Gattimela serial: ಕಳ್ಳ ಡಾಕ್ಟರ್ ತೇಜಸ್ ಬಗ್ಗೆ ಸತ್ಯ ಪತ್ತೆ ಹಚ್ಚಿದ ವಿಕ್ರಾಂತ್, ಅದಿತಿ ನಿಶ್ಚಿತಾರ್ಥ ನಿಲ್ಲಿಸುತ್ತಾನಾ?

ವಿಕ್ಕಿಗೆ ಈಗ ತೇಜಸ್ ಬಗ್ಗೆ ಎಲ್ಲ ಗೊತ್ತಾಗಿದೆ. ಆತ ಒಬ್ಬ ಮೋಸಗಾರ ಎಂದು ತಿಳಿದಿದೆ. ವೇದಾಂತ್ ಮನೆಯಲ್ಲೇ ಅದಿತಿ ನಿಶ್ಚಿತಾರ್ಥ ನಡೆಯುತ್ತಿದೆ. ಎಲ್ಲದೂ ಸಂಭ್ರಮದಿಂದ ಇದ್ದಾರೆ. ಈಗ ವಿಕ್ಕಿ ಬಂದು ನಿಶ್ಚಿತಾರ್ಥ ನಿಲ್ಲಿಸುತ್ತಾನಾ?

ಅದಿತಿ

ಅದಿತಿ

  • Share this:
    ಗಟ್ಟಿಮೇಳ (Gattimele), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಶುರುವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್‍ರನ್ನು ಮದುವೆಯಾಗಿದ್ದಾರೆ. ವೇದಾಂತ್  ತಾಯಿ ಸುಹಾಸಿನಿ. ಸೊಸೆಯರನ್ನು ಕಂಡ್ರೆ ಆಗಲ್ಲ. ಈಗ ಮೂರನೇ ಮಗಳು ಅದಿತಿ ಮದುವೆ (Marriage) ಮಾಡಲು ತಯಾರಿ (Preparation) ನಡೆಯುತ್ತಿದೆ.

    ಧ್ರುವನನ್ನು ಪ್ರೀತಿಸುತ್ತಿರುವ ಅದಿತಿ
    ವೇದಾಂತ್ ತಾಯಿ ಸುಹಾಸಿನಿ. ಆಕೆಗೆ ತನ್ನ ಇಬ್ಬರು ಸೊಸೆಯಂದಿರು ಆರತಿ, ಅಮೂಲ್ಯ ಬಡವರ ಮನೆಯವರು ಎಂದು ಸ್ವಲ್ಪವೂ ಇಷ್ಟ ಇಲ್ಲ. ಚಾನ್ಸ್ ಸಿಕ್ಕಾಗೆಲ್ಲಾ ಅವರಿಗೆ ಅವಮಾನ ಮಾಡುತ್ತಲೇ ಇರುತ್ತಾಳೆ. ಈಗ ಅದಿತಿಯೂ ಧ್ರುವನನ್ನು ಪ್ರೀತಿಸುತ್ತಿದ್ದು, ಅದಕ್ಕೆ ಆಕೆ ಒಪ್ಪಲು ಚಾನ್ಸೇ ಇಲ್ಲ ಎಂದು ಅದಿತಿಗೆ ಗೊತ್ತು. ಅಲ್ಲದೇ ಮನೆಯಲ್ಲಿ ಹೇಳೋಣ ಎಂದ್ರೆ, ಧ್ರುವನಿಗೆ ಹುಷಾರಿಲ್ಲದ ಕಾರಣ ಯಾರೂ ಒಪ್ಪಲ್ಲ ಎಂದು ಅದಿತಿ ಬೇಸರ ಮಾಡಿಕೊಂಡಿದ್ದಾಳೆ. ಸುಹಾಸಿನಿ ಅದಿತಿಯನ್ನು ಧ್ರುವನಿಂದ ದೂರ ಮಾಡಲು ಅದಿತಿಗೆ ಗಂಡು ಹುಡುಕಿದ್ದಾಳೆ.

    Zee Kannada serial, Kannada serial, Gattimela serial, Gattimela serial Kannada cast, Engagement episode in serial, ಗಟ್ಟಿಮೇಳ ಧಾರಾವಾಹಿ, ಳ್ಳ ಡಾಕ್ಟರ್ ತೇಜಸ್ ಬಗ್ಗೆ ಸತ್ಯ ಪತ್ತೆ ಹಚ್ಚಿದ ವಿಕ್ರಾಂತ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಗಟ್ಟಿಮೇಳ


    ತೇಜಸ್ ಎನ್ನುವ ಹುಡುಗನ ಜೊತೆ ಅದಿತಿ ನಿಶ್ಚಿತಾರ್ಥ
    ಪರಿಮಳ ತನ್ನ ಮಗಳು ಅದಿತಿಗೆ ತೇಜಸ್ ಎನ್ನುವ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಸಲು ಮುಂದಾಗಿದ್ದಾಳೆ. ತೇಜಸ್ ಡಾಕ್ಟರ್ , ತುಂಬಾ ಒಳ್ಳೆವನು. ಅವನ ಅಪ್ಪ-ಅಮ್ಮನು ಒಳ್ಳೆಯವರು ಎಂದು ಮದುವೆ ಮಾಡಬೇಕು ಎಂದು, ನಿಶ್ಚಿತಾರ್ಥ ಹಮ್ಮಿಕೊಂಡಿದ್ದಾರೆ. ವೇದಾಂತ್, ಅಮೂಲ್ಯ, ಆರತಿ ಸಹ ಒಪ್ಪಿದ್ದಾರೆ. ಆದ್ರೆ ಅದಿತಿಗೆ ಈ ಮದುವೆ ಸ್ವಲ್ಪವೂ ಇಷ್ಟ ಇಲ್ಲ.

    ಇದನ್ನೂ ಓದಿ: Ramachari: ಪೊಲೀಸ್ ಮಗಳನ್ನೇ ಕಿಡ್ನ್ಯಾಪ್ ಮಾಡಿಸಿದ ರಾಮಾಚಾರಿ, ಅವರ ದಾರಿಯಲ್ಲೇ ಹೋಗಿ ನ್ಯಾಯಕ್ಕಾಗಿ ಹೋರಾಟ!

    ತೇಜಸ್ ಬಗ್ಗೆ ಸತ್ಯ ಕಂಡುಹಿಡಿದ ವಿಕ್ರಾಂತ್
    ಆದ್ಯಾ, ತೇಜಸ್ ಸರಿ ಇಲ್ಲ ವಿಕ್ಕಿ ಅಣ್ಣ. ಅವನ ಮೇಲೆ ಅದಿತಿಗೆ ನಂಬಿಕೆಯೇ ಬರುತ್ತಿಲ್ಲ. ನೀನು ಸ್ಪಲ್ಪ ಅವನ ಬಗ್ಗೆ ವಿಚಾರಿಸು ಎಂದಿರುತ್ತಾಳೆ. ಅದಕ್ಕೆ ವಿಕ್ರಾಂತ್, ಕಾಂತನ ಜೊತೆ ಸೇರಿ ತೇಜಸ್ ಬಗ್ಗೆ ತನಿಖೆ ಮಾಡುತ್ತಾರೆ. ಆಗ ತೇಜಸ್ ಒಬ್ಬ ಕೆಟ್ಟ ಮನುಷ್ಯ ಎಂದು ತಿಳಿಯುತ್ತೆ. ತೇಜಸ್ ಯಾವುದೋ ಕೇಸ್‍ನಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಅಲ್ಲದೇ ಆತನ ಅಪ್ಪ -ಅಮ್ಮ ಇನ್ನೂ ಜೈಲಿನಲ್ಲೇ ಇದ್ದಾರೆ. ಆದ್ರೂ ಇವನು ಸುಳ್ಳು ಹೇಳಿ, ಎಲ್ಲರನ್ನು ನಂಬಿಸಿ ಅದಿತಿ ಮದುವೆ ಆಗಲು ತಯಾರಿ ನಡೆಸಿದ್ದಾನೆ.

    Zee Kannada serial, Kannada serial, Gattimela serial, Gattimela serial Kannada cast, Engagement episode in serial, ಗಟ್ಟಿಮೇಳ ಧಾರಾವಾಹಿ, ಳ್ಳ ಡಾಕ್ಟರ್ ತೇಜಸ್ ಬಗ್ಗೆ ಸತ್ಯ ಪತ್ತೆ ಹಚ್ಚಿದ ವಿಕ್ರಾಂತ್, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ವಿಕ್ರಾಂತ್- ಧ್ರುವ


    ಸುಹಾಸಿನಿ ಕಡೆ ಹುಡುಗ ಈ ತೇಜಸ್
    ಸಹಾಸಿನಿ ಹೇಗಾದ್ರೂ ಮಾಡಿ ಅದಿತಿಯನ್ನು ಧ್ರುವನಿಂದ ದೂರು ಮಾಡಲು, ಈ ತೇಜಸ್‍ನನ್ನು ಕರೆಸಿದ್ದಾಳೆ. ಹೇಗಾದ್ರೂ ಸರಿ ಅದಿತಿ ಧ್ರುವನಿಂದ ದೂರ ಇರಬೇಕು ಎನ್ನುವುದು ಆಕೆಯ ಪ್ಲ್ಯಾನ್. ವಿಕ್ಕಿಗೆ ಈತ ಸುಹಾಸಿನಿ ಕಡೆಯವನು ಅಂತ ಗೊತ್ತಾದ್ರೆ, ಸುಮ್ನೆ ಬಿಡ್ತಾನಾ? ಮೊದಲೇ ಸುಹಾಸಿನಿಯನ್ನು ಕಂಡ್ರೆ ವಿಕ್ಕಿಗೆ ಆಗಲ್ಲ.

    ಇದನ್ನೂ ಓದಿ: Kendasampige: ಸಂಕಷ್ಟದಲ್ಲಿ ಸುಮನಾ; ಅಪ್ಪನ ಜೀವ ಉಳಿಸಲು ಹೋಗಿ ವಿಜಿ ಅಕ್ಕನ ವ್ಯೂಹದಲ್ಲಿ ಬಂಧಿ

    ನಿಶ್ಚಿತಾರ್ಥ ನಿಲ್ಲಿಸುತ್ತಾನಾ ವಿಕ್ಕಿ?
    ವಿಕ್ಕಿಗೆ ಈಗ ತೇಜಸ್ ಬಗ್ಗೆ ಎಲ್ಲ ಗೊತ್ತಾಗಿದೆ. ಆತ ಒಬ್ಬ ಮೋಸಗಾರ ಎಂದು ತಿಳಿದಿದೆ. ವೇದಾಂತ್ ಮನೆಯಲ್ಲೇ ಅದಿತಿ ನಿಶ್ಚಿತಾರ್ಥ ನಡೆಯುತ್ತಿದೆ. ಎಲ್ಲರು ಸಂಭ್ರಮದಿಂದ ಇದ್ದಾರೆ. ಈಗ ವಿಕ್ಕಿ ಬಂದು ನಿಶ್ಚಿತಾರ್ಥ ನಿಲ್ಲಿಸುತ್ತಾನಾ. ವಿಕ್ಕಿ ಹೇಳೋ ಮಾತನ್ನು ಮನೆಯವರು ನಂಬ್ತಾರಾ? ಅದಿತಿ ಕಷ್ಟದಿಂದ ಪಾರಾಗ್ತಾಳಾ? ಎಲ್ಲವನ್ನು ನೋಡಲು ಗಟ್ಟಿಮೇಳ ಸೀರಿಯಲ್ ನೋಡಬೇಕು.
    Published by:Savitha Savitha
    First published: