Gattimela: ವೇದಾಂತ್, ವಿಕ್ರಾಂತ್‍ಗೆ ಅಮ್ಮನ ಸುಳಿವು ಸಿಗುತ್ತಾ, ವೈದೇಹಿ ಚಿತ್ರ ಬಿಡಿಸ್ತಾನಾ ಸಿಕ್ಕಿರೋ ಅನಾಮಿಕ ವ್ಯಕ್ತಿ?

ಒಬ್ಬ ಅನಾಮಿಕ ಸಿಕ್ಕಿದ್ದಾನೆ. ಅವನ ಮನಸ್ಥಿತಿ ಸರಿಯಿಲ್ಲ. ಆದ್ರೆ ವೇದಾಂತ್ ಕುಟುಂಬದ ಬಗ್ಗೆ ಎಲ್ಲ ಗೊತ್ತಾ. ಅಲ್ಲಿ ನಡೆದಿರುವ ಎಲ್ಲಾ ಘಟನೆಗಳನ್ನು ಚಿತ್ರ ಬಿಡಿಸಿ ಇಡುತ್ತಿದ್ದಾನೆ. ಅಲ್ಲದೇ ಕಳೆದ ವರ್ಷ ವೈದೇಹಿ ಅಮ್ಮನನ್ನು, ಈತ ಆ ಊರಿನಲ್ಲಿ ನೋಡಿದ್ನಂತೆ. ಅದಕ್ಕೆ ಆ ವ್ಯಕ್ತಿಯನ್ನು ವೇದಾಂತ್ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಗಟ್ಟಿಮೇಳ

ಗಟ್ಟಿಮೇಳ

  • Share this:
    ಗಟ್ಟಿಮೇಳ (Gattimela), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ ಸುಹಾಸಿನಿ . ಸುಹಾಸಿನಿ ವೇದಾಂತ್ ಅವರಿಗೆ ನಿಜವಾದ (Real) ತಾಯಿ (Mother) ಅಲ್ಲ. ಅವರ ಅಮ್ಮನ ತಂಗಿ ಚಿಕ್ಕಮ್ಮ. ಆದ್ರೆ ವೇದಾಂತ್‍ರನ್ನು ಇವಳ ಸಾಕಿದ್ದಾಳೆ.

    ಆಸ್ತಿಗಾಗಿ ಸ್ವಂತ ಅಕ್ಕನ ಜೀವನ ಹಾಳು
    ಸುಹಾಸಿನಿ ಮಕ್ಕಳ ಮುಂದೆ ಒಳ್ಳೆವಳ ರೀತಿ ನಾಟಕ ಆಡುತ್ತಿದ್ದಾಳೆ. ಆದ್ರೆ ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಾಳೆ. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಎಲ್ಲ ಮಾಡಿರೋದು ದುಡ್ಡಿಗಾಗಿ. ಈ ವಿಷಯ ಗೊತ್ತಾದ ವೇದಾಂತ್ ತಮ್ಮ ಧ್ರುವನಿಗೆ ಅಪಘಾತ ಮಾಡಿಸಿ, ಮೂಲೆಯಲ್ಲಿ ಕೂರಿಸಿದ್ದಾಳೆ.

    ಅಮ್ಮನ ಹುಡುಕಾಟದಲ್ಲಿ ವೇದಾಂತ್, ವಿಕ್ರಾಂತ್
    ಅಮ್ಮ ಬದುಕಿದ್ದಾರೆ ಎಂಬ ಅನುಮಾನ ವಿಕ್ಕಿಗೆ ಮೊದಲಿನಿಂದಲೂ ಇತ್ತು. ಮೊದಲು ಅವನೊಬ್ಬನೇ ಅಮ್ಮನನ್ನು ಹುಡುಕುತ್ತಿದ್ದ. ಆದ್ರೆ ಈ ಬಾರಿ ವೇದಾಂತ್ ಸಹ ಅಮ್ಮನನ್ನು ಹುಡುಕಲು ಓಕೆ ಎಂದಿದ್ದಾನೆ. ಅದಕ್ಕೆ ಡಿಟೆಕ್ಟಿವ್ ಸಹಾಯದಿಂದ ವೈದೇಹಿ ಅಮ್ಮನ ಸುಳಿವು ಪತ್ತೆ ಹಚ್ಚುತ್ತಿದ್ದಾರೆ.

    ಇದನ್ನೂ ಓದಿ: Paaru Serial: ಪಾರುವನ್ನು ಸೊಸೆ ಎಂದು ಒಪ್ಪಿಕೊಳ್ಳೋಕೆ ರೆಡಿಯಾದ ಅಖಿಲಾಂಡೇಶ್ವರಿ! ಆದಿಗೆ ಎರಡನೇ ಮದುವೆ?

    ವೇದಾಂತ್ ಹುಟ್ಟೂರಲ್ಲಿ ಸಿಕ್ಕ ಅನಾಮಿಕ ವ್ಯಕ್ತಿ
    ಇನ್ನು ವೈದೇಹಿ ಬಗ್ಗೆ ಪತ್ತೆ ಹಚ್ಚುವಾಗ, ಅವರ ಹುಟ್ಟೂರಿನಲ್ಲಿ ಒಬ್ಬ ಅನಾಮಿಕ ಸಿಕ್ಕಿದ್ದಾನೆ. ಅವನ ಮನಸ್ಥಿತಿ ಸರಿಯಿಲ್ಲ. ಆದ್ರೆ ವೇದಾಂತ್ ಕುಟುಂಬದ ಬಗ್ಗೆ ಎಲ್ಲ ಗೊತ್ತಾ. ಅಲ್ಲಿ ನಡೆದಿರುವ ಎಲ್ಲಾ ಘಟನೆಗಳನ್ನು ಚಿತ್ರ ಬಿಡಿಸಿ ಇಡುತ್ತಿದ್ದಾನೆ. ಅಲ್ಲದೇ ಕಳೆದ ವರ್ಷ ವೈದೇಹಿ ಅಮ್ಮನನ್ನು, ಈತ ಆ ಊರಿನಲ್ಲಿ ನೋಡಿದ್ನಂತೆ. ಅದಕ್ಕೆ ಆ ವ್ಯಕ್ತಿಯನ್ನು ವೇದಾಂತ್ ಮನೆಗೆ ಕರೆದುಕೊಂಡು ಬಂದಿದ್ದಾರೆ.

    Zee Kannada serial, Kannada serial, Gattimela serial, Gattimela serial Kannada cast, Hero Search his mother,, ಗಟ್ಟಿಮೇಳ ಧಾರಾವಾಹಿ, ವೇದಾಂತ್, ವಿಕ್ರಾಂತ್‍ಗೆ ಅಮ್ಮನ ಸುಳಿವು ಸಿಗುತ್ತಾ?, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ವೈದೇಹಿ


    ವೈದೇಹಿ ಅಮ್ಮನ ಚಿತ್ರ ಬಿಡಿಸುವಂತೆ ಮನವಿ
    ಈ ವ್ಯಕ್ತಿ ಎಲ್ಲವನ್ನೂ ಮರೆತಿದ್ದಾನೆ. ಆದ್ರೆ ಚಿತ್ರಗಳನ್ನು ಮಾತ್ರ ಅದ್ಭುತವಾಗಿ ಬರೆಯುತ್ತಾನೆ. ಅದಕ್ಕೆ ವಿಕ್ರಾಂತ್ ಅವರ ಬಳಿ ತನ್ನ ಅಮ್ಮ ವೈದೇಹಿ ಅವರ ಚಿತ್ರ ಬಿಡಿಸುವಂತೆ ಮನವಿ ಮಾಡಿದ್ದಾನೆ. ಆ ವ್ಯಕ್ತಿ ಇವತ್ತು ವೈದೇಹಿ ಚಿತ್ರ ಬರೆಯಲಿದ್ದಾನೆ.

    ಅಗ್ನಿಗೆ ಸುದ್ದಿ ಮುಟ್ಟಿಸಿದ ಸುಹಾಸಿನಿ
    ಇನ್ನು ವೇದಾಂತ್ ಸುಹಾಸಿನಿ ಬಳಿ, ಅಮ್ಮನ ಚಿತ್ರ ಬಿಡಿಸಲು ಆ ವ್ಯಕ್ತಿಗೆ ಹೇಳಿದ್ದೇವೆ ಎಂದಿದ್ದೇ ತಡ, ಸುಹಾಸಿನಿ ಈ ಸುದ್ದಿಯನ್ನು ಅಗ್ನಿಗೆ ಮುಟ್ಟಿಸಿದ್ದಾಳೆ. ಅಗ್ನಿ ಎಂದ್ರೆ ಈ ಧಾರಾವಾಹಿಗೆ ಹೊಸದಾಗಿ ಎಂಟ್ರಿ ಕೊಟ್ಟಿರೋ ಪಾತ್ರ. ಇವರು ಸುಹಾಸಿನಿಗೆ ಬಾಸ್. ಸುಹಾಸಿನಿ ಇವರು ಹೇಳಿದಂತೆ ಕೇಳುತ್ತಾಳೆ.

    ಇದನ್ನೂ ಓದಿ: Hitler Kalyana: ಲೀಲಾ ತಂಗಿಯನ್ನು ಕಿಡ್ನ್ಯಾಪ್ ಮಾಡಿ ಎ.ಜೆಗೆ ಸವಾಲ್ ಹಾಕಿದ ದೇವ್! ಮುಂದಿದೆ ಬಿಗ್ ಟ್ವಿಸ್ಟ್

    ಮನೆಯಲ್ಲೇ ಇದ್ದಾಳೆ ಅಮ್ಮ
    ವೇದಾಂತ್ ಅವರ ಅಮ್ಮ ವೈದೇಹಿ ಅವರ ಮನೆಯಲ್ಲೇ ವೈಜಯಂತಿ ಎಂದು ಹೇಳಿಕೊಂಡು, ಅವರ ಮನೆ ಕೆಲಸ ಮಾಡಿಕೊಂಡು ಇದ್ದಾರೆ. ಮನೆಯಲ್ಲೇ ಇರುವ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಇವರು ಇಷ್ಟು ಕಷ್ಟ ಪಡುತ್ತಿದ್ದಾರೆ. ಕೊನೆಗೂ ವೇದಾಂತ್ ಅವರಿಗೆ ತಮ್ಮ ಅಮ್ಮನ ಬಗ್ಗೆ ಗೊತ್ತಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಸೀರಿಯಲ್ ನೋಡಬೇಕು.
    Published by:Savitha Savitha
    First published: