Gattimela: ವರಮಹಾಲಕ್ಷ್ಮಿ ಹಬ್ಬಕ್ಕೆ ಪರಿಮಳರನ್ನು ಮನೆಗೆ ಕರೆದ ಸುಹಾಸಿನಿ, ಏನಿದು ಆಶ್ಚರ್ಯ!

ವೇದಾಂತ್ ಅವರು ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮನೆಯವರು ಎಲ್ಲ ತಯಾರಿ ಮಾಡಿದ್ದಾರೆ. ಇನ್ನು ಸುಹಾಸಿನಿ ಮನೆಯವರು ಪೂಜೆಗೆ ಎಲ್ಲ ತಯಾರಿ ಮಾಡಿಕೊಂಡ ಕಾಯ್ತಾ ಇದ್ದಾಗ, ಪರಿಮಳ ಬರುತ್ತಾಳೆ.ಮನೆಯವರೆಲ್ಲಾ ಆಶ್ಚರ್ಯದಿಂದ ನೋಡುತ್ತಾರೆ. ಆಗ ಸುಹಾಸಿನಿ ನಾನು ಕಾಯುತ್ತಿದ್ದ ಗೆಸ್ಟ್ ಇವರೇನೆ ಪೂಜೆ ಶುರು ಮಾಡಿ ಎಂದು ಹೇಳುತ್ತಾಳೆ.

ಗಟ್ಟಿಮೇಳ

ಗಟ್ಟಿಮೇಳ

 • Share this:
  ಗಟ್ಟಿಮೇಳ (Gattimela), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜಪಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಬಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್ (Vedanta), ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ (Mother) ಸುಹಾಸಿನಿ. ಆಕೆಗೆ ತನ್ನ ಸೊಸೆಯಂದಿರು ಬಡವರ ಮನೆಯವರು ಎಂದು ಸ್ವಲ್ಪವೂ ಇಷ್ಟ ಇಲ್ಲ. ಚಾನ್ಸ್ ಸಿಕ್ಕಾಗೆಲ್ಲಾ ಅವರಿಗೆ ಅವಮಾನ ಮಾಡುತ್ತಲೇ ಇರುತ್ತಾಳೆ.

  ವಸಿಷ್ಠ ಮನೆಯಲ್ಲಿ ಸಂಭ್ರಮದ ವರಮಹಾಲಕ್ಷ್ಮಿ ಹಬ್ಬ
  ವೇದಾಂತ್ ಅವರು ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಮನೆಯವರು ಎಲ್ಲ ತಯಾರಿ ಮಾಡಿದ್ದಾರೆ. ಆದ್ರೆ ಸುಹಾಸಿನಿ ನಾನು ಗೆಸ್ಟ್ ಒಬ್ಬರಿಗೆ ಕಾಯುತ್ತಿದ್ದೇನೆ. ಅವರು ಬಂದ ಮೇಲೆ ಪೂಜೆ ಮಾಡೋಣ ಎಂದು ಹೇಳುತ್ತಾಳೆ. ಮನೆಗೆ ಬರೋ ಗೆಸ್ಟ್ ಯಾರಪ್ಪ ಎಂದು ಎಲ್ಲರೂ ಕಾಯ್ತಾ ಇದ್ದಾರೆ.

  ಪೂಜೆ ಸಮಯಕ್ಕೆ ಸರಿಯಾಗಿ ಬಂದ ಪರಿಮಳ
  ಇನ್ನು ಸುಹಾಸಿನಿ ಮನೆಯವರು ಪೂಜೆಗೆ ಎಲ್ಲ ತಯಾರಿ ಮಾಡಿಕೊಂಡ ಕಾಯ್ತಾ ಇದ್ದಾಗ, ಪರಿಮಳ ಬರುತ್ತಾಳೆ. ಮನೆಯವರೆಲ್ಲಾ ಆಶ್ಚರ್ಯದಿಂದ ನೋಡುತ್ತಾರೆ. ಆಗ ಸುಹಾಸಿನಿ ನಾನು ಕಾಯುತ್ತಿದ್ದ ಗೆಸ್ಟ್ ಇವರೇನೆ ಪೂಜೆ ಶುರು ಮಾಡಿ ಎಂದು ಹೇಳುತ್ತಾಳೆ.

  ಇದನ್ನೂ ಓದಿ: Sathya Serial: ವರಮಹಾಲಕ್ಷ್ಮಿ ಹಬ್ಬದ ತಯಾರಿ ಜವಾಬ್ದಾರಿ ಸತ್ಯ ಮೇಲೆ! ಏನ್ ಮಾಡ್ತಾಳೆ ಲೇಡಿ ರಾಮಾಚಾರಿ? 

  ಅಮೂಲ್ಯ, ಆರತಿಗೆ ಖುಷಿ ಜೊತೆ ಆಶ್ಚರ್ಯ
  ಇನ್ನು ತಮ್ಮ ಅಮ್ಮ ಹಬ್ಬಕ್ಕೆ ಬಂದಿದ್ದು ಅಮೂಲ್ಯ, ಆರತಿಗೆ ಖುಷಿಯಾಗಿದೆ. ಆದ್ರೆ ಅವರನ್ನು ನಮ್ಮ ಅತ್ತೆ ಗೆಸ್ಟ್ ಎಂದು ಕರೆಸಿದ್ದಾ ಎಂದು ಆಶ್ಚರ್ಯ ಗೊಂಡಿದ್ದಾರೆ. ಹಬ್ಬಕ್ಕೆ ಕರೆದ್ರೆ ಆಶ್ಚರ್ಯ ಯಾಕೆ ಪಡ್ತೀರಿ ಎಂದು ಸುಹಾಸಿನಿ ತನ್ನ ಸೊಸೆಯರಿಗೆ ಹೇಳಿದ್ದಾಳೆ.

  ಧ್ರುವ ಮತ್ತು ಅದಿತಿ ದೂರ ಮಾಡೋ ಪ್ಲ್ಯಾನಾ ಇದು?
  ಸುಹಾಸಿನಿ ದಿಡೀರ್ ಬದಲಾವಣೆಯಿಂದ ಎಲ್ಲರೂ ಬೆರಗಾಗಿದ್ದಾರೆ. ಪರಿಮಳ ಕಂಡ್ರೆ ಸಿಡಿ ಸಿಡಿ ಅಂತಿದ್ದ ಸುಹಾಸಿನಿ ಬದಲಾಗಿದ್ಯಾಕೆ ಎಂದು ಯೋಚನೆ ಮಾಡುತ್ತಿದ್ದಾರೆ. ಆದ್ರೆ ಸುಹಾಸಿನಿ ಪ್ಲ್ಯಾನೇ ಬೇರೆ ಆಗಿದೆ. ಪರಿಮಳ ಕುಟುಂಬದ ಜೊತೆ ಕ್ಲೋಸ್ ಆಗಿ ಹೇಗಾದ್ರೂ ಅದಿತಿ ಮದುವೆಯನ್ನು ಬೇರೆ ಹುಡುಗರ ಜೊತೆ ಮಾಡಿಸೋ ಚಿಂತನೆಯಲ್ಲಿದ್ದಾಳೆ.

  ಇದನ್ನೂ ಓದಿ: Bigg Boss OTT: ನಾಳೆಯಿಂದಲೇ ಅಸಲಿ ಆಟ ಶುರು! ಬಿಗ್ ಮನೆಗೆ ಇವ್ರೆಲ್ಲ ಹೋಗ್ತಾರಂತೆ!

  ಸುಹಾಸಿನಿ ಮಗ ಧ್ರುವನನ್ನು ಪ್ರೀತಿಸುತ್ತಿರೋ ಅದಿತಿ
  ಇನ್ನು ಪರಿಮಳ ಮೂರನೇ ಮಗಳು ಅದಿತಿ, ಸುಹಾಸಿನಿ ಮಗ ಧ್ರುವನನ್ನು ಪ್ರೀತಿಸುತ್ತಿದ್ದಾಳೆ. ಅದು ಸುಹಾಸಿನಿಗೆ ಗೊತ್ತಾಗಿದೆ. ಅದಕ್ಕೆ ಇಬ್ಬರುನ್ನು ಹೇಗಾದ್ರೂ ದೂರ ಮಾಡಬೇಕು ಎಂದು ಕಾಯುತ್ತಿದ್ದಾಳೆ. ಅದಕ್ಕೆ ಪರಿಮಳ ಅವರ ಕುಟುಂಬದ ಜೊತೆ ಚೆನ್ನಾಗಿದ್ದು, ಅವಳಿಗೆ ಬೇಗ ಬೇರೆ ಮದುವಾ ಮಾಡಿಸೋ ತಯಾರಿ ನಡೆಸುತ್ತಿದ್ದಾಳೆ.

  ಎಲ್ಲರನ್ನೂ ಮೀರಿ ಅದಿತಿ-ಧ್ರುವ ಒಂದಾಗ್ತಾರಾ?
  ಧ್ರುವ ತನ್ನ ಪ್ರೀತಿಯನ್ನು ಅದಿತಿ ಬಳಿ ಹೇಳಿಕೊಂಡು ದಿನವೇ ಆತನಿಗೆ ಅಪಘಾತವಾಗಿ ಬಿಡುತ್ತೆ. ದೇವರ ದಯೆಯಿಂದ ಧ್ರುವ ಬದುಕುಳಿದಿದ್ದಾನೆ. ಆದ್ರೆ ಮುಂಚಿನ ತರ ಓಡಾಡುತ್ತಿಲ್ಲ. ಮಾತನಾಡುತ್ತಿಲ್ಲ. ಕೂತಲ್ಲೇ ಕೂತು ಇರುತ್ತಾನೆ. ಅದಕ್ಕೆ ಅದಿತಿಗೆ ಮನೆಯವರ ಬಳಿ ತನ್ನ ಪ್ರೀತಿ ವಿಷಯ ಹೇಳಿಕೊಳ್ಳಲು ಆಗದೇ ಒದ್ದಾಡುತ್ತಿದ್ದಾಳೆ. ಹೇಗಾದ್ರೂ ಮಾಡಿ ಎಲ್ಲರನ್ನೂ ಒಪ್ಪಿಸಬೇಕು ಅಂತ ಕಾಯ್ತಿದ್ದಾಳೆ. ಆದ್ರೆ ಅಷ್ಟರಲ್ಲಿ ಪರಿಮಳ ತನ್ನ ಮಗಳಿಗೆ ಬೇರೆ ಗಂಡು ತೋರಿಸಿ, ನಿಶ್ಚಿತಾರ್ಥ ಮಾಡೋ ಪ್ಲ್ಯಾನ್ ನಲ್ಲಿ ಇದ್ದಾಳೆ. ಎಲ್ಲವನ್ನೂ ಮೀರಿ ಇಬ್ಬರು ಒಂದಾಗ್ತಾರೆ ಅನ್ನೋದೆ ಕುತೂಹಲ.

  ಎಲ್ಲಾ ಕುತೂಹಲಕ್ಕೂ ಗಟ್ಟಿಮೇಳ ಸಂಚಿಕೆಗಳನ್ನು ನೋಡಬೇಕು.
  Published by:Savitha Savitha
  First published: