ಗಟ್ಟಿಮೇಳ (Gattimela), ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ (Serial). ಸೋಮವಾರದಿಂದ ಶುಕ್ರವಾರದವರಗೆ ರಾತ್ರಿ 8 ಗಂಟೆಗೆ ಪ್ರಸಾರವಾಗುತ್ತೆ. ಬಡತನದಲ್ಲಿರುವ 4 ಹೆಣ್ಣು ಮಕ್ಕಳ ತಾಯಿ ಎಲ್ಲರಿಗೂ ಮದುವೆ ಮಾಡಿ ಹೇಗೆ ತನ್ನ ಜವಾಬ್ದಾರಿ ನಿಭಾಯಿಸುತ್ತಾಳೆ ಅನ್ನೋ ಕಥೆ ಗಟ್ಟಿಮೇಳ ಧಾರಾವಾಹಿ. ಧಾರಾವಾಹಿಯಲ್ಲಿ 4 ಹೆಣ್ಣು ಮಕ್ಕಳ ತಾಯಿ (Mother) ಪರಿಮಳ. ಆಕೆಗೆ ಆರತಿ, ಅಮೂಲ್ಯ, ಅದಿತಿ, ಅಂಜು ಎಂಬ ಮಕ್ಕಳು. ಆರತಿ, ಅಮೂಲ್ಯಗೆ ಮದುವೆಯಾಗಿದ್ದು ಇಬ್ಬರು ಅಣ್ಣ-ತಮ್ಮ ಅಂದ್ರೆ ವಿಕ್ರಾಂತ್, ವೇದಾಂತ್ರನ್ನು ಮದುವೆ ಆಗಿದ್ದಾರೆ. ವೇದಾಂತ್ ಮನೆಗೆ ತಾನೇ ವೈದೇಹಿ ಎಂದುಕೊಂಡು ಚಂದ್ರಕಲಾ ಎಂಬ ಹೆಂಗಸು ಬಂದಿದ್ದಾಳೆ. ಅವಳ ಮೋಸಗಾರ್ತಿ ಎಂದು ಅಮೂಲ್ಯ ಕಂಡು ಹಿಡಿದಿದ್ದಾಳೆ. ಅದನ್ನು ವೇದಾಂತ್ ಬಳಿ ಹೇಳಲು ಹೋದ್ರೆ ಅವನು ನಂಬದೇ, ನೀನೇ ಮನೆ ಬಿಟ್ಟು ಹೋಗು ಎಂದಿದ್ದಾನೆ.
ವೈದೇಹಿ ಎಂದು ಬಂದ ಚಂದ್ರಕಲಾ
ವೇದಾಂತ್ ಅವರು ತಮ್ಮ ತಾಯಿ ಸತ್ತಿದ್ದಾಳೆ ಎಂದುಕೊಂಡಿದ್ರು. ತುಂಬಾ ವರ್ಷಗಳು ಆದ ನಂತರ ತಮ್ಮ ಅಮ್ಮ ಬದುಕಿರೋದು ಗೊತ್ತಾಗುತ್ತೆ. ಅದಕ್ಕೆ ತಮ್ಮ ಅಮ್ಮನನ್ನು ಹುಡುಕುತ್ತಾ ಇರುತ್ತಾರೆ. ಅಗ್ನಿ ಮತ್ತು ಸುಹಾಸಿ ಪ್ಲ್ಯಾನ್ ಮಾಡಿ, ಚಂದ್ರಕಲಾ ಎಂಬ ಹೆಂಗಸನ್ನು ವೈದೇಹಿ ಎಂದು ಹೇಳಿ ಕಳಿಸಿದ್ದಾರೆ.
ಅಮ್ಮನ ವಿಷ್ಯದಲ್ಲೂ ಸುಹಾಸಿನಿ ಮೋಸ
ವೇದಾಂತ್ ಅವರಿಗೆ ಅಮ್ಮನ ವಿಷ್ಯದಲ್ಲೂ ಸುಹಾಸಿನಿ ಮೋಸ ಮಾಡಿದ್ದಾಳೆ. ತನಗೆ ಗೊತ್ತಿರೋ ಚಂದ್ರಕಲಾ ಎಂಬಾಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾಳೆ. ಅಲ್ಲದೇ ಸುಹಾಸಿನಿ ಆ ಚಂದ್ರಕಲಾ ಹೇಳಿದಂತೆ ಕೇಳುತ್ತಿದ್ದಾಳೆ. ಮನೆಯಲ್ಲೇ ಇರುವ ನಿಜವಾದ ಅಮ್ಮ ವೈದೇಹಿ ಇದನ್ನೆಲ್ಲಾ ನೋಡಿ ಸಂಕಟ ಪಡುತ್ತಿದ್ದಾಳೆ.
ಇದನ್ನೂ ಓದಿ: Kannadathi: ಇತ್ತ ಸಾನಿಯಾ ಅಧಿಕಾರ ಹಸ್ತಾಂತರ, ಅತ್ತ ವರು ಡಿವೋರ್ಸ್ ಪ್ಲ್ಯಾನ್ ಬಯಲು!
ಚಂದ್ರಕಲಾ ಮೋಸ ಗೊತ್ತಾಗಿದೆ
ಅಮೂಲ್ಯಗೆ ಚಂದ್ರಕಲಾಳ ಮೇಲೆ ಅನುಮಾನ ಶುರುವಾಗಿತ್ತು. ಇವರು ನಿಜವಾದ ವೈದೇಹಿ ಅಲ್ಲ ಎಂದು. ಅದಕ್ಕೆ ಅವರ ಮೇಲೆ ಒಂದು ಕಣ್ಣು ಇಟ್ಟಿದ್ದಳು. ಆಶ್ರಮದಲ್ಲಿ ಇದ್ದೇ ಎನ್ನುವ ಚಂದ್ರಕಲಾ, ಆ ರೀತಿ ನಡೆದುಕೊಳ್ಳುತ್ತಿಲ್ಲ. ತುಂಬಾ ಸ್ಟೈಲಿಶ್ ಆಗಿ ಇರ್ತಾಳೆ. ಇದನ್ನೇ ನೋಡಿ ಅಮೂಲ್ಯ ಈಕೆ ಮೋಸ ಮಾಡ್ತಿದ್ದಾಳೆ ಎಂದು ಸತ್ಯ ಕಂಡು ಹಿಡಿದಿದ್ದಾಳೆ.
ತೇಜಸ್ ಜೊತೆಚಂದ್ರಕಲಾ ಸಂಪರ್ಕ
ಅದಿತಿಯನ್ನು ಮದುವೆ ಆಗುತ್ತೀನಿ ಎಂದು ಬಂದಿದ್ದ ತೇಜಸ್ ಮೋಸಗಾರ ಎಂದು ಗೊತ್ತಾಗಿ, ಮನೆಯವರೆಲ್ಲಾ ಬೈದು ಹೊರ ಕಳಿಸಿದ್ದರು. ಅವನ ಜೊತೆ ಚಂದ್ರಕಲಾ ಮಾತನಾಡುವುದನ್ನು ಅಮೂಲ್ಯ ನೋಡಿದ್ದಾಳೆ. ಅದನ್ನು ವೇದಾಂತ್ ಬಳಿ ಹೇಳಲು ಟ್ರೈ ಮಾಡ್ತಾಳೆ. ಆಗ ಚಂದ್ರಕಲಾ ನಾಟಕ ಮಾಡಿ, ನಾನು ಈ ಮನೆಯಿಂದ ಹೋಗ್ತೀನಿ ವೇದಾಂತ್ ಎಂದು ಅಳುತ್ತಾಳೆ.
ಅಮೂಲ್ಯಗೆ ಹೊಡೆಯಲು ಕೈ ಎತ್ತಿದ ವೇದಾಂತ್
ನನ್ನ ತಾಯಿ ಬಗ್ಗೆ ಮಾತನಾಡಬೇಎ ಎಂದು ಎಷ್ಟು ಸಲ ಹೇಳಿದ್ದೀನಿ. ಪದೇ ಪದೇ ಅದೇ ರೀತಿ ಮಾಡ್ತೀಯಾ. ಇನ್ನೊಂದು ಸಲ ಏನಾದ್ರೂ ನನ್ನ ತಾಯಿ ಬಗ್ಗೆ ಮಾತನಾಡಿದ್ರೆ, ಹೆಂಡ್ತಿ ಅಂತ ನೋಡಲ್ಲ ಮನೆಯಿಂದ ಆಚೆ ಹಾಕ್ತೀನಿ ಎಂದು, ಹೊಡೆಯಲು ವೇದಾಂತ್ ಕೈ ಎತ್ತಿದ್ದಾನೆ. ಇದರಿಂದ ಅಮೂಲ್ಯ ಬೇಸರಗೊಂಡು ಅಳುತ್ತಾ ಕೂತಿದ್ದಾಳೆ.
ಇದನ್ನೂ ಓದಿ: Yashwanth Gowda: 22 ತೆಲುಗು ಆಫರ್ ರಿಜೆಕ್ಟ್ ಮಾಡಿದ್ದ 'ಕನ್ಯಾಕುಮಾರಿ'ಯ ಚರಣ್! ಕಾರಣ ಗೊತ್ತಾ?
ಚಂದ್ರಕಲಾಳಿಂದ ಅಮೂಲ್ಯ-ವೇದಾಂತ್ ದೂರ ಆಗ್ತಾರಾ? ಆಕೆಯ ಮೋಸ ತಿಳಿಯಲ್ವಾ? ಮುಂದೇನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಸೀರಿಯನ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ