Gattimela: 900 ಸಂಚಿಕೆ ಪೂರೈಸಿದ ಗಟ್ಟಿಮೇಳ ಧಾರಾವಾಹಿ, ಕಡಿಮೆಯಾಗಿಲ್ಲ ಕ್ರೇಜ್!

ಗಟ್ಟಿಮೇಳ ಧಾರಾವಾಹಿ ಶುರುವಾದಾಗಿನಿಂದಲೂ ತನ್ನದೇ ಅದ ರೀತಿಯಲ್ಲಿ ಅಭಿಮಾನಿಗಳನ್ನು ಕಾಪಾಡಿಕೊಂಡು ಬಂದಿದೆ. ಹಲವು ತಿರುವುಗಳ ಧಾರಾವಾಹಿಗೆ 900 ಸಂಚಿಕೆಯ ಸಂಭ್ರಮ. ಎಷ್ಟೋ ಅಭಿಮಾನಿಗಳು ಗಟ್ಟಿಮೇಳ ಧಾರಾವಾಹಿ ಬಗ್ಗೆ ಅದೇ ರೀತಿ ಪ್ರೀತಿ ಇಟ್ಟುಕೊಂಡಿದ್ದಾರೆ.

900 ಸಂಚಿಕೆಗಳನ್ನು ಪೂರೈಸಿದ ಗಟ್ಟಿಮೇಳ ಧಾರಾವಾಹಿ

900 ಸಂಚಿಕೆಗಳನ್ನು ಪೂರೈಸಿದ ಗಟ್ಟಿಮೇಳ ಧಾರಾವಾಹಿ

  • Share this:
    ಗಟ್ಟಿಮೇಳ (Gattimela), ಜೀ ಕನ್ನಡ  (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ. ಗಟ್ಟಿಮೇಳ ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವೇದಾಂತ್, ವಿಕ್ರಾಂತ್ ರನ್ನು ಮದುವೆಯಾಗಿದ್ದಾರೆ. ವೇದಾಂತ್ ತಾಯಿ (Mother) ಸುಹಾಸಿನಿ. ಈಕೆ ನಿಜವಾದ ತಾಯಿ ಅಲ್ಲ. ಜೊತೆಯಲ್ಲೇ ಇದ್ದುಕೊಂಡು ಇವರ ವಿರುದ್ಧ ಪಿತೂರಿ ಮಾಡುತ್ತಾ ಇರುತ್ತಾಳೆ. ಹಲವು ತಿರುವುಗಳ ಧಾರಾವಾಹಿಗೆ 900 ಸಂಚಿಕೆಯ (900 Episode) ಸಂಭ್ರಮ.

    ಗಟ್ಟಿಮೇಳಕ್ಕೆ 900 ಸಂಚಿಕೆಯ ಸಂಭ್ರಮ

    ಗಟ್ಟಿಮೇಳ ಧಾರಾವಾಹಿ ಶುರುವಾದಾಗಿನಿಂದಲೂ ತನ್ನದೇ ಅದ ರೀತಿಯಲ್ಲಿ ಅಭಿಮಾನಿಗಳನ್ನು ಕಾಪಾಡಿಕೊಂಡು ಬಂದಿದೆ. ಹಲವು ತಿರುವುಗಳ ಧಾರಾವಾಹಿಗೆ 900 ಸಂಚಿಕೆಯ ಸಂಭ್ರಮ. ಎಷ್ಟೋ ಅಭಿಮಾನಿಗಳು ಗಟ್ಟಿಮೇಳ ಧಾರಾವಾಹಿ ಬಗ್ಗೆ ಅದೇ ರೀತಿ ಪ್ರೀತಿ ಇಟ್ಟುಕೊಂಡಿದ್ದಾರೆ.

    ಅಮ್ಮನ ಹುಡುಕಾಟದಲ್ಲಿ ವೇದಾಂತ್

    ಇನ್ನು ಧಾರಾವಾಹಿಯಲ್ಲಿ ಸುಹಾಸಿನಿ ವೇದಾಂತ್ ಅವರು ನಿಜವಾದ ತಾಯಿಯಲ್ಲ. ವೈದೇಹಿ ವೇದಾಂತ್ ಅವರ ಹೆತ್ತಮ್ಮ. ವೈದೇಹಿ ಬದುಕಿದ್ರೂ, ಸತ್ತಿದ್ದಾಳೆ ಎಂದು ಸುಹಾಸಿನಿ ನಂಬಿಸಿರುತ್ತಾಳೆ. ಆದ್ರೆ ಈಗ ಅವರ ತಾಯಿ ಬದುಕಿದ್ದಾರೆ ಎಂದು ಗೊತ್ತಾಗಿ ಅವರನ್ನು ಹುಡುಕುತ್ತಿದ್ದಾರೆ. ಇನ್ನೇನು ತಮ್ಮ ತಾಯಿ ಸಿಗಬಹುದು ಎಂಬ ಖುಷಿಯಲ್ಲಿ ಇದ್ದಾರೆ.

    ಇದನ್ನೂ ಓದಿ: Shrirasthu Shubhamasthu: 'ಶ್ರೀರಸ್ತು ಶುಭಮಸ್ತು' ಅಂತ ಕಿರುತೆರೆಗೆ ಬರ್ತಿದ್ದಾರೆ ಸುಧಾರಾಣಿ, ಜೀ ಕನ್ನಡದಲ್ಲಿ ಹೊಸ ಧಾರಾವಾಹಿ

    ಧ್ರುವನನ್ನು ಮುಗಿಸು ಎಂದ ಸುಹಾಸಿನಿಗೆ ಹೇಳಿದ ಅಗ್ನಿ

    ಅಗ್ನಿ ಈ ಧಾರಾವಾಹಿಗೆ ಬಂದಿರುವ ಹೊಸ ವಿಲನ್. ಇವನು ಹೇಳಿದ ಹಾಗೇ ಸುಹಾಸಿನಿ ಕೇಳ್ತಾಳೆ. ಧ್ರುವನಿಗೆ ಸುಹಾಸಿನಿ ಬಗ್ಗೆ ಎಲ್ಲಾ ಸತ್ಯ ಗೊತ್ತಾಗಿದೆ. ಅದಕ್ಕೆ ಅವನನ್ನು ಹೆಚ್ಚು ದಿನ ಜೀವಂತವಾಗಿ ಇಡಬೇಡ. ನಮಗೆ ರಿಸ್ಕ್ ಆಗುತ್ತೆ. ಅದಕ್ಕೆ ಅವನನ್ನು ಬೇಗ ಮುಗಿಸಿಬಿಡು ಎಂದು ಸುಹಾಸಿನಿಗೆ ಅಗ್ನಿ ಹೇಳುತ್ತಿದ್ದಾನೆ. ಅದಕ್ಕೆ ಸುಹಾಸಿನಿ ಸಹ ಸರಿ, ಅವನನ್ನು ಆದಷ್ಟು ಬೇಗ ಮೇಲಕ್ಕೆ ಕಳಿಸ್ತೀನಿ ಎಂದು ಹೇಳಿದ್ದಾಳೆ.

    Zee Kannada serial, Kannada serial, Gattimela serial, Gattimela serial Kannada cast, serial complete 900 episode, ಗಟ್ಟಿಮೇಳ ಧಾರಾವಾಹಿ, 900 ಸಂಚಿಕೆಗಳನ್ನು ಪೂರೈಸಿದ ಗಟ್ಟಿಮೇಳ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಗಟ್ಟಿಮೇಳ


    ಅಪ್ಪ-ಅಮ್ಮನಿಗೆ ಮನೆ ಕಟ್ಟಿ ಕೊಡೋ ಚಿಂತೆ

    ಇನ್ನು ಆರತಿ, ಅಮೂಲ್ಯ ತನ್ನ ಅಪ್ಪ-ಅಮ್ಮನಿಗೆ ಮನೆ ಕಟ್ಟಿಸಿಕೊಡಬೇಕು ಎಂದುಕೊಂಡಿದ್ದಾರೆ. ಅದು ತಮ್ಮ ಸ್ವಂತ ದುಡ್ಡಲ್ಲೇ. ಆದ್ರೆ ದುಡ್ಡು ಜೋಡಿಸಲು ಒದ್ದಾಡುತ್ತಿದ್ದಾರೆ. ಅಮೂಲ್ಯ ಕೆಲಸದ ದುಡ್ಡು ಕೊಟ್ರೆ, ಆರತಿ ಯೂಟ್ಯೂಬ್ ಚಾನೆಲ್ ಮಾಡುತ್ತಿದ್ದಾಳೆ. ಆದ್ರೂ ದುಡ್ಡು ಹೊಂದಿಸಲು ಆಗುತ್ತಿಲ್ಲ.

    ಇದನ್ನೂ ಓದಿ: Ramachari: ಒನಕೆ ಓಬವ್ವ ಮತ್ತೆ ಹುಟ್ಟಿ ಬರ್ತಿದ್ದಾರೆ! ರಾಮಾಚಾರಿ ಧಾರಾವಾಹಿಲಿ ಹೊಸ ಸಾಹಸ

    ಓದುತ್ತಾ ಕೆಲಸ ಮಾಡುತ್ತಿರುವ ಅಂಜು

    ಇನ್ನು ಪರಿಮಳ ಕೊನೆ ಮಗಳು ಅಂಜು. ಈ ಬಾರಿ ಪ್ರಥಮ ಪಿಯುಸಿ ಓದುತ್ತಿದ್ದಾಳೆ. ಅಮ್ಮ ಅಪ್ಪನ ಕಷ್ಟ ನೋಡಿ, ಅವರಿಗೆ ಸಹಾಯ ಮಾಡಬೇಕು ಎಂದು ಓದುತ್ತಾ, ಕೆಲಸಕ್ಕೆ ಸೇರಿದ್ದಾಳೆ. ಆದ್ರೆ ಮನೆಯಲ್ಲಿ ಈ ವಿಷ್ಯ ಗೊತ್ತಿಲ್ಲ. ಗೊತ್ತಾದ್ರೆ, ಆಕೆಯನ್ನು ಕೆಲಸ ಮಾಡಲು ಬಿಡ್ತಾರೋ, ಇಲ್ವೋ ಗೊತ್ತಿಲ್ಲ.

    Zee Kannada serial, Kannada serial, Gattimela serial, Gattimela serial Kannada cast, serial complete 900 episode, ಗಟ್ಟಿಮೇಳ ಧಾರಾವಾಹಿ, 900 ಸಂಚಿಕೆಗಳನ್ನು ಪೂರೈಸಿದ ಗಟ್ಟಿಮೇಳ ಧಾರಾವಾಹಿ, ಜೀ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಗಳು, Kannada news, Karnataka news,
    ಸುಹಾಸಿನಿ


    ಗಟ್ಟಿಮೇಳ 900 ಸಂಕಿಕೆಗಳನ್ನು ಪೂರೈಸಿದ ಖುಷಿಯಲ್ಲಿ ಇದೆ. ಇನ್ನೂ ಹೆಚ್ಚು ಎಪಿಸೋಡ್ ಮಾಡುವ ಉತ್ಸಾಹದಲ್ಲಿದೆ ಧಾರಾವಾಹಿ ತಂಡ. ದಿನದಿಂದ ದಿನಕ್ಕೆ ಕುತೂಹಲ ಮೂಡಿಸುತ್ತಿದೆ. ಮುಂದೇನಾಗುತ್ತೆ ಅಂತ ಅಭಿಮಾನಿಗಳು ಕಾಯ್ತಾ ಇರುತ್ತಾರೆ. ವೇದಾಂತ್‍ಗೆ ಅಮ್ಮ ಸಿಕ್ತಾಳಾ? ಅಮೂಲ್ಯ, ಆರತಿ ಅಪ್ಪ ಅಮ್ಮನಿಗೆ ಮನೆ ಕಟ್ಟಿಸಿ ಕೊಡ್ತಾರಾ? ಅದಿತಿ-ಧ್ರುವನ ಪ್ರೀತಿ ಸಕ್ಸಸ್ ಆಗುತ್ತಾ? ಅಂಜು ಕೆಲಸ ಸುಗಮ ಆಗುತ್ತಾ? ಎಲ್ಲವನ್ನೂ ನೋಡಲು ಗಟ್ಟಿಮೇಳ ಧಾರಾವಾಹಿ ನೋಡಬೇಕು.
    Published by:Savitha Savitha
    First published: