Drama Juniors: ಡ್ರಾಮಾ ಜೂನಿಯರ್ಸ್ ಸೀಸನ್ 4 ಗ್ರ್ಯಾಂಡ್ ಫಿನಾಲೆ! ಈ ಬಾರಿಯ ವಿನ್ನರ್ ಯಾರು?

ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕಾಗಿ, ಕರ್ನಾಟಕದ 31 ಜಿಲ್ಲೆಗಳಲ್ಲಿ ಮೆಗಾ ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ದಿ ಬೆಸ್ಟ್ ಮಕ್ಕಳನ್ನು ಸೆಲೆಕ್ಟ್ ಮಾಡಿದ್ದರು. ಈಗ ಫಿನಾಲೆಯಲ್ಲಿ ಟಾಪ್ 15 ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ. 15 ಮಕ್ಕಳಲ್ಲಿ ವಿಜಯದ ಕಿರೀಟ ಯಾರ ಮುಡಿಗೆರುವುದು ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಡ್ರಾಮಾ ಜೂನಿಯರ್ಸ್ ಸೀಸನ್ 4

ಡ್ರಾಮಾ ಜೂನಿಯರ್ಸ್ ಸೀಸನ್ 4

 • Share this:
  ಜೀ ಕನ್ನಡ (Zee Kannada) ವಾಹಿನಿಯೂ ಜನರನ್ನು ಮನರಂಜಿಸುವಲ್ಲಿ ಸದಾ ಮುಂದಿರುತ್ತೆ. ಪ್ರತಿ ನಿತ್ಯ ಧಾರಾವಾಹಿಗಳ (Serials) ಮೂಲಕ ಜನರನ್ನು ತನ್ನತ್ತ ಸೆಳೆದರೆ, ವೀಕೆಂಡ್‍ನಲ್ಲಿ ಹಲವು ರಿಯಾಲಿಟಿ ಶೋ (Reality show) ಮೂಲಕ ಜನರನ್ನು ರಂಜಿಸುತ್ತೆ. ಈಗಾಗಲೇ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಡ್ರಾಮಾ ಜೂನಿಯರ್ಸ್ (Drama Juniors) ಹೆಚ್ಚು ಪ್ರಚಲಿತವಾಗಿವೆ. ಸದ್ಯದಲ್ಲೇ ಸರಿಗಮಪ ಲಿಟಲ್ ಚಾಂಪ್ಸ್ ಬರಲಿದೆ. ಹಲವು ರಿಯಾಲಿಟಿ ಶೋಗಳ ಮೂಲಕ ಅಭಿಮಾನಿಗಳನ್ನು ಹಿಡಿದಿಡುವಲ್ಲಿ ಸಕ್ಸಸ್ ಕಂಡಿದೆ. ಭಾರತದ ಮಕ್ಕಳ ಅತಿ ದೊಡ್ಡ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್. ಇಲ್ಲಿಯವರೆಗೆ ಮೂರು ಆವೃತ್ತಿಗಳನ್ನು ಮುಗಿಸಿ ಈಗ ನಾಲ್ಕನೇ ಆವೃತ್ತಿಯೂ ಅಂತಿಮ ಹಂತ ತಲುಪಿದ್ದು, ಇಂದು ಸಂಜೆ 6 ಗಂಟೆಯಿಂದ ಗ್ರ್ಯಾಂಡ್ ಫಿನಾಲೆ (Grand Finale)  ಪ್ರಸಾರವಾಗಲಿದೆ.

  ಭರ್ಜರಿ ರೇಟಿಂಗ್ ಪಡೆದಿದ್ದ ಡ್ರಾಮಾ ಜೂನಿಯರ್ ಸೀಸನ್ 4
  ಡ್ರಾಮಾ ಜೂನಿಯರ್ಸ್ ಮೂರು ಸೀಸನ್‍ಗಳು ಸಹ ಭರ್ಜರಿಯಾಗಿ ಯಶಸ್ಸು ಪಡೆದಿದ್ದವು. 4ನೇ ಸೀಸನ್ ಸಹ ಸಖತ್ ಆಗಿ ಮೂಡಿ ಬಂದಿದೆ. ಮಕ್ಕಳು ಅದ್ಭುತವಾಗಿ ಡ್ರಾಮಾ ಮಾಡಿ ಜನರ ಮನಸ್ಸು ಕದ್ದಿದ್ದಾರೆ. ಆರಂಭದಲ್ಲೇ ಡ್ರಾಮಾ ಜೂನಿಯರ್ ಸೀಸನ್ 4, 9.1 ರೇಟಿಂಗ್ ಪಡೆದಿತ್ತು. ನೋಡುತ್ತಿದ್ದಂತೆಯೇ, ಇಂದು ಅಂತಿಮಘಟ್ಟ ತಲುಪಿದೆ.

  ನಿಜ ಸಾಧಕರ ಸ್ಮರಣೆ
  ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದ ವಿಶೇಷವೇನೆಂದರೆ ನಿಜ ಸಾಧಕರನ್ನು ತಮ್ಮ ವೇದಿಕೆಯಲ್ಲಿ ಸ್ಕಿಟ್ ಮಾಡುವ ಮೂಲಕ ಒಂದು ಪರಿಚಯ ನೀಡುವುದು. ಪ್ರತಿಬಾರಿಯಂತೆ ಈ ಬಾರಿಯೂ ನಿಜ ಸಾಧಕರ ಬಗ್ಗೆ ಮಕ್ಕಳು ಅವರ ಸಾಧನೆ ತಿಳಿಸಿ ಕೊಟ್ಟಿದ್ದಾರೆ. ಇನ್ನ ಈ ಕಾರ್ಯಕ್ರಮದ ತೀರ್ಪುಗಾರರಾಗಿ ಈ ಬಾರಿ ರಚಿತಾ ರಾಮ್, ಲಕ್ಷ್ಮಿ ಅಮ್ಮ ಮತ್ತು ರವಿಚಂದ್ರನ್ ಸರ್ ಅವರು ಮಕ್ಕಳನ್ನು ತಿದ್ದಿ-ತೀಡಿ ತಮ್ಮ ತೀರ್ಪುಗಳನ್ನು ಅಭೂತ ಪೂರ್ವವಾಗಿ ವ್ಯಕ್ತಪಡಿಸಿದ್ದಾರೆ.

  ಇದನ್ನೂ ಓದಿ: Jothe Jotheyali Serial: ಶೂಟಿಂಗ್​ ಸಂದರ್ಭ ದುಬಾರಿ ಬೆಂಜ್ ಕಾರ್ ಆ್ಯಕ್ಸಿಡೆಂಟ್ ಮಾಡಿದ್ರಾ ಅನಿರುದ್ಧ್?

  ವಿಭಿನ್ನ ಸ್ಕಿಟ್ ಗಳ ಮೂಲಕ ಮನರಂಜನೆ
  ಈ ಬಾರಿ ವಿವಿಧ ರೀತಿಯ ಹಾಸ್ಯ, ದುಃಖ, ಪೌರಾಣಿಕ ಮುಂತಾದ ರೀತಿಯ ಸ್ಕಿಟ್‍ಗಳನ್ನು ಮಕ್ಕಳು ವೀಕ್ಷಕರ ಮುಂದೆ ತಂದಿದ್ದಾರೆ. ಜನ ನಕ್ಕು ನಕ್ಕು ಖುಷಿ ಪಟ್ಟಿದ್ದಾರೆ. ವೀಕೆಂಡ್‍ನಲ್ಲಿ ತಪ್ಪದೇ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ನೋಡಿದ್ದಾರೆ.

  ಸಂಜೆ 6ಕ್ಕೆ ಗ್ರಾಂಡ್ ಫಿನಾಲೆ ಕಾರ್ಯಕ್ರಮ
  ಇಂದು ಸಂಜೆ 6 ಗಂಟೆಗೆ ಡ್ರಾಮಾ ಜೂನಿಯರ್ಸ್ ಸೀಸನ್ 4 ನ ಗ್ರಾಂಡ್ ಫಿನಾಲೆ ಕಾರ್ಯಕ್ರಮ ಪ್ರಸಾರವಾಗಲಿದೆ. ಮಕ್ಕಳು ವಿವಿಧ ಸ್ಕಿಟ್ ಗಳ ಮೂಲಕ ಪ್ರಶಸ್ತಿ ಗೆಲ್ಲಲ್ಲು ರೆಡಿಯಾಗಿದ್ದಾರೆ. ಬಿಸ್ಕೆಟ್‍ಗಾಗಿ KGF ರಾಕಿಗೆ ಸವಾಲು ಹಾಕ್ತಿದ್ದಾನೆ ಬಾಹುಬಲಿ ಅನ್ನೋ ಸ್ಕಿಟ್, ದೊಡ್ಡಾಟ ಯಕ್ಷಗಾನ ಅಪೂರ್ವ ಸಂಗಮದ ಕರ್ಣಾಜುನ ಪ್ರಸಂಗ ಅನ್ನೋ ಸ್ಕಿಟ್, ಬುಲ್ ಬುಲ್ ಪಾಂಡು V/S ಕುಳ್ಳ ಸಿಂಗಂ ಬಾಕ್ಸಿಂಗ್ ರೋಚಕ್ ಮ್ಯಾಚ್ ಸ್ಕಿಟ್, ಇನ್ನೂ ಹಲವಾರು ಸ್ಕಿಟ್‍ಗಳು ರಂಜಿಸಲು ಸಿದ್ಧವಾಗಿವೆ. ನೀವೂ ಮರೆಯದೇ ನೋಡಿ.

  ಇದನ್ನೂ ಓದಿ: Sudeep: ಕ್ಲೀನ್ ಶೇವ್ ಲುಕ್​ನಲ್ಲಿ ಕಿಚ್ಚ ಸುದೀಪ್; ಬಿಗ್​ ಬಾಸ್​ ವೇದಿಕೆ ಮೇಲೆ ಘರ್ಜಿಸಲು ಹೆಬ್ಬುಲಿ ರೆಡಿ

  15 ಸ್ಪರ್ಧಿಗಳಲ್ಲಿ ಯಾರಿಗೆ ವಿಜಯದ ಕಿರೀಟ?
  ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮಕ್ಕಾಗಿ, ಕರ್ನಾಟಕದ 31 ಜಿಲ್ಲೆಗಳಲ್ಲಿ ಮೆಗಾ ಆಡಿಷನ್ ನಡೆಸಲಾಗಿತ್ತು. ಅದರಲ್ಲಿ ದಿ ಬೆಸ್ಟ್ ಮಕ್ಕಳನ್ನು ಸೆಲೆಕ್ಟ್ ಮಾಡಿದ್ದರು. ಈಗ ಫಿನಾಲೆಯಲ್ಲಿ ಟಾಪ್ 15 ಸ್ಪರ್ಧಿಗಳು ಸ್ಪರ್ಧಿಸಲಿದ್ದಾರೆ. 15 ಮಕ್ಕಳಲ್ಲಿ ವಿಜಯದ ಕಿರೀಟ ಯಾರ ಮುಡಿಗೆರುವುದು ಎಂಬುದು ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.

  ಜೀ ಕನ್ನಡದಲ್ಲಿ ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಕಾರ್ಯಕ್ರಮ ಪ್ರಸಾರವಾಗಲಿದೆ. ಡ್ರಾಮಾ ಜೂನಿಯರ್ಸ್ ಸೀಸನ್ 4 ರ ವಿನ್ನರ್ ಯಾರಾಗ್ತಾರೆ ಅಂತ ನೋಡೋದಕ್ಕೆ ಕಾರ್ಯಕ್ರಮ ನೋಡಬೇಕು.
  Published by:Savitha Savitha
  First published: