• Home
  • »
  • News
  • »
  • entertainment
  • »
  • Gattimela: ಬೇರೆ ಯಾರನ್ನೋ ಅಮ್ಮ ಅನ್ನುತ್ತಿದ್ದಾರೆ ವೇದಾಂತ್, ವಿಕ್ರಾಂತ್! ನಿಜವಾದ ತಾಯಿಗೆ ಸಂಕಟ

Gattimela: ಬೇರೆ ಯಾರನ್ನೋ ಅಮ್ಮ ಅನ್ನುತ್ತಿದ್ದಾರೆ ವೇದಾಂತ್, ವಿಕ್ರಾಂತ್! ನಿಜವಾದ ತಾಯಿಗೆ ಸಂಕಟ

ವೈದೇಹಿಗೆ ಸಂಕಟದ ಮೇಲೆ ಸಂಕಟ!

ವೈದೇಹಿಗೆ ಸಂಕಟದ ಮೇಲೆ ಸಂಕಟ!

ತನ್ನ ಮಕ್ಕಳು ಬೇರೆ ಯಾರನ್ನೂ ಅಮ್ಮ ಎಂದುಕೊಂಡು ಅವಳನ್ನು ಪ್ರೀತಿ ಮಾಡೋದನ್ನು ನೋಡಿ ವೈದೇಹಿ ಸಂಕಟ ಅನುಭವಿಸುತ್ತಿದ್ದಾಳೆ. ಕಣ್ಣೆದುರಿಗೆ ಇರುವ ತನ್ನ ಸ್ವಂತ ಮಕ್ಕಳಿಗೆ ಸತ್ಯ ಹೇಳಲು ಆಗದೇ ಭಯ ಪಡುತ್ತಿದ್ದಾಳೆ.

  • Share this:

    ಗಟ್ಟಿಮೇಳ (Gattimela), ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ (Vedanta) ತಾಯಿ ಸುಹಾಸಿನಿ. ಸುಹಾಸಿನಿ ವೇದಾಂತ್ ಅವರಿಗೆ ನಿಜವಾದ ತಾಯಿ ಅಲ್ಲ. ಅವರ ಅಮ್ಮನ ತಂಗಿ ಚಿಕ್ಕಮ್ಮ. ಆದ್ರೆ ವೇದಾಂತ್‍ರನ್ನು ಇವಳ ಸಾಕಿದ್ದಾಳೆ. ನಿಜವಾದ ಅಮ್ಮ (Real Mother) ವೈದೇಹಿಯನ್ನು ಬಿಟ್ಟು ಬೇರೆ ಅವರನ್ನು ಅಮ್ಮ ಎಂದುಕೊಂಡಿದ್ದಾರೆ.


    ವೈದೇಹಿ ಬಿಟ್ಟು ಬೇರೆ ಅವಳ ಅಮ್ಮನಾಗಿ ಬಂದಿದ್ದಾಳೆ
    ವೇದಾಂತ್ ಅವರು ತಮ್ಮ ತಾಯಿ ಸತ್ತಿದ್ದಾಳೆ ಎಂದುಕೊಂಡಿದ್ರು. ತುಂಬಾ ವರ್ಷಗಳು ಆದ ನಂತರ ತಮ್ಮ ಅಮ್ಮ ಬದುಕಿರೋದು ಗೊತ್ತಾಗುತ್ತೆ. ಅದಕ್ಕೆ ತಮ್ಮ ಅಮ್ಮನನ್ನು ಹುಡುಕುತ್ತಾ ಇರುತ್ತಾರೆ. ಅದು ಕಂಡ ಸುಹಾಸಿನಿ ವಿಡಿಯೋ ಟೇಪ್‍ನಲ್ಲಿ ಇದ್ದ ವೈದೇಹಿ ಚಿತ್ರವನ್ನೇ ಅಳಿಸಿ ಹಾಕಿ, ಅಲ್ಲಿಗೆ ಚಂದ್ರಕಲಾ ಎಂಬ ಹೆಂಗಸಿನ ಚಿತ್ರ ಹಾಕಿದ್ದಾಳೆ. ಆಕೆಯನ್ನೇ ವೇದಾಂತ್ ನಿಜವಾದ ತಾಯಿ ಎಂದುಕೊಂಡಿದ್ದಾರೆ.


    ದುಡ್ಡಿಗಾಗಿ ನಾಟಕ ಮಾಡ್ತಿರೋ ಸುಹಾಸಿನಿ
    ಸುಹಾಸಿನಿ ಮಕ್ಕಳ ಮುಂದೆ ಒಳ್ಳೆವಳ ರೀತಿ ನಾಟಕ ಆಡುತ್ತಿದ್ದಾಳೆ. ಆದ್ರೆ ಆಸ್ತಿಗಾಗಿ ಮನೆಯವರಿಗೇನೇ ತೊಂದರೆ ಕೊಡುತ್ತಾಳೆ. ತನ್ನ ಸ್ವಂತ ಅಕ್ಕನನ್ನೇ ಸಾಯಿಸಲು ಪ್ರಯತ್ನಿಸಿ, ಅವರ ನಾಲ್ಕು ಜನ ಮಕ್ಕಳನ್ನು ಇವಳು ಸಾಕಿದ್ದಾಳೆ. ಎಲ್ಲ ಮಾಡಿರೋದು ದುಡ್ಡಿಗಾಗಿ. ಈ ವಿಷಯ ಗೊತ್ತಾದ ವೇದಾಂತ್ ತಮ್ಮ ಧ್ರುವನಿಗೆ ಅಪಘಾತ ಮಾಡಿಸಿ, ಮೂಲೆಯಲ್ಲಿ ಕೂರಿಸಿದ್ದಾಳೆ.


    ಇದನ್ನೂ ಓದಿ: Kendasampige: ಕಾಳಿಯ ಕುತಂತ್ರ ಬುದ್ಧಿ! ಸುಮ್ನೆ ಬಿಡಲ್ಲ ಸುಮನಾ


    ಅಮ್ಮನ ವಿಷ್ಯದಲ್ಲೂ ಸುಹಾಸಿನಿ ಮೋಸ
    ವೇದಾಂತ್ ಅವರಿಗೆ ಅಮ್ಮನ ವಿಷ್ಯದಲ್ಲೂ ಸುಹಾಸಿನಿ ಮೋಸ ಮಾಡಿದ್ದಾಳೆ. ತನಗೆ ಗೊತ್ತಿರೋ ಚಂದ್ರಕಲಾ ಎಂಬಾಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಸುಹಾಸಿನಿ ಆ ಚಂದ್ರಕಲಾ ಹೇಳಿದಂತೆ ಕೇಳುತ್ತಿದ್ದಾರೆ. ಹಾಗಾದ್ರೆ ಆ ಚಂದ್ರಕಲಾ ಎಂಬ ಹೆಂಗಸು ಯಾರೂ ಎಂದು ಇನ್ನೂ ಗೊತ್ತಾಗಿಲ್ಲ.


    Zee Kannada serial, Kannada serial, Gattimela serial, Gattimela serial Kannada cast, Real mother in problem, ಗಟ್ಟಿಮೇಳ ಧಾರಾವಾಹಿ, ಬೇರೆ ಯಾರನ್ನೋ ಅಮ್ಮ ಅನ್ನುತ್ತಿದ್ದಾರೆ ವೇದಾಂತ್,ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಚಂದ್ರಕಲಾ


    ವೈದೇಹಿಗೆ ಸಂಕಟ
    ತನ್ನ ಮಕ್ಕಳು ಬೇರೆ ಯಾರನ್ನೂ ಅಮ್ಮ ಎಂದುಕೊಂಡು ಅವಳನ್ನು ಪ್ರೀತಿ ಮಾಡೋದನ್ನು ನೋಡಿ ವೈದೇಹಿ ಸಂಕಟ ಅನುಭವಿಸುತ್ತಿದ್ದಾಳೆ. ಕಣ್ಣೆದುರಿಗೆ ಇರುವ ತನ್ನ ಸ್ವಂತ ಮಕ್ಕಳಿಗೆ ಸತ್ಯ ಹೇಳಲು ಆಗದೇ ಭಯ ಪಡುತ್ತಿದ್ದಾಳೆ. ಸತ್ಯ ಹೇಳಿದ್ರೆ ಎಲ್ಲಿ ಸುಹಾಸಿನಿ ತನ್ನ ಮಕ್ಕಳಿಗೆ ತೊಂದ್ರೆ ಮಾಡ್ತಾಳೋ ಅನ್ನೋ ಭಯ ಆಕೆಗೆ. ತನ್ನ ಎಲ್ಲ ನೋವನ್ನು ಧ್ರುವನ ಮುಂದೆ ಹೇಳಿಕೊಳ್ತಿದ್ದಾಳೆ.


    ಇದನ್ನೂ ಓದಿ: Kannadathi: ಯಾರೋ ಮಾಡಿದ ತಪ್ಪಿಗೆ ಪೊಲೀಸ್ ಠಾಣೆಯಲ್ಲಿ ಭುವಿ, ಸಾನಿಯಾ ಮಾಡಿದ್ದ ಕುತಂತ್ರನಾ ಇದು?


    ನಿಜ ಹೇಳಲು ಧುವ್ರನೇ ಬರಬೇಕು
    ಧ್ರುವನಿಗೆ ತನ್ನ ಅಮ್ಮ ವೈದೇಹಿ ಎಂದು ಗೊತ್ತು. ಆ ನಿಜ ಹೇಳಲು ಬರುವಾಗ್ಲೇ ಸುಹಾಸಿನಿ ಧ್ರುವನಿಗೆ ಅಪಘಾತ ಮಾಡಿಸಿದ್ಲು. ಅಂದಿನಿಂದ ಆತ ಕೋಮಾಗೆ ಹೋಗಿದ್ದಾನೆ. ಈಗ ಸತ್ಯ ಗೊತ್ತಾಗಬೇಕು ಎಂದ್ರೆ ಧ್ರುವ ಮೊದಲಿನಂತೆ ಆಗಬೇಕು. ಅವನೇ ಎದ್ದು ಬಂದು ತನ್ನ ಅಣ್ಣಂದಿರಿಗೆ ತಾಯಿ ಬಗ್ಗೆ ಸತ್ಯ ಹೇಳಬೇಕು.


    Zee Kannada serial, Kannada serial, Gattimela serial, Gattimela serial Kannada cast, Real mother in problem, ಗಟ್ಟಿಮೇಳ ಧಾರಾವಾಹಿ, ಬೇರೆ ಯಾರನ್ನೋ ಅಮ್ಮ ಅನ್ನುತ್ತಿದ್ದಾರೆ ವೇದಾಂತ್,ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಸುಹಾಸಿನಿ


    ವೇದಾಂತ್‍ಗೆ ತನ್ನ ನಿಜವಾದ ಅಮ್ಮನ ಬಗ್ಗೆ ಗೊತ್ತಾಗುತ್ತಾ? ಸುಹಾಸಿನಿ ಮೋಸ ತಿಳಿಯುತ್ತಾ? ಎಲ್ಲವನ್ನೂ ನೋಡಲು ಗಟ್ಟಿಮೇಳ ಸೀರಿಯನ್ ನೋಡಬೇಕು.

    Published by:Savitha Savitha
    First published: