Gattimela: ತನ್ನಮ್ಮ ಸುಹಾಸಿನಿ ಅಲ್ಲ ಅನ್ನೋ ವಿಷಯ ಆದ್ಯಾಗೆ ತಿಳೀತಾ? ಅಣ್ಣ ವೇದಾಂತ್ ಮುಂದೆ ಪ್ರಶ್ನೆಗಳ ಸುರಿಮಳೆ

ವೇದಾಂತ್ ಬಳಿ ಆದ್ಯಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾಳೆ. ಅಣ್ಣ ನನ್ನನ್ನು ಹೆತ್ತಮ್ಮ ಯಾರು ಎಂದು. ಅದಕ್ಕೆ ವೇದಾಂದ್ ಸುಹಾಸಿನಿ ಅಮ್ಮನೇ ನಮಗೆ ಎಲ್ಲ. ಅವಳೇ ನಮ್ಮನ್ನು ಸಾಕಿದ್ದು ಎಂದು ಕೋಪಮಾಡಿಕೊಂಡು ಹೊರಡಲು ಸಿದ್ಧನಾಗುತ್ತಾನೆ. ಆಗ ಆದ್ಯಾ ವೈದೇಹಿ ಅಂದ್ರೆ ಯಾರು? ಅವರಿಗೂ ಈ ಮನೆಗೂ ಏನ್ ಸಂಬಂಧ ಎಂದು ಕೇಳುತ್ತಾಳೆ

ಗಟ್ಟಿಮೇಳ

ಗಟ್ಟಿಮೇಳ

 • Share this:
  ಗಟ್ಟಿಮೇಳ (Gattimela) , ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವಿಕ್ರಾಂತ್, ವೇದಾಂತ್ ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ ಸುಹಾಸಿನಿ. ಆದ್ರೆ ಆಕೆ ವೇದಾಂತ್ ಅವರ ನಿಜವಾದ ತಾಯಿ (Real Mother) ಅಲ್ಲ. ಇದು ವೇದಾಂತ್, ವಿಕ್ಕಿ, ಧ್ರುವ ಎಲ್ಲರಿಗೂ ಗೊತ್ತು. ಆದ್ರೆ ಆದ್ಯಾಗೆ ಗೊತ್ತಿರಲಿಲ್ಲ. ಈಗ ಆದ್ಯಾಗೂ ಸತ್ಯ (Truth) ಗೊತ್ತಾಗಿದೆ.

  ವಿಕ್ಕಿ, ಅಮೂಲ್ಯ ಮಾತನಾಡುವುದನ್ನು ಕೇಳಿಸಿಕೊಂಡ ಆದ್ಯಾ
  ಧ್ರುವಿನಿಗೆ ಅಪಘಾತವಾಗಿ ಏನೂ ನೆನಪಿಲ್ಲ. ಕೂತಲ್ಲೇ ಕೂತು ಇರುತ್ತಾನೆ. ಅದಕ್ಕೆ ವಿಕ್ಕಿ ಬೇಸರ ಮಾಡಿಕೊಂಡಿದ್ದಾನೆ. ನಾನು, ಅಣ್ಣ ಇದ್ದೂ, ನಿನ್ನ ಈ ಸ್ಥಿತಿಗೆ ತಂದವರನ್ನು ಕಂಡು ಹಿಡಿಯಲು ಆಗುತ್ತಿಲ್ಲ ಎಂದು ಕೊರುಗುತ್ತಾನೆ. ಆಗ ಅಮೂಲ್ಯ ಅಲ್ಲಿಗೆ ಬರುತ್ತಾಳೆ. ಅಮೂಲ್ಯ ಬಳಿ ವಿಕ್ರಾಂತ್, ನಮ್ಮ ನಿಜವಾದ ಅಮ್ಮ ಯಾರು ಅಂತ ಧ್ರುವನಿಗೆ ಗೊತ್ತಾಗಿದೆ. ಅದಕ್ಕೆ ಅವನನ್ನು ಕೊಲ್ಲೋ ಯತ್ನ ಮಾಡಿದ್ದಾರೆ ಎಂದು ಹೇಳುತ್ತಿರುತ್ತಾನೆ. ಇದನ್ನು ಕೇಳಿಸಿಕೊಂಡ ಆದ್ಯಾ ಕಂಗಾಲಾಗಿದ್ದಾಳೆ. ಹಾಗಾದ್ರೆ ನಮ್ಮ ನಿಜವಾದ ಅಮ್ಮ ಯಾರೂ ಎಂದು ಚಡಪಡಿಸುತ್ತಿದ್ದಾಳೆ.

  ಅಜ್ಜಿ ಬಳಿ ಸತ್ಯ ಕಂಡುಕೊಂಡ ಆದ್ಯಾ
  ಆದ್ಯಾ ನನ್ನ ಅಮ್ಮ ಯಾರು ಎಂದು ಅಜ್ಜಿಯನ್ನು ಕೇಳುತ್ತಾಳೆ. ಸುಹಾಸಿನಿ ನಮ್ಮ ಅಮ್ಮ ಅಲ್ವಾ ಅನ್ನುತ್ತಾಳೆ. ಅದಕ್ಕೆ ಅಜ್ಜೆ ಸತ್ಯ ಹೇಳುತ್ತಾಳೆ. ಸುಹಾಸಿನಿ ನಿಮ್ಮ ನಿಜವಾದ ಅಮ್ಮ ಅಲ್ಲ. ವೈದೇಹಿ ನಿಮ್ಮ ನಿಜವಾದ ತಾಯಿ ಎಂದು ಹೇಳುತ್ತಾಳೆ. ಅದನ್ನು ಕೇಳಿ ಆದ್ಯಾ ಶಾಕ್ ಆಗಿದ್ದಾಳೆ.

  ಇದನ್ನೂ ಓದಿ: Kendasampige: ಕಾಲೋನಿ ನೀರಿಗಾಗಿ ಕಾರ್ಪೊರೇಟರ್ ಮನೆ ಬಾಗಿಲಿಗೆ ಕೊಡ ಹಿಡಿದು ಬಂದ ಸುಮನಾ?

  ವೇದಾಂತ್ ಬಳಿ ಪ್ರಶ್ನೆ ಮಾಡುತ್ತಿರುವ ಆದ್ಯಾ
  ವೇದಾಂತ್ ಬಳಿ ಆದ್ಯಾ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದಾಳೆ. ಅಣ್ಣ ನನ್ನನ್ನು ಹೆತ್ತಮ್ಮ ಯಾರು ಎಂದು. ಅದಕ್ಕೆ ವೇದಾಂದ್ ಸುಹಾಸಿನಿ ಅಮ್ಮನೇ ನಮಗೆ ಎಲ್ಲ. ಅವಳೇ ನಮ್ಮನ್ನು ಸಾಕಿದ್ದು ಎಂದು ಕೋಪಮಾಡಿಕೊಂಡು ಹೊರಡಲು ಸಿದ್ಧನಾಗುತ್ತಾನೆ. ಆಗ ಆದ್ಯಾ ವೈದೇಹಿ ಅಂದ್ರೆ ಯಾರು? ಅವರಿಗೂ ಈ ಮನೆಗೂ ಏನ್ ಸಂಬಂಧ ಎಂದು ಕೇಳುತ್ತಾಳೆ. ಅದಕ್ಕೆ ವೇದಾಂತ್ ಶಾಕ್ ಆಗಿದ್ದಾನೆ. ಇವಳಿಗೆ ಹೇಗೆ ವಿಷ್ಯ ಗೊತ್ತಾಯ್ತು ಅಂತ ಚಡಪಡಿಸುತ್ತಿದ್ದಾನೆ.

  Zee Kannada serial, Kannada serial, Gattimele serial, Gattimele serial Kannada cast, Mother sentiment in episode, ಗಟ್ಟಿಮೇಳ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
  ಆದ್ಯಾ


  ವಿಕ್ರಾಂತ್, ಅಮೂಲ್ಯ ಏನ್ ಹೇಳ್ತಾರೆ
  ಆದ್ಯಾ, ವೇದಾಂತ್‍ನನ್ನು ಪ್ರಶ್ನೆ ಮಾಡುವಾಗ ವಿಕ್ಕಿ, ಅಮೂಲ್ಯ ಅಲ್ಲೇ ಇದ್ದಾರೆ. ಅವರೇನಾದ್ರೂ ಸತ್ಯ ಹೇಳ್ತಾರಾ? ಇಲ್ಲ ಅವರನ್ನೂ ವೇದಾಂತ್ ತಡೆಯತ್ತಾನೋ ಗೊತ್ತಿಲ್ಲ. ಆದ್ರೆ ಆದ್ಯಾ ಮಾತ್ರ ತನಗೆ ನಿಜ ಗೊತ್ತಾಗಲೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಈಗ ವೇದಾಂತ್ ಏನ್ ಮಾಡ್ತಾನೆ ನೋಡಬೇಕು.

  ಇದನ್ನೂ ಓದಿ: Ramachari Serial: ಇನ್ಮೇಲೆ ಕಿತ್ತಾಡೋದು ಬೇಡ ಎಂದು ರಾಮಾಚಾರಿಗೆ ಹೇಳಿದ ಚಾರು! ಇದ್ಯಾವ ಹೊಸ ಪ್ಲಾನ್?

  ತಂಗಿ ಬಳಿ ಸತ್ಯ ಹೇಳ್ತಾನಾ ವೇದಾಂತ್?
  ಆದ್ಯಾಗೆ ಈಗ ಎಲ್ಲ ಸತ್ಯ ಗೊತ್ತಾಗಿದೆ. ಅಲ್ಲದೇ ವೇದಾಂತ್ ನನ್ನು ಪ್ರಶ್ನೆ ಬೇರೆ ಮಾಡ್ತಿದ್ದಾಳೆ. ಅದಕ್ಕೆ ವೇದಾಂತ್ ತನ್ನ ತಂಗಿ ಆದ್ಯಾಗೆ ಎಲ್ಲಾ ಸತ್ಯ ಹೇಳ್ತಾನಾ. ತಮ್ಮ ನಿಜವಾದ ಅಮ್ಮ ವೈದೇಹಿ ಎಂದು ಒಪ್ಪಿಕೊಳ್ತಾನಾ? ಇಷ್ಟು ದಿನ ಸತ್ಯ ಏಕೆ ಮುಚ್ಚಿಟ್ಟಿದ್ವಿ ಎಂದು ಹೇಳುತ್ತಾನಾ? ಎಲ್ಲವನ್ನೂ ನೋಡಲು ಗಟ್ಟಿಮೇಳ ಧಾರಾವಾಹಿ ನೋಡಬೇಕು.
  Published by:Savitha Savitha
  First published: