ಕನ್ನಡ ಕಿರುತೆರೆಯ ಮನೋರಂಜನೆಯಲ್ಲಿ ಸದಾ ಹೊಸತನವನ್ನು ನೀಡುತ್ತಿರುವ ಜೀ ಕನ್ನಡ (Zee Kannada) ವಾಹಿನಿಯ ಹೆಮ್ಮೆಯ ಕಥೆ 'ಗಟ್ಟಿಮೇಳ' (Gattimela). ಈ ಧಾರಾವಾಹಿ ಇದೀಗ 1000 ಸಂಚಿಕೆಗಳನ್ನು (Episodes) ಪೂರೈಸುತ್ತಿದೆ. ಸತತ ನಾಲ್ಕು ವರ್ಷಗಳಿಂದ ಕನ್ನಡ ಕಿರುತೆರೆಯ 8 ಗಂಟೆಯ ಸ್ಲಾಟ್ ಕಿಂಗ್ ಆಗಿ ಗಟ್ಟಿಯಾಗಿ ಕುಳಿತಿದೆ ಗಟ್ಟಿಮೇಳ ಧಾರಾವಾಹಿ. ಆರಂಭದಿಂದ ಇಂದಿನವರೆಗೂ ಹೊಸತನ ಟ್ವಿಸ್ಟ್ ಗಳ ಮೂಲಕ ಕನ್ನಡ ಕಿರುತೆರೆಯ ಅಭಿಮಾನಿಗಳನ್ನು ತಲುಪುವುದರಲ್ಲಿ ಯಶಸ್ವಿಯಾಗಿದೆ. ಧಾರಾವಾಹಿಯಲ್ಲಿ ವೇದಾಂತ್ ಮನೆಗೆ ತಾನೆ ಅಮ್ಮ ಎಂದುಕೊಂಡು ಚಂದ್ರಕಲಾ ಎಂಬ ಹೆಂಗಸು ಬಂದಿದ್ದಾಳೆ. ಅದು ವೇದಾಂತ್ಗೆ ಗೊತ್ತಾಗಿ ಆಕೆ ಸತ್ಯ ಬಯಲು ಮಾಡಲು ಆಸ್ತಿಯ (Property) ಪವರ್ (Power) ನ್ನು ಆಕೆಯ ಕೈಗೆ ಕೊಟ್ಟಿದ್ದಾನೆ.
ವೈದೇಹಿ ಎಂದುಕೊಂಡು ಬಂದಿರುವ ಚಂದ್ರಕಲಾ
ವೇದಾಂತ್ ತಮ್ಮ ತಾಯಿ ಸತ್ತಿದ್ದಾಳೆ ಎಂದುಕೊಂಡಿದ್ದ. ತುಂಬಾ ವರ್ಷ ಆದ ನಂತರ ತಮ್ಮ ಅಮ್ಮ ಬದುಕಿರೋದು ಗೊತ್ತಾಗುತ್ತೆ. ಅದಕ್ಕೆ ತಮ್ಮ ಅಮ್ಮನನ್ನು ಹುಡುಕುತ್ತಾ ಇರುತ್ತಾರೆ. ಅಗ್ನಿ ಮತ್ತು ಸುಹಾಸಿನಿ ಪ್ಲ್ಯಾನ್ ಮಾಡಿ, ಚಂದ್ರಕಲಾ ಎಂಬ ಹೆಂಗಸನ್ನು ವೈದೇಹಿ ಎಂದು ಹೇಳಿ ಕಳಿಸಿದ್ದಾರೆ.
ತೇಜಸ್ ಅತ್ತಿಗೆ ಚಂದ್ರಕಲಾ
ಅದಿತಿಯನ್ನು ಮದುವೆ ಆಗುತ್ತೀನಿ ಎಂದು ಬಂದಿದ್ದ ತೇಜಸ್ ಮೋಸಗಾರ ಎಂದು ಗೊತ್ತಾಗಿ, ಮನೆಯವರೆಲ್ಲಾ ಬೈದು ಹೊರ ಕಳಿಸಿದ್ದರು. ಅವನ ಜೊತೆ ಚಂದ್ರಕಲಾ ಮಾತನಾಡುವುದನ್ನು ಅಮೂಲ್ಯ ನೋಡಿದ್ದು, ವಿಡಿಯೋ ಸಹ ಮಾಡಿಕೊಂಡಿದ್ದಳು. ಈ ಚಂದ್ರಕಲಾ ಎಂಬ ಹೆಂಗಸು ಅಗ್ನಿಯ ಪತ್ನಿ ಅಂದರೆ ತೇಜಸ್ನ ಅತ್ತಿಗೆ.
ಇದನ್ನೂ ಓದಿ: Bhagya Lakshmi: ಕೀರ್ತಿ ಸಿಗಲ್ಲ ಅಂತ ಸಾಯೋಕೆ ಹೊರಟ ವೈಷ್ಣವ್, ಅತ್ತ ಭಾಗ್ಯನಿಗೆ ಅತ್ತೆಯ ಬುದ್ಧಿ ಮಾತು!
ವೇದಾಂತ್ಗೆ ವಿಡಿಯೋ ತೋರಿಸಿದ ಅಮೂಲ್ಯ
ಮೊದ ಮೊದಲು ಈ ಹೆಂಗಸು ನಿಮ್ಮ ಅಮ್ಮ ಅಲ್ಲ ಎಂದು ಅಮೂಲ್ಯ ಹೇಳಿದ್ದಳು. ಅದಕ್ಕೆ ವೇದಾಂತ್ ಮತ್ತು ಅಮೂಲ್ಯ ಮಧ್ಯೆ ಜಗಳ ಆಗಿ, ಅಮ್ಮು ತವರು ಮನೆಗೆ ಹೋಗಿದ್ದಳು. ಹೇಗೋ ಅವಳನ್ನು ಒಪ್ಪಿಸಿ ವೇದಾಂತ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆಗ ಅಮೂಲ್ಯ ವಿಡಿಯೋ ತೋರಿಸಿದ್ದಾಳೆ. ಅದರಲ್ಲಿ ತೇಜಸ್ ಜೊತೆ ಚಂದ್ರಕಲಾ ಮಾತನಾಡುವುದು ಇತ್ತು.
ಚಂದ್ರಕಲಾಳನ್ನು ಪರೀಕ್ಷೆ ಮಾಡುತ್ತಿರುವ ವೇದಾಂತ್
ವೇದಾಂತ್ ನಮ್ಮ ಭಾವನೆಗಳನ್ನು ಮುಂದಿಟ್ಟುಕೊಂಡು ಯಾರೋ ಆಟ ಆಡ್ತಾ ಇದ್ದಾರೆ. ಅದಕ್ಕೆ ನಾನು ಅಮ್ಮನನ್ನು ಹುಡುಕುವುದು ಬೇಡ ಅಂದೆ ಅಂತ ಬೇಸರ ಮಾಡಿಕೊಂಡಿದ್ದ. ಅಲ್ಲದೇ ಬಂದಿರುವ ಹೆಂಗಸಿನ ಬಗ್ಗೆ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾನೆ. ಆಕೆ ಆಶ್ರಮದಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.
ಆಸ್ತಿ ಪವರ್ ಚಂದ್ರಕಲಾಗೆ!
ವೇದಾಂತ್ ಇವಳ ಹಿಂದೆ ಯಾರಿದ್ದಾರೆ ಎಂದು ತಿಳಿದುಕೊಳ್ಳಲು ಪ್ಲ್ಯಾನ್ ಮಾಡಿದ್ದಾನೆ. ಅದಕ್ಕೆ ಆಸ್ತಿ ಪವರ್ ಅನ್ನು ಚಂದ್ರಕಲಾಗೆ ಬರೆದು ಕೊಟ್ಟಿದ್ದಾನೆ. ಅದಕ್ಕೆ ಚಂದ್ರಕಲಾ ತುಂಬಾ ಖುಷಿಯಾಗಿದ್ದಾಳೆ. ನನ್ನ ಇನ್ನೂ ಯಾರೂ ಕೇಳಲ್ಲ. ನಾನೇ ಇದಕ್ಕೆಲ್ಲಾ ಒಡತಿ ಎಂದುಕೊಂಡು ಮೆರೆಯುತ್ತಿದ್ದಾಳೆ. ಅಲ್ಲದೇ ಈ ವಿಷ್ಯವನ್ನು ಅಗ್ನಿ ಮತ್ತು ತೇಜಸ್ಗೆ ತಿಳಿಸಿದ್ದಾಳೆ. ಅವರು ಒಳ್ಳೆದಾಯ್ತು ಎಲ್ಲಾ ಸೇರಿ ಪಾರ್ಟಿ ಮಾಡೋಣ ಎಂದಿದ್ದಾರೆ.
ಇದನ್ನೂ ಓದಿ: Kannadathi: ಡಿವೋರ್ಸ್ ಲಾಯರ್ ಮುಂದೆ ಬಂದು ಕೂತ ಹರ್ಷ, ವರೂ ನಾಟಕ ಬಯಲು ಮಾಡ್ತಾನಾ?
ವೇದಾಂತ್ಗೆ ಚಂದ್ರಕಲಾ ಹಿಂದೆ ಇರೋದು ಯಾರು ಅಂತ ಗೊತ್ತಾಗುತ್ತಾ? ಆಸ್ತಿ ಆಸೆಗೆ ಬಿದ್ದು ಸಿಕ್ಕಿ ಹಾಕಿಕೊಳ್ತಾಳಾ? ಮುಂದೇನಾಗುತ್ತೆ ಅಂತ ನೋಡೋಕೆ ಗಟ್ಟಿಮೇಳ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ