Gattimela: ವೇದಾಂತ್, ವಿಕ್ರಾಂತ್​​ಗೆ ಅಮ್ಮ ಸಿಕ್ಕಿದ ಖುಷಿ! ನಿಜವಾದ ಅಮ್ಮ ಯಾರು ಗೊತ್ತಾಯ್ತಾ?

ವೇದಾಂತ್, ವಿಕ್ರಾಂತ್ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಇರುವುದೊಂದೇ ಮಾರ್ಗ. ಅದು ತಮ್ಮ ಅಮ್ಮ ಇರುವ ಸಿ.ಡಿ ನೋಡುವುದು. ಆ ಸಿ.ಡಿ ಹಾಳಾಗಿದ್ದ ಕಾರಣ ಅಮ್ಮನ ಬಗ್ಗೆ ಗೊತ್ತಾಗಿರಲಿಲ್ಲ. ಈಗ ಆ ಸಿ.ಡಿ ಸಿಕ್ಕಿದೆ. ಅದನ್ನು ನೋಡಿ ಮನೆಯವರೆಲ್ಲಾ ಖುಷಿಯಾಗಿದ್ದಾರೆ.

ಗಟ್ಟಿಮೇಳ

ಗಟ್ಟಿಮೇಳ

  • Share this:
    ಗಟ್ಟಿಮೇಳ (Gattimela), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ (Marriage) ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ ಸುಹಾಸಿನಿ . ಸುಹಾಸಿನಿ ವೇದಾಂತ್ ಅವರಿಗೆ ನಿಜವಾದ ತಾಯಿ ಅಲ್ಲ. ಅವರ ಅಮ್ಮನ ತಂಗಿ ಚಿಕ್ಕಮ್ಮ. ಆದ್ರೆ ವೇದಾಂತ್‍ರನ್ನು ಇವಳ ಸಾಕಿದ್ದಾಳೆ. ಈಗ ಅವರು ತಮ್ಮ ಸ್ವಂತ ಅಮ್ಮನನ್ನು (Mother) ಹುಡುಕುತ್ತಿದ್ದಾರೆ.

    ಆಸ್ತಿಗಾಗಿ ಸ್ವಂತ ಅಕ್ಕನ ಜೀವನ ಹಾಳು
    ಸುಹಾಸಿನಿ ಮಕ್ಕಳ ಮುಂದೆ ಒಳ್ಳೆವಳ ರೀತಿ ನಾಟಕ ಆಡುತ್ತಿದ್ದಾಳೆ. ಆದ್ರೆ ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಾಳೆ. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಎಲ್ಲ ಮಾಡಿರೋದು ದುಡ್ಡಿಗಾಗಿ. ಈ ವಿಷಯ ಗೊತ್ತಾದ ವೇದಾಂತ್ ತಮ್ಮ ಧ್ರುವನಿಗೆ ಅಪಘಾತ ಮಾಡಿಸಿ, ಮೂಲೆಯಲ್ಲಿ ಕೂರಿಸಿದ್ದಾಳೆ.

    ಸುಹಾಸಿಗೆ ಬಾಸ್ ಇದ್ದಾರೆ
    ಸುಹಾಸಿನಿ ದುಡ್ಡಿಗಾಗಿ ಈ ರೀತಿ ಮಾಡ್ತಾ ಇದ್ದಾಳೆ ಎಂದುಕೊಂಡಿದ್ವಿ. ದುಡ್ಡಿನ ಜೊತೆಗೆ ಅವಳು ಈ ವ್ಯಕ್ತಿ ಹೇಳಿದಂತೆ ಕೇಳುತ್ತಿದ್ದಾಳೆ. ಈ ವ್ಯಕ್ತಿ ಅಂದ್ರೆ ಸುಹಾಸಿನಿ ಬಾಸ್. ಸುಹಾಸಿನಿ ತನ್ನ ಬಾಸ್ ಹೇಳಿದಂತೆ ಕೇಳುತ್ತಾಳೆ. ತಿಂಗಳಿಗೆ ಅವರಿಗೆ 25 ಲಕ್ಷ ಕೊಡುತ್ತಾಳೆ. ಎಲ್ಲರನ್ನೂ ಭಯ ಪಡಿಸೋ ಸುಹಾಸಿನಿ, ಇವರನ್ನು ಕಂಡ್ರೆ ಅವಳು ಭಯ ಪಡುತ್ತಾಳೆ.

    ಇದನ್ನೂ ಓದಿ: New Serial: ಕಲರ್ಸ್​ನಲ್ಲಿ ಹೊಸ ಧಾರಾವಾಹಿ, ಶೀಘ್ರದಲ್ಲೇ ಬರ್ತಿದ್ದಾಳೆ ಭಾಗ್ಯಲಕ್ಷ್ಮಿ

    ಅಮ್ಮನ ಹುಡುಕಾಟದಲ್ಲಿ ವೇದಾಂತ್, ವಿಕ್ರಾಂತ್
    ಅಮ್ಮ ಬದುಕಿದ್ದಾರೆ ಎಂಬ ಅನುಮಾನ ವಿಕ್ಕಿಗೆ ಮೊದಲಿನಿಂದಲೂ ಇತ್ತು. ಮೊದಲು ಅವನೊಬ್ಬನೇ ಅಮ್ಮನನ್ನು ಹುಡುಕುತ್ತಿದ್ದ. ಆದ್ರೆ ಈ ಬಾರಿ ವೇದಾಂತ್ ಸಹ ಅಮ್ಮನನ್ನು ಹುಡುಕಲು ಓಕೆ ಎಂದಿದ್ದಾನೆ. ಅದಕ್ಕೆ ಡಿಟೆಕ್ಟಿವ್ ಪ್ರಜ್ವಲ್ ಸಹಾಯದಿಂದ ವೈದೇಹಿ ಅಮ್ಮನ ಸುಳಿವು ಪತ್ತೆ ಹಚ್ಚುತ್ತಿದ್ದಾರೆ.

    Zee Kannada serial, Kannada serial, Gattimela serial, Gattimela serial Kannada cast, Vedanta know about his real mother, ಗಟ್ಟಿಮೇಳ ಧಾರಾವಾಹಿ, ಅಮ್ಮ ಸಿಕ್ಕ ಖುಷಿಯಲ್ಲಿದ್ದಾರೆ ವೇದಾಂತ್, ವಿಕ್ರಾಂತ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ವಿಕ್ರಾಂತ್


    ಅಮ್ಮ ಇರುವ ಸಿ.ಡಿ ಟೇಪ್
    ವೇದಾಂತ್, ವಿಕ್ರಾಂತ್ ಬಗ್ಗೆ ಅಮ್ಮನ ಬಗ್ಗೆ ತಿಳಿದುಕೊಳ್ಳು ಇರುವುದೊಂದೇ ಮಾರ್ಗ. ಅದು ತಮ್ಮ ಅಮ್ಮ ಇರುವ ಸಿ.ಡಿ ನೋಡುವುದು. ಆ ಸಿ.ಡಿ ಹಾಳಾಗಿದ್ದ ಕಾರಣ ಅಮ್ಮನ ಬಗ್ಗೆ ಗೊತ್ತಾಗಿರಲಿಲ್ಲ. ಈಗ ಆ ಸಿ.ಡಿ ಸಿಕ್ಕಿದೆ. ಅದನ್ನು ನೋಡಿ ಮನೆಯವರೆಲ್ಲಾ ಖುಷಿಯಾಗಿದ್ದಾರೆ. ತಮ್ಮ ಅಮ್ಮ ಸಿಕ್ಕಳು ಎಂದು ಸಂತೋಷದಿಂದ ಇದ್ದಾರೆ.

    Zee Kannada serial, Kannada serial, Gattimela serial, Gattimela serial Kannada cast, Vedanta know about his real mother, ಗಟ್ಟಿಮೇಳ ಧಾರಾವಾಹಿ, ಅಮ್ಮ ಸಿಕ್ಕ ಖುಷಿಯಲ್ಲಿದ್ದಾರೆ ವೇದಾಂತ್, ವಿಕ್ರಾಂತ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ವೈದೇಹಿ


    ಮನೆಯಲ್ಲೇ ಇದ್ದಾಳೆ ಅಮ್ಮ
    ವೇದಾಂತ್ ಅವರ ಅಮ್ಮ ವೈದೇಹಿ ಅವರ ಮನೆಯಲ್ಲೇ ವೈಜಯಂತಿ ಎಂದು ಹೇಳಿಕೊಂಡು, ಅವರ ಮನೆ ಕೆಲಸ ಮಾಡಿಕೊಂಡು ಇದ್ದಾರೆ. ಮನೆಯಲ್ಲೇ ಇರುವ ಅಮ್ಮನ ಬಗ್ಗೆ ತಿಳಿದುಕೊಳ್ಳಲು ಇವರು ಇಷ್ಟು ಕಷ್ಟ ಪಡುತ್ತಿದ್ದಾರೆ. ಈಗ ಆ ಟೇಪ್‍ನಲ್ಲಿ ಇರೋದು ವೈದೇಹಿಯೇ ಎಂದು ಗೊತ್ತಾಗಿದೆಯಾ?

    ಇದನ್ನೂ ಓದಿ: Gichi GiliGili: ಗಿಚ್ಚಿ ಗಿಲಿಗಿಲಿ ಶೋ ವಿನ್ನರ್ ಶಿವು-ವನ್ಷಿಕಾ, ಮತ್ತೊಮ್ಮೆ ಮಾಸ್ಟರ್ ಆನಂದ್ ಮಗಳಿಗೆ ಗೆಲುವಿನ ಮಾಲೆ

    ಅಮ್ಮನ ಚಿತ್ರ ಬದಲಿಸಿದ್ದಾರಾ ಸುಹಾಸಿನಿ?
    ಸುಹಾಸಿನಿ ಇಷ್ಟು ಕೂಲ್ ಆಗಿದ್ದಾಳೆ ಎಂದ್ರೆ, ಅವಳೂ ಆ ವಿಡಿಯೋದಲ್ಲಿರುವ ಚಿತ್ರವನ್ನು ಬದಲಾಯಿಸಿರ ಬಹುದು. ಇಲ್ಲ ಅಂದ್ರೆ ವೇದಾಂತ್ ಅವರಿಗೆ ವೈದೇಹಿ ತಮ್ಮ ನಿಜವಾದ ಅಮ್ಮ ಎಂದು ಗೊತ್ತಾಯ್ತಾ? ಧಾರಾವಾಹಿ ದಿನಕ್ಕೊಂದು ತಿರುವು ಪಡೆದುಕೊಳ್ತಿದೆ. ಮುಂದೇನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಸೀರಿಯಲ್ ನೋಡಬೇಕು.
    Published by:Savitha Savitha
    First published: