Gattimela: ಕೆಡುಕು ಬಯಸುವ ಸುಹಾಸಿನಿಗೆ ಮತ್ತೊಬ್ಬ ಬಾಸ್! ಯಾರದು ಹೊಸ ಪರಿಚಯ?

ಸುಹಾಸಿನಿ ದುಡ್ಡಿಗಾಗಿ ಈ ರೀತಿ ಮಾಡ್ತಾ ಇದ್ದಾಳೆ ಎಂದುಕೊಂಡಿದ್ವಿ. ದುಡ್ಡಿನ ಜೊತೆಗೆ ಅವಳು ಈ ವ್ಯಕ್ತಿ ಹೇಳಿದಂತೆ ಕೇಳುತ್ತಿದ್ದಾಳೆ. ಈ ವ್ಯಕ್ತಿ ಅಂದ್ರೆ ಸುಹಾಸಿನಿ ಬಾಸ್. ಸುಹಾಸಿನಿ ತನ್ನ ಬಾಸ್ ಹೇಳಿದಂತೆ ಕೇಳುತ್ತಾಳೆ. ತಿಂಗಳಿಗೆ ಅವರಿಗೆ 25 ಲಕ್ಷ ಕೊಡುತ್ತಾಳೆ. ಎಲ್ಲರನ್ನೂ ಭಯ ಪಡಿಸೋ ಸುಹಾಸಿನಿ, ಇವರನ್ನು ಕಂಡ್ರೆ ಅವಳು ಭಯ ಪಡುತ್ತಾಳೆ.

ಸುಹಾಸಿನಿ

ಸುಹಾಸಿನಿ

 • Share this:
  ಗಟ್ಟಿಮೇಳ (Gattimela), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ (Mother) ಸುಹಾಸಿನಿ. ಸೊಸೆಯರನ್ನು ಕಂಡ್ರೆ ಆಗಲ್ಲ. ಕೆಡುವ ಬಯಸುವ ಸುಹಾಸಿನಿ  ಮೇಲೋಬ್ಬ ಬಾಸ್ (Boss) ಇದ್ದಾನೆ.

  ಸುಹಾಸಿನಿ ಮೇನ್ ವಿಲನ್ ಅಲ್ಲ
  ಗಟ್ಟಿಮೇಳ ಧಾರಾವಾಹಿಯಲ್ಲಿ ಇಷ್ಟು ದಿನ ಸುಹಾಸಿನಿ ಮೇನ್ ವಿಲನ್ ಅಂತ ಎಲ್ಲರೂ ಅಂದುಕೊಂಡಿದ್ರು. ಅವಳು ಸಹ ಪಾತ್ರವನ್ನು ಅದೇ ರೀತಿ ಮಾಡ್ತಾ ಇದ್ರು. ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಿದ್ಲು. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಎಲ್ಲ ಮಾಡಿರೋದು ದುಡ್ಡಿಗಾಗಿ. ಈ ವಿಷಯ ಗೊತ್ತಾದ ವೇದಾಂತ್ ತಮ್ಮ ಧ್ರುವನಿಗೆ ಅಪಘಾತ ಮಾಡಿಸಿದ್ದಾಳೆ.

  ಸುಹಾಸಿಗೆ ಬಾಸ್ ಇದ್ದಾರೆ
  ಸುಹಾಸಿನಿ ದುಡ್ಡಿಗಾಗಿ ಈ ರೀತಿ ಮಾಡ್ತಾ ಇದ್ದಾಳೆ ಎಂದುಕೊಂಡಿದ್ವಿ. ದುಡ್ಡಿನ ಜೊತೆಗೆ ಅವಳು ಈ ವ್ಯಕ್ತಿ ಹೇಳಿದಂತೆ ಕೇಳುತ್ತಿದ್ದಾಳೆ. ಈ ವ್ಯಕ್ತಿ ಅಂದ್ರೆ ಸುಹಾಸಿನಿ ಬಾಸ್. ಸುಹಾಸಿನಿ ತನ್ನ ಬಾಸ್ ಹೇಳಿದಂತೆ ಕೇಳುತ್ತಾಳೆ. ತಿಂಗಳಿಗೆ ಅವರಿಗೆ 25 ಲಕ್ಷ ಕೊಡುತ್ತಾಳೆ. ಎಲ್ಲರನ್ನೂ ಭಯ ಪಡಿಸೋ ಸುಹಾಸಿನಿ, ಇವರನ್ನು ಕಂಡ್ರೆ ಅವಳು ಭಯ ಪಡುತ್ತಾಳೆ.

  ಇದನ್ನೂ ಓದಿ: Sathya Serial: ಸತ್ಯ ಮೇಲೆ ಕಾರ್ತಿಕ್‍ಗೆ ಲವ್ ಆಗಿದ್ಯಾ? ತನ್ನ ಸುದ್ದಿಗೆ ಬಂದ ಕೀರ್ತನಾಗೆ ಲೇಡಿ ರಾಮಾಚಾರಿ ಕ್ಲಾಸ್!

  ಯಾರ್ ಈ ಹೊಸ ಬಾಸ್?
  ಇವತ್ತಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಯಾರು ಸುಹಾಸಿನಿ ಹೊಸ ಬಾಸ್. ಯಾರಿದು ಹೊಸ ಪರಿಚಯ ಅಂತ. ಸದ್ಯ ಧಾರಾವಾಹಿಗೆ ಅವರ ಎಂಟ್ರಿ ಆಗಿದೆ. ಖಡಕ್ ಆಗಿ ಕಾರಿನಿಂದ ಇಳಿದು ಬರುತ್ತಾರೆ. ಬ್ಲ್ಯಾಕ್ ಕಲರ್ ಡ್ರೆಸ್ ಹಾಕಿಕೊಂಡಿದ್ದಾರೆ. ಗತ್ತಿನಿಂದ ಸುಹಾಸಿನಿ ಇರೋ ಕಡೆ ನಡೆದು ಬರುತ್ತಿದ್ದಾರೆ. ಅವರು ಯಾರಿರಬಹುದು ಎನ್ನೋ ಕುತುಹಲ ಎಲ್ಲರಲ್ಲೂ ಹೆಚ್ಚಾಗಿದೆ.

  ತೇಜಸ್ ಸಹ ಹೊಸ ಬಾಸ್‍ಗೆ ಪರಿಚಯ
  ತೇಜಸ್ ಅಂದ್ರೆ, ಅಮೂಲ್ಯ ತಂಗಿ ಅದಿತಿಯನ್ನು ಮದುವೆ ಆಗಬೇಕಿದ್ದ ಹುಡುಗ. ಇಬ್ಬರಿಗೂ ಮದುವೆ ಮಾಡುವುದ ಅಂತ ಹೇಳಿ ನಿಶ್ಚಿತಾರ್ಥ ಕೂಡ ಗೊತ್ತಾಗಿತ್ತು. ಆದ್ರೆ ತೇಜಸ್ ಒಳ್ಳೆ ಹುಡುಗ ಅಲ್ಲ ಎಂದು ವಿಕ್ರಾಂತ್ ಎಲ್ಲಾ ಸತ್ಯವನ್ನು ಕಂಡು ಹಿಡಿಯುತ್ತಾನೆ. ಆಗ ವಿಕ್ರಾಂತ್ ಬಂದು ನಿಶ್ಚಿತಾರ್ಥ ನಿಲ್ಲಿಸೋ ಮೊದಲೇ, ಸುಹಾಸಿನಿ ಹೈಡ್ರಾಮಾ ಮಾಡಿ ನಿಶ್ಚಿತಾರ್ಥ ನಿಲ್ಲಿಸಿರುತ್ತಾಳೆ. ತೇಜಸ್ ಸಹ ಈಗ ಬರುತ್ತಿರೋ ಹೊಸ ಬಾಸ್ ಕಡೆಯವನು. ಸುಹಾಸಿನಿಗೆ ಸಹಾಯ ಮಾಡಲು ಕಳಿಸಿರುತ್ತಾರೆ.

  Zee Kannada serial, Kannada serial, Gattimela serial, Gattimela serial Kannada cast, News boss in serial, ಗಟ್ಟಿಮೇಳ ಧಾರಾವಾಹಿ, ಕೆಡುವ ಬಯಸುವ ಸುಹಾಸಿನಿ ಮೇಲೊಬ್ಬ ಬಾಸ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಗಟ್ಟಿಮೇಳ


  ಅದಿತಿ ಜವಾಬ್ದಾರಿ ಹೊತ್ತ ಅಮೂಲ್ಯ
  ಅದಿಗೆ ಮದುವೆ ಇಷ್ಟ ಇರಲಿಲ್ಲ. ಯಾಕಂದ್ರೆ ಅವಳು ಧ್ರುವನನ್ನು ಪ್ರೀತಿಸುತ್ತಿದ್ದಾಳೆ. ಯಾವಾಗ ಅವಳಿಗೆ ತೇಜಸ್ ಜೊತೆ ನಿಶ್ಚಿತಾರ್ಥ ಮಾಡಬೇಕು ಎಂದುಕೊಂಡ್ರೋ ಆಗಲೇ ಅವಳು ಸಾಯಲು ನಿರ್ಧಾರ ಮಾಡಿರುತ್ತಾಳೆ. ನಿಶ್ಚಿತಾರ್ಥ ನಿಂತ ಕಾರಣ ತನ್ನ ಸಾಯೋ ನಿರ್ಧಾರ ಕೈ ಬಿಡುತ್ತಾಳೆ. ಈ ವಿಷಯ ತಾಯಿ ಪರಿಮಳಗೆ ಗೊತ್ತಾಗಿ ಅದಿತಿಗೆ ಹೊಡೆಯತ್ತಾಳೆ. ಅದಕ್ಕೆ ಅಮೂಲ್ಯ ಅದಿತಿ ಮದುವೆ ಜವಾಬ್ದಾರಿ ತಾನು ತೆಗೆದುಕೊಂಡಿದ್ದಾಳೆ.

  ಇದನ್ನೂ ಓದಿ: Ramachari: ಅಮ್ಮನಿಗಾಗಿ ರಾಮಾಚಾರಿ ಕಾಲು ಹಿಡಿದ ಸೊಕ್ಕಿನ ರಾಣಿ ಚಾರು!

  ಈ ಹೊಸ ಬಾಸ್ ಯಾರು? ಸುಹಾಸಿನಿ ಏಕೆ ಇವರು ಹೇಳಿದಂತೆ ಕೇಳುತ್ತಿದ್ದಾಳೆ? ಎಲ್ಲಾ ಕುತೂಹಲಕ್ಕೂ ಗಟ್ಟಿಮೇಳ ಸೀರಿಯಲ್ ನೋಡಬೇಕು.
  Published by:Savitha Savitha
  First published: