Gattimela: ಧ್ರುವನನ್ನು ಸಾಯಿಸಲು ಸುಹಾಸಿನಿಗೆ ಆರ್ಡರ್ ಮಾಡಿದ ಅಗ್ನಿ! ತಮ್ಮನನ್ನು ಉಳಿಸಿಕೊಳ್ತಾರಾ ವೇದಾಂತ್, ವಿಕ್ರಾಂತ್?

ಧ್ರುವನಿಗೆ ಸುಹಾಸಿನಿ ಬಗ್ಗೆ ಎಲ್ಲಾ ಸತ್ಯ ಗೊತ್ತಾಗಿದೆ. ಅದಕ್ಕೆ ಅವನ್ನು ಹೆಚ್ಚು ದಿನ ಜೀವಂತವಾಗಿ ಇಡಬೇಡ. ನಮಗೆ ರಿಸ್ಕ್ ಆಗುತ್ತೆ. ಅದಕ್ಕೆ ಅವನನ್ನು ಬೇಗ ಮುಗಿಸಿಬಿಡು ಎಂದು ಸುಹಾಸಿನಿಗೆ ಅಗ್ನಿ ಹೇಳುತ್ತಿದ್ದಾನೆ.

ಗಟ್ಟಿಮೇಳ

ಗಟ್ಟಿಮೇಳ

  • Share this:
    ಗಟ್ಟಿಮೇಳ (Gattimela), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ ಸುಹಾಸಿನಿ. ಈಕೆ ನಿಜವಾದ ತಾಯಿ (Mother) ಅಲ್ಲ. ಜೊತೆಯಲ್ಲೇ ಇದ್ದುಕೊಂಡು ಇವರ ವಿರುದ್ಧ ಪಿತೂರಿ ಮಾಡುತ್ತಾ ಇರುತ್ತಾಳೆ. ಸುಹಾಸಿನಿ  ಈಗ ಅಗ್ನಿ (Agni) ಹೇಳಿದಂತೆ ಕೇಳುತ್ತಿದ್ದಾಳೆ.

    ಸುಹಾಸಿನಿ ಮೇನ್ ವಿಲನ್ ಅಲ್ಲ
    ಗಟ್ಟಿಮೇಳ ಧಾರಾವಾಹಿಯಲ್ಲಿ ಇಷ್ಟು ದಿನ ಸುಹಾಸಿನಿ ಮೇನ್ ವಿಲನ್ ಅಂತ ಎಲ್ಲರೂ ಅಂದುಕೊಂಡಿದ್ರು. ಅವಳು ಸಹ ಪಾತ್ರವನ್ನು ಅದೇ ರೀತಿ ಮಾಡ್ತಾ ಇದ್ರು. ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಿದ್ಲು. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಎಲ್ಲ ಮಾಡಿರೋದು ದುಡ್ಡಿಗಾಗಿ. ಈ ವಿಷಯ ಗೊತ್ತಾದ ವೇದಾಂತ್ ತಮ್ಮ ಧ್ರುವನಿಗೆ ಅಪಘಾತ ಮಾಡಿಸಿದ್ದಾಳೆ.

    ಸುಹಾಸಿನಿಗೆ ಬಾಸ್ ಇದ್ದಾರೆ
    ಸುಹಾಸಿನಿ ದುಡ್ಡಿಗಾಗಿ ಈ ರೀತಿ ಮಾಡ್ತಾ ಇದ್ದಾಳೆ ಎಂದುಕೊಂಡಿದ್ವಿ. ದುಡ್ಡಿನ ಜೊತೆಗೆ ಅವಳು ಅಗ್ನಿ ಎನ್ನೋ ವ್ಯಕ್ತಿ ಹೇಳಿದಂತೆ ಕೇಳುತ್ತಿದ್ದಾಳೆ. ಅಗ್ನಿ ಸುಹಾಸಿನಿ ಬಾಸ್. ಸುಹಾಸಿನಿ ತನ್ನ ಬಾಸ್ ಹೇಳಿದಂತೆ ಕೇಳುತ್ತಾಳೆ. ಎಲ್ಲರನ್ನೂ ಭಯ ಪಡಿಸೋ ಸುಹಾಸಿನಿ, ಇವರನ್ನು ಕಂಡ್ರೆ ಭಯ ಪಡುತ್ತಾಳೆ.

    ಇದನ್ನೂ ಓದಿ: Lakshana: ಪೊಲೀಸ್ ಚಕ್ರವ್ಯೂಹದಲ್ಲಿ ಭೂಪತಿ ತಮ್ಮ! ಕಲರ್ಸ್ ಕನ್ನಡ ಧಾರಾವಾಹಿಲಿ ರೋಚಕ ತಿರುವು

    ಧ್ರುವನನ್ನು ಮುಗಿಸು ಎಂದ ಅಗ್ನಿ
    ಧ್ರುವನಿಗೆ ಸುಹಾಸಿನಿ ಬಗ್ಗೆ ಎಲ್ಲಾ ಸತ್ಯ ಗೊತ್ತಾಗಿದೆ. ಅದಕ್ಕೆ ಅವನ್ನು ಹೆಚ್ಚು ದಿನ ಜೀವಂತವಾಗಿ ಇಡಬೇಡ. ನಮಗೆ ರಿಸ್ಕ್ ಆಗುತ್ತೆ. ಅದಕ್ಕೆ ಅವನನ್ನು ಬೇಗ ಮುಗಿಸಿಬಿಡು ಎಂದು ಸುಹಾಸಿನಿಗೆ ಅಗ್ನಿ ಹೇಳುತ್ತಿದ್ದಾನೆ. ಅದಕ್ಕೆ ಸುಹಾಸಿನಿ ಸಹ ಸರಿ, ಅವನನ್ನು ಆದಷ್ಟು ಬೇಗ ಮೇಲಕ್ಕೆ ಕಳಿಸ್ತೀನಿ ಎಂದು ಹೇಳುತ್ತಾಳೆ.

    Zee Kannada serial, Kannada serial, Gattimela serial, Gattimela serial Kannada cast, Murder plan episode in serial, ಗಟ್ಟಿಮೇಳ ಧಾರಾವಾಹಿ, ಧ್ರುವನನ್ನು ಸಾಯಿಸಲು ಸುಹಾಸಿಗೆ ಆರ್ಡರ್ ಮಾಡಿದ ಅಗ್ನಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಧ್ರುವ


    ತಮ್ಮನನ್ನು ಕಾಪಾಡ್ತಾರಾ ವೇದಾಂತ್, ವಿಕ್ಕಿ?
    ಇನ್ನು ವೇದಾಂತ್ ಮತ್ತು ವಿಕ್ಕಿಗೆ ತಮ್ಮ ಧ್ರುವನ್ನು ಕಂಡ್ರೆ ತುಂಬಾ ಪ್ರೀತಿ. ಅದಕ್ಕೆ ಅವನಿಗೆ ಏನೂ ಆಗಬಾರದೆಂದು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ತಾರೆ. ಅವನ ರೂಮ್‍ಗೆ ಸಿಸಿ ಕ್ಯಾಮೆರಾ ಹಾಕಿಸಿದ್ದಾರೆ. ಇದನ್ನೆಲ್ಲಾ ಕಣ್ತಪ್ಪಿಸಿ, ಧ್ರುವನನ್ನು ಹೇಗೆ ಕೊಲ್ತಾಳೆ ಸುಹಾಸಿನಿ? ತಮ್ಮನನ್ನು ಉಳಿಸಿಕೊಳ್ತಾರಾ ವೇದಾಂತ್, ವಿಕ್ರಾಂತ್?

    Zee Kannada serial, Kannada serial, Gattimela serial, Gattimela serial Kannada cast, Murder plan episode in serial, ಗಟ್ಟಿಮೇಳ ಧಾರಾವಾಹಿ, ಧ್ರುವನನ್ನು ಸಾಯಿಸಲು ಸುಹಾಸಿಗೆ ಆರ್ಡರ್ ಮಾಡಿದ ಅಗ್ನಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಸುಹಾಸಿನಿ


    ಇತ್ತ ಅಮ್ಮನನ್ನು ಹುಡುಕುತ್ತಿರುವ ವೇದಾಂತ್
    ಇನ್ನೊಂದೆಡೆ ವೇದಾಂತ್ ತನ್ನ ಹೆತ್ತಮ್ಮನನ್ನು ಹುಡುಕಿಸುತ್ತಿದ್ದಾರೆ. ಡಿಟೆಕ್ಟಿವ್ ಮೂಲಕ ತನ್ನ ತಾಯಿ ಬಗ್ಗೆ ತಿಳಿದುಕೊಳ್ಳೋ ಪ್ರಯತ್ನ ಮಾಡ್ತಾ ಇದ್ದಾರೆ. ತನ್ನ ತಾಯಿ ಸಿಗದಿದ್ರೂ, ಆ ರೀತಿ ಮಾಡಿದ ಕ್ರಿಮಿನಲ್‍ಗಳಾದ್ರೂ ಸಿಗಲಿ ಎನ್ನುವುದು ವೇದಾಂತ್ ಉದ್ದೇಶ. ಒಂದು ಕಡೆ ತಮ್ಮನ ಪ್ರಾಣ, ಇನ್ನೊಂದು ಕಡೆ ಹೆತ್ತಮ್ಮನ ಹುಡುಕಾಟ, ಎಲ್ಲವನ್ನೂ ಹೇಗೆ ನಿಭಾಯಿಸ್ತಾನೆ ವೇದಾಂತ್?

    ಇದನ್ನೂ ಓದಿ: Hitler Kalyana: ಲೀಲಾ ಮನೆಯಲ್ಲಿ ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಂತೆ ದುರ್ಗಾ! ಎಜೆ ಸೊಸೆಯ ಹೊಸ ವರಸೆ ಶುರು

    ದಿನದಿಂದ ದಿನಕ್ಕೆ ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದ್ದು, ಮುಂದೇನಾಗುತ್ತೆ ಅಂತ ನೋಡೋದಕ್ಕೆ ಗಟ್ಟಿಮೇಳ ಸೀರಿಯಲ್ ನೋಡಬೇಕು.
    Published by:Savitha Savitha
    First published: