Drama junior Winner: ಡ್ರಾಮಾ ಜೂನಿಯರ್ಸ್​​ನ 15 ಸ್ಪರ್ಧಿಗಳಲ್ಲಿ ಸಮೃದ್ಧಿಗೆ ವಿಜಯದ ಕಿರೀಟ

ಸಮೃದ್ಧಿ ಎಸ್. ಮೊಗವೀರ ಈ ಬಾರಿಯಾ ಡ್ರಾಮಾ ಜೂನಿಯರ್ಸ್ 4ರ ವಿನ್ನರ್ ಆದ್ರೆ, ಮೊದಲ ರನ್ನರ್ ಅಪ್ ಪಟ್ಟವನ್ನು ಸಾನಿಧ್ಯ ಆಚಾರ್ಯ, ಗೌತಮ್ ರಾಜ್ ಆರ್ ಒಲಿಸಿಕೊಂಡಿದ್ದಾರೆ. ಎರಡನೇ ರನ್ನರ್ ಅಪ್ ಆಗಿ ವೇದಿಕ್ ಕೌಶಲ್ ಪಶಸ್ತಿ ಪಡೆದಿದ್ದಾರೆ. ನಾಲ್ವರಿಗೂ ಪ್ರೇಕ್ಷಕರು ಜೈ ಅಂದಿದ್ದಾರೆ.

ಡ್ರಾಮಾ ಜೂನಿಯರ್ಸ್ ಸೀಸನ್ 4 ರ ವಿನ್ನರ್ ಸಮೃದ್ಧಿ

ಡ್ರಾಮಾ ಜೂನಿಯರ್ಸ್ ಸೀಸನ್ 4 ರ ವಿನ್ನರ್ ಸಮೃದ್ಧಿ

  • Share this:
    ಜೀ ಕನ್ನಡ  (Zee Kannada) ವಾಹಿನಿಯೂ ಜನರನ್ನು ಮನರಂಜಿಸುವಲ್ಲಿ ಸದಾ ಮುಂದಿರುತ್ತೆ. ಪ್ರತಿ ನಿತ್ಯ ಧಾರಾವಾಹಿಗಳ (Serials) ಮೂಲಕ ಜನರನ್ನು ತನ್ನತ್ತ ಸೆಳೆದರೆ, ವೀಕೆಂಡ್‍ನಲ್ಲಿ ಹಲವು ರಿಯಾಲಿಟಿ ಶೋ (Reality Show) ಮೂಲಕ ಜನರನ್ನು ರಂಜಿಸುತ್ತೆ. ಈಗಾಗಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಡ್ರಾಮಾ ಜೂನಿಯರ್ಸ್ (Drama Juniors) ಹೆಚ್ಚು ಪ್ರಚಲಿತವಾಗಿವೆ. ಸದ್ಯದಲ್ಲೇ ಸರಿಗಮಪ ಲಿಟಲ್ ಚಾಂಪ್ಸ್ ಬರಲಿದೆ. ಹಲವು ರಿಯಾಲಿಟಿ ಶೋಗಳ ಮೂಲಕ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಸಕ್ಸಸ್ ಕಂಡಿದೆ. ಭಾರತದ ಮಕ್ಕಳ ಅತಿ ದೊಡ್ಡ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್. ಇಲ್ಲಿಯವರೆಗೆ ಮೂರು ಆವೃತ್ತಿಗಳನ್ನು ಮುಗಿಸಿ ಈಗ ನಾಲ್ಕನೇ ಆವೃತ್ತಿಯನ್ನೂ ಯಶಸ್ವಿಯಾಗಿ ಮುಗಿಸಿದೆ. ಡ್ರಾಮಾ ಜೂನಿಯರ್ಸ್ ಸೀಸನ್ 4 ರ ವಿನ್ನರ್ (Winner) ಪಟ್ಟವನ್ನು ಸಮೃದ್ಧಿ ಎಸ್ ಮೊಗವೀರ (Samruddhi S Mogaveera)ಎಂಬ ಬಾಲಕಿ ಅಲಂಕರಿಸಿದ್ದಾಳೆ.

    ಡ್ರಾಮಾ ಜೂನಿಯರ್ಸ್ ಸೀಸನ್ 4 ರ ವಿನ್ನರ್ ಸಮೃದ್ಧಿ
    ಈ ಬಾರಿಯ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮವು ತೀವ್ರ ಕುತೂಹಲ ಕೆರಳಿಸಿತ್ತು. ಯಾರು ವಿನ್ನರ್ ಆಗ್ತಾರೆ ಅಂತ ಜನ ಕಾಯ್ತಾ ಇದ್ರೂ. ಕೊನೆಗೂ ರಿಸಲ್ಟ್ ಬಂದಿದ್ದು, ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದು ಡ್ರಾಮಾ ಜೂನಿಯರ್ಸ್-4ರ ವಿಜೇತರಾಗಿ ಸಮೃದ್ಧಿ ಎಸ್. ಮೊಗವೀರ ಹೊರಮ್ಮಿದ್ದಾರೆ.








    View this post on Instagram






    A post shared by Zee Kannada (@zeekannada)




    ಮೊದಲ ಹಾಗೂ ಎರಡನೇ ರನ್ನರ್ ಅಪ್ ಯಾರು?
    ಸಮೃದ್ಧಿ ಎಸ್. ಮೊಗವೀರ ಈ ಬಾರಿಯಾ ಡ್ರಾಮಾ ಜೂನಿಯರ್ಸ್ 4ರ ವಿನ್ನರ್ ಆದ್ರೆ, ಮೊದಲ ರನ್ನರ್ ಅಪ್ ಪಟ್ಟವನ್ನು ಸಾನಿಧ್ಯ ಆಚಾರ್ಯ, ಗೌತಮ್ ರಾಜ್ ಆರ್ ಒಲಿಸಿಕೊಂಡಿದ್ದಾರೆ. ಎರಡನೇ ರನ್ನರ್ ಅಪ್ ಆಗಿ ವೇದಿಕ್ ಕೌಶಲ್ ಪಶಸ್ತಿ ಪಡೆದಿದ್ದಾರೆ. ನಾಲ್ವರಿಗೂ ಪ್ರೇಕ್ಷಕರು ಜೈ ಅಂದಿದ್ದಾರೆ.

    ಇದನ್ನೂ ಓದಿ: Doresani: ಎರಡು ಗಂಟೆ ಮಹಾಸಂಚಿಕೆ, ಎರಡು ಮದುವೆ! ದೊರೆಸಾನಿ ದರ್ಬಾರ್ ಮುಗಿಯುತ್ತಾ?

    ಭರ್ಜರಿ ರೇಟಿಂಗ್ ಪಡೆದಿದ್ದ ಡ್ರಾಮಾ ಜೂನಿಯರ್ ಸೀಸನ್ 4
    ಡ್ರಾಮಾ ಜೂನಿಯರ್ಸ್ ಮೂರು ಸೀಸನ್‍ಗಳು ಸಹ ಭರ್ಜರಿಯಾಗಿ ಯಶಸ್ಸು ಪಡೆದಿದ್ದವು. 4ನೇ ಸೀಸನ್ ಸಹ ಸಖತ್ ಆಗಿ ಮೂಡಿ ಬಂದಿತ್ತು. ಮಕ್ಕಳು ಅದ್ಭುತವಾಗಿ ಡ್ರಾಮಾ ಮಾಡಿ ಜನರ ಮನಸ್ಸು ಕದ್ದಿದ್ದಾರೆ. ಆರಂಭದಲ್ಲೇ ಡ್ರಾಮಾ ಜೂನಿಯರ್ ಸೀಸನ್ 4, 9.1 ರೇಟಿಂಗ್ ಪಡೆದಿತ್ತು. ನೋಡುತ್ತಿದ್ದಂತೆಯೇ, ಮುಗಿದು ಹೋಗಿದೆ.

    ನಿಜ ಸಾಧಕರ ಸ್ಮರಣೆ
    ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ವಿಶೇಷವೇನೆಂದರೆ ನಿಜ ಸಾಧಕರನ್ನು ತಮ್ಮ ವೇದಿಕೆಯಲ್ಲಿ ಸ್ಕಿಟ್ ಮಾಡುವ ಮೂಲಕ ಒಂದು ಪರಿಚಯ ನೀಡುವುದು. ಪ್ರತಿಬಾರಿಯಂತೆ ಈ ಬಾರಿಯೂ ನಿಜ ಸಾಧಕರ ಬಗ್ಗೆ ಮಕ್ಕಳು ಅವರ ಸಾಧನೆ ತಿಳಿಸಿ ಕೊಟ್ಟಿದ್ದಾರೆ. ಇನ್ನ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಈ ಬಾರಿ ರಚಿತಾ ರಾಮ್, ಲಕ್ಷ್ಮಿ ಅಮ್ಮ ಮತ್ತು ರವಿಚಂದ್ರನ್ ಸರ್ ಅವರು ಮಕ್ಕಳನ್ನು ತಿದ್ದಿ-ತೀಡಿ ತಮ್ಮ ತೀರ್ಪುಗಳನ್ನು ಅಭೂತ ಪೂರ್ವವಾಗಿ ವ್ಯಕ್ತಪಡಿಸಿದ್ದಾರೆ.

    Zee Kannada, Drama juniors, drama juniors season 4 winner, drama juniors season 4 contestants, ಡ್ರಾಮಾ ಜೂನಿಯರ್ಸ್, ಡ್ರಾಮಾ ಜೂನಿಯರ್ಸ್ ಸೀಸನ್ 4 ವಿನ್ನರ್, Kannada news, Karnataka news,
    ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ


    ಇದನ್ನೂ ಓದಿ: Manoranjan Ravichandran Marriage: ಕ್ರೇಜಿಸ್ಟಾರ್ ಪುತ್ರನ ಮದುವೆ ಸಂಭ್ರಮ! ರಿಸೆಪ್ಶನ್​ ಫೋಟೋಸ್ ವೈರಲ್, ಯಾರ್ಯಾರು ಬಂದಿದ್ದರು ನೋಡಿ

    15 ಸ್ಪರ್ಧಿಗಳಲ್ಲಿ ಸಮೃದ್ಧಿಗೆ ವಿಜಯದ ಕಿರೀಟ
    ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕಾಗಿ, ಕರ್ನಾಟಕದ 31 ಜಿಲ್ಲೆಗಳಲ್ಲಿ ಮೆಗಾ ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ದಿ ಬೆಸ್ಟ್ ಮಕ್ಕಳನ್ನು ಸೆಲೆಕ್ಟ್ ಮಾಡಿದ್ದರು. ಈಗ ಫಿನಾಲೆಯಲ್ಲಿ ಟಾಪ್ 15 ಸ್ಪರ್ಧಿಗಳು ಸ್ಪರ್ಧಿಸಲಿದ್ದರು.

    15 ಮಕ್ಕಳಲ್ಲಿ ವಿಜಯದ ಕಿರೀಟವನ್ನು ಸಮೃದ್ದೀ ಎಸ್ ಮೊಗವೀರ ತಮ್ಮ ಪಾಲಾಗಿಸಿಕೊಂಡಿದ್ದಾರೆ. ಮೊದಲ ರನ್ನರ್ ಅಪ್ ಪಟ್ಟವನ್ನು ಸಾನಿಧ್ಯ ಆಚಾರ್ಯ, ಗೌತಮ್ ರಾಜ್ ಆರ್ ಒಲಿಸಿಕೊಂಡಿದ್ದಾರೆ. ಎರಡನೇ ರನ್ನರ್ ಅಪ್ ಆಗಿ ವೇದಿಕ್ ಕೌಶಲ್ ಪಶಸ್ತಿ ಪಡೆದಿದ್ದಾರೆ. ಸಮೃದ್ಧಿಯವರಿಗೆ ಅಭಿನಂದನೆಗಳು.
    Published by:Savitha Savitha
    First published: