• Home
 • »
 • News
 • »
 • entertainment
 • »
 • Gattimela: ತಮ್ಮನನ್ನು ಕಾಪಾಡೋಕೆ ಟೈಟ್ ಸೆಕ್ಯೂರಿಟಿ! ವೇದಾಂತ ತಮ್ಮ ದ್ರುವನಿಗೆ ಪ್ರಾಣಾಪಾಯ

Gattimela: ತಮ್ಮನನ್ನು ಕಾಪಾಡೋಕೆ ಟೈಟ್ ಸೆಕ್ಯೂರಿಟಿ! ವೇದಾಂತ ತಮ್ಮ ದ್ರುವನಿಗೆ ಪ್ರಾಣಾಪಾಯ

ವೇದಾಂತ್ - ಧ್ರುವ

ವೇದಾಂತ್ - ಧ್ರುವ

ಧ್ರುವನನ್ನು ವೈಜಯಂತಿ ಅಜ್ಜಿ ಸುವರ್ಣಾಭಿಷೇಕಕ್ಕೆ ದೇವಸ್ಥಾನಕ್ಕೆ ಕರೆದುಕೊಂಡು ಹೋದ್ರೆ ಅಪಾಯ ಆಗಬಹುದು ಎಂದು ವೇದಾಂತ್ ಗೆ ಅನುಮಾನ ಶುರುವಾಗಿದೆ. ಧ್ರುವನ ಮೇಲೆ ಅಟ್ಯಾಕ್ ಆಗುತ್ತೆ ಎಂದು ಅನ್ನಿಸುತ್ತಿದೆ.

 • News18 Kannada
 • Last Updated :
 • Karnataka, India
 • Share this:

  ಗಟ್ಟಿಮೇಳ (Gattimela), ಜೀ ಕನ್ನಡ  (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ಅವರು ನಿಜವಾದ ಅಮ್ಮನನ್ನು (Mother) ಹುಡುಕುವಾಗ ಚಂದ್ರಕಲಾ ಎಂದ ಹೆಂಗಸು ವೈದೇಹಿ ಎಂದು ಹೇಳಿಕೊಂಡು ಬಂದಿದ್ದಾಳೆ. ಅವಳು ವಿಲನ್ ಅಗ್ನಿಗೆ (Agni) ಎಲ್ಲಾ ಮಾಹಿತಿ ನೀಡುತ್ತಿದ್ದಾಳೆ.


  ವೈಜಯಂತಿ ಅಜ್ಜಿ ಸುವರ್ಣಾಭಿಷೇಕ
  ಈ ಧಾರಾವಾಹಿಯಲ್ಲಿ ವೇದಾಂತ್ ಅಜ್ಜಿ ವೈಜಯಂತಿ. ಅವರ ಹುಟ್ಟುಹಬ್ಬ ಇದ್ದು, ಮನೆಯವರೆಲ್ಲಾ ದೇವಸ್ಥಾನದಲ್ಲಿ ಸುವರ್ಣಾಭಿಷೇಕ ಅಭಿಷೇಕ ಮಾಡಿಸಬೇಕು ಎಂದುಕೊಂಡಿದ್ದಾರೆ. ಅದಕ್ಕೆ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ. ಮನೆಯರು ಮಾತ್ರ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಅದಕ್ಕೆ ಧ್ರುವನನ್ನು ಕರೆದುಕೊಂಡು ಹೋಗಲು ತಯಾರಾಗಿದ್ದಾರೆ.


  ಅಗ್ನಿಗೆ ಸುದ್ದಿ ಮುಟ್ಟಿಸಿದ ಚಂದ್ರಕಲಾ
  ವೇದಾಂತ್ ಅವರು ತಮ್ಮ ಹೆತ್ತತಾಯಿಯನ್ನು ಹುಡುಕುವಾಗ ವೈದೇಹಿ ಹೆಸರು ಹೇಳಿಕೊಂಡು ಚಂದ್ರಕಲಾ ಎಂಬ ಹೆಂಗಸು ಬಂದಿದ್ದಾಳೆ. ಆಕೆಯೂ ಅಗ್ನಿ ಕಡೆಯವಳು. ವೇದಾಂತ್ ಮನೆಯ ಪ್ರತಿಯೊಂದು ವಿಚಾರವನ್ನು ಚಂದ್ರಕಲಾ ಅಗ್ನಿ ಮುಟ್ಟಿಸುತ್ತಾಳೆ. ಅದೇ ರೀತಿ ದೇವಸ್ಥಾನ ಪೂಜೆಯ ಬಗ್ಗೆಯೂ ಮಾಹಿತಿ ನೀಡಿದ್ದಾಳೆ.


  ಇದನ್ನೂ ಓದಿ: Bhagya Lakshami: ವೈಷ್ಣವ್‍ಗೆ ಲಕ್ಷ್ಮಿ ಜೋಡಿ ಆಗ್ತಾಳಾ? ಕಾವೇರಿ ಮುಂದೆ ಮದುವೆ ಪ್ರಸ್ತಾಪ


  ಧ್ರುವನನ್ನು ಕೊಲ್ಲಲು ಸ್ಕೆಚ್
  ಧ್ರುವನಿಗೆ ತಮ್ಮ ನಿಜವಾದ ಅಮ್ಮ ಯಾರು ಎಂಬ ವಿಷ್ಯ ಗೊತ್ತು. ಅದಕ್ಕೆ ಅವನಿಗೆ ಅಪಘಾತ ಮಾಡಿಸಿರುತ್ತಾರೆ. ಅಂದು ಮನೆಯಿಂದ ಆಚೆ ಹೋದ ಧ್ರುವ ಮತ್ತೆ, ಹೋಗೇ ಇಲ್ಲ. ಈಗ ವೈಜಯಂತಿ ಅಜ್ಜಿ ಸುವರ್ಣಾಭಿಷೇಕಕ್ಕೆ ದೇವಸ್ಥಾನಕ್ಕೆ ಧ್ರುವ ಬರುತ್ತಾನೆ ಎಂಬ ಮಾಹಿತಿ ಗೊತ್ತಾಗಿದೆ.


  ಅದಕ್ಕೆ ಅಗ್ನಿ ಅವನ್ನು ಹೇಗಾದ್ರೂ ಮಾಡಿ ಈ ಬಾರಿ ಕೊಲ್ಲಲೇ ಬೇಕು ಎಂದು ಸ್ಕೆಚ್ ಹಾಕ್ತಾ ಇದ್ದಾನೆ. ಅಲ್ಲದೇ ಯಾವ ದೇವಸ್ಥಾನ, ಏನು ಎಂದು ಎಲ್ಲ ಮಾಹಿತಿ ಕೊಡು ಎಂದು ಚಂದ್ರಕಲಾಗೆ ಹೇಳಿದ್ದಾನೆ. ಅವನು ಓಕೆ ಎಂದಿದ್ದಾನೆ.


  Zee Kannada Gattimela serial watch today episode Vedanta plan to save his brother in temple
  ಅಗ್ನಿ


  ವೇದಾಂತ್ ಗೆ ಅನುಮಾನ
  ಧ್ರುವನನ್ನು ವೈಜಯಂತಿ ಅಜ್ಜಿ ಸುವರ್ಣಾಭಿಷೇಕಕ್ಕೆ ದೇವಸ್ಥಾನಕ್ಕೆ ಕರೆದುಕೊಂಡು ಹೋದ್ರೆ ಅಪಾಯ ಆಗಬಹುದು ಎಂದು ವೇದಾಂತ್ ಗೆ ಅನುಮಾನ ಶುರುವಾಗಿದೆ. ಧ್ರುವನ ಮೇಲೆ ಅಟ್ಯಾಕ್ ಆಗುತ್ತೆ ಎಂದು ಅನ್ನಿಸುತ್ತಿದೆ. ಹೇಗಾದ್ರೂ ಧ್ರುವನನ್ನು ಕಾಪಾಡಬೇಕು ಎಂದು ಪ್ಯ್ಲಾನ್ ಮಾಡುತ್ತಿದ್ದಾನೆ.


  Zee Kannada Gattimela serial watch today episode Vedanta plan to save his brother in temple
  ಚಂದ್ರಕಲಾ


  ದೇವಸ್ಥಾನಕ್ಕೆ ಟೈಟ್ ಸೆಕ್ಯೂರಿಟಿ
  ವೈಜಯಂತಿ ಅಜ್ಜಿ ಸುವರ್ಣಾಭಿಷೇಕಕ್ಕೆ ಹೋಗುತ್ತಿರುವ ದೇವಸ್ಥಾನಕ್ಕೆ ಟೈಟ್ ಸೆಕ್ಯೂರಿಟಿ ಕೊಡುವಂತೆ ವಿಕ್ರಾಂತ್ ಗೆ ಹೇಳಿದ್ದಾನೆ. ವಿಕ್ರಾಂತ್ ಸಹ ಸರಿ ಅಗ್ರಜ ಆ ಕೆಸಲ ನನಗೆ ಬಿಡು. ದೇವಸ್ಥಾನಕ್ಕೆ ಯಾರೂ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾನೆ.


  ಇದನ್ನೂ ಓದಿ: Kannadathi: ಹರ್ಷ ಅಮ್ಮಮ್ಮನ ಬಳಿ ಮಾತನಾಡುವಾಗಲೇ ಕೋಮಾಗೆ ಜಾರಿದ ರತ್ನಮಾಲಾ! 


  ಧ್ರುವನ ಪ್ರಾಣ ಅಪಾಯದಲ್ಲಿದೆ. ವೇದಾಂತ್ ತಮ್ಮನನ್ನು ಹೇಗೆ ಕಾಪಾಡ್ತಾನೆ? ದಿನದಿಂದ ದಿನಕ್ಕೆ ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದ್ದು,  ಮುಂದೇನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಧಾರಾವಾಹಿ ನೋಡಬೇಕು.

  Published by:Savitha Savitha
  First published: