Gattimela: ವೇದಾಂತ್‍ಗೆ ಅಮ್ಮ ಸುಹಾಸಿನಿ ಮೇಲೆ ಅನುಮಾನ ಬಂದಿದ್ಯಾ?

ವೇದಾಂತ್ ಸಡನ್ ಆಗಿ ಸುಹಾಸಿನಿಯನ್ನು ಪ್ರಶ್ನೆ ಮಾಡಿದ ಕಾರಣ, ಸುಹಾಸಿನಿ ಶಾಕ್ ಆಗಿದ್ದಾಳೆ. ವೇದಾಂತ್‍ಗೆ ನನ್ನ ಮೇಲೆ ಅನುಮಾನ ಬಂದಿದ್ಯಾ ಅಂತ ಚಡಪಡಿಸುತ್ತಿದ್ದಾಳೆ. ಏನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಸಂಚಿಕೆ ನೋಡಬೇಕು.

ಗಟ್ಟಿಮೇಳ

ಗಟ್ಟಿಮೇಳ

  • Share this:
    ಗಟ್ಟಿಮೇಳ (Gattimela) , ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜಪಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ ಸುಹಾಸಿನಿ. ಸುಹಾಸಿನಿ, ವೇದಾಂತ್ ಬಳಿ ಸುಹಾಸಿನಿ ಫೌಂಡೇಷನ್ (Foundation) ಗೆ 25 ಲಕ್ಷ  (25 Lacks)ಬೇಕು ಎನ್ನುತ್ತಾಳೆ. ಇಷ್ಟು ದಿನ ಏನೂ ಮಾತನಾಡದಿದ್ದ ವೇದಾಂತ್, ಈಗ ತಾಯಿ ಬಳಿ ಲೆಕ್ಕ ಕೇಳುತ್ತಿದ್ದಾನೆ.

    ವೇದಾಂತ್ ಬಳಿ ಹಣ ಕೇಳಿದ ಸುಹಾಸಿನಿ
    ಸುಹಾಸಿನಿ, ವೇದಾಂತ್ ಬಳಿ ಹಣ ಕೇಳಲು ಮೊದಲು ಪೀಠಿಕೆ ಹಾಕುತ್ತಾಳೆ. ಹೊಸ ಪ್ರಾಜೆಕ್ಟ್ ಹೇಗೆ ನಡೆಯುತ್ತಿದೆ ಎಂದು ವಿಚಾರಿಸುತ್ತಾಳೆ. ವೇದಾಂತ್ ಪರವಾಗಿಲ್ಲ ಅಮ್ಮ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳುತ್ತಾನೆ. ನಂತರ ಫೌಂಡೇಷನ್‍ಗೆ 25 ಲಕ್ಷ ಹಣ ಬೇಕಿತ್ತು ಎನ್ನುತ್ತಾಳೆ. ಯಾಕೆ ಈ ರೀತಿ ಕೇಳ್ತಾ ಇದ್ದೀರಾ? ನಿಮ್ಮ ಅಕೌಂಟ್‍ಗೆ ಪ್ರತಿ ತಿಂಗಳು ದುಡ್ಡು ಬರುವಂತೆ ಮಾಡಿಸಿದ್ನಲ್ಲಾ ಎನ್ನುತ್ತಾನೆ. ಮುಂಚಿನ ತರ ಫೌಂಡೇಷನ್‍ಗೆ ಹಣ ಬರುತ್ತಿಲ್ಲ. ವಿಕ್ರಾಂತ್ ಅಕೌಂಟ್ ರೂಲ್ಸ್ ಚೇಂಜ್ ಮಾಡಿದ್ದಾನೆ ಎನ್ನುತ್ತಾಳೆ. ಅದಕ್ಕೆ ನಿನ್ನ ಬಳಿ ಹಣ ಕೇಳುತ್ತಿದ್ದೇನೆ ತಪ್ಪಾಗಿ ತಿಳಿದುಕೊಳ್ಳಬೇಡ ಎನ್ನುತ್ತಾಳೆ.

    25 ಲಕ್ಷದ ಬಗ್ಗೆ ಮಾಹಿತಿ ಕೇಳಿದ ವೇದಾಂತ್
    ಸುಹಾಸಿನಿ ಹಣ ಕೇಳಿದ್ದಕ್ಕೆ, ವೇದಾಂತ್ ಸಾರಿ ಅಮ್ಮ, ಈಗಲೇ ವಿಕ್ರಾಂತ್‍ಗೆ ಕಾಲ್ ಮಾಡಿ ಹಣ ಕಳಿಸಲು ಹೇಳುತ್ತೇನೆ ಅನ್ನುತ್ತಾನೆ. ಹೀಗೆ ಕೇಳ್ತೀನಿ ಅಂತ ಬೇಜಾರಾಗಬೇಡಿ. ನಾನು ಈ ಬಗ್ಗೆ ನಿಮ್ಮಲ್ಲಿ ಕೇಳಬಾರದು. ನಾನು ಯಾವತ್ತೂ ಪ್ರಶ್ನೆ ಮಾಡಿಲ್ಲ. ಮಾಡಲು ಬಾರದು. ಯಾಕಂದ್ರೆ ನೀವ್ ಮಾಡ್ತಿರೋ ನೋ ಬಿಲ್ ಕಾಸ್ಟ್. ಆದ್ರೂ ಪ್ರತಿ ತಿಂಗಳು 25 ಲಕ್ಷ ಕರ್ಚಾಗುತ್ತಿದೆ. 25 ಲಕ್ಷ ಚಿಕ್ ಅಮೌಂಟ್ ಅಲ್ಲ. ನಾನು ಅದನ್ನು ಖಂಡಿತವಾಗಲೂ ಕ್ರೆಡಿಟ್ ಮಾಡಿಸುತ್ತೇನೆ. ಯಾವುಕ್ಕೆ ಕರ್ಚು ಆಗುತ್ತಿದೆ ಎಂದು ತಿಳಿದುಕೊಳ್ಳಬಹುದಾ ಎಂದು ಕೇಳುತ್ತಾನೆ.

    ಇದನ್ನೂ ಓದಿ: Olavina Nildana: ಸಿದ್ಧಾಂತ್ ಮನಸ್ಸಿನಲ್ಲಿ ತಾರಿಣಿ ಮೇಲೆ ಪ್ರೀತಿ ಇದ್ಯಾ? ಸತ್ಯ ಬಾಯ್ಬಿಡಿಸಲು ಅತ್ತಿಗೆಯ ಐಡಿಯಾ!

    ಒಳ್ಳೆ ಕೆಲಸಕ್ಕೆ ನನ್ನ ಬೆಂಬಲ ಇದೆ
    ವೇದಾಂತ್ ಕೇಳಿದ ಪ್ರಶ್ನೆಗೆ ಸುಹಾಸಿನಿ ಶಾಕ್ ಆಗಿ, ಅದು ವೇದಾಂತ್ ಸುಹಾಸಿನಿ ಫೌಂಡೇಷನ್ ಕಡೆಯಿಂದ ಅನಾಥರಿಗೆ, ವೃದ್ಧಾಶ್ರಮಕ್ಕೆ, ಅಂಗವಿಕಲರಿಗೆ ಡೊನೇಷನ್ ಕೊಡ್ತಾ ಇದ್ದೀನಿ. ಕಷ್ಟ ಅಂತ ಬಂದವರಿಗೆ ಸಹಾಯ ಮಾಡಿದ್ದೀನಿ. ಬೇಕಿದ್ರೆ ಮಾಹಿತಿ ಕೊಡ್ತೀನಿ ಅಂತ ಹೇಳುತ್ತಾಳೆ. ಡಿಟೇಲ್ಸ್ ಕೊಡಿ ಅಂತ ನಾನು ಖಂಡಿತಾ ಕೇಳ್ತಾ ಇಲ್ಲ ಅಮ್ಮ. ಆದ್ರೂ ನಿಮಗೆ ತೋರಿಸಬೇಕಲ್ವಾ ಎಂದು ಸುಹಾಸಿನಿ ಹೇಳುತ್ತಾಳೆ. ಒಂದು ಒಳ್ಳೆ ಕೆಲಸ ಮಾಡಲು ನನ್ನ ಬೆಂಬಲ ಇದ್ದೇ ಇರುತ್ತೆ ಎಂದು ವೇದಾಂತ್ ಹೇಳುತ್ತಾನೆ.

    Zee Kannada serial, Kannada serial, Gattimela serial, Gattimela serial Kannada cast, Foundation found 25 lacks episode, ಗಟ್ಟಿಮೇಳ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಸುಹಾಸಿನಿ


    ಅಕೌಂಟ್ಸ್ ಸರಿಯಾಗಿ ಇರಬೇಕು ಅಮ್ಮ
    ಸರ್ಕಾರದ ರೂಲ್ಸ್ ಚೇಂಜ್ ಆಗ್ತಿದೆ ಅಂತ ನಮ್ಮ ಅಡಿಟರ್ ಹೇಳ್ತಾ ಇದ್ರು ಅಂತ ವೇದಾಂತ್ ತನ್ನ ಅಮ್ಮನ ಬಳಿ ಹೇಳ್ತಾ ಇದ್ದಾನೆ. ಈ ಸೋಶಿಯಲ್ ಸರ್ವಿಸ್ ಮಾಡೋ ಸಂಸ್ಥೆಗಳು, ತಮ್ಮ ಅಕೌಂಟನ್ನು ಕ್ಲೀನ್ ಆಗಿ ಇಟ್ಟುಕೊಂಡು, ರಿಜಿಸ್ಟ್ರೇಶನ್ ಮಾಡಿಸಿಕೊಳ್ಳಬೇಕಂತೆ. ಅಕೌಂಟ್ಸ್ ಕ್ಲೀನ್ ಆಗಿದ್ರೆ ಸಾಕು. ನಿಮ್ಮ ಅಕೌಂಟ್ ಸರಿಯಾಗಿ ಹ್ಯಾಂಡಲ್ ಮಾಡಿ ಎನ್ನುತ್ತಾನೆ.

    ಇದನ್ನೂ ಓದಿ: Ramachari Serial: ಇನ್ಮೇಲೆ ಕಿತ್ತಾಡೋದು ಬೇಡ ಎಂದು ರಾಮಾಚಾರಿಗೆ ಹೇಳಿದ ಚಾರು! ಇದ್ಯಾವ ಹೊಸ ಪ್ಲಾನ್?

    ಆದ್ರೂ ವೇದಾಂತ್ ಸಡನ್ ಆಗಿ ಸುಹಾಸಿನಿಯನ್ನು ಪ್ರಶ್ನೆ ಮಾಡಿದ ಕಾರಣ, ಸುಹಾಸಿನಿ ಶಾಕ್ ಆಗಿದ್ದಾಳೆ. ವೇದಾಂತ್‍ಗೆ ನನ್ನ ಮೇಲೆ ಅನುಮಾನ ಬಂದಿದ್ಯಾ ಅಂತ ಚಡಪಡಿಸುತ್ತಿದ್ದಾಳೆ. ಏನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಸಂಚಿಕೆ ನೋಡಬೇಕು.
    Published by:Savitha Savitha
    First published: