ಅವರಿಗಾಗಿ ಅತ್ತೆ ಸ್ಥಾನ ತುಂಬಲು ಎಡವಟ್ಟು ರಾಣಿ ಲೀಲಾ ಳನ್ನು ಮದುವೆಯಾಗಿದ್ದಾರೆ (Marriage). ಲೀಲಾ ಪ್ರತಿದಿನವೂ ಏನಾದ್ರೂ ಒಂದು ಎಡವಟ್ಟು ಕೆಲಸ ಮಾಡಿ ಎ.ಜೆ ಕೈಯಲ್ಲಿ ಬೈಸಿಕೊಳ್ಳುತ್ತಾ ಇರುತ್ತಾಳೆ. ಇಬ್ಬರ ನಡುವೆ ವಯಸ್ಸಿನ ಅಂತರವೂ ಹೆಚ್ಚಿರುವುದರಿಂದ, ಹೊಂದಾಣಿಕೆ ಕಷ್ಟವಾಗುತ್ತಿದೆ. ಅಲ್ಲದೇ ಲೀಲಾ ಕಂಡರೆ ಮೂವರು ಸೊಸೆಯಂದಿರಿಗೂ ಆಗಲ್ಲ. ಅದರಲ್ಲೂ ಹಿರಿ ಸೊಸೆ ದುರ್ಗಾ ಪ್ಲ್ಯಾನ್ (Plan) ಮಾಡಿ ಲೀಲಾ ಮೇಲೆ ಸುಳ್ಳು ಆರೋಪ ಮಾಡಿದ್ದಾಳೆ.
ಎಜೆಗೆ ಪ್ರಪೋಸ್ ಮಾಡೋಕೆ ಲೀಲಾ ರೆಡಿ
ನೀವು ನನ್ನ ಹುಚ್ಚಿ ಎಂದುಕೊಂಡ್ರೂ ಪರವಾಗಿಲ್ಲ. ಹಾಗಾದ್ರೆ ಕನಸು ಕಾಣುವವರೆಲ್ಲಾ ಹುಚ್ಚರೇ. ಮಿತಿನೇ ಇಲ್ಲದೇ ಪ್ರೀತಿಸುವವರನ್ನು ನಾನು ನೋಡಿಯೇ ಇರಲಿಲ್ಲ. ನಿಮ್ಮ ಅಂತರ ಅಕ್ಕನ ಪ್ರೀತಿ ನೋಡಿ, ಈ ರೀತಿ ರಿಯಾಲಿಟಿಯಲ್ಲೂ ಸಾಧ್ಯನಾ ಅಂತ ಶಾಕ್ ಆಯ್ತು. ನಾನು ಅದೇ ರೀತಿ ಪ್ರೀತಿ ಮಾಡಬೇಕು ಎನ್ನಿಸಿತು. ಆ ಪ್ರೀತಿ ನನಗೆ ಸ್ಪೂರ್ತಿ ಆಯ್ತು ಎಂದು ಲೀಲಾ ಹೇಳಿದ್ದಾಳೆ.
ನೀವು ಯಾವಾಗಲು ನನ್ನ ಪರ
ಕೆಲವೊಂದು ಸಲ ನಮ್ಮ ಜೀವನದಲ್ಲಿ ಕಷ್ಟ ಬಂದಾಗ ಏನಪ್ಪಾ, ಇಂಥಾ ಬದುಕು ಬೇಕಾ ಎಂದು ನಾವು ಅಂದುಕೊಳ್ತೇವೆ. ಆ ರೀತಿಯ ಸಮಯದಲ್ಲಿ ನೀವು ನನ್ನ ಜೊತೆ ನಿಂತಿದ್ದೀರಿ. ತಪ್ಪು ಯಾರದೇ ಇರಲಿ, ನೀವು ನನ್ನ ಪರವಾಗಿ ನಿಂತಿದ್ದೀರಿ. ಆಗ ನನಗೆ ಜಗತ್ತಿನಲ್ಲಿ ನನ್ನಷ್ಟು ಸ್ಪೆಷಲ್ ವ್ಯಕ್ತಿ ಯಾರೂ ಇಲ್ಲ ಅನ್ನಿಸಿದೆ. ನೀವು ನನ್ನನ್ನು ನನಗಿಂತ ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಎಂದು ಲೀಲಾ ಹೇಳಿದ್ದಾಳೆ.
ಇದನ್ನೂ ಓದಿ: Gicchi Giligili Season 2: ಮುಂದಿನ ವಾರದಿಂದ ಗಿಚ್ಚಿ ಗಿಲಿಗಿಲಿ ಸೀಸನ್ 2, ಕಚಗುಳಿ ಇಡೋಕೆ ಬರ್ತಿದ್ದಾರೆ ಕಲಾವಿದರು!
Love You ಎಜೆ
ನನ್ನ ಆಸೆ, ಇಷ್ಟ, ಕಷ್ಟ ಕನಸು ಎಲ್ಲಾ ಸೇರಿದ್ರೂ ನಿಮಗಿಂತ ದೊಡ್ಡದಲ್ಲ. ನಿಮಕಿಂತ ದೊಡ್ಡದು ಯಾವುದು ಇಲ್ಲ. ನನಗೆ ನೀನೇ ಮುಖ್ಯ ಎಂದು ನಾನು ಅರ್ಥ ಮಾಡಿಕೊಂಡಿದ್ದೀನಿ. ನನ್ನ ಮನಸ್ಸಿನ ಮಾತನ್ನು ನೀವು ಹೇಳದೇನೇ ಅರ್ಥ ಮಾಡಿಕೊಂಡಿದ್ದೀರಿ. ನಾನು ಏನೂ ಕೇಳದೇ ನೀವು ನನಗೆ ಎಲ್ಲಾ ಕೊಟ್ಟಿದ್ದೀರಿ. ಪ್ರೀತಿ ಎಂದರೇನು ಎಂದು ಕಲಿಸಿ ಕೊಟ್ಟಿದ್ದೀರಿ. ನಾನು ನಿಮ್ಮನ್ನು ತುಂಬಾ ಪ್ರೀತಿ ಮಾಡ್ತಾ ಇದ್ದೇನೆ. ಈ ಲವ್ ಯು ಎಜೆ ಎಂದು ಹೇಳಿದ್ದಾಳೆ.
ತಾಳಿ ಕಿತ್ತು ಹಾಕಿದ ಎಜೆ
ನನ್ನೊಳಗೆ ಬಚ್ಚಿಟ್ಟ ಅಂತರಾಳಾ ಭಾವನೆಗಳನ್ನು ಕೋರ್ಟ್ ವರೆಗೂ ತಂದು. ಪರ್ಫೆಕ್ಟ್ ಆಗಿದ್ದ ಎಜೆಯನ್ನು ಜೈಲಿನಲ್ಲಿ ಕೂರುವಂತೆ ಮಾಡಿದೆ ನೀನು. ತಪ್ಪು ಮಾಡಿದ ಮೇಲೆ ಶಿಕ್ಷೆ ಆಗಲೇ ಬೇಕು. ಎಲ್ಲರ ಎದುರಿಗೆ ಅಭಿರಾಮ್ ಜೈ ಶಂಕರ್ ಹೆಂಡ್ತಿ ಸ್ಥಾನವನ್ನು ಕಿತ್ತುಕೊಳ್ತಾ ಇದ್ದೇನೆ ಎಂದು ತಾಳಿ ಕಿತ್ತಿದ್ದಾನೆ. ಎಲ್ಲರೂ ಶಾಕ್ ಆಗಿದ್ದಾರೆ.
ಎಲ್ಲಾ ದುರ್ಗಾ ಪ್ಲ್ಯಾನ್
ಇದಲ್ಲೆದರ ಹಿಂದೆ ದುರ್ಗಾ ಪಾತ್ರ ಇದೆ. ಎಜೆ ಸ್ನೇಹಿತ ವಿಕ್ರಂ ಮಾಡಿದ್ದು ಎಲ್ಲಾ ತಪ್ಪನ್ನು. ಲೀಲಾ ಮೇಲೆ ಹಾಕಿದ್ದಾಳೆ. ಎಜೆ ಬಳಿ ಲೀಲಾ ಮೇಲೆ ತಪ್ಪು ಭಾವನೆ ಮೂಡಿಸಿದ್ದಾಳೆ. ಅಂತರ ವಿಷ್ಯ ಮುಂದಿಟ್ಟುಕೊಂಡು ಎಜೆಗೆ ಇಲ್ಲ ಸಲ್ಲದ್ದನ್ನು ಹೇಳಿದ್ದಾಳೆ. ದುರ್ಗಾ ಪ್ಲ್ಯಾನ್ ಸಕ್ಸಸ್ ಆಗಿದೆ. ಎಜೆ ಲೀಲಾಳನ್ನು ಮನೆ ಬಿಟ್ಟು ಕಳಿಸುತ್ತಿದ್ದಾನೆ.
ಇದನ್ನೂ ಓದಿ: Roopesh Shetty-Rishab Shetty: ರಿಷಬ್ ಶೆಟ್ಟಿ ಜೊತೆ ಸಿನಿಮಾ, ರೂಪೇಶ್ ಶೆಟ್ಟಿ ಹೇಳಿದ್ದೇನು?
ಎಜೆಗೆ ಲೀಲಾ ತಪ್ಪಿಲ್ಲ ಎಂದು ಗೊತ್ತಾಗುತ್ತಾ? ಲೀಲಾ ಪ್ರೀತಿಯನ್ನು ಒಪ್ಪಿಕೊಳ್ತಾನಾ? ಇದೆಲ್ಲವನ್ನೂ ಸರಿ ಮಾಡೋದು ಯಾರು? ಮುಂದೇನಾಗುತ್ತೆ ಅಂತ ನೋಡೋಕೆ ಹಿಟ್ಲರ್ ಕಲ್ಯಾಣ ಧಾರಾವಾಹಿ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ